ನಿರ್ಜನ ಪ್ರದೇಶದಲ್ಲಿ ಸೀತಾರಾಮ ಪ್ರಿಯಾ ಪ್ರೀ ವೆಡ್ಡಿಂಗ್​ ಶೂಟ್​: ನಡೆದ ಘಟನೆಗಳನ್ನು ಬಿಚ್ಚಿಟ್ಟ ನಟಿ ಮೇಘನಾ!

Published : Jan 25, 2025, 06:13 PM ISTUpdated : Jan 25, 2025, 06:22 PM IST
ನಿರ್ಜನ ಪ್ರದೇಶದಲ್ಲಿ ಸೀತಾರಾಮ ಪ್ರಿಯಾ ಪ್ರೀ ವೆಡ್ಡಿಂಗ್​ ಶೂಟ್​: ನಡೆದ ಘಟನೆಗಳನ್ನು ಬಿಚ್ಚಿಟ್ಟ ನಟಿ ಮೇಘನಾ!

ಸಾರಾಂಶ

'ಸೀತಾರಾಮ' ಧಾರಾವಾಹಿಯ ನಟಿ ಮೇಘನಾ ಶಂಕರಪ್ಪ ಫೆಬ್ರವರಿ 9 ರಂದು ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್‌ರೊಂದಿಗೆ ಅರೇಂಜ್ಡ್ ಮ್ಯಾರೇಜ್ ಆಗುತ್ತಿದ್ದಾರೆ. ನೆಲಮಂಗಲದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮುಗಿಸಿದ್ದು, ಮದುವೆಯ ನಂತರವೂ ನಟನೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. ವೈಷ್ಣವಿ ಗೌಡ ಜೊತೆಗಿನ ಉತ್ತಮ ಗೆಳೆತನವನ್ನೂ ಹಂಚಿಕೊಂಡಿದ್ದಾರೆ.

ಸೀತಾರಾಮದ   ಪ್ರಿಯಾ  ಇದಾಗಲೇ ಸೀರಿಯಲ್‌ನಲ್ಲಿ ತನ್ನ ಮನಮೆಚ್ಚಿದ ಪ್ರಿಯಕರ ಅಶೋಕ್‌ನನ್ನು ಮದುವೆಯಾಗಿದ್ದಾಳೆ. ಆದರೆ ರಿಯಲ್‌ ಲೈಫ್‌ನ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಇದಾಗಲೇ ತಮ್ಮ ಭಾವಿ ಪತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಸಿದ್ದಾರೆ.  ವಿಶೇಷ ವಿಡಿಯೋ ಮಾಡುವ ಮೂಲಕ ಭಾವಿ ಪತಿಯ ಮುಖ ಪರಿಚಯವನ್ನು ಮಾಡಿಸಿದ್ದಾರೆ.  ಈಗಿನ ಕಾಲದಲ್ಲಿ ಅರೇಂಜ್ಡ್​ ಮ್ಯಾರೇಜ್​ ಎನ್ನುವುದು ಅಪರೂಪ. ಅದರಲ್ಲಿಯೂ ಸೆಲೆಬ್ರಿಟಿ ಎಂದರೆ ಲವ್​ ಮ್ಯಾರೇಜೇ ಇರುತ್ತದೆ. ಆದರೆ ಮೇಘನಾ ಅವರದ್ದು ಅರೇಂಜ್ಡ್​ ಮ್ಯಾರೇಜ್​. ಅವರ ಪತಿಯ ಹೆಸರು  ಜಯಂತ್, ಅವರು ಸಾಫ್ಟ್​ವೇರ್​ ಎಂಜಿನಿಯರ್. ಇದಾಗಲೇ ನಟಿ ಮದುವೆ ಡೇಟ್​ ಅನ್ನೂ ರಿವೀಲ್​ ಮಾಡಿದ್ದು, ಫೆಬ್ರುವರಿ 9ರಂದು ತಮ್ಮ ಮದುವೆ ಎಂದಿದ್ದಾರೆ. 

ಇದೀಗ ನೆಲಮಂಗಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಶೂಟ್​ ಮಾಡಿಸಿರುವುದಾಗಿ ಹೇಳಿದ ಮೇಘನಾ ಅವರು, ಅದರ ಸಂಪೂರ್ಣ ಡಿಟೇಲ್ಸ್​ ತೋರಿಸಿದ್ದಾರೆ. ತಮ್ಮ ವಿಡಿಯೋ ಮಾಡಲು ಬಂದಿರುವ ಟೀಮ್​, ತಮ್ಮ ಮೇಕಪ್​ ಲೇಡಿ ಸೇರಿದಂತೆ ಎಲ್ಲರ ಪರಿಚಯ ಮಾಡಿರುವ ನಟಿ, ಬೆಳಿಗ್ಗೆ 3 ಗಂಟೆಗೇ ಎದ್ದು ಬಂದಿರುವ ಬಗ್ಗೆ ತಿಳಿಸಿದ್ದಾರೆ. ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿ ಆ ಸ್ಥಳದ ಪರಿಚಯವನ್ನು ಮಾಡಿಸಿರುವ ನಟಿ, ಸಂಕೋಚ ಸ್ವಭಾವದ ಭಾವಿ ಪತಿಯನ್ನು ಎಳೆದು ತಂದು ಕ್ಯಾಮೆರಾ ಮುಂದೆ ನಿಲ್ಲಿಸುವುದನ್ನು ನೋಡಬಹುದು. ಜೊತೆಗೆ ಭಾವಿ ಪತಿಯ ಜೊತೆಗೆ ರೊಮ್ಯಾಂಟಿಕ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಮದುಮಗಳು ಪ್ರಿಯಾ ಹಾಗೂ ಭಾವಿ ಪತಿ ವಯಸ್ಸೆಷ್ಟು? ಬಾಡಿ ಷೇಮಿಂಗ್​ ಬಗ್ಗೆ ನೊಂದು ನಟಿ ಹೇಳಿದ್ದೇನು ಕೇಳಿ...

ಇದೇ ವಿಡಿಯೋದಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್​, ಅಲ್ಲಿರುವ ವ್ಯವಸ್ಥೆಗಳ ಬಗ್ಗೆಯೂ ನಟಿ ತಿಳಿಸಿದ್ದಾರೆ. ಅಂತಿಮವಾಗಿ ಪ್ರೀ ವೆಡ್ಡಿಂಗ್​ ವಿಡಿಯೋಶೂಟ್​ ಯಾವಾಗ ಬರುತ್ತದೆ ಎನ್ನುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ  ಕಾಯುತ್ತಿದ್ದಾರೆ. ಈ ವಿಡಿಯೋದಲ್ಲಿ ನಟಿ ಮೂರ್ನಾಲ್ಕು ಬಗೆಯ ಡ್ರೆಸ್​ಗಳನ್ನು ಬದಲಿಸಿ ವಿಡಿಯೋಶೂಟ್​ ಮಾಡಿಸಿಕೊಂಡಿರುವುದನ್ನು ನೋಡಬಹುದು. ಈ ಹಿಂದೆ ಭಾವಿ ಪತಿ ಜಯಂತ್​ ಅವರ ಗುಣಗಾನ ಮಾಡಿದ್ದ ನಟಿ, ಅವರು ಗುಡ್​ ಲುಕಿಂಗ್​, ಕೇರಿಂಗ್​, ಲವಿಂಗ್​ ಇದ್ದಾರೆ. ತುಂಬಾ ಮೆಚುರ್​ ಇದ್ದಾರೆ. ನಮ್ಮ ಜನರೇಷನ್​ಗೆ ಹೋಲಿಸಿದ್ರೆ ಅವರು ತುಂಬಾ ಮೆಚುರ್​. ತುಂಬಾ ಇಂಡಿಪೆಂಡೆಂಟ್​ ಆಗಿದ್ದಾರೆ. ಎಲ್ಲದರ ಬಗ್ಗೆ ಕ್ಲಾರಿಟಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಿಕ್ಕಾಪಟ್ಟೆ  ಮಾತನಾಡುವವಳು, ಅವರು ತುಂಬಾ ಸೈಲೆಂಟ್​. ಇಬ್ಬರೂ ತುಂಬಾ ಮಾತನಾಡಿದ್ರೆ ಕಷ್ಟ ಆಗ್ತಿತ್ತು. ಈಗ ನಾನು ಮಾತನಾಡಿದ್ದನ್ನು ಅವರು ಕೇಳಿಸಿಕೊಳ್ತಾರಲ್ಲ, ಅದೇ ಖುಷಿ ಎಂದು ತಮಾಷೆ ಮಾಡಿದ್ದರು.  
 
ಮದ್ವೆಯಾದ ಮೇಲೆ ಆ್ಯಕ್ಟಿಂಗ್​, ಸೀರಿಯಲ್​, ಯೂಟ್ಯೂಬ್​ ಎಲ್ಲಾ ಬಿಡ್ತೀರಾ ಎನ್ನುವ ಪ್ರಶ್ನೆಗೆ ತಮಾಷೆಯಾಗಿ ಮೇಘನಾ, ಇದೊಳ್ಳೆ ಪಕ್ಕದ ಮನೆ ಆಂಟಿ ಕೇಳಿರೋ ರೀತಿ ಇದೆ. ನಾನು ಯಾವುದೇ ಕಾರಣಕ್ಕೂ ಆ್ಯಕ್ಟಿಂಗ್ ಬಿಡಲ್ಲ. ಸೀತಾರಾಮ ಅಂತೂ ಮುಂದುವರೆಸುತ್ತೇನೆ. ಅದರ ಬಳಿಕ ಬೇರೆ ಪ್ರಾಜೆಕ್ಟ್​ ಸಿಕ್ಕರೂ ಮಾಡುತ್ತೇನೆ ಎಂದಿದ್ದರು. ಇದೇ ವೇಳೆ ಇವರ ಪ್ರೀ ವೆಡ್ಡಿಂಗ್ ಶೂಟ್​ ಬಗ್ಗೆಯೂ ಪ್ರಶ್ನೆಗಳು ಬಂದಿದ್ದು, ಅದಕ್ಕೆ ನಟಿ ಅದನ್ನು ಮೇಲುಕೋಟೆಯಲ್ಲಿ ಶೂಟ್​ ಮಾಡಿದ್ದು ಎಂದಿದ್ದರು. ತಮ್ಮ ಮತ್ತು ಸೀತಾ ಅಂದ್ರೆ ವೈಷ್ಣವಿ ಗೌಡ ಅವರ ಫ್ರೆಂಡ್​ಷಿಪ್​ ಬಗ್ಗೆ ಮಾತನಾಡಿರುವ ನಟಿ, ನಮ್ಮದು ಸಿಕ್ಕಾಪಟ್ಟೆ ಒಳ್ಳೆಯ ಫ್ರೆಂಡ್​ಷಿಪ್​. ನಮ್ಮಿಬ್ಬರದ್ದು ಒಂದು ಥರಾ ಲಾಸ್ಟ್​ಬೆಂಚರ್ಸ್​ ಎನ್ನಬಹುದು. ಸಿಕ್ಕಾಪಟ್ಟೆ ನಗ್ತೇವೆ, ಒಳ್ಳೆಯ ಬಾಂಡಿಂಗ್​ ಇದೆ ಎಂದಿದ್ದರು. 

ಸೀತಾರಾಮ ಪ್ರಿಯಾ ಮದ್ವೆ ಡೇಟ್​ ರಿವೀಲ್​! ಆ್ಯಕ್ಟಿಂಗ್​ ಬಿಡ್ತಾರಾ? ಹುಡುಗನ ಫುಲ್​ ಡಿಟೇಲ್ಸ್​ ಕೊಟ್ಟ ನಟಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ