
ಬೆಂಗಳೂರು: 12ನೇ ಸೀಸನ್ ಬಿಗ್ ಬಾಸ್ ಇನ್ನೇನು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ಆರಂಭದಿಂದ ಕೊನೆಯ ಹಂತದವರೆಗೆ ತನ್ನ ವಿಭಿನ್ನ ಮ್ಯಾನರಿಸಂ ಹಾಗೂ ಪಂಚಿಂಗ್ ಡೈಲಾಗ್ ಮೂಲಕ ಪುಟಾಣಿ ಮಕ್ಕಳಿಂದ ಹಿಡಿದು ಯುವಕರು, ಅರವತ್ತು ದಾಟಿದ ಚಿರ ಯವ್ವನಿಗರ ಮುಖದಲ್ಲೂ ನಗು ಮೂಡಿಸುವಲ್ಲಿ ಯಶಸ್ವಿಯಾಗಿರುವ ಗಿಲ್ಲಿ ಈ ಬಾರಿ ಬಿಗ್ ಬಾಸ್ ಚಾಂಪಿಯನ್ ಆಗ್ತಾರೆ ಎನ್ನೋದು ಅವರ ಅಪ್ಪಟ ಅಭಿಮಾನಿಗಳ ನಿರೀಕ್ಷೆಯಾಗಿದೆ.
ಇದೆಲ್ಲದರ ನಡುವೆ ಬಿಗ್ ಬಾಸ್ ಫಿನಾಲೆಗೂ ಮೊದಲೇ ದೊಡ್ಮನೆಯಲ್ಲಿರೋ ಸ್ಪರ್ಧಿಗಳು ತಮ್ಮ ಫ್ಯಾನ್ಸ್ ಭೇಟಿಯಾಗಲು ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಒಬ್ಬ ಅಭಿಮಾನಿ ತಮ್ಮ ತೋಳಿನ ಮೇಲೆ ಗಿಲ್ಲಿಯ ಟ್ಯಾಟೂ ಹಾಕಿಕೊಂಡು ಬಂದು ಗಮನ ಸೆಳೆದರು. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಕಂಡ ಗಿಲ್ಲಿ ಒಂದು ಕ್ಷಣ ಭಾವುಕರಾಗಿ ಹೋದರು. ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ಅಪರೂಪದ ಕ್ಷಣಗಳನ್ನು ದೊಡ್ಡ ಸ್ಕ್ರೀನ್‌ನಲ್ಲಿ ಫೋಟೋ ಮೂಲಕ ತೋರಿಸಲಾಯಿತು. ಇನ್ನು ಬಿಗ್ ಬಾಸ್, ಯಾವುದೇ ಸಂದರ್ಭವಿರಲಿ ಆಟದ ದಿಕ್ಕು ಬದಲಿಸುವ ತಾಕತ್ತು ಇರೋದು ಜೋಕರ್‌ಗೆ ಮಾತ್ರ ಎನ್ನುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳು, ಡಮಾಲ್ ಡಿಮಿಲ್ ಡಕ್ಕಾ, ನಮ್ಮ ಗಿಲ್ಲಿ ಗೆಲ್ಲೋದು ಪಕ್ಕಾ ಎಂದು ಕೂಗುವ ಮೂಲಕ ತಮ್ಮ ನೆಚ್ಚಿನ ಗಿಲ್ಲಿ ನಟನನ್ನು ಹುರಿದುಂಬಿಸಿದರು.
ಬಿಗ್ ಬಾಸ್ ಸೀಸನ್ ಆರಂಭದಿಂದಲೂ ಈ ಬಾರಿ ಫಿನಾಲೆ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಗಿಲ್ಲಿ, ಕೊನೆ ಕೊನೆಗೆ ಯಾಕೋ ಡಲ್ಲಾದಂತೆ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ನೆಟ್ಟಿಗರು, ಫೈನಲ್‌ಗೂ ಮುನ್ನ ಸೋಲೊಪ್ಪಿಕೊಂಡ್ರಾ ಎನ್ನುವಂತಹ ಚರ್ಚೆ ಕೂಡಾ ಜೋರಾಗಿತ್ತು. ಗಿಲ್ಲಿ ರನ್ನರ್ ಅಪ್ ಆಗ್ತಾರೆ, ಅನಿರೀಕ್ಷಿತವಾಗಿ ಲೇಡಿ ಸ್ಪರ್ಧಿ ವಿನ್ನರ್ ಆಗಬಹುದು ಎನ್ನುವಂತಹ ಚರ್ಚೆಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಆದರೆ ಫಿನಾಲೆಗೂ ಮೊದಲೇ ಅಭಿಮಾನಿಗಳನ್ನು ಭೇಟಿಯಾದ ಗಿಲ್ಲಿ ನಟ ಮತ್ತೆ ತಮ್ಮ ಖಡಕ್ ಡೈಲಾಗ್ ಮೂಲಕ ಹಳೆ ಖದರ್‌ಗೆ ವಾಪಾಸ್ಸಾಗಿದ್ದು, ಫೈನಲ್ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ನಾನು ಕೆಲವು ವಾರ ಇರಬಹುದೇನೋ ಅಂದುಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದೆ. ಆದರೆ ಫೈನಲ್ ಹಂತದವರೆಗೂ ಬರುತ್ತೇನೆ ಅಂದುಕೊಂಡಿರಲಿಲ್ಲ ಎಂದು ಗಿಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು, ಅಭಿಮಾನಿಗಳನ್ನು ಭೇಟಿಯಾದ ಬಳಿಕ ಗಿಲ್ಲಿ ನಟ, ತಮ್ಮ ಅಭಿಮಾನಿಯೊಬ್ಬ ಹಾಕಿಸಿಕೊಂಡಿದ್ದ ಟ್ಯಾಟೂ ನೋಡಿ ಒಂದು ಕ್ಷಣ ಭಾವುಕರಾದರು. ಮನಿ ಹಾಗೂ ಅಭಿಮಾನಿಗೂ ಇರೋ ವ್ಯತ್ಯಾಸದ ಬಗ್ಗೆ ಮಾತಾಡಿದ ಗಿಲ್ಲಿ, ಮನಿ ಇವತ್ತು ಬರುತ್ತೆ ನಾಳೆ ಹೋಗುತ್ತೆ, ಆದ್ರೆ ಅಭಿಮಾನಿ ಒಂದು ಸಲ ಬಂದ್ರೆ ಮತ್ತೆ ಯಾವಾಗಲೂ ಹೋಗಲ್ಲ ಎಂದು ಎಮೋಷನಲ್ ಡೈಲಾಗ್ ಹೊಡೆದರು. ಇನ್ನು ಅಭಿಮಾನಿಗಳನ್ನು ಭೇಟಿಯಾಗಿ ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋದ ಗಿಲ್ಲಿ ಉಳಿದ ಸ್ಪರ್ಧಿಗಳ ಎದುರೂ ಆ ಅಭಿಮಾನಿ ಟ್ಯಾಟೂ ಹಾಕಿಸಿದ್ದನ್ನು ಮತ್ತೊಮ್ಮೆ ಮೆಲುಕು ಹಾಕುವ ಮೂಲಕ ಭಾವುಕರಾದರು. ಅಭಿಮಾನಿಗಳ ನೆಚ್ಚಿನ ಕಣ್ಮಣಿಯಾಗಿರುವ ಗಿಲ್ಲಿ ಬಿಗ್ ಬಾಸ್ ಚಾಂಪಿಯನ್ ಆಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.