ತೆಲುಗು ಧಾರಾವಾಹಿಗೆ ಮತ್ತೊಬ್ಬ ಕನ್ನಡದ ನಟ ಪವನ್ ರವೀಂದ್ರ ಎಂಟ್ರಿ!

By Suvarna News  |  First Published Jun 8, 2021, 4:56 PM IST

ಎರಡನೇ ತೆಲುಗು ಧಾರಾವಾಹಿಗೆ ಸಹಿ ಮಾಡಿದ ನಟ ಪವನ್ ರವೀಂದ್ರ. ಕಾವ್ಯಾಂಜಲಿ ಧಾರಾವಾಹಿಯಿಂದ ಹೊರ ಬಂದಿಲ್ಲ.
 


ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ನಟ ಪವನ್ ರವೀಂದ್ರ ಇದೀಗ ಎರಡನೇ ತೆಲುಗು ಧಾರಾವಾಹಿಗೆ ಸಹಿ ಮಾಡಿದ್ದಾರೆ. 'ಮೌನರಾಗ' ನಂತರ 'ವೈದೇಹಿ ಪರಿಣಯಂ' ಧಾರವಾಹಿಯಲ್ಲಿ ತಮ್ಮ ಪ್ರತಿಭೆ ತೋರಿಸಲಿದ್ದಾರೆ ಈ ನಟ.

ಧಾರಾವಾಹಿಯಿಂದ ಹೊರ ಬಂದಿಲ್ಲ, ದಯವಿಟ್ಟು ಮೆಸೇಜ್ ಮಾಡಬೇಡಿ: ಅಕ್ಷತಾ ದೇಶಪಾಂಡೆ 

Tap to resize

Latest Videos

'ನಾನು ಎನ್‌ಆರ್‌ಐ ಹುಡುಗ ದೇವಾಂಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಅಜ್ಜಿಯ ಒತ್ತಾಯಕ್ಕೆ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಾನೆ. ಅಸಲಿಗೆ ದೇವಾಂಶ್ ತಂದೆ ಹೊಸ ಮದುವೆ ಮಾಡುವ ಪ್ಲಾನ್‌ನಿಂದ ಕರೆಸಿಕೊಂಡಿರುತ್ತಾರೆ. ಅಣ್ಣನ ಮದುವೆ ಮುರಿದು ಬಿದ್ದ ಕಾರಣ ದೇವಾಂಶ್ ಮದುವೆ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾನೆ. ಆದರೆ ವಿಧಿಯಾಟವೇ ಬೇರೆಯೇ ಆಗಿರುತ್ತೆ. ವೈದೇಹಿ ಎಂಬ ಹುಡುಗಿಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಇದರ ಸುತ್ತ ಧಾರಾವಾಹಿ ನಡೆದುಕೊಂಡು ಹೋಗುತ್ತದೆ,' ಎಂದಿದ್ದಾರೆ ದೇವಾಂಶ್ ಪಾತ್ರಧಾರಿ ಪವನ್.

'ಕಾವ್ಯಾಂಜಲಿ' ಧಾರಾವಾಹಿಯಿಂದ ಹೊರ ನಡೆದ ನಟಿ ದೀಪಾ ಜಗದೀಶ್?

ಕಾವ್ಯಾಂಜಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ದೇವಾಂಶ್ ಎರಡೂ ಪ್ರಾಜೆಕ್ಟ್‌ಗಳನ್ನು ಸಮವಾಗಿ ನಿಭಾಯಿಸಲಿದ್ದಾರೆ. 'ಈ ಪ್ಯಾಂಡಮಿಕ್‌ ಸಮಯದಲ್ಲಿ ಹೈದರಾಬಾದ್- ಬೆಂಗಳೂರು ಪ್ರಯಾಣ ಮಾಡುವುದು ದೊಡ್ಡ ಚಾಲೆಂಜ್. ನನ್ನ ಪಾತ್ರಕ್ಕೆ ನ್ಯಾಯ ನೀಡಲು ಚಿತ್ರೀಕರಣದಲ್ಲಿ ಭಾಗಿಯಾಗುವೆ. ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುತ್ತೇನೆ,' ಎಂದು ಪವನ್ ಹೇಳಿದ್ದಾರೆ.

click me!