ಭವ್ಯಾ ಗೌಡ ಬಿಗ್‌ ಬಾಸ್‌ಗೆ ಮಾವನ ಮಗಳೇ? ವರ್ತೂರು ಸಂತೋಷ್ ಅಭಿಮಾನಿಗಳಿಂದ ಹೀಗೊಂದು ಪ್ರಶ್ನೆ!

By Sathish Kumar KH  |  First Published Dec 29, 2024, 8:07 PM IST

ಬಿಗ್ ಬಾಸ್ ಸೀಸನ್ 11ರಲ್ಲಿ ಭವ್ಯಾ ಗೌಡ ಮೋಸದಿಂದ ಕ್ಯಾಪ್ಟನ್ ಆಗಿದ್ದರೂ, ಬಿಗ್ ಬಾಸ್ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲಿಲ್ಲ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್ ಅವರನ್ನು ಇದೇ ರೀತಿಯ ಮೋಸಕ್ಕೆ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲಾಗಿತ್ತು. ಬಿಗ್ ಬಾಸ್ ಯಾರನ್ನು ಓಲೈಕೆ ಮಾಡತ್ತಿದೆ?


ಬೆಂಗಳೂರು (ಡಿ.29): ಬಿಗ್ ಬಾಸ್ ಸೀಸನ್ 11ರಲ್ಲಿ ಭವ್ಯಾ ಗೌಡ ಮೋಸದಿಂದ ಕ್ಯಾಪ್ಟನ್ ಆಗಿದ್ದರೂ, ಬಿಗ್ ಬಾಸ್ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲಿಲ್ಲ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್ ಅವರನ್ನು ಇದೇ ರೀತಿಯ ಮೋಸಕ್ಕೆ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲಾಗಿತ್ತು. ಬಿಗ್ ಬಾಸ್ ಯಾರನ್ನು ಓಲೈಕೆ ಮಾಡತ್ತಿದ್ದಾರೆ? ಎಂಬ ಪ್ರಶ್ನೆ ಶುರುವಾಗಿದೆ.

ಕನ್ನಡ ಬಿಗ್ ಬಾಸ್ ಮನೆಯಲ್ಲಿ ನ್ಯಾಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಳೆದ ಸೀಸನ್ 10ರ ಬಿಗ್ ಬಾಸ್ ಶೋನಲ್ಲಿ ಮೋಸದಿಂದ ಕ್ಯಾಪ್ಟನ್ ಆಗಿದ್ದ ವರ್ತೂರು ಸಂತೋಷ್‌ಗೆ ಕ್ಯಾಪ್ಟನ್ ಆಗಿ ಮುಂದುವರೆಯಲು ಅವಕಾಶ ನೀಡದೇ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲಾಗಿತ್ತು. ಆದರೆ, ಈಗ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 11ರ ಫೈನಲ್‌ಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಭವ್ಯಾ ಗೌಡ ಮೋಸದಿಂದ ಕ್ಯಾಪ್ಟನ್ ಆಗಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ ಪಂಚಾಯಿತಿ ಮಾಡಿದರೂ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸದೇ ಸುಮ್ಮನಾದರು. ವರ್ತೂರು ಸಂತೋಷ್‌ಗೆ ಕ್ಷಮಾಪಣೆ ಕೊಡದ ಬಿಗ್ ಬಾಸ್, ಭವ್ಯಾಗೌಡಗೆ ಕ್ಯಾಪ್ಟನ್ಸಿಯಲ್ಲಿ ಕರುಣೆ ತೋರಿದ್ದಾದರೂ ಏತಕ್ಕೆ? ಭವ್ಯಾ ಗೌಡ ಬಿಗ್‌ ಬಾಸ್‌ಗೆ ಮಾವನ ಮಗಳಾಗಬೇಕೆ? ಯಾರ ಓಲೈಕೆ ಮಾಡುತ್ತಿದ್ದಾರೆ ಬಿಗ್ ಬಾಸ್ ಎಂಬ ಪ್ರಶ್ನೆ ವೀಕ್ಷಕರು ಹಾಗೂ ವರ್ತೂರು ಸಂತೋಷ್ ಅಭಿಮಾನಿಗಳಲ್ಲಿ ಶುರುವಾಗಿದೆ.

Tap to resize

Latest Videos

ಕಳೆದ ಸೀಸನ್‌ ಅಲ್ಲಿ ವರ್ತೂರು ಸಂತೋಷ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೇರಿನ ಮೇಲೆ ಕುಳಿತುಕೊಳ್ಳುವ ಟಾಸ್ಕ್‌ನಲ್ಲಿ ಮೋಸದ ಆಟವಾಡಿ ಕ್ಯಾಪ್ಟನ್ ಆಗಿದ್ದರು. ಇದನ್ನು ಒಪ್ಪದ ಕಿಚ್ಚ ಸುದೀಪ ಅವರು ವಾರಾಂತ್ಯದಲ್ಲಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಆಗ ಬಿಗ್ ಬಾಸ್ ಕ್ಯಾಪ್ಟನ್ ಆಗಿದ್ದ ವರ್ತೂರು ಸಂತೋಷ್‌ನಿಂದ ಕ್ಯಾಪ್ಟನ್ ಪಟ್ಟವನ್ನು ಕಸಿದುಕೊಳ್ಳಲಾಯಿತು. ಇದೀಗ ಭವ್ಯಾ ಗೌಡ ಕೂಡ ಚೆಂಡನ್ನು ಬುಟ್ಟಿಗೆ ಹಾಕುವ ಟಾಸ್ಕ್‌ನಲ್ಲಿ 9ನೇ ನಂಬರಿನಲ್ಲಿ ಇಲ್ಲದ ಚೆಂಡನ್ನು ತೆಗೆದುಕೊಂಡು ಬುಟ್ಟಿಗೆ ಹಾಕಿ ಮೋಸದಿಂದ ಟಾಸ್ಕ್ ಗೆದ್ದಿದ್ದಾರೆ. ಈ ಬಗ್ಗೆ ಮೋಸದ ಆಟ ಎಲ್ಲರಿಗೂ ಗೊತ್ತಾಗಿ ಕಿಚ್ಚ ಸುದೀಪ ಅವರು ತರಾಟೆಗೆ ತೆಗೆದುಕೊಂಡು ಬೈದಿದ್ದಾರೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಏಕೆ ಅವರನ್ನು ಕೆಳಗಿಳಿಸಲಿಲ್ಲ ಎಂಬ ಪ್ರಶ್ನೆ ಬಿಗ್ ಬಾಸ್ ಮನೆಯ ನ್ಯಾಯಪರತೆ ಮೇಲೆ ಅನುಮಾನ ಬರುವಂತೆ ಮಾಡಿದೆ.

ಫೈನಲ್‌ಗೆ ಎಂಟ್ರಿ ಕೊಡಲಿದ್ದಾರೆ ಭವ್ಯಾ ಗೌಡ: ಭವ್ಯಾ ಗೌಡ ಅವರು 7-8ನೇ ವಾರದಲ್ಲಿಯೇ ಬಿಗ್ ಬಾಸ್ ಮನೆಯೊಂದ ಹೊರಗೆ ಹೋಗುವುದಕ್ಕೆ ನಾಮಿನೇಟ್ ಆಗುವ ಸಾಲಿನಲ್ಲಿ ನಿಂತು ಕೊನೇ ಕ್ಷಣದಲ್ಲಿ ಉಳಿದುಕೊಂಡಿದ್ದರು. ಇನ್ನು ಇದೀಗ ಮೂರ್ನಾಲ್ಕು ವಾರಗಳು ಬಾಕಿ ಇರುವಾಗ 2ನೇ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಿದ್ದರು. ಆಟದಲ್ಲಿ ಗಟ್ಟಿಗಿತ್ತಿ ಆಗಿದ್ದರೂ ನ್ಯಾಯ ಎಂಬುದು ಇವರ ಮನಸ್ಸಿನಲ್ಲಿಲ್ಲ ಎಂಬುದು ಕಂಡುಬರುತ್ತಿದೆ. ಇನ್ನು ಇದೀಗ ಪುನಃ ಮೋಸದಾಟದಿಂದ 3ನೇ ಬಾರಿಗೆ ಕ್ಯಾಪ್ಟನ್ ಆಗುವ ಭವ್ಯಾ ಗೌಡ ಮುಂದಿನ ವಾರವೂ ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಪ್ರಕ್ರಿಯೆಯಿಂದ ಹೊರಗೆ ಉಳಿಯಲಿದ್ದಾರೆ. ಹೀಗಾಗಿ, ಭವ್ಯಾ ಗೌಡ ಬಿಗ್ ಬಾಸ್ ಸೀಸನ್‌ 11ರ ಮೊದಲ ಫೈನಲಿಸ್ಟ್ ಕಂಟೆಸ್ಟೆಂಟ್ ಎಂಬುದು ಖಚಿತ ಆಗುತ್ತಿದೆ.

ಇದನ್ನೂ ಓದಿ: ವಿಡಿಯೋ ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಭವ್ಯಾ ಗೌಡ; ಕಂತ್ರಿ ಬುದ್ಧಿ ಎಂದು ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಕನ್ನಡದ ಬಿಗ್ ಬಾಸ್ ಸೀಸನ್ 11ರಲ್ಲಿ ಬಹುತೇಕ ಟಾಸ್ಕ್‌ಗಳು ಜನರು ಮೆಚ್ಚುವಂತೆ ನಡೆದಿಲ್ಲ. ಕಾರಣ ಎಲ್ಲ ಟಾಸ್ಕ್‌ಗಳನ್ನು ಕಂಟೆಸ್ಟೆಂಟ್‌ಗಳು ಕೇವಲ ಕುತಂತ್ರದಿಂದ ಹಾಗೂ ವೈಯಕ್ತಿಕ ಜಿದ್ದಿಗಾಗಿ ಆಡಿದ್ದಾರೆಯೇ ಹೊರತು ಕ್ರೀಡಾ ಸ್ಪೂರ್ತಿ ಮೆರೆದಿರುವುದು ತೀರಾ ಕಡಿಮೆ. ಇನ್ನು ಆಟದಲ್ಲಿ ನ್ಯಾಯ ಎಂಬುದೇ ಮರೀಚಿಕೆ ಎನ್ನುವಂತಾಗಿದೆ. ಇದನ್ನು ಆರಂಭದಿಂದ ಬಿಗ್ ಬಾಸ್ ತಿದ್ದದೇ  ಕಂಟೆಸ್ಟೆಂಟ್‌ಗಳು ಮಾಡಿದ್ದೇ ಮಹಾ ಸಾರ್ಥಕ ಎಂಬಂತೆ ಆಟವಾಡಲು ಬಿಟ್ಟಿರುವುದೇ ಈ ಮಟ್ಟಕ್ಕೆ ಮೋಸದಾಟ ಆಡಲು ಪ್ರೇರಣೆ ಆಗಿದೆ ಎಂಬುದು ವೀಕ್ಷಕರ ವಾದವಾಗಿದೆ. ಅದರಲ್ಲಿಯೂ ಈ ಸೀಸನ್‌ ಅಲ್ಲಿ ಉಸ್ತುವಾರಿಗಳಲ್ಲೇ ಕಾರುಬಾರು ಶುರುವಾಗಿದೆ. ಉಸ್ತುವಾರಿಯಾಗಿ ಅನ್ಯಾಯದ ಪರಮಾವಧಿ ತೋರಿಸುತ್ತಿದ್ದರೂ ಬಿಗ್ ಬಾಸ್ ತುಟಿ ಬಿಚ್ಚಲಿಲ್ಲ. ಗಟ್ಟಿ ಧ್ವನಿಯಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದ್ದರೆ ಅದನ್ನು ತಿದ್ದಿಕೊಳ್ಳಬಹುದಿತ್ತು.

ಬಿಗ್ ಬಾಸ್ ಮನೆಯಲ್ಲಿ ಮೋಸದಾಟದ ಪರಮಾವಧಿಯಲ್ಲಿ ಮೆರೆಯುತ್ತಿರುವ ಮಹಾರಾಣಿ ಎಂದರೆ ಅದು ಚೈತ್ರಾ ಕುಂದಾಪುರ ಎಂಬುದು ವೀಕ್ಷಕರ ಮಾತಾಗಿದೆ. ಎಷ್ಟೇ ಮೋಸ ಮಾಡಿ, ತಪ್ಪು ಮಾಡಿ ಅದನ್ನು ತಿರುಚುವ ಮಾತನಾಡಿದರೂ ಅದಕ್ಕೆ ವಾರಾಂತ್ಯದಲ್ಲಿ ಒಂದೆರಡು ಮಾತುಗಳು ಬಿಟ್ಟರೆ ಬೇರೇನೂ ಪರಿಹಾರವೇ ಇಲ್ಲ. ಮೋಸದ ಆಟಕ್ಕೆ ಅವಕಾಶವೇ ಇಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಈವರೆಗೂ ಬಿಗ್ ಬಾಸ್ ಆಗಲೀ ಅಥವಾ ಪಂಚಾಯಿತಿ ನಡೆಸಿಕೊಡುವ ಕಿಚ್ಚ ಸುದೀಪ ಅವರಾಗಲೀ ಗಟ್ಟಿ ಧ್ವನಿ ಮಾಡಲಿಲ್ಲ. ಹೀಗಾಗಿ, ಕುತಂತ್ರದ ಆಟಗಳಿಗೆ ಇಲ್ಲಿ ಕೊನೆಯೇ ಇಲ್ಲದಂತಾಗಿದೆ.

ಇದನ್ನೂ ಓದಿ: ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆದ ಭವ್ಯಾ ಗೌಡ! ಮೋಸ ಮಾಡಿ ನಾಯಕಿಯಾದ್ರಾ?

click me!