ನಂಗೆ ಅಪ್ಪ ಇಲ್ಲಾಂದ್ರೂ ಪರವಾಗಿಲ್ಲ, ನಿಂಗೆ ಗಂಡ ಬೇಕಲ್ವಾ? : ಸಿಹಿಯ ಮಾತಿಗೆ ಕಂಗಾಲಾದ ಸೀತಾ

By Suvarna News  |  First Published Apr 9, 2024, 3:36 PM IST

ಅಪ್ಪನ ಪ್ರೀತಿಯನ್ನು ಕಾಣದ ಸಿಹಿಗೆ ಅಪ್ಪ ಬೇಡವಾಗಿದೆ. ಆದರೆ, ಅಮ್ಮನಿಗೆ ಗಂಡ ಬೇಕು ಎನ್ನುವುದನ್ನು ಅವಳು ಅರಿತಿದ್ದಾಳೆ. ಅಷ್ಟಕ್ಕೂ ಸಿಹಿ ಸೀತಮ್ಮನಿಗೆ ಹೇಳಿದ್ದೇನು?
 


ಅತ್ತ ಪ್ರಿಯಾಳ ಮದುವೆ ಸಂಭ್ರಮ ಜೋರಾಗಿದೆ. ಇದೇ ಸಂದರ್ಭದಲ್ಲಿ ಸೀತಾ ಇನ್ನೊಂದು ಮದ್ವೆಗೆ ನಿರ್ಧರಿಸಿರುವುದಕ್ಕೆ ಪ್ರಿಯಾಳ ಅಮ್ಮ ಖುಷಿ ವ್ಯಕ್ತಪಡಿಸುತ್ತಿದ್ದಾಳೆ. ಮಗಳು ಹೇಗೋ ಬೆಳೆಯುತ್ತಾಳೆ, ದೊಡ್ಡವಳಾಗಿ ಬೇರೆಯವರ ಮನೆ ಸೇರುತ್ತಾಳೆ. ಆಗ ಒಂಟಿಯಾಗುವ ನೋವು ತನಗೆ ಗೊತ್ತು ಎಂದು ಪ್ರಿಯಾಳ ಅಮ್ಮ ಹೇಳುತ್ತಾಳೆ. ಈ ಕಾರಣದಿಂದ ನೀನು ಮದ್ವೆಗೆ ನಿರ್ಧಾರ ಮಾಡಿರುವುದು ಒಳ್ಳೆಯದು ಎನ್ನುತ್ತಾಳೆ. ಇದೆಲ್ಲವನ್ನೂ ಸಿಹಿ ಕೇಳಿಸಿಕೊಳ್ಳುತ್ತಾಳೆ. ಅಷ್ಟಕ್ಕೂ ಸಿಹಿ,  ಅಪ್ಪನ ಪ್ರೀತಿ ಕಳೆದುಕೊಂಡಿರುವ ಮಗು. ಅಪ್ಪನ ಪ್ರೀತಿ ಕಾಣದಿದ್ದ ಸಿಹಿಗೆ ತಾನು ಹುಟ್ಟಿದ ತಕ್ಷಣ ಅಪ್ಪ ಹೋಗಿರುವುದು ಮಾತ್ರ ತಿಳಿದಿದೆ. ಅದ್ಯಾಕೆ ಎನ್ನುವುದು ಆಕೆಗೆ ಗೊತ್ತಿಲ್ಲ. ಇಷ್ಟು ಚಿಕ್ಕ ಮಗುವಿಗೆ ಬಿಡಿಸಿ ಹೇಳುವುದು ಕೂಡ ಅಮ್ಮನಿಗೆ ಕಷ್ಟವೇ. ಆದರೆ ಸಿಹಿಯ ಮನಸ್ಸಿನಲ್ಲಿ ಇರುವುದು ಏನೆಂದರೆ, ಮಗು ಹುಟ್ಟಿದ ಬಳಿಕ, ಅಪ್ಪ ಬಿಟ್ಟು ಹೋಗುತ್ತಾನೆ ಎಂದು. ಇದನ್ನೇ ಆಕೆ ಈ ಹಿಂದೆ ಅಶೋಕ್​ಗೂ ಕೇಳಿದ್ದಳು. ನಿಮಗೆ ಮಗು ಆಗುವುದು ಯಾವಾಗ ಎಂದು ಕೇಳಿದ್ದಳು. ಅದಕ್ಕೆ ಅಶೋಕ್​ ದೇವರು ಕೊಟ್ಟಾಗ ಎಂದಿದ್ದ. ಹಾಗಿದ್ದರೆ ಮಗು ಆದ್ಮೇಲೆ ಪ್ರಿಯಾರನ್ನು ಬಿಟ್ಟು ಹೋಗ್ತೀರಾ ಎಂದು ಕೇಳಿದ್ದಳು ಸಿಹಿ. ಅವಳ ವಿಷಯದಲ್ಲಿ ಅಪ್ಪ ಎಂದರೆ ಮಗುವಾದ ಮೇಲೆ ಬಿಟ್ಟು ಹೋಗುವವ ಎಂದು ಅಷ್ಟೇ.

ಇದೇ ಕಾರಣದಿಂದ ರಾಮ್​ನನ್ನು ಕೂಡ ತನ್ನ ಅಪ್ಪ ಎಂದು ಅವಳು ಒಪ್ಪಿಕೊಳ್ಳಲು ರೆಡಿ ಇಲ್ಲ. ಸೀತಾರಾಮರ ಕಲ್ಯಾಣ ಇನ್ನೇನು ಹತ್ತಿರವಾಗುತ್ತಿದೆ. ರಾಮ್​ ಅಂತೂ ಸೀತಾಳನ್ನು ಎಂದೋ ಒಪ್ಪಿಕೊಂಡು ಆಗಿಬಿಟ್ಟಿದೆ. ಸೀತಾಳೂ ಪ್ರೀತಿಗೆ ಮುದ್ರೆ ಒತ್ತಿದ್ದಾಳೆ. ರಾಮ್​  ಮತ್ತು ಸೀತಾ ಇನ್ನೇನು ದಂಪತಿಯಂತೆ ಕಾಣುವ ಸಮಯ ಬಂದಿದೆ. ಆದರೆ ಮದುವೆಯ ಬಗ್ಗೆ ಸಿಹಿಗೆ ಹೇಗೆ ವಿಷ್ಯ ತಿಳಿಸಬೇಕು ಎಂದು ಒದ್ದಾಡಿದ್ದಳು ಸೀತಾ. ಅತ್ತ ಏನೋ ಒಂದು ವಿಷ್ಯ ಹೇಳಬೇಕು ಎಂದು ರಾಮ್​ ಸಿಹಿಯನ್ನು ಕರೆದಿದ್ದ.  ನಂತರ  ತನ್ನದೇ ರೀತಿಯಲ್ಲಿ ಸಿಹಿಗೆ ಮದುವೆಯ ವಿಷಯ ತಿಳಿಸಿದ್ದ. ನಾವು ಮೂವರೂ ಒಂದೇ ಮನೆಯಲ್ಲಿ ಇರೋಣ ಎಂದಾಗ ಸಿಹಿಗೆ ತುಂಬಾ ಖುಷಿಯಾಗಿತ್ತು.  ನಂತರ ನಾನು ಸೀತಾರನ್ನು ಮದ್ವೆಯಾಗುತ್ತೇನೆ ಎಂದಾಗ, ಸಿಹಿ ಹಾಗಿದ್ದರೆ ನೀನು ನನ್ನ ಅಪ್ಪ ಆಗುತ್ತಿಯಾ ಎಂದು ಕೇಳಿದ್ದಳು. ಹೌದು. ನಾನು ನಿನ್ನನ್ನು ಮಗಳು ಎಂದು ಎಂದೋ ಅಂದುಕೊಂಡು ಆಗಿದೆ ಎನ್ನುತ್ತಿದ್ದಂತೆಯೇ ಜೋರಾಗಿ ಅತ್ತಿರೋ ಸಿಹಿ ನನಗೆ ಅಪ್ಪ ಬೇಡ ಎಂದುಬಿಟ್ಟಿದ್ದಳು. 

Tap to resize

Latest Videos

ಅಭಿಮಾನಿಗಳ ನಿರೀಕ್ಷೆ ಸುಳ್ಳಾಗೋಯ್ತು: ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ರಜನಿ ಪುತ್ರಿ ಐಶ್ವರ್ಯಾ- ಧನುಷ್​?

ಇದನ್ನು ಕೇಳಿ ರಾಮ್​  ಮತ್ತು ಸೀತಾಗೆ ಶಾಕ್​ ಆಗಿತ್ತು. ಆದರೆ ಇದೀಗ ಪ್ರಿಯಾಳ ಅಮ್ಮ ಹೇಳಿದ ಮಾತು ಸಿಹಿಯ ಕಿವಿಯ ಮೇಲೆ ಬಿದ್ದಿದೆ. ಯುಗಾದಿ ಹಬ್ಬಕ್ಕೆ ಅಮ್ಮನಿಗೆ ಚೆನ್ನಾಗಿ ಡ್ರೆಸ್​ ಮಾಡಿಕೊಳ್ಳುವಂತೆ ಹೇಳಿದ ಸಿಹಿ, ನೀನು ಹೂವು ಮುಡಿದುಕೋ. ನಿನಗೂ ಯಾರಾದ್ರೂ ಹೂವು ಮುಡಿಸಬೇಕು ಎನ್ನಿಸುತ್ತಾ? ಸೀರೆಯ ನೆರಿಗೆಯನ್ನು ಹಿಡಿದುಕೊಳ್ಳಬೇಕು ಎನಿಸುತ್ತಾ ಎಂದು ಪ್ರಶ್ನಿಸುತ್ತಲೇ, ನನಗೆ ಅಪ್ಪ ಇಲ್ಲಾಂದ್ರೂ ಪರವಾಗಿಲ್ಲ, ನಿನಗೆ ಗಂಡ ಇದ್ರೆ ಚೆನ್ನಾಗಿರತ್ತಲ್ವಾ ಎಂದು ಪ್ರಶ್ನಿಸಿದ್ದಾಳೆ. ಇದನ್ನು ಕೇಳಿ ಸೀತಾ ಶಾಕ್​ ಆಗಿದ್ದಾಳೆ. 


ಅದೇ ಇನ್ನೊಂದೆಡೆ,  ಸೀತಾಳಿಗೆ ತನ್ನ ಹಿಂದಿನ ಕಥೆಯ ಚಿಂತೆಯೂ ಶುರುವಾಗಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ.  ಒಂದು ವೇಳೆ ಮದುವೆಯಾದ ಮೇಲೆ ಸೀತಾಳ ಹಿಂದಿನ ಸ್ಟೋರಿ ಗೊತ್ತಾಗಿ ಇಬ್ಬರ ನಡುವೆ ಒಡಕು ಬಂದರೆ ಎನ್ನುವ ಆತಂಕದಲ್ಲಿಯೂ ಅಭಿಮಾನಿಗಳಿದ್ದಾರೆ. ಅದೇ ಇನ್ನೊಂದೆಡೆ ಹಲವರು ಸಿಹಿ, ಸೀತಾಳ ಮಗುವೇ ಅಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿಹಿಯ ರಹಸ್ಯ ಹೊರಬರಲು ಇನ್ನೂ ಹಲವು ದಿನಗಳು ಕಾಯಬೇಕಿದೆ. 

ಹಸಿಬಿಸಿ ದೃಶ್ಯಗಳ ಬಗ್ಗೆ ಹಾಗೆ ಹೇಳಿದ್ದ ಅನುಪಮಾ, ಈಗ ಹೀಗೆ ಹೇಳೋದಾ? ಮೊದಲ ಲಿಪ್​ಲಾಕ್​ ಅನುಭವವನ್ನೂ ಬಿಚ್ಚಿಟ್ಟ ನಟಿ

click me!