ಲೇಖಕ ನಾ.ಸೋಮೇಶ್ವರ್ ಅವರು ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಪತ್ನಿಗೆ ಸೀರೆ ಕೊಡಿಸಿದ್ದ ಪ್ರಸಂಗ ನೆನಪಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು?
ದೂರದರ್ಶನ ಚಂದನದಲ್ಲಿ ಪ್ರಸಾರ ಆಗ್ತಿರೋ ಥಟ್ ಅಂತ ಹೇಳಿ ಎಂದಾಕ್ಷಣ ಎಲ್ಲರ ಮುಂದೆ ಬರೋದು ನಾ.ಸೋಮೇಶ್ವರ್ ಅವರು. ಕಳೆದ 22 ವರ್ಷಗಳಿಂದ ಈ ಕಾರ್ಯಕ್ರಮವನ್ನು ಒಂದೇ ಧಾಟಿಯಲ್ಲಿ, ಒಂದೇ ರೀತಿಯಲ್ಲಿ ನಡೆಸಿಕೊಡುತ್ತಲೇ ಖ್ಯಾತಿ ಗಳಿಸಿದವರು ಇವರು. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ದಾಖಲೆ ಬರೆದಿದೆ. ರಸಪ್ರಶ್ನೆ ಮಾಸ್ಟರ್ ಎಂದೇ ಪ್ರಖ್ಯಾತರಾಗಿರುವ ಲೇಖಕ, ನಾ.ಸೋಮೇಶ್ವರ್ ಅವರದ್ದು ಹಾಸ್ಯದಲ್ಲಿಯೂ ಎತ್ತಿದ ಕೈ. ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಎಷ್ಟು ಸೊಗಸಾಗಿ, ಗಂಭೀರವಾಗಿ ನಡೆಸಿಕೊಡುತ್ತಾರೆಯೋ, ಅದಕ್ಕಿಂತಲೂ ಹೆಚ್ಚಾಗಿ ಅವರ ಹಾಸ್ಯಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.
ಇದೀಗ ಕೀರ್ತಿ ಎಂಟರ್ಟೇನ್ಮೆಂಟ್ ಶೋನಲ್ಲಿ ನಾ. ಸೋಮೇಶ್ವರ ಅವರು ಹಾಸ್ಯ ಪ್ರಜ್ಞೆಯನ್ನುಮರೆದಿದ್ದಾರೆ. ಅವರಿಗೆ ಕೇಳಿರುವ ಪ್ರಶ್ನೆಗಳಿಗೆ ಹಾಸ್ಯದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ನಿಮ್ಮ ಪತ್ನಿಗೆ ಸರ್ಪ್ರೈಸ್ ಆಗಿ ಸೀರೆ ಕೊಡಿಸಿದ್ರಾ ಎಂದು ಕೇಳಿರೋ ಪ್ರಶ್ನೆಗೆ ಸೋಮೇಶ್ವರ ಅವರು, ಒಮ್ಮೆಯಷ್ಟೇ ಕೊಡಿಸಿದ್ದು ಜೀವನದಲ್ಲಿ. ಆ ಘಟನೆ ಬಳಿಕ ಮತ್ತೆ ಆಕೆಗೆ ನಾನು ಸೀರೆ ತಂದುಕೊಡಲು ಹೋಗುವ ತಪ್ಪು ಯಾವತ್ತೂ ಮಾಡ್ಲೇ ಇಲ್ಲ ಎನ್ನುತ್ತಲೇ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
undefined
ರಾಗಿ ಹಿಟ್ಟು ಕೊಟ್ಟು ನನ್ನನ್ನು ಖರೀದಿಸಿದ್ರು... 'ಥಟ್ ಅಂತ ಹೇಳಿ' ಖ್ಯಾತಿಯ ಸೋಮೇಶ್ವರ್ ಮಾತು ಕೇಳಿ!
'ಒಂದೇ ಒಂದು ಸಲ ನಾನು ಪತ್ನಿಗೆ ಸೀರೆ ತೆಗೆದುಕೊಂಡು ಹೋಗುವ ಸಾಹಸ ಮಾಡಿದ್ದೆ. ಕೋಲ್ಕತಾದಲ್ಲಿ ಒಂದು ಸಮಾವೇಶ ಇತ್ತು. ಕೋಲ್ಕತಾ ಸಾರಿಗಳು ತುಂಬಾ ಚೆನ್ನಾಗಿ ಇರುತ್ತೆ ಎಂದು ಕೇಳಿದ್ದೆ. ಜೊತೆಗೆ ಹೋದವರೂ ಸಾರಿ ಕೊಂಡುಕೊಂಡರು. ಅದಕ್ಕೆ ನಾನೂ ಪತ್ನಿಗೆ ಅಂತ ಮೂರು ಸಾರಿ ಕೊಂಡುಕೊಂಡು ಬಂದೆ. ಮನೆಗೆ ತಂದಿದ್ದೇ ತಡ ನಿಮಗೆ ಸೀರೆ ಕೊಂಡುಕೊಳ್ಳುವುದನ್ನು ಕಲಿಸಿದವರು ಯಾರು? ಈ ಸೀರೆಗೂ ಈ ಬಾರ್ಡರ್ಗೂ ಮ್ಯಾಚ್ ಇದ್ಯಾ? ನನ್ನ ಬಣ್ಣ ಏನು, ಈ ಸೀರೆ ಬಣ್ಣ ಏನು, ಎರಡಕ್ಕೂ ಸರಿ ಹೋಗುತ್ತಾ ಎಂದು ಒಂದು ಗಂಟೆ ಜ್ಞಾನೋದಯ ಉಂಟು ಮಾಡಿದ್ಲು ಎಂದು ತಮಾಷೆಯಾಗಿಯೇ ಉತ್ತರಿಸಿದ್ದಾರೆ. 'ಅಂದಿನಿಂದ ಇಂದಿನವರೆಗೂ ಆಕೆಗೆ ಸೀರೆಯನ್ನು ಕೊಂಡುಕೊಂಡು ಬರುವ ಕೆಲಸ ಎಂದಿಗೂ ಮಾಡಿಲ್ಲ, ಆಕೆಯನ್ನೇ ಕರೆದುಕೊಂಡು ಹೋಗ್ತೇನೆ. ಅವರಿಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ತಾರೆ. ಅದು ಚೆನ್ನಾಗಿದೆಯೋ, ಇಲ್ಲವೋ ಎಂದು ಹೇಳಲು ಅವಕಾಶ ಅಂತೂ ಖಂಡಿತಾ ಕೊಡ್ತಾರೆ ಎಂದು ನಾ.ಸೋಮೇಶ್ವರ ಹೇಳಿದ್ದಾರೆ.
ನಾ. ಸೋಮೇಶ್ವರ ಕುರಿತು ಹೇಳುವುದಾದರೆ, 22 ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇವರನ್ನು ನಡೆದಾಡುವ ಗ್ರಂಥಾಲಯ ಎಂದೇ ಹೇಳಲಾಗುತ್ತಿದೆ. 1986ರಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು ಕೈಗಾರಿಕಾ ಕ್ಷೇತ್ರದಲ್ಲಿ ವೈದ್ಯಕೀಯ ತಜ್ಞರಾಗಿ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೇಡಂ ಕ್ಯೂರಿ ಹಾಗೂ ಥಾಮಸ್ ಆಲ್ವಾ ಎಡಿಸನ್ ಅವರ ಬದುಕು ಡಾ ನಾ ಸೋಮೇಶ್ವರ್ ಮೇಲೆ ಅತೀವ ಪ್ರಭಾವ ಬೀರಿತು. 9ನೇ ಕ್ಲಾಸ್‌ನಲ್ಲಿ ಇರುವಾಗಲೇ 14 ನಾಟಕಗಳನ್ನ ಬರೆದವರು ಡಾ ನಾ ಸೋಮೇಶ್ವರ್. ವೈದ್ಯಕೀಯ ಹಾಗೂ ಸಾಹಿತ್ಯ ಲೋಕದ ಅವಿಸ್ಮರಣೀಯ ಸೇವೆಗೆ ಡಾ ನಾ ಸೋಮೇಶ್ವರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್ ಅಂತ ಹೇಳಿದ ನಾ. ಸೋಮೇಶ್ವರ್!