ಶ್ರೇಷ್ಠಾಳ ಜಾಲದಲ್ಲಿ ಭಾಗ್ಯ ಲಾಕ್​! ಅತ್ತೆ- ಸೊಸೆ ನಡುವೆಯೇ ಬಿರುಕು ಮೂಡಿಸುತ್ತಾ ಸಾಲ?

By Suvarna News  |  First Published Apr 26, 2024, 3:26 PM IST

 ಶ್ರೇಷ್ಠಾ ಜಾಲಕ್ಕೆ ಭಾಗ್ಯ ಅಕ್ಷರಶಃ ಲಾಕ್​ ಆಗಿದ್ದಾಳೆ. ಕೈಯಲ್ಲಿ ಬಿಡಿಗಾಸೂ ಇಲ್ಲದಾಗ ಎರಡು ಲಕ್ಷ ರೂಪಾಯಿಗಳನ್ನು ನೀಡಬೇಕಿದೆ. ಮುಂದೇನು?
 


ಶ್ರೇಷ್ಠಾ ಏನನ್ನೋ ಪ್ಲ್ಯಾನ್​ ಮಾಡಿ ತಾಂಡವ್​ ಮನೆಗೆ ಬಂದಿದ್ದಾಳೆ. ತನ್ನ ಮತ್ತು ತಾಂಡವ್​ ಮದುವೆ ವಿಷಯವನ್ನು ಮಾತನಾಡಲು ಬಂದಿರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ತಾಂಡವ್​ ಕೂಡ ಗಾಬರಿಗೊಂಡಿದ್ದ. ಅದೇ ಇನ್ನೊಂದೆಡೆ ಪೂಜಾ ಕೂಡ ಅವಳಿಗೆ ವಾರ್ನ್​ ಮಾಡಿದ್ದಳು. ನನ್ನ ಅಕ್ಕನ ಬಾಳಲ್ಲಿ ಎಂಟ್ರಿ ಕೊಟ್ಟರೆ ಅಷ್ಟೇ ಕಥೆ ಎಂದು ಎಚ್ಚರಿಸಿದ್ದಳು. ಆದರೆ ಅಸಲಿಗೆ ನಡೆದದ್ದೇ ಬೇರೆ. ಶ್ರೇಷ್ಠಾ ಬಂದಿದ್ದು ತಾಂಡವ್​ ವಿಷಯಕ್ಕಾಗಿ ಅಲ್ಲವೇ ಅಲ್ಲ, ಬದಲಿಗೆ ಶ್ರೇಷ್ಠಾಳಿಂದ ಈಕೆ ವರ್ಷದ ಹಿಂದೆ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದಳಂತೆ. ಅದನ್ನು ವಾಪಸ್​ ಪಡೆಯುವುದಕ್ಕಾಗಿ ಬಂದಿದ್ದಾಳೆ. ಹಿಂದೊಮ್ಮೆ ನಂದು ಮದುವೆಯ ಸಮಯದಲ್ಲಿ ಎರಡು ಲಕ್ಷ ರೂಪಾಯಿ ಕಳೆದು ಹೋದಾಗ, ಭಾಗ್ಯ ಹಣಕ್ಕಾಗಿ ಪರದಾಡುತ್ತಿದ್ದಳು. ಆಗಲೇ ಪ್ಲ್ಯಾನ್​ ಮಾಡಿದ್ದ ಶ್ರೇಷ್ಠಾ ಭಾಗ್ಯಳಿಗೆ ಸಾಲ ಕೊಟ್ಟಿದ್ದಳು. ಇದೀಗ ಆ ಸಾಲವನ್ನು ವಾಪಸ್​ ಪಡೆಯಲು ಬಂದಿದ್ದಾಳೆ.

ಇದನ್ನು ಕೇಳಿ ತಾಂಡವ್​ಗೆ ಖುಷಿಯೋ ಖುಷಿ. ಬಿಡಿಗಾಸು ಇಲ್ಲದ ಭಾಗ್ಯಳನ್ನು ಶ್ರೇಷ್ಠಾ ಸರಿಯಾಗಿ ಲಾಕ್​ ಮಾಡಿದ್ದಾಳೆ ಎಂದು ಖುಷಿ ಪಟ್ಟುಕೊಳ್ಳುತ್ತಿದ್ದಾನೆ. ಭಾಗ್ಯ ದುಡ್ಡು ಪಡೆದಿರುವ ವಿಷಯ ಯಾರಿಗೂ ಗೊತ್ತಿರಲಿಲ್ಲ. ಇದೀಗ ಅತ್ತೆ ಕುಸುಮಾಗೂ ಗೊತ್ತಾಗಿ ಭಾಗ್ಯಳನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದಾಳೆ. ಎಲ್ಲರಿಗೂ ಶಾಕ್​ ಆಗಿದೆ. ಈ ಹಣವನ್ನು ಭಾಗ್ಯ ಹೇಗೆ ಹಿಂದಿರುಗಿಸುತ್ತಾಳೋ ಕಾದು ನೋಡಬೇಕಿದೆ. 

Tap to resize

Latest Videos

ಮಡಿಲಲ್ಲಿ ಸಿಹಿ, ಹೃದಯದಲ್ಲಿ ಶ್ರೀರಾಮ... ಬಚ್ಚಿಟ್ಟ ಗುಟ್ಟು ಬಯಲಾಯ್ತು... ದೇಸಾಯಿ ಎದುರು ಸೀತಾಗೆ ಅಗ್ನಿಪರೀಕ್ಷೆ!

ಅಷ್ಟಕ್ಕೂ ತಾಂಡವ್​ ಮತ್ತು ಶ್ರೇಷ್ಠಾ ಮದುವೆಯಾಗುತ್ತಿದ್ದಾರೆ, ಇದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸತ್ಯ ಗೊತ್ತಿರುವುದು ಭಾಗ್ಯ ತಂಗಿ ಪೂಜಾಳಿಗೆ ಮಾತ್ರ. ತಾಂಡವ್​ ಮತ್ತು ಶ್ರೇಷ್ಠಾಳ ಲವ್ ಸ್ಟೋರಿಗೆ ಫುಲ್​ಸ್ಟಾಪ್​ ಹಾಕಲು ಇತ್ತ ಪೂಜಾ ಪ್ಲ್ಯಾನ್​ ಮಾಡುತ್ತಿದ್ದರೆ, ಇನ್ನು ಹತ್ತೇ ದಿನಗಳಲ್ಲಿ ಮದುವೆಯಾಗುವುದಾಗಿ ಶ್ರೇಷ್ಠಾ ಚಾಲೆಂಜ್​ ಹಾಕಿದ್ದಾಳೆ. ಹತ್ತು ದಿನಗಳಲ್ಲಿ ಮದುವೆಯಾಗಬೇಕು ಎಂದು ತಾಂಡವ್​ ಬಳಿ ಹೇಳುತ್ತಿರುವಾಗಲೇ ಪೂಜಾ ಎಂಟ್ರಿ ಕೊಟ್ಟು ಇಬ್ಬರ ಮುಖಕ್ಕೂ ಮಂಗಳಾರತಿ ಮಾಡಿದ್ದಾಳೆ. 16 ವರ್ಷದ ಮಗಳನ್ನು ಮನೆಯಲ್ಲಿ ಇಟ್ಟುಕೊಂಡು ಹೀಗೆ ಹೇಳಲು ನಾಚಿಕೆ ಆಗಲ್ವಾ ಎಂದು ಭಾವಂಗೆ ಕೇಳಿದರೆ, ಊರಲ್ಲಿ ಎಲ್ಲಾ ಗಂಡಸರು ಬಿಟ್ಟು ಮದುವೆಯಾದ ಭಾವನೆ ಬೇಕಿತ್ತಾ ಎಂದು ಶ್ರೇಷ್ಠಾಳಿಗೆ ಝಾಡಿಸಿದ್ದಾಳೆ. ಉರಿದುಕೊಂಡಿರೋ ಶ್ರೇಷ್ಠಾ ಪೂಜಾಳಿಗೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಿದ್ದಾಳೆ. ಎಲ್ಲಾ ವಿಷಯವನ್ನು ಮನೆಯವರಿಗೆ ಹೇಳುವೆ ಎಂದು ಸಿಟ್ಟಿನಿಂದ ಪೂಜಾ ಹೋಗಿದ್ದಾಳೆ.

ಮನೆಗೆ ಹೋಗಿ ಅತ್ತೆ ಕುಸುಮಾಗೆ ಎಲ್ಲಾ ವಿಷಯ ತಿಳಿಸಬೇಕು ಎನ್ನುವಷ್ಟರಲ್ಲಿಯೇ ಮಕ್ಕಳು ಬಂದಿದ್ದಾರೆ. ಅದೇ ಇನ್ನೊಂದೆಡೆ ಶ್ರೇಷ್ಠಾ ಕೂಡ ಅಲ್ಲಿಗೆ ಬಂದಿದ್ದಾಳೆ. ಶ್ರೇಷ್ಠಾಳನ್ನು ನೋಡಿ ತನ್ವಿ ಉರಿದುಕೊಂಡಿದ್ದಾಳೆ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾಳೆ. ಇದನ್ನೆಲ್ಲಾ ಸಹಿಸಿಕೊಂಡಿದ್ದಾಳೆ ಶ್ರೇಷ್ಠಾ. ಈಗ ಏನೇ ಆಗಲಿ ನಡೆದದ್ದು ನಡೆದು ಹೋಗಲಿ ಎನ್ನುವಂತಿತ್ತು ಶ್ರೇಷ್ಠಾಳ ಮಾತು. ಆದರೆ ಅಸಲಿಗೆ ಅವಳು ಬಂದಿದ್ದು ಸಾಲ ಕೇಳಲು. ಈಗ ಭಾಗ್ಯಳ ಮುಂದಿನ ನಡೆಯೇನು ಎನ್ನುವುದು ಕುತೂಹಲ. 

ಐಶ್ವರ್ಯ, ಅಮಿತಾಭ್​ ನಡುವೆ ಕೊಹ್ಲಿಯನ್ನೂ ಎಳೆತಂದ ರಾಹುಲ್​ ಗಾಂಧಿ: ಅಭಿಮಾನಿಗಳಿಂದ ಭಾರಿ ಆಕ್ರೋಶ


click me!