
ಕೋಲ್ಕತಾ(ಜೂ.10): ಕೊರೋನಾ ಸೋಂಕಿನಿಂದ ಸಾವೀಗೀಡಾಗುತ್ತಿರುವ ಸಂಖ್ಯೆ ಆತಂಕ ತರುತ್ತಿದೆ ನಿಜ. ಆದರೆ ಕೊರೋನಾ ಹಾಗೂ ಲಾಕ್‌ಡೌನ್ ಕಾರಣ ಆರ್ಥಿಕ, ಮಾನಸಿಕ, ಬಡತನ ಸೇರಿದತೆ ಹಲವು ಸಂಕಷ್ಟದಿಂದ ಪ್ರಾಣಬಿಡುತ್ತಿರುವವ ಸಂಖ್ಯೆ ಮತ್ತಷ್ಟು ಆತಂಕ ತರುತ್ತಿದೆ. ಅದರಲ್ಲೂ ಕಲಾವಿದರ ಸಂಕಷ್ಟ ಹೇಳತೀರದು. ಕಳೆದೊಂದು ವರ್ಷದಿಂದ ದುಡಿಮೆ ಇಲ್ಲದೇ, ದುಡ್ಡಿಲ್ಲದೆ ಪರದಾಡಿದ ಬಂಗಾಳಿ ಕಿರುತೆರೆ ನಟ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆ ಸೂಚನೆ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಟನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಹೋದರ ಕೊರೋನಾಗೆ ಬಲಿ, ಸಹೋದರಿ ಆಹ್ಮತ್ಯೆಗೆ ಯತ್ನ
ಮಂಗಲ್ ಚಾಂಡಿ ಟಿವಿ ಶೋ ಮೂಲಕ ಬಂಗಾಳದಲ್ಲಿ ಜನಪ್ರಿಯನಾದ ಸುವೋ ಚಕ್ರಬೊರ್ತಿ ಕಳೆದೊಂದು ವರ್ಷದಿಂದ ಯಾವುದೇ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಜೀವನಕ್ಕಾಗಿ ಸಾಲದ ಹೊರೆ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸುವೋ ಚಕ್ರಬೊರ್ತಿ ಫೇಸ್‌ಬುಕ್ ಲೈವ್ ಮೂಲಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಆರ್ಥಿಕ ಸಂಕಷ್ಟದ ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋದ ನಟ ಸುವೋ ಆತ್ಮಹತ್ಯೆ ಅಲ್ಲದೆ ಬೇರೆ ದಾರಿ ಇಲ್ಲ ಎಂದಿದ್ದಾರೆ. ಫೇಸ್‌ಬುಕ್ ಲೈವ್ ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೂಚಿಸಿದ್ದಾನೆ. ಫೇಸ್‌ಬುಕ್ ಲೈವ್ ವೀಕ್ಷಿಸುತ್ತಿದ್ದ ಕೆಲವರು ತಕ್ಷಣವೇ ಪೊಲೀಸ್ ಠಾಣೆಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ನಟ ಸ್ಥಳಕ್ಕೆ ತೆರಳಿ ಆತ್ಮಹತ್ಯೆಯಿಂದ ರಕ್ಷಿಸಿದ್ದಾರೆ. ನಟ ಸಹೋದರಿ ಜೊತೆಗೂ ಪೊಲೀಸರು ಮಾತುಕತೆ ನಡೆಸಿದ್ದಾರೆ. ಸುವೋ ಕುಟುಂಬ ಸದಸ್ಯರು ಸುವೋ ಜೊತೆ ಮಾತುಕತೆ ನಡೆಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.