ಎರಡು ಪಾಲಾಗಿರುವ ಮನೆಯಲ್ಲಿ ನಿಂತೇ ಭಾಗ್ಯ ಮತ್ತು ತಾಂಡವ್ ಪ್ರತಿಜ್ಞೆ ಮಾಡಿದ್ದಾರೆ. ಇಬ್ಬರಲ್ಲಿ ಗೆಲುವು ಯಾರ ಪಾಲಾಗಲಿದೆ?
ಭಾಗ್ಯ ಮತ್ತು ತಾಂಡವ್ ಒಂದಾಗುವ ಸೂಚನೆ ಸದ್ಯ ಕಾಣಿಸುತ್ತಿಲ್ಲ. ಆಕಾಶ-ಭೂಮಿ ಒಂದು ಮಾಡಿಯಾದರೂ ಭಾಗ್ಯಳನ್ನು ಮನೆಯಿಂದ ಹೊರಕ್ಕೆ ಹಾಕಲು ತಾಂಡವ್ ತಂತ್ರ ರೂಪಿಸಿದ್ದ. ಆದರೆ ಅಮ್ಮ ಕುಸುಮಾ ಎದುರು ಎಲ್ಲವೂ ಠುಸ್ ಆಗಿದೆ. ಆದರೆ ಇದೀಗ ಯುಗಾದಿ ದಿನವೇ ಗಂಡ-ಹೆಂಡತಿ ನಡುವೆ ಭರ್ಜರಿ ಪ್ರತಿಜ್ಞೆ ಆಗಿದೆ. ಇಬ್ಬರೂ ಪ್ರತಿಜ್ಞೆ ಮಾಡಿದ್ದು, ಗೆಲುವು ಯಾರದ್ದು, ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ, ನಮಗೆ ಮಗನಿಗಿಂತಲೂ ಸೊಸೆಯೇ ಮೇಲು ಎಂದು ಕುಸುಮಾ ಮತ್ತು ಅವರ ಮನೆಯವರು ಭಾಗ್ಯಳ ಪರ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಕುಸುಮಾಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ತಾಂಡವ್ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದು ಈ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ. ಅಷ್ಟಕ್ಕೂ ಈಗ ಭಾಗ್ಯಳೂ ಬದಲಾಗಿದ್ದಾಳೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ, ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.
ಕುಸುಮಾ ಮನೆಯನ್ನು ಎರಡು ಪಾಲು ಮಾಡಿದ್ದಾಳೆ. ಅಷ್ಟಕ್ಕೂ ಪಾಲು ಎಂದರೆ ಒಂದು ಗೆರೆ ಎಳೆದಿದ್ದಾಳೆ. ಮಗ ತಾಂಡವ್ ಬಳಿಯಲ್ಲಿ ನಿಂತಿದ್ದ ಭಾಗ್ಯ ಮತ್ತು ಮಕ್ಕಳನ್ನು ಗೆರೆ ದಾಟಿಸಿ ತನ್ನ ಬಳಿ ಕರೆದುಕೊಂಡು ಬಂದಿದ್ದಾಳೆ. ಪದೇ ಪದೇ ತಾಂಡವ್, ನನ್ನ ಮನೆಯಲ್ಲಿ ನೀನು ಇರಲು ಸಾಧ್ಯವಿಲ್ಲ ಎಂದು ಪತ್ನಿಗೆ ಹೇಳುತ್ತಿದ್ದ. ಇದೇ ಮಾತನ್ನು ಈಗ ಕುಸುಮಾ ಹೇಳಿದ್ದಾಳೆ. ನಿನ್ನ ಮನೆ ಗೆರೆಯ ಆ ಭಾಗ, ನಮ್ಮ ಮನೆ ಗೆರೆಯ ಭಾಗ, ನೀನು ಹೇಳಿದ ಹಾಗೆ ನಿನ್ನ ಮನೆಯಿಂದ ಕುಸುಮಾಳನ್ನು ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳ ಜೊತೆ ಮಕ್ಕಳನ್ನೂ ಕರೆದುಕೊಂಡು ಬಂದಿದ್ದೇನೆ. ನಿನ್ನ ಮನೆ ನಿನಗೆ, ನಮ್ಮ ಮನೆ ನಮಗೆ. ಏನು ಬೇಕಾದರೂ ಮಾಡಿಕೋ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್ ಜೊತೆ ಭಾಗ್ಯಳೂ ಶಾಕ್ ಆಗಿದ್ದಾಳೆ. ಹಾವು ಸಾಯ್ಬೇಕು, ಆದ್ರೆ ಕೋಲು ಮುರಿಯಬಾರ್ದು ಎಂಬ ತಂತ್ರ ಮಾಡಿದ್ದಾಳೆ ಕುಸುಮಾ.
ಧಾರಾವಾಹಿ ಅಂದ್ರೆ ಸುಮ್ನೇನಾ? ಭಾಗ್ಯಳ ನೋಡಿ 10ನೇ ಕ್ಲಾಸ್ ಪರೀಕ್ಷೆ ಬರೆದ್ರು ಈ ಅಮ್ಮಾ...
ಇದರ ನಡುವೆಯೇ ಭಾಗ್ಯ ಮತ್ತು ತಾಂಡವ್ ನಡುವೆ ಭರ್ಜರಿ ಪ್ರತಿಜ್ಞೆ. ಗೆರೆಯ ಅತ್ತ ಕಡೆ ಎಲ್ಲರನ್ನೂ ನೀನು ಸೇರಿಸಿಕೊಂಡು ನನ್ನನ್ನು ಒಂಟಿ ಮಾಡಿರುವೆ ಎಂದು ಕೂಗಾಡಿರುವ ತಾಂಡವ್, ನೋಡ್ತಾ ಇರು, ಗೆರೆಯಿಂದ ಆ ಕಡೆ ಇರುವವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಇತ್ತ ಕಡೆ ಮಾಡಿಕೊಳ್ಳುವೆ ಎಂದಿದ್ದಾನೆ. ಇದಕ್ಕೆ ಪ್ರತಿಯಾಗಿ ಪ್ರತಿಜ್ಞೆ ಮಾಡಿರುವ ಭಾಗ್ಯ, ಎಲ್ಲರೂ ಒಂದೇ ಮನೆಯಲ್ಲಿ ಚೆನ್ನಾಗಿ ಇರುವಂತೆ ನಾನು ಮಾಡುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಹೇಳಿದ್ದಾಳೆ. ಅಂತಿಮವಾಗಿ ಇದು ಸೀರಿಯಲ್ ಆಗಿರುವ ಕಾರಣ, ಭಾಗ್ಯಳ ಪ್ರತಿಜ್ಞೆಯೇ ಮೇಲುಗೈ ಸಾಧಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಹೇಗೆ? ತಾಂಡವ್ಗಾಗಿ ಅತ್ತ ಶ್ರೇಷ್ಠಾ ಕಾಯುತ್ತಿದ್ದಾಳಲ್ಲ, ಅವಳು ಅಷ್ಟು ಸುಲಭದಲ್ಲಿ ತಾಂಡವ್ನನ್ನು ಬಿಟ್ಟುಕೊಡುತ್ತಿಲ್ಲ. ಇದೀಗ ಗಂಡ- ಹೆಂಡತಿ ಪ್ರತಿಜ್ಞೆ ಬಲು ಜೋರಾಗಿದ್ದು ಗೆಲುವು ಹೇಗೆ ಎನ್ನುವುದು ಫ್ಯಾನ್ಸ್ ಪ್ರಶ್ನೆ.
ಅತ್ತೆ ಕುಸುಮಾ ಸೊಸೆ ಪರವಾಗಿ ನಿಂತು ಮಗನನ್ನೇ ಹೊರಕ್ಕೆ ಹಾಕಿರುವುದಕ್ಕೆ ಸೀರಿಯಲ್ನ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಅತ್ತೆ ಎಂದರೆ ಹೀಗಿರಬೇಕು. ಮಗ ದಾರಿ ತಪ್ಪಿದಾಗ, ಇದೇ ರೀತಿ ಬುದ್ಧಿ ಕಲಿಸಬೇಕು. ಆದರೆ ಇಂದು ಎಷ್ಟೋ ಮನೆಗಳಲ್ಲಿ ಮಗ ಏನೇ ಮಾಡಿದರೂ ಆತನ ಪರ ವಹಿಸಿಕೊಂಡು ಬರುವ ಅತ್ತೆಯಂದಿರೇ ಹೆಚ್ಚಾಗಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಮಗ ತಾಂಡವ್ ಅಡ್ಡ ದಾರಿ ಹಿಡಿಯುತ್ತಿರುವ ಹೊತ್ತಿನಲ್ಲಿಯೇ ಆತನಿಗೆ ಬುದ್ಧಿ ಹೇಳಿದ್ದರೆ ಇಷ್ಟು ದೂರ ಆತ ಬರುತ್ತಲೇ ಇರಲಿಲ್ಲ. 16 ವರ್ಷ ಸಂಸಾರದಿಂದ ಎರಡು ಮಕ್ಕಳು ಬೆಳೆದು ನಿಂತ ಮೇಲೆ ಈಗ ಬುದ್ಧಿ ಹೇಳಿದ್ರೆ ಅವನು ಕೇಳ್ತಾನಾ ಎನ್ನುತ್ತಿದ್ದಾರೆ.
ಶಾರುಖ್ ಪುತ್ರ ಆರ್ಯನ್ ಜೊತೆ ಐಶ್ವರ್ಯ ಪುತ್ರಿ ಆರಾಧ್ಯ ಮದ್ವೆ: ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಶಾಕ್!