
ಬೆಂಗಳೂರು (ಜ.18) ಬಿಗ್ ಬಾಸ್ 12ರ ಫಿನಾಲೆ ಕ್ರೇಜ್ ತೀವ್ರಗೊಂಡಿದೆ. ಫೈನಲ್ ವೇದಿಕೆಯಲ್ಲಿರುವ ಸ್ಪರ್ಧಿಗಳ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರವೇ ಹರಿದು ಬಂದಿದೆ. ಹೆಚ್ಚುವರಿ ಪೊಲೀಸರು ಭಾರಿ ಭದ್ರತೆ ಕೈಗೊಂಡಿದ್ದಾರೆ. ಬಿಗ್ ಬಾಸ್ 12ನೇ ಆವೃತ್ತಿಯ ವಿನ್ನರ್ ಘೋಷಣೆ ಆಗಿಲ್ಲ. ಆದರೆ ಅಧಿಕೃತ ಘೋಷಣೆಗೂ ಮೊದಲೇ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಗಳು ಸಂಭ್ರಮಾಚರಣೆ ಶುರುಮಾಡಿದ್ದಾರೆ. ಅಧಿಕೃತ ಘೋಷಣೆಗೂ ಮೊದಲೇ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಅಭಿಮಾನಿಗಳಿಗೆ ಸಂದೇಶ ರವಾನೆಯಾಯ್ತಾ?
ಬಿಗ್ ಬಾಸ್ 12ರ ವಿನ್ನರ್ ಕುರಿತು ಅಧಿಕೃತ ಘೋಷಣೆಯಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ಪ್ರಮುಖರು ಗಿಲ್ಲಿ ವಿನ್ನರ್ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಬಿಗ್ ಬಾಸ್ ನಾಲ್ಕರ ರನ್ನರ್ ಅಪ್ ಕಿರಿಕ್ ಕೀರ್ತಿ, ಗಿಲ್ಲಿ ನಟ ಬಿಗ್ ಬಾಸ್ 12ನೇ ಆವೃತ್ತಿ ವಿನ್ನರ್ ಎಂದು ಪೋಸ್ಟ್ ಮಾಡಿದ್ದಾರೆ. ಇತ್ತ ಅಥೀ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಗಿಲ್ಲಿ ನಟನೇ ವಿನ್ನರ್ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ಬಿಗ್ ಬಾಸ್ ನೆಚ್ಚಿನ ಸ್ಪರ್ಧಿಗಳಿಗೆ ಸಾರ್ವಜನಿಕರು ಭರಪೂರ ವೋಟಿಂಗ್ ಮಾಡಿದ್ದಾರೆ. ಕಿಚ್ಚ ಸುದೀಪ್ ಬಹಿರಂಗಪಡಿಸಿದಂತೆ ಶನಿವಾರದ ವೇಳೆ ಗಿಲ್ಲಿ ನಟ 37 ಕೋಟಿ ವೋಟ್ ಪಡೆದು ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಗರಿಷ್ಠ ವೋಟಿಂಗ್ ದಾಖಲೆ ಬರೆದಿದ್ದರು. ಈ ಎಲ್ಲಾ ಕಾರಣಗಳಿಂದ ಗಿಲ್ಲಿ ನಟನ ಅಭಿಮಾನಿಗಳು ಸಂಭ್ರಮಾಚರಣೆ ಹೆಚ್ಚಿಸಿದ್ದಾರೆ. ಗಿಲ್ಲಿಯೇ ವಿನ್ನರ್ ಎಂದು ಆತ್ಮವಿಶ್ವಾಸದಿಂದ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆ ಮುಂದೆ ಗಿಲ್ಲಿ ನಟನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಡೋಲು, ತಮಟೆ ಹಿಡಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕುಣಿದು ಕುಪ್ಪಳಿಸುತ್ತಿದ್ದಾರೆ. ಗಿಲ್ಲಿ ಬಾವುಟ, ಗಿಲ್ಲಿಯ ಕಟೌಟ್ ನಿಲ್ಲಿಸಿ ಅಭಿಷೇಖ ಮಾಡುತ್ತಿದ್ದಾರೆ. ಗಿಲ್ಲಿ ಭಾವಚಿತ್ರವಿರುವ ಬಾವುಟಗಳನ್ನು ಹಿಡಿದು ಕುಣಿದು ಕುಪ್ಪಳಿಸುತ್ತಿದ್ದಾರೆ.
ಜಾಲಿವುಡ್ ಸ್ಟುಡಿಯೋ ಮುಂದೆ ಕಿಕ್ಕಿರಿದು ಜನ ಸೇರಿದ್ದಾರೆ. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಜಾಲಿವುಡ್ ಸ್ಟುಡಿಯೋ ಮುಂದೆ ಈ ಪಾಟಿ ಜನ ಸೇರಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜಾಲಿವುಡ್ ಸ್ಟುಡಿಯೋ ಗೇಟ್ ಮುಂದೆ ಅಭಿಮಾನಿಗಳ ಕೂಗಾಟ, ಚೀರಾಟ ತೀವ್ರಗೊಂಡಿದೆ. ಜಾಲಿವುಡ್ ಸ್ಟುಡಿಯೋ ಮುಂಭಾಗದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದರೂ ಅಭಿಮಾನಿಗಳು ಅದೇ ಸಂಭ್ರಮಾಚರಣೆ ಮುಂದುವರಿಸಿದ್ದಾರೆ.
ಇದರ ನಡುವೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸದ್ದಾರೆ. ಜಾಲಿವುಡ್ ಸ್ಟುಡಿಯೋ ಮುಖ್ಯ ದ್ವಾರದ ಮೂಲಕ ಒಳಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಹೆಚ್ಚುವರಿಯಾಗಿ ಕೆಎಸ್ಆರ್‌ಪಿ ತುಕಡಿಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿದೆ. ಬಿಡದಿ ಪೊಲೀಸರು ಸೇರಿದಂತೆ ಹೆಚ್ಚುವರಿ ಪೊಲೀಸರು ಭಾರಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.