BBK11: ಹೊಸ ವರ್ಷಕ್ಕೆ ಚೈತ್ರಾ-ರಜತ್‌ಗೆ ತನ್ನ ಬೆಲೆಬಾಳುವ ಕಿವಿಯೋಲೆ ಬಿಚ್ಚಿ ಉಡುಗೊರೆ ಕೊಟ್ಟ ಕಿಚ್ಚ!

By Gowthami K  |  First Published Dec 29, 2024, 10:41 PM IST

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಿತು. ಸ್ಪರ್ಧಿಗಳು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಿದರು. ಕಿಚ್ಚ ಸುದೀಪ್ ತಮ್ಮ ಕಿವಿಯೋಲೆಗಳನ್ನು ರಜತ್ ಮತ್ತು ಚೈತ್ರಾ ಅವರಿಗೆ ಉಡುಗೊರೆಯಾಗಿ ನೀಡಿದರು.


ಬಿಗ್ ಬಾಸ್ ಕನ್ನಡ ಸೀಸನ್​ 11 ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವರ್ಷದ ಕೊನೆಯಲ್ಲಿ ಕಿಚ್ಚನ ಕೊನೆಯ ಸಂಚಿಕೆಗಳು ನಡೆದ ಕಾರಣ ಮನೆಯಲ್ಲಿ ಹೊಸ ವರ್ಷ 2025 ಸಂಭ್ರಮಾಚರಣೆ ಎರಡು ದಿನಕ್ಕೆ ಮುಂಚೆಯೇ ಆಚರಿಸಿದ್ದಾರೆ ಕಿಚ್ಚ. ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಆಕ್ಟಿವಿಟಿ ಒಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ಇಷ್ಟದ ವಸ್ತುವೊಂದನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬೇಕಿತ್ತು, ಹಲವರು ತಮ್ಮ ವಸ್ತುಗಳನ್ನು ಇತರ ಸ್ಪರ್ಧಿಗಳಿಗೆ ನೀಡಿದರು. ಚೈತ್ರಾ ಅವರು, ಐಶ್ವರ್ಯಾಗೆ ಸೀರೆಯ ಪಿನ್‌ ಕೊಟ್ಟರು. ಮತ್ತು ತಾಯಿ ಇಲ್ಲದ ಹೆಣ್ಣು ಮಗು ಹೇಗಿರಬಹುದು ಎಂದು ನಾನು ಯೋಚಿಸುತ್ತೇನೆ. ನಾನು ನನ್ನ ತಾಯಿಗಾಗಿ ಶೋಗೆ ಬಂದೆ. ಆದರೆ ತಾಯಿಯನ್ನು ಕಳೆದುಕೊಂಡ ಆಕೆ ಇರ್ತಾಳೆ ಅಂತ ಭಾವುಕರಾದರು. ಇದು ಮನೆಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಸಿತು.

ಟಾಟಾ ಸಮೂಹದಿಂದ ಬರೋಬ್ಬರಿ 5 ಲಕ್ಷ ಉದ್ಯೋಗ ಸೃಷ್ಟಿ

Tap to resize

Latest Videos

ಅದಾದ ಬಳಿಕ ಎಲ್ಲರ ನಿರೀಕ್ಷೆಯಂತೆ ಭವ್ಯಾ ಗೌಡ, ತಮ್ಮ ಆತ್ಮೀಯ ಗೆಳೆಯ ತ್ರಿವಿಕ್ರಮ್‌ ಗೆ ಟೀ ಶರ್ಟ್ ಅನ್ನು   ಉಡುಗೊರೆಯಾಗಿ ನೀಡಿದರು. ಆ ನಂತರ ತ್ರಿವಿಕ್ರಮ ಅವರ ಗುಣವನ್ನು ಹೊಗಳಿ ಕೊಂಡಾಡಿದರು. ಇದನ್ನು ಕೇಳಿ ಸುದೀಪ್ ಜೋಕ್ ಮಾಡಿದರು. ಅದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿತು. ತ್ರಿವಿಕ್ರಮ್‌ ಭವ್ಯಾಗೆ ಶರ್ಟ್ ಗಿಫ್ಟ್ ಮಾಡಿದರು.

ಧನ್‌ರಾಜ್ ತನ್ನ ಆತ್ಮೀಯ ಗೆಳೆಯ ಹನುಮಂತಗೆ ಚಿನ್ನವನ್ನು ಗಿಫ್ಟ್ ಮಾಡಿದರು. ಹನುಮಂತು ಧನುಗೆ ಒಂದಂಗಿ ಒಂದು ಲುಂಗಿ ಗಿಫ್ಟ್ ಮಾಡಿದರು. ಐಶ್ವರ್ಯಾ ತಮ್ಮ ಜಾಕೆಟ್‌ ಅನ್ನು ಮೋಕ್ಷಿತಾಗೆ ಗಿಫ್ಟ್ ಮಾಡಿದರು. ರಜತ್‌ ತನ್ನ ಫೇವರಿಟ್ ಜಾಕೆಟ್‌ ಅನ್ನು ಧನ್‌ರಾಜ್ ಗೆ ನೀಡಿದರು. ಗೌತಮಿ ಮತ್ತು ಮಂಜು ಇಬ್ಬರು ಗಿಫ್ಟ್ ವಿನಿಮಯ ಮಾಡಿಕೊಂಡರು.

ಟಾಟಾ ರಿಂದ ಸಿಂಗ್‌ ವರೆಗೆ 2024ರಲ್ಲಿ ಅಗಲಿದ 15 ಗಣ್ಯ ವ್ಯಕ್ತಿಗಳು

ಆದರೆ ಈ ಟಾಸ್ಕ್‌ ನಲ್ಲಿ ರಜತ್‌ ಮತ್ತು ಚೈತ್ರಾ ಅವರಿಗೆ ಏನೂ ಗಿಫ್ಟ್ ಬಂದಿರಲಿಲ್ಲ. ಅದಕ್ಕೆ ಕಿಚ್ಚ ಕೂಡಲೇ ತನ್ನ ಎರಡೂ ಕಿವಿಯಲ್ಲಿದ್ದ ಬೆಲೆಬಾಳುವ ಕಿವಿಯೋಲೆಯನ್ನು ಇಬ್ಬರಿಗೂ ಒಂದೊಂದು ಗಿಫ್ಟ್ ಮಾಡಿದರು. ಕೂಡಲೇ ತನ್ನ ಕಿವಿಯಿಂದ ಬಿಚ್ಚಿ ಕಳುಹಿಸಿಕೊಟ್ಟರು.   ಈ ಮೂಲಕ ನಿಮ್ಮಿಬ್ಬರನ್ನು ಒಂದಾಗಿಸಿದ್ದೇನೆ  ಎಂದು ಸುದೀಪ್ ಹೇಳಿದರು. ಇದಾದ ನಂತರ ಇದು ಸ್ಪೆಷಲ್‌ ಡಿಸೈನ್‌ ಇದೆ ಎಂದು ಎಲ್ಲಾ ಹುಡುಗರು ಮಾಡಿಸಿಕೊಂಡು ತಮ್ಮ ಕಿವಿಗಳಿಗೆ ಹಾಕಿಸಿಕೊಂಡಿದ್ದಾರೆಂದು ಹೇಳಿದರು ಕಿಚ್ಚ.

ಅದೇನೆ ಇರಲಿ ಕಿಚ್ಚ ಸುದೀಪ್‌ ಅವರ ಕೈನಿಂದ  ತಾವೇ ಧರಿಸಿದ ಬೆಲೆಬಾಳುವ ಕಿವಿಯೋಲೆ ಪಡೆದ ರಜತ್‌ ಮತ್ತು ಚೈತ್ರಾ ಅವರೇ ಧನ್ಯರು. ಬಹುಶ ಅವರ ಜೀವಮಾನದ ಅತ್ಯಂತ ಮೌಲ್ಯಯುತವಾದ ಗಿಫ್ಟ್ ಎಂಬುದರಲ್ಲಿ ಎರಡು ಮಾತಿಲ್ಲ. ವೇದಿಕೆಯ ಮೇಲೆಯೇ ತನ್ನ ಕಿವಿಯೋಲೆ ಬಿಚ್ಚಿಕೊಟ್ಟು ಕಿಚ್ಚ ಸುದೀಪ್‌ ಹೃದಯ ಗೆದ್ದರು.

ಮನೆಯಿಂದ ಐಶ್ವರ್ಯಾ ಔಟ್: ಈ ವಾರ ಬಿಗ್​ಬಾಸ್​ ಮನೆಯಿಂದ ಐಶ್ವರ್ಯಾ ಸಿಂಧೋಗಿ ಹೊರ ಬಂದಿದ್ದಾರೆ. ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ ಕ್ಯಾಪ್ಟನ್​ ಭವ್ಯಾ ಗೌಡ ಅವರು ಐಶ್ವರ್ಯಾ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು. ಮೋಕ್ಷಿತಾ ಮತ್ತು ಐಶ್ವರ್ಯಾ ಬಾಟಮ್‌ 2ರಲ್ಲಿ ಇದ್ದರು.​ ಔಟ್‌ ಆದ ಐಶ್ವರ್ಯಾ ಅವರನ್ನು ಪತ್ರದ ಮೂಲಕ ಒಳ್ಳೆಯ ಸಂದೇಶದಿಂದ ಸುಂದರವಾಗಿ ಬಿಗ್‌ಬಾಸ್‌ ಬೀಳ್ಕೊಟ್ಟರು. ಬಿಗ್‌ಬಾಸ್‌ ತವರು ಮನೆ, ಹೋಗಿ ಬನ್ನಿ ಮಗಳೇ ಎಂದು ಕಳುಹಿಸಿಕೊಟ್ಟರು.  

click me!