ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ವೀಕ್ಷಕರಿಗೆ ಫುಲ್ ಮಜಾ ಸಿಗ್ತಿದೆ. ಶ್ರೇಷ್ಠಾಗೆ ಭಾಗ್ಯ ನೀಡ್ತಿರುವ ಕಾಟ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಹೀಗೆ ಮಾಡು ಭಾಗ್ಯ ಅಂತ ಬೆನ್ನು ತಟ್ಟಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ಶ್ರೇಷ್ಠಾಳನ್ನು ಬೆಂಡೆತ್ತುವ ಕೆಲಸ ನಡೆಯುತ್ತಿದೆ. ನಿದ್ರೆ ಮಾಡೋ ಹಾಕಿಲ್ಲ, ಟಿವಿ ನೋಡ್ತಾ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಅತ್ತೆಯಾದ್ಮೇಲೆ ಸೊಸೆ, ಸೊಸೆಯಾದ್ಮೇಲೆ ಅತ್ತೆ ಕಾಟಕ್ಕೆ ಶ್ರೇಷ್ಠಾ ಸುಸ್ತಾಗಿದ್ದಾಳೆ. ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಈಗ ಫುಲ್ ಮಜಾ ಸಿಗ್ತಿದೆ ಎಂದು ಫ್ಯಾನ್ಸ್ (Fans) ಹೇಳ್ತಿದ್ದಾರೆ.
ಇಂದಿನ ಪ್ರೋಮೋ (Promo)ವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಲಾಗಿದೆ. ಬೆಚ್ಚಗೆ ಹಾಸಿಗೆ ಮೇಲೆ ಹೊದ್ದು ಮಲಗಿದ್ದ ಶ್ರೇಷ್ಠಾ ನೋಡುವ ಕುಸುಮಾ, ನನ್ನ ಸೊಸೆ ಇನ್ನೂ ಮಲಗಿದ್ದಾಳಾ ಎನ್ನುತ್ತ ಒಂದು ಬಕೆಟ್ ತಣ್ಣೀರನ್ನು ಶ್ರೇಷ್ಠಾ ಮೇಲೆ ಹಾಕ್ತಾಳೆ. ಬೆಚ್ಚಿ ಎದ್ದೇಳುವ ಶ್ರೇಷ್ಠಾ ಬಾತ್ ರೂಮಿಗೆ ಓಡ್ತಾಳೆ. ಇನ್ನು ಶ್ರೇಷ್ಠಾ ಕೈಗೆ ಪಾತ್ರೆ ನೀಡುವ ಭಾಗ್ಯ, ಅಡುಗೆ ಮನೆನೂ ನಿಂದೇ ಬಚ್ಚಲು ಮನೆನೂ ನಿಂದೇ ಎನ್ನುತ್ತಾಳೆ. ಭಾಗ್ಯ ಮಾತು ಕೇಳಿ ಶ್ರೇಷ್ಠಾ ಶಾಕ್ ಆಗಿದ್ದಾಳೆ. ಪ್ರೋಮೋ ನೋಡಿದ ಫ್ಯಾನ್ಸ್, ಭಾಗ್ಯಾ ಇಷ್ಟು ಸಾಕಾಗಲ್ಲ, ಇನ್ನಷ್ಟು ಕಾಟಕೊಡು ಎನ್ನುತ್ತಿದ್ದಾರೆ. ಇನ್ಮುಂದೆ ಪ್ರತಿ ದಿನ ಹಬ್ಬನೇ, ಭಾಗ್ಯಾ ಕಾಟಕ್ಕೆ ಬೇಸತ್ತು, ತಾಂಡವ್ ಬೇಡ ಅಂತ ಶ್ರೇಷ್ಠಾ ಓಡಿ ಹೋಗ್ಬೇಕು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಹಣದ ಆಸೆ ಇರ್ಬಾರದು, ಪರರ ಗಂಡದ ಮೇಲೆ ಕಣ್ಣು ಹಾಕಿದೆ ಈಕೆಗೆ ಹೀಗೆ ಆಗ್ಬೇಕು, ಗ್ರಹಚಾರ ಶುರು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಶ್ರೇಷ್ಠಾ ಹೊಸ ನಾಟಕ, ಬೆವರಿದ ತಾಂಡವ್, ಕರಗ್ತಾಳಾ ಭಾಗ್ಯಾ ?
ತನ್ವಿ ಕಾಲೇಜು ವಿಷ್ಯ ಸರಿ ಮಾಡಲು ಭಾಗ್ಯ ಜೊತೆ ತಾಂಡವ್ ಹೋಗಿದ್ದ. ಆಗ್ಲೇ ಶ್ರೇಷ್ಠಾ ಫೋನ್ ಮೇಲೆ ಫೋನ್ ಮಾಡಿದ್ದಳು. ಆತ್ಮಹತ್ಯೆ ಮಾಡಿಕೊಳ್ತೇನೆ, ಹತ್ತು ನಿಮಿಷ ನಿನಗೆ ಟೈಂ ಅಂತ ತಾಂಡವ್ ಎಚ್ಚರಿಸಿದ್ದಳು. ಹೆದರಿ ಅವಳ ಮನೆಗೆ ಓಡಿದ್ದ ತಾಂಡವ್, ಶ್ರೇಷ್ಠಾ ಹೇಳಿದ್ದಕ್ಕೆಲ್ಲ ತಲೆಯಾಡಿಸಿದ್ದ. ಮನೆಗೆ ಕರೆದುಕೊಂಡು ಹೋಗೋದಾಗಿ ಪ್ರಾಮೀಸ್ ಮಾಡಿದ್ದ. ತಾಂಡವ್ ಜೊತೆ ಶ್ರೇಷ್ಠಾ ಮನೆಗೆ ಬಂದಿದ್ದಾಳೆ. ಆರಂಭದಲ್ಲಿ ಶ್ರೇಷ್ಠಾ ಮನೆಗೆ ಬರ್ತಾಳೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಭಾಗ್ಯ ಮತ್ತೆ ಕುಸುಮಾ ಸೇರಿದಂತೆ ಮನೆಯವರೆಲ್ಲ ಶಾಕ್ ಆಗಿದ್ರು. ಆದ್ರೆ ಸುಧಾರಿಸಿಕೊಂಡು ದೃಢ ನಿರ್ಧಾರಕ್ಕೆ ಬಂದಿದ್ದರು. ಭಾಗ್ಯಾ ಸೇರಿದಂತೆ ಇಡೀ ಮನೆ ನನಗೆ ಎದುರಾಗುತ್ತೆ ಎನ್ನುವ ಆಲೋಚನೆಯಲ್ಲಿ ಬಂದಿದ್ದ ಶ್ರೇಷ್ಠಾಗೆ, ಕುಸುಮಾ ಹಾಗೂ ಭಾಗ್ಯ ವರ್ತನೆ ನೋಡಿ ಅಚ್ಚರಿಯಾಗಿತ್ತು. ಶ್ರೇಷ್ಠಾ ಮನೆಗೆ ಬರ್ತಿದ್ದಂತೆ ದೃಷ್ಟಿ ತೆಗೆದು ಅವಳನ್ನು ಒಳಗೆ ಕರೆದುಕೊಂಡಿದ್ದರು ತಾಂಡವ್ ಮನೆಯವರು. ಅಷ್ಟೇ ಅಲ್ಲ, ಶ್ರೇಷ್ಠಾ ನನ್ನ ಸೊಸೆ ಅಂತ ಕುಸುಮಾ ಒಪ್ಪಿಕೊಂಡಿದ್ದಾಳೆ. ಅಮ್ಮನ ಮಾತು ಕೇಳಿ ಶ್ರೇಷ್ಠಾ ಹಾಗೂ ತಾಂಡವ್ ಖುಷಿಯಾಗಿದ್ದಾರೆ. ಇನ್ಮುಂದೆ ತಂದೇ ಹವಾ ಅಂತ ಶ್ರೇಷ್ಠಾ ಮೆರೆಯುವ ಮುನ್ನವೇ ಭಾಗ್ಯ ಹಾಗೂ ಕುಸುಮಾ ತಮ್ಮ ಆಟ ಶುರು ಮಾಡಿದ್ದಾರೆ.
ಹುಡುಗಿಯರ ಇಂಪ್ರೆಸ್ ಮಾಡಲು ಭಾಗ್ಯಲಕ್ಷ್ಮಿ ತಾಂಡವ್ ಕೊಟ್ಟ ಟಿಪ್ಸ್ ಕೇಳಿ ಯುವತಿಯರು
ಶ್ರೇಷ್ಠಾಗೆ ಎಲ್ಲ ಕಡೆಯಿಂದ ಹಿಂಸೆಯಾಗ್ತಿದೆ. ಮೊದಲ ದಿನವೇ ಶ್ರೇಷ್ಠಾ ಸುಸ್ತಾದಂತೆ ಕಾಣ್ತಿದೆ. ಹೋಗ್ತಾ ಹೋಗ್ತಾ ಶ್ರೇಷ್ಠಾ ಸ್ಥಿತಿ ಮತ್ತಷ್ಟು ಹದಗೆಡೋದು ಗ್ಯಾರಂಟಿ. ಇಷ್ಟು ದಿನ ಅತ್ತು ಕರೆದು ಬೇಸರ ವ್ಯಕ್ತಪಡಿಸ್ತಿದ್ದ ಭಾಗ್ಯ ಈಗ ಬದಲಾಗಿದ್ದು, ಎಲ್ಲರಿಗೂ ಖುಷಿಯಾಗಿದೆ. ಸವತಿ ವಿರುದ್ಧ ಭಾಗ್ಯ ನಡೆಸುತ್ತಿರುವ ಹೋರಾಟವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.