BBK 11: ತ್ರಿವಿಕ್ರಮ್‌ ಪ್ರೇಮ ನಿವೇದನೆಗೆ ಭವ್ಯಾ ಗೌಡ ಉತ್ತರ ಏನಾಗಿತ್ತು? ಗೋಲ್ಡ್‌ ಸುರೇಶ್‌ ಬಳಿ ಸತ್ಯ ಬಿಚ್ಚಿಟ್ಟ ನಟಿ!

Published : Jan 18, 2025, 01:06 PM ISTUpdated : Jan 18, 2025, 01:20 PM IST
BBK 11: ತ್ರಿವಿಕ್ರಮ್‌ ಪ್ರೇಮ ನಿವೇದನೆಗೆ ಭವ್ಯಾ ಗೌಡ ಉತ್ತರ ಏನಾಗಿತ್ತು? ಗೋಲ್ಡ್‌ ಸುರೇಶ್‌ ಬಳಿ ಸತ್ಯ ಬಿಚ್ಚಿಟ್ಟ ನಟಿ!

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಮನೆಯಲ್ಲಿ ತ್ರಿವಿಕ್ರಮ್‌ ಹಾಗೂ ಭವ್ಯಾ ಗೌಡ ಮಧ್ಯೆ ಏನು ನಡೆಯುತ್ತಿದೆ? ಇವರಿಬ್ಬರ ಮಧ್ಯೆ ಸ್ನೇಹ ಇದ್ಯಾ? ಪ್ರೀತಿಗೆ ತಿರುಗಿದ್ಯಾ? ಎಂಬ ಪ್ರಶ್ನೆ ಇತ್ತು. ಈಗ ತ್ರಿವಿಕ್ರಮ್‌ ಅವರು ಭವ್ಯಾಗೆ ಪ್ರೇಮ ನಿವೇದನೆ ಮಾಡಿದ್ದು, ಏನು ಉತ್ತರ ಸಿಗ್ತು ಎಂಬ ಪ್ರಶ್ನೆ ಕೆಲವರಿಗೆ ಇರಬಹುದು. ಅದಕ್ಕೆ ಗೋಲ್ಡ್‌ ಸುರೇಶ್‌ ಮುಂದೆ ಭವ್ಯಾ ಉತ್ತರ ನೀಡಿದ್ದಾರೆ.   

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಭವ್ಯಾ ಗೌಡ-ತ್ರಿವಿಕ್ರಮ್‌ ಸ್ನೇಹವನ್ನು ನೋಡಿ ಕಿಚ್ಚ ಸುದೀಪ್‌ ಅನೇಕ ಬಾರಿ ಕಾಲೆಳೆದಿದ್ದರು. ಇವರಿಬ್ಬರ ಮಧ್ಯೆ ಸಮ್‌ಥಿಂಗ್‌ ಸಮ್‌ಥಿಂಗ್‌ ಇದೆ ಎಂದು ಕೆಲವರು ಭಾವಿಸಿದ್ದರು. ಇನ್ನು ದೊಡ್ಮನೆಯಿಂದ ಹೊರಗಡೆ ಬಂದಿದ್ದ ಚೈತ್ರಾ ಕುಂದಾಪುರ ಅವರು ಭವ್ಯಾಗೆ ತ್ರಿವಿಕ್ರಮ್‌ ಪ್ರೇಮ ನಿವೇದನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಚಾರವಾಗಿ ಸರಿಯಾದ ಕ್ಲಾರಿಟಿಯೇ ಸಿಕ್ಕಿರಲಿಲ್ಲ.

 

ತಲೆಗೆ ಹುಳ ಬಿಟ್ಟ ಸಂಭಾಷಣೆ! 
ಕೆಲ ದಿನಗಳ ಹಿಂದೆ ದೊಡ್ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್‌ ಮಧ್ಯೆ ಒಂದು ಮಾತುಕತೆ ನಡೆಯುತ್ತದೆ. ರಾತ್ರಿ ಎಲ್ಲರೂ ಮಲಗಿದ್ದಾಗ ಭವ್ಯಾ ಗೌಡ ಬಳಿ ತ್ರಿವಿಕ್ರಮ್‌ ಅವರು “ನನ್ನ‌ ಪ್ರಶ್ನೆಗೆ ನೀನು ಉತ್ತರ ಕೊಟ್ಟಿಲ್ಲ” ಅಂತ ಹೇಳ್ತಾರೆ. ಆಗ ಭವ್ಯಾ “ನೀವು ಗೆದ್ದುಬಂದು ಕೇಳಿದ್ರೆ ನಾನು ಬಹುಶಃ ಒಪ್ಪಿಕೊಳ್ಳುತ್ತಿದ್ದೆನೆನೋ..! ನನ್ನ ಉತ್ತರ ಹೌದು ಅಂತಲೂ ಆಗಿರಬಹುದು, ಇಲ್ಲ ಅಂತಲೂ ಆಗಿರಬಹುದು. ನಾನು ಇಲ್ಲಿ ಏನೂ ಹೇಳೋಕೆ ಆಗೋದಿಲ್ಲ. ನನಗೆ ಎರಡು ವಾರ ಟೈಮ್‌ ಕೊಡಿ, ಹೊರಗಡೆ ಹೇಳ್ತೀನಿ” ಎಂದು ಹೇಳಿದ್ದರು. ತ್ರಿವಿಕ್ರಮ್‌ ಅವರು ಭವ್ಯಾಗೆ ಏನು ಪ್ರಶ್ನೆ ಕೇಳಿದ್ದಾರೆ? ನಿಜಕ್ಕೂ ಏನಾಗಿದೆ? ಎನ್ನೋದು ವೀಕ್ಷಕರಿಗೆ ಅರ್ಥವೇ ಆಗಿರಲಿಲ್ಲ. ಒಟ್ಟಿನಲ್ಲಿ ಈ ಸಂಭಾಷಣೆ ವೀಕ್ಷಕರ ತಲೆಗೆ ಹುಳ ಬಿಟ್ಟ ಹಾಗೆ ಆಗಿತ್ತು.  

ಡಬಲ್‌ ಎಲಿಮಿನೇಶನ್‌ನಲ್ಲಿ ಯಾರು ಔಟ್‌ ಆಗ್ತಾರೆ? ಬಿಗ್‌ ಬಾಸ್‌ನಿಂದ ಹೊರ ಹೋಗೋರು ಯಾರು?

ಮೌನವಾಗಿದ್ದ ತ್ರಿವಿಕ್ರಮ್-ಭವ್ಯಾ ಗೌಡ
ʼಬಿಗ್‌ ಬಾಸ್ʼ‌ ಮನೆಗೆ ಮತ್ತೆ ಹಳೆ ಸ್ಪರ್ಧಿಗಳ ಆಗಮನವಾಗಿತ್ತು. ಆ ವೇಳೆ ಸ್ಪರ್ಧಿಗಳು ದೊಡ್ಮನೆಯೊಳಗಡೆ ಇದ್ದವರಿಗೆ ಒಂದಷ್ಟು ಸಲಹೆ ಸೂಚನೆಯನ್ನು ಕೊಟ್ಟಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಭವ್ಯಾ ಗೌಡ-ತ್ರಿವಿಕ್ರಮ್‌ ಈಗ ಸಿಟ್ಟು ಮಾಡಿಕೊಳ್ಳೋದು, ಆರೋಪ ಮಾಡಿಕೊಳ್ತಿರೋದು ಯಾಕೆ? ಇವರ ಮಧ್ಯೆ ಏನಾಗಿದೆ ಎನ್ನೋದರ ಬಗ್ಗೆ ಪ್ರಶ್ನೆ ಬಂದರೂ ಕೂಡ ಇವರಿಬ್ಬರು ಮಾತ್ರ ಮೌನ ಕಾದುಕೊಂಡಿದ್ದರು.

BBK 11: ಬಿಗ್‌ ಬಾಸ್‌ ಟ್ರೋಫಿ ಗೆಲ್ಲೋರು ಯಾರು? ರನ್ನರ್‌ ಅಪ್‌ ಯಾರು? ಸಾಧ್ಯಾ ಸಾಧ್ಯತೆ ಹೀಗಿದೆ!

ಮದುವೆ ಮಾಡಿಸೋದು ಪಕ್ಕಾ ಅಂತೆ! 
ಇನ್ನು ಅಡುಗೆ ಮನೆಯಲ್ಲಿ ಭವ್ಯಾ ಗೌಡ-ತ್ರಿವಿಕ್ರಮ್‌ ಅವರು ಇದ್ದರು. ಆಗ ಗೋಲ್ಡ್‌ ಸುರೇಶ್‌ ಅಲ್ಲಿಗೆ ಎಂಟ್ರಿ ಕೊಟ್ಟು “ತ್ರಿವಿಕ್ರಮ್‌ ನಿನಗೆ ಪ್ರಪೋಸ್‌ ಮಾಡಿದ್ನಲ್ವಾ? ಏನು ಹೇಳದಿ?” ಅಂತ ಕೇಳಿದ್ದಾರೆ. ಆಗ ಅಲ್ಲಿಯೇ ಇದ್ದ‌ ಧನರಾಜ್‌, ಗೌತಮಿ ಜಾಧವ್‌ಗೆ ಅಚ್ಚರಿ ಆಗಿದ್ದು, ಇದೆಲ್ಲ ಯಾವಾಗ ಆಯ್ತು? ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ. ಆಗ ಭವ್ಯಾ ಗೌಡ ಅವರು “ಪ್ರಪೋಸ್‌ ಏನೂ ಇಲ್ಲ.. ಇದನ್ನೆಲ್ಲ ಹೇಳ್ತಾರಾ?” ಅಂತ ಉತ್ತರ ಕೊಟ್ಟಿದ್ದಾರೆ. “ಪ್ರಪೋಸ್‌ ಅಲ್ಲ, ಐ ಲವ್‌ ಯು ಅಂದ್ರು ಅಷ್ಟೇ” ಅಂತ ಭವ್ಯಾ ಹೇಳಿದ್ದಾರೆ. ಆಮೇಲೆ ಗೋಲ್ಡ್‌ ಸುರೇಶ್‌ ಅವರು “ಹನುಮಂತ ಮದುವೆ ಮಾಡ್ತೀನಿ ಅಂತ ಹೇಳಿದ್ದೆ. ಈಗ ನಿನ್ನ ಮದುವೆಯನ್ನು ಮಾಡಸ್ತೀನಿ” ಅಂತ ಹೇಳಿದ್ದಾರೆ. ಆಗ ಭವ್ಯಾ ಗೌಡ ಅವರು “ಇನ್ನೂ ಮೂರು ವರ್ಷ ಲೇಟ್‌ ಇದೆ” ಎಂದು ಹೇಳಿದ್ದಾರೆ.

ಗೌತಮಿ ಜಾಧವ್ ಮಿಡ್‌ವೀಕ್ ಎಲಿಮಿನೇಟ್ ಆಗೋದು ಗ್ಯಾರಂಟಿ? ಇದು ಜನರೇ ಕೊಟ್ಟ ತೀರ್ಪು!

ʼಬಿಗ್‌ ಬಾಸ್ʼ‌ ಮನೆಯಲ್ಲಿ ಶತ್ರುಗಳಾದವರು ಸ್ನೇಹಿತರಾಗುತ್ತಾರೆ, ಸ್ನೇಹಿತರಾದವರು ಶತ್ರುಗಳಾಗುತ್ತಾರೆ. ಆರಂಭದಲ್ಲಿ ಸ್ನೇಹಿತರಾಗಿದ್ದ‌ ಭವ್ಯಾ ಗೌಡ-ತ್ರಿವಿಕ್ರಮ್‌ ಮಧ್ಯೆ ಈಗ ಶೀತಲಸಮರ ನಡೆಯುತ್ತಿದೆ. ಇನ್ನು ಈ ಮನೆಯಲ್ಲಿ ಎಷ್ಟೋ ಪ್ರೀತಿ ಹುಟ್ಟಿ ಅರಳುವ ಮುನ್ನ ಮುದುಡಿ ಹೋಗಿದ್ದೂ ಉಂಟು. ಇನ್ನೂ ಕೆಲ ಪ್ರೀತಿ ಇನ್ನೂ ಮುಂದುವರೆದುಕೊಂಡು ಹೋಗುತ್ತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭವ್ಯಾ ಗೌಡ- ತ್ರಿವಿಕ್ರಮ್‌ ಅವರ ಸ್ನೇಹ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಏನಂತೀರಾ? ನಿಮ್ಮ ಅಭಿಪ್ರಾಯ ಏನು? 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್