'ರಾಜೇಶ್ವರಿ' ಪಾತ್ರದಲ್ಲಿ 'ಮಂಗಳಗೌರಿ ಮದುವೆ'ಗೆ ಎಂಟ್ರಿ ಕೊಟ್ಟ ಮಾನಸ ಜೋಶಿ!

By Suvarna News  |  First Published Jun 10, 2021, 2:16 PM IST

ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್. ರಾಜೇಶ್ವರಿ ಎಂಟ್ರಿ ನೋಡಿ ಆಶ್ಚರ್ಯ ಪಟ್ಟ ವೀಕ್ಷಕರು....


ಕೊರೋನಾ ಲಾಕ್‌ಡೌನ್‌ನಿಂದಾಗಿ ಕಿರುತೆರೆಯ ಬಹುತೇಕ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಆರೋಗ್ಯದ ಕಾಳಜಿಯಿಂದ ಕೆಲವರು ಚಿತ್ರೀಕರಣದಲ್ಲಿ ಭಾಗಿಯಾಗದ ಕಾರಣ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೀಗಾಗಿ ಅನೇಕ ಹೊಸ ಪಾತ್ರಗಳ ಎಂಟ್ರಿ ಆಗುತ್ತಿವೆ. ವೀಕ್ಷಕರು ಆಸಕ್ತಿ ಹೆಚ್ಚಿಸಲು ಎಂದು ಬಹುತೇಕ ಎಲ್ಲ ಕಥೆಗಳಿಗೂ ಹೊಸ ಟ್ವಿಸ್ಟ್‌ಗಳನ್ನು ನೀಡಲಾಗುತ್ತಿದೆ. 

ಹೌದು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳಗೌರಿ ಮದುವೆ'ಯಲ್ಲಿ ಹೊಸ ಪಾತ್ರಧಾರಿಯ ಎಂಟ್ರಿ ಆಗಿದೆ. ಹೆಸರು ರಾಜೇಶ್ವರಿ, ಹಳ್ಳಿಯಲ್ಲಿರುವ ಹೆಚ್ಚು ಪ್ರಭಾವಿಶಾಲಿ ಮಹಿಳೆ. ಮಂಗಳಾ ಮತ್ತು ರಾಜೀವ್ ಈಕೆಯಿಂದ ಯಾವ ರೀತಿಯ ಸಹಾಯ ಪಡೆದುಕೊಳ್ಳುತ್ತಾರೆ ಅಥವಾ ಈಕೆಯಿಂದ ತೊಂದರೆ ಎದುರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 

Tap to resize

Latest Videos

undefined

ಮನದ `ಅಂತರಾಳ' ತೆರೆದ ನಟಿ ಮಾನಸ ಜೋಶಿ 

'ರಾಜೇಶ್ವರಿ. ನಾನು ಪ್ರತಿ ಸಲವೂ ವಿಭಿನ್ನ ಪಾತ್ರ ಹಾಗೂ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವೆ. ನೀವು ರಾಜೇಶ್ವರಿ ಎಂಟ್ರಿಗೆ ತೋರಿಸಿದ ಪ್ರೀತಿಗೆ ಧನ್ಯವಾದಗಳು,' ಎಂದು ಮಾನಸ ಜೋಶಿ ಬರೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ 'ಮಹಾದೇವಿ' ಧಾರಾವಾಹಿಯಲ್ಲಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾನಸ ವೃತ್ತಿಯಲ್ಲಿ ನೃತ್ಯಗಾರ್ತಿ, ಬೆಂಗಳೂರಿನಲ್ಲಿ ತಮ್ಮದೇ ಕಥಕ್ ನೃತ್ಯ ಶಾಲೆ ಹೊಂದಿದ್ದಾರೆ.

 

click me!