BBK 11: ಡಬಲ್‌ ಎಲಿಮಿನೇಶನ್‌ನಲ್ಲಿ ಯಾರು ಔಟ್‌ ಆಗ್ತಾರೆ? ಬಿಗ್‌ ಬಾಸ್‌ನಿಂದ ಹೊರ ಹೋಗೋರು ಯಾರು?

Published : Jan 18, 2025, 11:19 AM ISTUpdated : Jan 18, 2025, 11:55 AM IST
BBK 11: ಡಬಲ್‌ ಎಲಿಮಿನೇಶನ್‌ನಲ್ಲಿ ಯಾರು ಔಟ್‌ ಆಗ್ತಾರೆ? ಬಿಗ್‌ ಬಾಸ್‌ನಿಂದ ಹೊರ ಹೋಗೋರು ಯಾರು?

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ಗ್ರ್ಯಾಂಡ್‌ ಫಿನಾನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲಿಮಿನೇಶನ್‌ ಪ್ರಕ್ರಿಯೆ ನಡೆಯಬೇಕಿದೆ. ಹಾಗಾದರೆ ಯಾರು ಔಟ್‌ ಆಗ್ತಾರೆ? ಡಬಲ್‌ ಎಲಿಮಿನೇಶನ್‌ ನಡೆಯುತ್ತದೆಯಾ?  

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಸದ್ಯ ಎಂಟು ಸ್ಪರ್ಧಿಗಳಿದ್ದಾರೆ. ಜನವರಿ 25, 26 ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಗ್ರ್ಯಾಂಡ್‌ ಫಿನಾಲೆಯಲ್ಲಿ ಸಹಜವಾಗಿ ಐವರು ಸ್ಪರ್ಧಿಗಳು ಇರುತ್ತಾರೆ. ಅಷ್ಟರೊಳಗಡೆ ಮೂವರು ಎಲಿಮಿನೇಟ್‌ ಆಗಬೇಕು. ಹಾಗಾದರೆ ಯಾರು‌, ಯಾರು ಔಟ್‌ ಆಗ್ತಾರೆ?

ಸ್ಪರ್ಧಿಗಳು ಯಾರು?
ʼಬಿಗ್‌ ಬಾಸ್ʼ‌ ಶೋನಲ್ಲಿ ರಜತ್‌, ತ್ರಿವಿಕ್ರಮ್‌, ಭವ್ಯಾ ಗೌಡ, ಗೌತಮಿ ಜಾಧವ್‌, ಹನುಮಂತ, ಮೋಕ್ಷಿತಾ ಪೈ, ಧನರಾಜ್‌, ಉಗ್ರಂ ಮಂಜು ಇದ್ದಾರೆ. ಇವರಲ್ಲಿ ಹನುಮಂತ ಫಿನಾಲೆ ಟಿಕೆಟ್‌ ಪಡೆದಿದ್ದಾರೆ. ಇನ್ನು ಮೋಕ್ಷಿತಾ ಪೈ, ತ್ರಿವಿಕ್ರಮ್ ಅವರು ಫಿನಾಲೆ ವಾರಕ್ಕೆ ತಲುಪಿದ್ದಾರೆ. ಹಾಗಾದರೆ ಉಳಿದ ಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್‌ ಆಗ್ತಾರೆ?
 

ಗೆದ್ದು ಬಂದು ಕೇಳಿದ್ರೆ ಓಕೆ ಅಂತಿದ್ದೆ, ಈಗ ಹೊರ ಬಂದ್ಮೇಲೆ ಹೇಳ್ತೀನಿ: ತ್ರಿವಿಕ್ರಮ್ ಪ್ರಪೋಸಲ್‌ಗೆ ಭವ್ಯಾ ಉತ್ತರ
 

ಎಲಿಮಿನೇಶನ್‌ ಹೇಗೆ ನಡೆಯುತ್ತದೆ?
ಧನರಾಜ್‌, ಉಗ್ರಂ ಮಂಜು, ಗೌತಮಿ ಜಾಧವ್‌, ಭವ್ಯಾ ಗೌಡ, ರಜತ್‌ ಈ ನಾಲ್ವರಲ್ಲಿ ಇಬ್ಬರು ಇಂದು ಹಾಗೂ ನಾಳೆಯೊಳಗಡೆ ಎಲಿಮಿನೇಟ್‌ ಆಗುವ ಸಾಧ್ಯತೆ ಇದೆ. ʼವಾರದ ಕಥೆ ಕಿಚ್ಚನ ಜೊತೆʼ ಹಾಗೂ ʼಸಂಡೇ ವಿಥ್‌ ಸುದೀಪʼ ಶೋನಲ್ಲಿ ಒಬ್ಬೊಬ್ಬರು ಎಲಿಮಿನೇಟ್‌ ಆಗಬಹುದು. ಫಿನಾಲೆ ವಾರಕ್ಕೆ ಕಡಿಮೆ ದಿನ ಇದ್ದು, ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗಬೇಕಿದೆ! 

ಹಳ್ಳಿ ಹೈದ, ಬಿಗ್ ಬಾಸ್ ಹನುಮಂತನಿಗೆ ಇದೊಂದು ದುಶ್ಚಟ ಇದ್ಯಂತೆ ಹೌದಾ?

ಯಾರು ಹೇಗೆ ಆಟ ಆಡಿದ್ದಾರೆ?
ಕಳೆದ ವಾರ ಆಟವೊಂದರಲ್ಲಿ ಧನರಾಜ್‌ ಅವರು ಮೋಸ ಮಾಡಿದ್ದು, ಎಲ್ಲರ ಮುಂದೆ ಬಯಲಾಗಿತ್ತು. ಇದಕ್ಕೆ ಇನ್ನೂ ಶಿಕ್ಷೆ ಸಿಕ್ಕಿಲ್ಲ. ಇನ್ನು ಭವ್ಯಾ ಗೌಡ ಅವರು ಕೆಲ ವಾರಗಳಿಂದ ಆಟದಲ್ಲಿ ಮೋಸ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇನ್ನು ಗೌತಮಿ ಜಾಧವ್‌, ಉಗ್ರಂ ಮಂಜು ಅವರು ವೈಯಕ್ತಿಕ ಆಟ ಆಡ್ತಿಲ್ಲ ಎಂಬ ದೂರು ಇದೆ. ರಜತ್‌ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ಆಗಿದ್ದರೂ ಕೂಡ ತುಂಬ ಸಖತ್‌ ಆಗಿ ಆಟ ಆಡಿದ್ದಾರೆ. ರಜತ್‌ ಅವರ ಪಂಚ್‌ ಡೈಲಾಗ್‌, ನೇರನುಡಿಯೇ ಅವರಿಗೆ ಪ್ಲಸ್‌ ಪಾಯಿಂಟ್‌ ಎನ್ನಬಹುದು. ರಜತ್‌ ಫಿನಾಲೆ ತಲುಪುವ ಸಾಧ್ಯತೆ ಜಾಸ್ತಿ ಇದೆ. 

ಜನರ ಮುಂದೆ ಬಿಗ್ ಬಾಸ್ ಗಿಮಿಕ್ ಬಯಲು; ಉಗ್ರಂ ಮಂಜು ಮಾಡಿದ್ದು ಓಕೆ ಆದ್ರೆ ಧನರಾಜ್‌ ಯಾಕೆ ಟಾರ್ಗೆಟ್?

ವಿಶೇಷತೆ ಏನು?
ಇಷ್ಟು ಸೀಸನ್‌ಗಳಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆದ ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದು ಬಹಳ ಅಪರೂಪ. ʼಬಿಗ್‌ ಬಾಸ್ʼ‌ ಆಟ ಶುರು ಆಗಿ ಕೆಲ ದಿನಗಳ ಬಳಿಕ ಬಂದ ಹನುಮಂತ ಹಾಗೂ ಐವತ್ತು ದಿನಗಳ ಬಳಿಕ ಬಂದ ರಜತ್‌ ಅವರು ಈ ಬಾರಿ ಫಿನಾಲೆಗೆ ಎರಡು ವಾರ ಇರುವಾಗಲೂ ಇನ್ನೂ ಮನೆಯಲ್ಲಿರೋದು ವಿಶೇಷ ಎನ್ನಬಹುದು. ರಜತ್‌ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟ ಬಳಿಕ ಆಟ ಒಂದು ರೂಪ ಪಡೆಯಿತು ಎಂದು ಹೇಳಬಹುದು.

ಪೈಪೋಟಿ: ಈ ಬಾರಿ ಯಾರು ʼಬಿಗ್‌ ಬಾಸ್ʼ‌ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಜೋರಾಗಿದೆ. ಹನುಮಂತ, ರಜತ್‌, ತ್ರಿವಿಕ್ರಮ್‌, ಮೋಕ್ಷಿತಾ ಪೈ ನಡುವೆ ಪೈಪೋಟಿ ಜೋರಾಗಿದೆ. ಒಟ್ಟಿನಲ್ಲಿ ವೀಕ್ಷಕರು ಕೂಡ ಈ ಬಾರಿಯ ಗ್ರ್ಯಾಂಡ್‌ ಫಿನಾಲೆ ನೋಡಲು ಬಹಳ ಉತ್ಸುಕರಾಗಿದ್ದಾರೆ.

ಕಿಚ್ಚ ಸುದೀಪ್‌ ನಿರೂಪಣೆಯ ಕೊನೆಯ ಸೀಸನ್‌ ಇದು!
ಈ ʼಬಿಗ್‌ ಬಾಸ್ʼ‌ ಶೋ ಬಳಿಕ ಮತ್ತೆ ಕಿಚ್ಚ ಸುದೀಪ್‌ ಅವರು ಶೋ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್‌ ನಿರೂಪಣೆಯ ಕೊನೆಯ ʼಬಿಗ್‌ ಬಾಸ್ʼ‌ ಸೀಸನ್‌ ಇದಾಗಿದೆ. ಹೀಗಾಗಿ ವೀಕ್ಷಕರಿಗೂ, ಕಿಚ್ಚ ಸುದೀಪ್‌ಗೂ ಇದು ಒಂದು ಭಾವನಾತ್ಮಕ ಗಳಿಗೆ ಎನ್ನಬಹುದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?