BBK 11: ರಿಯಲ್‌ ಮಾವ ಗಣೇಶ್‌ ಕಾಸರಗೋಡು ಹೀಗ್ಯಾಕೆ ಪೋಸ್ಟ್‌ ಮಾಡಿದ್ರು? ಪ್ರತಿಕ್ರಿಯೆ ಕೊಟ್ಟ ಗೌತಮಿ ಜಾಧವ್!‌

Published : Jan 25, 2025, 08:39 PM ISTUpdated : Jan 27, 2025, 10:18 AM IST
BBK 11: ರಿಯಲ್‌ ಮಾವ ಗಣೇಶ್‌ ಕಾಸರಗೋಡು ಹೀಗ್ಯಾಕೆ ಪೋಸ್ಟ್‌ ಮಾಡಿದ್ರು? ಪ್ರತಿಕ್ರಿಯೆ ಕೊಟ್ಟ ಗೌತಮಿ ಜಾಧವ್!‌

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಸ್ಪರ್ಧಿ ಗೌತಮಿ ಜಾಧವ್‌ ಅವರ ಮಾವ ಗಣೇಶ್‌ ಕಾಸರಗೋಡು ಅವರ ಪೋಸ್ಟ್‌ ಸಾಕಷ್ಟು ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಗೌತಮಿ ಜಾಧವ್‌ ಏನಂದ್ರು?  

‌ʼಸತ್ಯʼ ಧಾರಾವಾಹಿಯಲ್ಲಿ ಗೌತಮಿ ಜಾಧವ್‌ ಅವರು ನಟಿಸುವಾಗ ಅವರ ರಿಯಲ್‌ ಮಾವ ಅಂದ್ರೆ ಗಂಡನ ತಂದೆಯೂ ಆದ ಖ್ಯಾತ ಸಿನಿ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ಸೋಶಿಯಲ್‌ ಮೀಡಿಯಾದಲ್ಲಿ ಸೊಸೆಯ ಗುಣಗಾನ ಮಾಡಿದ್ದರು. ಅಷ್ಟೇ ಅಲ್ಲದೆ ಮಗ-ಸೊಸೆ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಇದೆಲ್ಲ ಇರಲೇ ಇಲ್ಲ. ಇನ್ನು ‘ಬಿಗ್‌ ಬಾಸ್ ಕನ್ನಡ ಸೀಸನ್‌ 11’ ಶೋಗೆ ಗೌತಮಿ ಜಾಧವ್‌ ಎಂಟ್ರಿ ಕೊಟ್ಟ ಬಳಿಕ ಗಣೇಶ್‌ ಕಾಸರಗೋಡು ಅವರು ಯಾವ ಪೋಸ್ಟ್‌ ಕೂಡ ಹಂಚಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಅವರ ಪೋಸ್ಟ್‌ಗಳು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ‌

ಅನುಮಾನ ಹುಟ್ಟು ಹಾಕಿದ ಗೌತಮಿ ಮಾವನ ಪೋಸ್ಟ್!
ಇನ್ನು ಗೌತಮಿ ಜಾಧವ್‌ ಅವರು ವನದುರ್ಗೆಯ ಆರಾಧಕರು. ಗೌತಮಿ ಅವರು ಎಲಿಮಿನೇಟ್‌ ಆಗುತ್ತಿದ್ದಂತೆ ಗಣೇಶ್‌ ಕಾಸರಗೋಡು ಅವರು ಸೋಶಿಯಲ್‌ ಮೀಡಿಯಾದಲ್ಲಿ “ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೆ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಂಃ” ಎಂದು ಬರೆದುಕೊಂಡಿದ್ದರು. ಗಣೇಶ್‌ ಕಾಸರಗೋಡು ಅವರು ಯಾಕೆ ಈ ರೀತಿ ಪೋಸ್ಟ್‌ ಹಂಚಿಕೊಂಡರು ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ National Tv ಯುಟ್ಯೂಬ್‌ ಚಾನೆಲ್‌ ಪ್ರಶ್ನೆ ಮಾಡಿದಾಗ ಗೌತಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್‌ ಫಿನಾಲೆ, 50 ಲಕ್ಷ ಗೆಲ್ಲುವ ಹಣಾಹಣಿಯಲ್ಲಿ ಮನೆಯಿಂದ ರಜತ್‌ ಔಟ್‌!

ನಟಿ ಗೌತಮಿ ಜಾಧವ್‌ ಪ್ರತಿಕ್ರಿಯೆ ಏನು? 
“ನನಗೂ ಸರ್ಪ್ರೈಸ್‌ ಆಗಿದೆ, ಯಾಕೆ ಈ ರೀತಿ ಪೋಸ್ಟ್‌ ಹಾಕಿದ್ದಾರೆ ಅಂತ ಗೊತ್ತಿಲ್ಲ. ನನ್ನ ಮತ್ತು ಅವರ ಮಧ್ಯೆ ಸರಿಯಾಗಿದೆಯೋ ಇಲ್ಲವೋ ಎನ್ನೋದನ್ನು ನಾನು ಟಚ್‌ ಮಾಡೋದಿಲ್ಲ. ಕುಟುಂಬದ ವಿಷಯ ನಾಲ್ಕು ಗೋಡೆ ಮಧ್ಯೆ ಇರಬೇಕು ಎನ್ನೋದನ್ನು ನಾನು ನಂಬ್ತೀನಿ. ಅದನ್ನು ಪಾಲಿಸೋಕೆ ಇಷ್ಟಪಡ್ತೀನಿ” ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ.

ಮಗನ ಬಗ್ಗೆ ಪೋಸ್ಟ್‌ ಹಾಕಿದ್ರಾ?
ಇದಾದ ಬಳಿಕ ಮತ್ತೆ ಗಣೇಶ್‌ ಕಾಸರಗೋಡು ಅವರು ಸೋಶಿಯಲ್‌ ಮೀಡಿಯಾದಲ್ಲಿ “ಶ್ರಮ ಅರ್ಥವಾದರೆ ಅಪ್ಪ ಅರ್ಥವಾಗುತ್ತಾನೆ. ಕರುಣೆ ಅರ್ಥವಾದರೆ ತಾಯಿ ಅರ್ಥವಾಗುತ್ತಾಳೆ. ಅಪ್ಪ-ಅಮ್ಮನನ್ನು ಬಿಟ್ಟು ಹೆಂಡ್ತಿಯ ಬಾಲ ಹಿಡಿದು ಹೋಗುವ ನಿಯತ್ತಿಲ್ಲದೆ ಗಂಡು ಮಕ್ಕಳಿಗೆ ಅರ್ಪಣೆ” ಎಂದು ಬರೆದುಕೊಂಡಿದ್ದಾರೆ.

BBK 11: ಪೋಸ್ಟರ್‌ ರಿಲೀಸ್‌ ಮಾಡಿ ʼಬಿಗ್‌ ಬಾಸ್ʼ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ವಾಹಿನಿ?

ವೀಕ್ಷಕರು ಏನಂದ್ರು? 
ಗಣೇಶ್‌ ಕಾಸರಗೋಡು ಅವರ ಪೋಸ್ಟ್‌ ನೋಡಿ ಕೆಲವರು ಗೌತಮಿ ಜಾಧವ್‌ ದಂಪತಿ ಬಗ್ಗೆ ಮಾತನಾಡಿದ್ದಾರೆ ಎಂದು ಊಹಿಸಿದ್ದು, ಕಾಮೆಂಟ್‌ ಮಾಡಿದ್ದಾರೆ. ಇನ್ನು ಮದುವೆಯಾಗಿ ಬಂದ ಹೆಂಡ್ತಿ ಜೊತೆಗಿರೋದು ಗಂಡನ ಧರ್ಮ ಎಂದು ಕೂಡ ಕಾಮೆಂಟ್‌ ಮಾಡಿದ್ದಾರೆ.

ಫಿನಾಲೆವರೆಗೂ ಗೌತಮಿ ದೊಡ್ಮನೆಯಲ್ಲಿ ಇರಲಿಲ್ಲ..! 
ಗೌತಮಿ ಜಾಧವ್‌ ಅವರು ಹದಿನೈದು ವಾರಗಳ ಕಾಲ ದೊಡ್ಮನೆಯಲ್ಲಿ ಆಟ ಆಡಿದ್ದರು. ಪಾಸಿಟಿವ್‌ ಆಗಿ ಇರಬೇಕು ಎನ್ನುತ್ತಿದ್ದ ಗೌತಮಿ ಅವರು ಮಂಜು, ಮೋಕ್ಷಿತಾ ಸ್ನೇಹ ಮಾಡದಿದ್ದರೆ ಫಿನಾಲೆವರೆಗೂ ಇರುತ್ತಿದ್ದರು ಎಂಬ ಮಾತು ವ್ಯಕ್ತವಾಗಿತ್ತು. ನಾನು ಮುಖವಾಡ ಹಾಕಿಕೊಂಡು ಆಟ ಆಡಿಲ್ಲ. ನಾನು ನಾನಾಗಿ ಆಟ ಆಡಿದ್ದೇನೆ, ಆಟಕ್ಕೋಸ್ಕರ ಸ್ನೇಹ ಬಿಡೋಕೆ ಆಗದು ಎಂದು ಗೌತಮಿ ಜಾಧವ್‌ ಅವರು ಹೇಳಿದ್ದಾರೆ. 

ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಹರಿಹಾಯ್ದ ಕಿಚ್ಚ ಸುದೀಪ್‌ ಫ್ಯಾನ್ಸ್;‌ ಮೌನ ಮುರಿದ ʼಬಿಗ್‌ ಬಾಸ್ʼ‌ ಸ್ಪರ್ಧಿ!

ಅಭಿಷೇಕ್‌ ಕಾಸರಗೋಡು ವೃತ್ತಿ ಏನು?
ಅಂದಹಾಗೆ ಗೌತಮಿ ಜಾಧವ್‌ ಹಾಗೂ ಅಭಿಷೇಕ್‌ ಕಾಸರಗೋಡು ಅವರು ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದಾರೆ. ಅಭಿಷೇಕ್‌ ಕಾಸರಗೋಡು ಅವರು ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಂದು ಅಭಿಷೇಕ್‌, ಗೌತಮಿ ಅವರು ಕುಟುಂಬದ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಅಂದಹಾಗೆ ಗೌತಮಿಗೆ ಶ್ವಾನಗಳು ಅಂದ್ರೆ ಇಷ್ಟ. ಅವರನ್ನು ಮಕ್ಕಳ ರೀತಿ ಸಾಕುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!