
ಬಿಗ್‌ಬಾಸ್ ಸೀಸನ್-12 ಮುಕ್ತಾಯದ ಹಂತ ತಲುಪಿದೆ. ಭಾನುವಾರದ ಅಂತ್ಯಕ್ಕೆ 12ನೇ ಸೀಸನ್ ವಿನ್ನರ್ ಯಾರು ಅನ್ನೋದು ಗೊತ್ತಾಗಲಿದೆ. ಈಗಾಗಲೇ ಹೊರಗಡೆ ಗಿಲ್ಲಿ, ಅಶ್ವಿನಿ, ಕಾವ್ಯಾ, ರಕ್ಷಿತಾ, ಧನುಷ್ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದೆ. ಇರೋದ್ರಲ್ಲಿ ಪ್ರಚಾರ ಕಡಿಮೆ ಅಂತಾ ಕಂಡಿರುವುದು ಮ್ಯೂಟಂಟ್ ರಘು ವಿಚಾರದಲ್ಲೇ. ಫೈನಲ್‌ಗೇರುವ ನಿರೀಕ್ಷೆಯೇ ಇರದ ರಘು ಫೈನಲ್ ವಾರದಲ್ಲಿರುವುದು ಸ್ವತಃ ಅವರ ಅಚ್ಚರಿಗೂ ಕಾರಣವಾಗಿದೆ. ಇನ್ನು ಫಿನಾಲೆ ವೀಕ್‌ನಲ್ಲಿ ಬಿಗ್‌ಬಾಸ್ ಯಾವುದೇ ದೊಡ್ಡ ಟಾಸ್ಕ್‌ಗಳನ್ನು ನೀಡುತ್ತಿಲ್ಲ. ಸ್ಪರ್ಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡಬಲ್ಲಂಥ ಮಾತುಕತೆಯಂಥ ಟಾಸ್ಕ್ ನೀಡುತ್ತಿದ್ದಾರೆ.
ಇದರ ನಡುವೆ ಮನೆಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಇರುವ ಐದು ಮುಖಗಳನ್ನೇ ನೋಡಿಕೊಂಡು ಮಾತನಾಡಬೇಕಾದ ಅನಿವಾರ್ಯತೆಗೆ ಸ್ಪರ್ಧಿಗಳು ಸಿಲುಕಿದ್ದಾರೆ. ಕಳೆದ ಎರಡು ವಾರದಿಂದ ಗಿಲ್ಲಿ ಜೊತೆಯಲ್ಲಿ ಹೆಚ್ಚೇನು ಮಾತನಾಡದೇ ಮುನಿಸಿಕೊಂಡಿದ್ದ ಕಾವ್ಯಾ ಶೈವ, ಮಿಡ್‌ವೀಕ್ ಎಲಿಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಗಿಲ್ಲಿ ಜೊತೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ಗಿಲ್ಲಿ ಮಾತಿಗೆ ಮೊದಲೆಲ್ಲಾ ಪ್ರೀತಿ ಸಿಟ್ಟು ತೋರಿಸ್ತಿದ್ದ ಕಾವ್ಯಾ ಈಗ ಗಿಲ್ಲಿಗೆ ಅಲ್ಲಿಯೇ ಕೌಂಟರ್ ನೀಡಲು ಆರಂಭಿಸಿದ್ದಾರೆ.
ಗುರುವಾರ ಮನೆಯಲ್ಲಿ ಸೋಫಾದಲ್ಲಿ ಕುಳಿತು ಮಾತನಾಡುವ ವೇಳೆ ಗಿಲ್ಲಿ ಕುಂತಲ್ಲೆ ಕಾವ್ಯಾಗೆ ಕಣ್ಣು ಹೊಡೆದಿದ್ದಾರೆ. ಇದರ ಬೆನ್ನಲ್ಲಿಯೇ ಕಾವ್ಯಾ, 'ರಘು ಸರ್ ನನ್ ಮದುವೆಗೇ ಏನಾದರೂ ಸಮಸ್ಯೆ ಆದ್ರೆ ಗಿಲ್ಲಿನೇ ಕಾರಣ' ಎನ್ನುತ್ತಾರೆ. ಇಷ್ಟು ಹೇಳುತ್ತಿದ್ದ ಹಾಗೆ ಆಕೆಯ ಪಕ್ಕದಲ್ಲಿ ಕುಳಿತಿದ್ದ ಧನುಷ್ ಎದ್ದು ಹೋಗಿದ್ದಾರೆ.
ಅದಕ್ಕೆ ಗಿಲ್ಲಿ, 'ನಾನೇನು ಮಾಡಿದೆ ನಿನಗೆ..' ಎಂದು ಪ್ರಶ್ನೆ ಮಾಡಿದ್ದಾರೆ. 'ಕಣ್ಣು ಹೊಡಿತೀಯ, ರೇಗಿಸ್ಬೇಡ ಅಂದ್ರೂ ರೇಗಿಸ್ತೀಯ..'ಎಂದು ಕಾವ್ಯಾ ಉತ್ತರಿಸಿದ್ದಾರೆ. ಅದಕ್ಕೆ ಗಿಲ್ಲಿ, 'ನನ್ನಿಂದ ಯಾಕೆ ಪ್ರಾಬ್ಲಮ್ ಆಗುತ್ತೆ. ಯಾಕೆ ಪ್ರಾಬ್ಲಮ್ ಆಗುತ್ತೆ ಹೇಳು..' ಎನ್ನುತ್ತಾರೆ. ಅದಕ್ಕೆ ಕಾವ್ಯಾ ಮತ್ತೆ, ರೇಗಿಸ್ಬೇಡ ಅಂದ್ರೂ ರೇಗಿಸ್ತೀಯ, ಕಣ್ಣು ಹೊಡಿಬೇಡ ಅಂದ್ರೂ ಅದನ್ನೇ ಮಾಡ್ತೀಯ ಎಂದಿದ್ದಾರೆ. ಕೊನೆಗೆ ಗಿಲ್ಲಿ, 'ನಾನೇನಾದರೂ ಬೇಡ ಅಂದ್ರೆ ತಾನೆ ಪ್ರಾಬ್ಲಮ್ ಆಗೋದು..' ಎಂದು ಹೇಳುತ್ತಿದ್ದ ಹಾಗೆ ಅಚ್ಚರಿಮಿಶ್ರಿತವಾಗಿ ಕಾವ್ಯಾ ಸುಮ್ಮನಾಗುತ್ತಾರೆ. ಬಳಿಕ, 'ಎಂಥಾ ಕಲಾಕಾರ್ ಅಂದ್ರೆ..' ಎಂದು ಹೇಳಿ ಸುಮ್ಮನಾಗಿದ್ದಾರೆ.
ಈ ಫೀಡ್‌ಅನ್ನು ನೋಡಿದವರು ಇವರಿಬ್ಬರ ನಡುವೆ ಏನೂ ಇಲ್ಲ, ಏನೂ ಇಲ್ಲ ಅಂದುಕೊಂಡೇ ಏನಾದರೂ ಇರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ ಎಂದಿದ್ದಾರೆ. ಕಾವ್ಯಾ ಆಡಿದ ಮಾತುಗಳನ್ನು ಕೇಳಿದರೆ, ಬಿಗ್‌ಬಾಸ್‌ಅಲ್ಲೇ ಕಾವ್ಯಾ, ಗಿಲ್ಲಿಗೆ ಮದುವೆಯ ಆಫರ್ ನೀಡಿರುವ ಹಾಗೆ ಕಂಡಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.