ಅವರಲ್ಲಿ... ಇವರಿಲ್ಲಿ... ಆದ್ರೂ ಎಲ್ಲಾ ಸೀರಿಯಲ್​ಗಳಲ್ಲಿ ಕದ್ದು ಕೇಳಿಸಿಕೊಳ್ಳೋದು ಹೇಗೆ? ಕಿವಿಗೆ ಸಲಾಂ ಎಂದ ನೆಟ್ಟಿಗರು!

Published : Apr 09, 2024, 04:31 PM IST
ಅವರಲ್ಲಿ... ಇವರಿಲ್ಲಿ... ಆದ್ರೂ ಎಲ್ಲಾ ಸೀರಿಯಲ್​ಗಳಲ್ಲಿ ಕದ್ದು ಕೇಳಿಸಿಕೊಳ್ಳೋದು ಹೇಗೆ?  ಕಿವಿಗೆ ಸಲಾಂ ಎಂದ ನೆಟ್ಟಿಗರು!

ಸಾರಾಂಶ

ಬಹುತೇಕ ಸೀರಿಯಲ್​ಗಳಲ್ಲಿ ಕದ್ದು ಕೇಳಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾತನಾಡುವವರು ಹಾಗೂ ಕೇಳಿಸಿಕೊಳ್ಳುವವ ನಡುವೆ ಸಿಕ್ಕಾಪಟ್ಟೆ ಅಂತರವಿರುವಾಗ ಇದು ಹೇಗೆ ಸಾಧ್ಯ ಅಂತಿದ್ದಾರೆ ನೆಟ್ಟಿಗರು!  

ಬಹುತೇಕ ಸೀರಿಯಲ್​ಗಳಲ್ಲಿ ಈಗ ಕದ್ದು ಕೇಳಿಸಿಕೊಳ್ಳುವವರ ಆರ್ಭಟ ಜೋರಾಗಿಯೇ ನಡೆಯುತ್ತಿದೆ. ಸಾಮಾನ್ಯವಾಗಿ ಎಲ್ಲಾ ಸೀರಿಯಲ್​ಗಳಲ್ಲಿಯೂ ಅರಮನೆಯಂಥ ಒಂದು ಬಂಗಲೆಯಲ್ಲಿಯೇ ಕಥೆ ಹೆಣೆಯಲಾಗುತ್ತದೆ. ಅಲ್ಲಿಯೇ ನಾಯಕ-ನಾಯಕಿ, ಅಲ್ಲಿಯೇ ಲೇಡಿ ವಿಲನ್​ಗಳ ಹಾವಳಿ... ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಬರಬೇಕು ಎಂದರೆ ಎಷ್ಟೋ ದೂರ ನಡೆಯಬೇಕು. ಅಷ್ಟೇ ಅಲ್ಲದೇ ಆ ಮನೆಯಲ್ಲಿ ಇರುವ ಎಲ್ಲರಿಗೂ ಪ್ರತ್ಯೇಕ ಕೊಠಡಿ ಬೇರೆ. ಒಬ್ಬರು ಮಾತನಾಡಿದ್ದು ಇನ್ನೊಬ್ಬರಿಗೆ ಕೇಳದಷ್ಟು ದೂರ... ದೂರು... ಇವೆಲ್ಲಾ ಇದ್ದರೂ ಕದ್ದು ಕೇಳಿಸಿಕೊಳ್ಳುವ ಸೀನ್​ಗಳೇ ಹೆಚ್ಚಾಗ್ತಿದೆ ಎನ್ನೋದು ನೆಟ್ಟಿಗರ ಅಭಿಮತ. ಅದೂ ಅಲ್ದೇ ಮಾತನಾಡುವವರು ಹಾಗೂ ಕೇಳಿಸಿಕೊಳ್ಳುವವರು ಅದೆಷ್ಟೋ ದೂರದಲ್ಲಿ ಇರ್ತಾರೆ. ಇದರ ಹೊರತಾಗಿಯೂ ಮಾತನಾಡಿದ್ದೆಲ್ಲವೂ ಕೇಳಿ ಬಿಡುತ್ತದೆ. ಚಿಕ್ಕ ಮನೆಯಾದ್ರೆ ಪರವಾಗಿಲ್ಲ, ಒಬ್ಬರು ಮಾತನಾಡಿದ್ದು, ಇನ್ನೊಬ್ಬರಿಗೆ ಕೇಳುವುದು ಮಾಮೂಲು. ಆದ್ರೆ ಸೀರಿಯಲ್​ಗಳ ಕಥೆ ಹಾಗಲ್ವಲ್ಲಾ? ಆದರೂ ಕೇಳಿಸಿಕೊಳ್ಳುವವರ ಕಿವಿಗೆ ಸಲಾಂ ಎನ್ನಲೇಬೇಕು ಅಂತಿದ್ದಾರೆ ಸೀರಿಯಲ್​ ಪ್ರೇಮಿಗಳು.

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಅದೆಷ್ಟೋ ಬಾರಿ ವಿಲನ್​ ದೀಪಿಕಾ, ತುಳಸಿ ಮತ್ತು ಪೂರ್ಣಿಯ ಮಾತುಗಳನ್ನು ಕೇಳಿಸಿಕೊಂಡು ತನ್ನ ಕುಕೃತ್ಯ ಮಾಡಿದ್ದಾಳೆ. ಇದೇ ಸೀರಿಯಲ್​ನಲ್ಲಿ, ತುಳಸಿ ಮಾತನಾಡಿದ್ದನ್ನು ಇನ್ನೋರ್ವ ವಿಲನ್​ ಶಾರ್ವರಿ ಕೇಳಿಸಿಕೊಂಡೂ ಕೆಟ್ಟ ಕೆಲಸ ಮಾಡಿದ್ದಿದೆ, ತುಳಸಿ ಮಾಡುವ ಕೆಲಸಕ್ಕೆ ಅಡ್ಡಗಾಲು ಹಾಕಿದ್ದಿದೆ.  ಸತ್ಯ ಸೀರಿಯಲ್​ನಲ್ಲಿ ಈ ಹಿಂದೆ ಸತ್ಯ ಮಾತನಾಡಿದ್ದನ್ನು ಕೇಳಿಸಿಕೊಂಡು ವಿಲನ್​ ಕೀರ್ತನಾ ಕುತಂತ್ರ ರೂಪಿಸಿದ್ದು ಇದೆ. ಇದರ ಲಿಸ್ಟ್​ ಉದ್ದ ಬೆಳೆಯುತ್ತಲೇ ಸಾಗುತ್ತದೆ.   ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದ್ರೆ ಒಳ್ಳೆಯವರು ಎನಿಸಿಕೊಂಡ ನಾಯಕಿಯರು ಮಾತನಾಡುವಾಗ ಲೇಡಿ ವಿಲನ್​ಗಳೇ ಕದ್ದು ಕೇಳಿಸಿಕೊಳ್ತಾರೆ. ಹಾಗಿದ್ರೆ ಲೇಡಿ ವಿಲನ್​ಗಳ ಕಿವಿಯ ಪವರ್​ ಎಷ್ಟು ಇರ್ಬೋದಪ್ಪಾ ಎಂದು ಕೆಲವು ಸೀರಿಯಲ್​ಗಳ ಪ್ರೊಮೋದಲ್ಲಿ ನೆಟ್ಟಿಗರು ಪ್ರಶ್ನಿಸಿದ್ದುಂಟು. 

ಭಲೇ ಗೌತಮ್​.. ನಿಜ ಜೀವನದಲ್ಲೂ ಇಂಥ ಗಂಡ ಇರೋಕೆ ಸಾಧ್ಯನಾ ಕೇಳ್ತಿದ್ದಾರೆ ಮಹಿಳಾ ಫ್ಯಾನ್ಸ್​!

ಆದರೆ ಈಗ ಹೇಳ್ತಿರೋದು ತುಸು ಭಿನ್ನವಾದದ್ದು. ಇಲ್ಲಿ ವಿಲನ್​ ಬದ್ಲು ಒಳ್ಳೆಯವಳು ಎನಿಸಿಕೊಂಡಿರುವಾಕೆ ವಿಲನ್​ಗಳ ಮಾತು ಕೇಳಿಸಿಕೊಂಡಿದ್ದಾಳೆ. ಹೌದು. ಇದು ಅಮೃತಧಾರೆ ಸೀರಿಯಲ್​ ವಿಷ್ಯ. ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

ಇದೇ ಕಾರಣಕ್ಕೆ ಏನೇನೋ ನೆಪ ಮಾಡಿಕೊಂಡು ಪತ್ನಿಗಾಗಿ ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ. ಗೆಳೆಯ ಆನಂದ್​ಗೂ ಏನೂ ಹೇಳದ ಸ್ಥಿತಿ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಆದರೆ ಈ ವಿಷಯವನ್ನು ಈಗ ಕದ್ದು ಮಲ್ಲಿ ಕೇಳಿಸಿಕೊಂಡಿದ್ದಾಳೆ. ಶಕುಂತಲಾ ದೇವಿ ತನ್ನ ಮಗಳ ಬಳಿ ತಾನು ಮಾಡಿದ ಕುತಂತ್ರದ ವಿಷಯ ಹೇಳಿದ್ದನ್ನು ಮಲ್ಲಿ ಕೇಳಿಸಿಕೊಂಡಿದ್ದಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಕುಂತಲಾ ಈ ವಿಷಯವನ್ನು ಎಲ್ಲಿಯೋ ಹೇಳುತ್ತಿದ್ದಾಳೆ, ಮಲ್ಲಿ ಇನ್ನೆಲ್ಲಿಯೋ ನಿಂತಿದ್ದಾಳೆ. ಒಟ್ಟಿನಲ್ಲಿ ಕೇಳಿಸಿಕೊಂಡಿದ್ದಾಳೆ. ಈ ವಿಷಯವನ್ನು ಅವಳು ಭೂಮಿಕಾಗೆ ಹೇಳಲು ಶಕ್ಯ ಆಗ್ತಾಳಾ ಅಥ್ವಾ ಮಧ್ಯೆಯೇ ಯಾರಾದ್ರೂ ತಡೀತಾರೆ ಎನ್ನುವುದು ಪ್ರಶ್ನೆ. 

ಧಾರಾವಾಹಿ ಅಂದ್ರೆ ಸುಮ್ನೇನಾ? ಭಾಗ್ಯಳ ನೋಡಿ 10ನೇ ಕ್ಲಾಸ್​ ಪರೀಕ್ಷೆ ಬರೆದ್ರು ಈ ಅಮ್ಮಾ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?