ಮಡಿಲಲ್ಲಿ ಸಿಹಿ, ಹೃದಯದಲ್ಲಿ ಶ್ರೀರಾಮ... ಬಚ್ಚಿಟ್ಟ ಗುಟ್ಟು ಬಯಲಾಯ್ತು... ದೇಸಾಯಿ ಎದುರು ಸೀತಾಗೆ ಅಗ್ನಿಪರೀಕ್ಷೆ!

By Suvarna News  |  First Published Apr 26, 2024, 12:21 PM IST

ತನಗೊಬ್ಬಳು ಮಗಳು ಇದ್ದಾಳೆ ಎನ್ನುವ ಸತ್ಯವನ್ನು ದೇಸಾಯಿ ಎದುರು ಹೇಳುವುದಕ್ಕೆ ಭಾರ್ಗವಿ ತಡೆದಿದ್ದಳು. ಈಗ ಈ ಸತ್ಯ ಗೊತ್ತಾಗಿದೆ. ಮುಂದೇನು? 
 


ಕೊನೆಗೂ ಸೀತಾಳ ಬಾಳಲ್ಲಿ ಆ ದಿನ ಬಂದೇ ಬಿಟ್ಟಿದೆ. ಯಾವುದನ್ನು ಮುಚ್ಚಿಡಲು ಭಾರ್ಗವಿ ಸೀತಾಳಿಗೆ ಫೋರ್ಸ್​ ಮಾಡಿ, ಹಾಗೆ ಮಾಡುವಲ್ಲಿ ಸಕ್ಸಸ್​ ಆಗಿದ್ದಳೋ ಆ ಸತ್ಯ ಕೊನೆಗೂ ಬಂದು ಬಿಟ್ಟಿದೆ. ತಾತ ದೇಸಾಯಿಗೆ ಸೀತಾಳಿಗೆ ಓರ್ವ ಮಗಳು ಇದ್ದಾಳೆ ಎನ್ನುವ ಸತ್ಯ ತಿಳಿದುಬಂದಿದೆ. ತಾತನ ಆರೋಗ್ಯದ ಬಗ್ಗೆ ಬ್ಲ್ಯಾಕ್​ಮೇಲ್​  ಮಾಡಿ ಸೀತಾಳಿಂದ ಈ ಸತ್ಯ ಹೇಳದಂತೆ ಯಶಸ್ವಿಯಾಗಿದ್ದ ಭಾರ್ಗವಿಗೆ ಈಗ ಸಂಕಟವೂ ಹೌದು, ಖುಷಿಯೂ ಹೌದು. ಈ ವಿಷಯವನ್ನು ನನ್ನಿಂದ ಯಾಕೆ ಮುಚ್ಚಿಟ್ಟಿದ್ದು ಎಂದು ಭಾರ್ಗವಿಗೆ ತಾತ ಕೇಳಿದ್ದಾರೆ. ಈಗ ಭಾರ್ಗವಿಗೆ ಸೀತಾಳ ಮೇಲೆ ಗೂಬೆ ಕುಳ್ಳರಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ ಇದನ್ನು ಎಲ್ಲರ ಎದುರು ಅವಳು ಹೇಗೆ ನಿಭಾಯಿಸುತ್ತಾಳೆ, ಯಾವ ರೀತಿಯಲ್ಲಿ ಸೀತಾಳದ್ದೇ ತಪ್ಪು ಎನ್ನುತ್ತಾಳೆ ಎನ್ನುವುದನ್ನು ನೋಡಬೇಕಿದೆ.

ಅಷ್ಟಕ್ಕೂ, ತನಗೆ ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ಸತ್ಯವನ್ನು ತಾತನ ಎದುರು ಹೇಳಲು ಹೋದಾಗ ಅದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಅದರೆ ತಾತ ಮತ್ತು ಸಿಹಿ ನಡುವೆ ಇದಾಗಲೇ ಫೋನ್​ನಲ್ಲಿ ಮಾತುಕತೆ ನಡೆದಿತ್ತು. ಸಿಹಿ ತಾತನನ್ನು ಮನೆಗೆ ಕರೆದಿದ್ದಳು. ಅಲ್ಲಿ ಬಂದ ತಾತನನ್ನು ಸಿಹಿ ಮನೆಗೆ ಕರೆದುಕೊಂಡು ಹೋಗಿ ಸೀತಮ್ಮನ ಮನೆ ಎಂದಿದ್ದಾಳೆ. ನನಗೆ ಸೀತಮ್ಮನ ಮನೆ ಬೇಡ, ನಿನ್ನ ಮನೆ ಬೇಕು ಎಂದಿದ್ದಾನೆ ತಾತ. ಆಗ ಸಿಹಿ ಇದು ಸೀತಮ್ಮನ ಮನೆಯೇ. ನಾನು ಸೀತಮ್ಮನ ಮಗಳು ಎಂದಿದ್ದಾಳೆ. ಈ ವಿಷಯ ತಾತನಿಗೆ ಮುಂಚೆನೇ ಗೊತ್ತಿತ್ತಾ ಅಥವಾ ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತಾ ಎನ್ನುವುದು   ಕುತೂಹಲವಾಗಿತ್ತು. ಇದೀಗ ವಿಷಯ ಬೆಳಕಿಗೆ ಬಂದಿದೆ. ಸೀತಾ ಈ ವಿಷಯವನ್ನು ಮೊದಲೇ ತಾತನಿಗೆ ತಿಳಿಸಿದ್ದಳೋ, ಇಲ್ಲವೋ ಎನ್ನುವ ಸತ್ಯ ಇನ್ನೂ ಬಹಿರಂಗಗೊಳ್ಳಲಿಲ್ಲ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಸೀತಾಳಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ. 

Tap to resize

Latest Videos

ದಾವಣಗೆರೆ ಗರಿಗರಿ ಚುರುಮುರಿ ಹೇಗೆ ಮಾಡೋದು? ಸೀತಾರಾಮ ಪ್ರಿಯಾ ಅಮ್ಮ ಮಾಡಿದ್ರು ಟೇಸ್ಟಿ ಟೇಸ್ಟಿ ರೆಸಿಪಿ

 ಭಾರ್ಗವಿ ಮತ್ತು ಚಾಂದನಿ ಒಂದಾಗಿಯೇ ಈ ಕುತಂತ್ರ ಹೆಣೆದಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್‌ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಹಾಗಿದ್ದರೆ ರಾಮ್‌ನ ಮದುಮಗಳ ಹೆಸರು ಯಾರದ್ದು ಹೇಳಲಾಗುತ್ತದೆ? ಸದ್ಯ ಸೀತಾ ಮತ್ತು ರಾಮ್‌ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಪಡುತ್ತಿದ್ದಾರೆ.

ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಾಳೆ. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಾಳೆ. ಅದೇ ಇನ್ನೊಂದೆಡೆ ರಾಮ್​ ಸೀತಾ ಹೆಸರಿನ ಎಸ್​ ಅನ್ನು ಕೈ ಮೇಲೆ ಬರೆಸಿಕೊಂಡಿದ್ದ. ಅದನ್ನು ಸೀತಾಳಿಗೆ ತೋರಿಸಿದಾಗ ನಾಚಿಕೊಂಡಿದ್ದಳು.  ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್​ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಇದೀಗ ಸೀತಾಳನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿ ಮಜಾ ನೋಡುತ್ತಿದ್ದಾಳೆ. 

ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದಾಕೆಗೆ ಕಠಿಣ ಶಿಕ್ಷೆ! ಏನು ಹೇಳಹೊರಟಿದೆ ಸೀರಿಯಲ್​? ರೊಚ್ಚಿಗೆದ್ದ ಫ್ಯಾನ್ಸ್​


click me!