bigg boss kannada 11 ಹನುಮಂತು ಉತ್ತರಕ್ಕೆ ಸೈಲೆಂಟ್‌ ಆದ ಸುದೀಪ್‌! ಎಂಡ್‌ನಲ್ಲಿ ಕಿಚ್ಚನ ಕ್ಲಾಸ್‌

Published : Dec 22, 2024, 12:12 AM IST
bigg boss kannada 11 ಹನುಮಂತು ಉತ್ತರಕ್ಕೆ ಸೈಲೆಂಟ್‌ ಆದ ಸುದೀಪ್‌! ಎಂಡ್‌ನಲ್ಲಿ ಕಿಚ್ಚನ ಕ್ಲಾಸ್‌

ಸಾರಾಂಶ

ಬಿಗ್‌ಬಾಸ್‌ನಲ್ಲಿ ಹನುಮಂತ ಕ್ಲೆವರ್ ಆಟಗಾರ. ನೇರ, ಸ್ಪಷ್ಟ ಉತ್ತರಗಳಿಗೆ ಹೆಸರುವಾಸಿ. ಕಿಚ್ಚ ಸುದೀಪ್‌ ಕೂಡ ಹನುಮಂತನ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ದಿಂಬು ಟಾಸ್ಕ್‌ ರದ್ದತಿಗೆ ಕಾರಣರಾದ ಹನುಮಂತಗೆ ಕಿಚ್ಚ ವಾರ್ನಿಂಗ್‌ ಕೊಟ್ಟಿದ್ದಾರೆ. ಮುಂದೆ ಟಾಸ್ಕ್‌ ರದ್ದಾದರೆ ಹೊರದಬ್ಬುವುದಾಗಿ ಎಚ್ಚರಿಸಿದ್ದಾರೆ.

ಬಿಗ್ ಬಾಸ್ ಕನ್ನಡ 11ರಲ್ಲಿ ಹನುಮಂತ ತುಂಬಾ ಸೈಲೆಂಟ್‌ ಅಂದ್ರೆ ಅದು ತಪ್ಪು. ಹನುಮಂತ ತುಂಬಾ ಕ್ಲೆವರ್ ಆಟಗಾರ ಎಂಬುದನ್ನು ಮತ್ತೊಮ್ಮೆ ಪ್ರೂವ್‌ ಮಾಡಿದರು. ವಿಷಯಗಳನ್ನು ಸುತ್ತಿ ಬಳಸಿ ಹೇಳದೆ ಸ್ಪಷ್ಟವಾಗಿ, ನೇರವಾಗಿ ಕಾರಣ ಕೊಡುವುದೆಂದರೆ ಅದು ಹನುಮಂತ. ಯಾರು ಏನೇ ಕೇಳಿದರೂ ಒಂದೇ ವಾಕ್ಯದಲ್ಲಿ ಉತ್ತರ ಕೊಡುವುದು ಹನುಮಂತನ ಟ್ಯಾಲೆಂಟ್‌ ಕಿಚ್ಚ ಸುದೀಪ್‌ ಅವರು ಯಾವಾಗಲೂ ಬಿಗ್‌ಬಾಸ್‌ ಶೋವನ್ನು ಅರ್ಥ ಮಾಡಿಕೊಂಡಿರುವವರು ಅಂದರೆ ಅದು ಹನುಮಂತ ಎಂದೇ ಹೇಳುತ್ತದ್ದರು.

ಶನಿವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಹನುಮಂತ ಕ್ಲೆವರ್‌ ಆಟಗಾರ ಅನ್ನುವುದು ಮತ್ತೊಮ್ಮೆ ಪ್ರೂವ್‌ ಆಯ್ತು. ಸುದೀಪ್ ಏನೇ ಪ್ರಶ್ನೆ ಕೇಳಿದ್ರೂ ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಎಂಬ ಉತ್ತರ ಕೊಟ್ಟು ಎಲ್ಲವನ್ನೂ ಒಂದೇ ಉತ್ತರದಲ್ಲಿ ಮುಗಿಸುತ್ತಿದ್ದರು.

bigg boss kannada 11 ಐ ಸೀರಿಯಸ್ಲಿ ಲವ್‌ ಯೂ ಭವ್ಯಾ ಎಂದ ತ್ರಿವಿಕ್ರಮ್‌, ಪ್ರೀತಿ ಹೇಳಿಕೊಂಡೇ ಬಿಟ್ಟ ಹೈದ!

ಹೀಗಾಗಿ ಇಂದು ಎಪಿಸೋಡ್‌ ಆರಂಭದಲ್ಲಿ ರಜತ್‌ ಬಳಿ ನಿಮೆ ಯಾರು ಇಲ್ಲಿ ಕಾಂಪಟೇಶನ್‌ ಎಂದಾಗ ಹನುಮಂತನ ಹೆಸರನ್ನು ಕೂ ತೆಗೆದುಕೊಂಡರು ರಜತ್‌. ಇದಕ್ಕೆ ಕಿಚ್ಚ ಹನುಮಂತ ನಿಮಗೆ ಪ್ರತಿಸ್ಪರ್ಧಿನಾ? ಎಂದು ಕೇಳಿದ್ದಕ್ಕೆ  ಹೌದು ಎಂದ ರಜತ್‌  ಮೆಂಟಲಿ ತುಂಬಾ ಸ್ಟ್ರಾಂಗ್‌ ಇದ್ದಾನೆ ಎಂದ್ರು. ಇದಕ್ಕೆ ಕಿಚ್ಚ ಮೆಂಟಲಿಗೆ ಹೋಗ್ಲೇಬೇಡಿ  ರಜತ್‌ ಹಾಗೇ ಹೋದ್ರೆ ನಿಮಗಿಂತ 10 ಹೆಜ್ಜೆ ಅವರು ಮುಂದಿದ್ದಾರೆ. ನಿಮಗೆ ಯಾರಿಗೆ ಗೊತ್ತಾಗ್ತಿಲ್ಲ ಅಲ್ವಾ ಹನುಮಂತು ಹೇಳಿ ಹನುಮಂತು ಎಂದು ಕಿಚ್ಚ ಕೇಳಿದರು. ಇದಕ್ಕೆ ಹನುಂತು ಹಂಗೇನಿಲ್ರಿ ಸರ್‌ ಎಂದು ಉತ್ತರ ಕೊಟ್ಟರು.

ನಿಮ್ಮದು ಹಂಗೇನಿಲ್ಲ ಮೋಕ್ಷಿತಾ ಅವರದ್ದು ಅರ್ಥ ಆಯ್ತಾ?  ಇದು ಬಿಟ್ಟುಬೇರೆ ಏನಾದ್ರೂ ಇದೆಯಾ ಹನುಮಂತು ಎಂದು ಕಿಚ್ಚ ಕೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಹನುಮಂತು ಆರಾಮಾಗಿದ್ದೀನಿ ಸರ್‌, ತಲೆಗಿಲೆ ಆಫ್ ಇಲ್ರಿ ಸರ್ ಎಂದರು. ಇದಕ್ಕೆ ಸುದೀಪ್‌ ಇನ್ನು ನಾವುನೀವು ಮಾತನಾಡುವಾಗ ಹಂಗೇನಿಲ್ರಿ ಸರ್, ಚೆನ್ನಾಗಿದ್ದೀನಿ ಸರ್‌ ಎಲ್ಲಾ ಬಿಟ್ಟು ಬೇರೆ ಮಾತನ್ನು ಹೇಳಬೇಕು ಎಂದು ಕಂಡೀಷನ್‌ ಹಾಕಿದರು. ಅದಕ್ಕೆ ಒಪ್ಪಿದ ಹನುಮಂತ,ಕಿಚ್ಚ ಮತ್ತೆ ಹೇಗಿತ್ತು ಈ ವಾರ ಎಂದು ಕೇಳಿದಾಗ ‘ಭೇಷ್ ಇತ್ತುರೀ’ ಎಂದರು. ಹನುಮಂತನ ಈ ಮಾತಿಗೆ ನೆರೆದಿದ್ದ ವೀಕ್ಷಕರು ಎಲ್ಲರೂ ಚಪ್ಪಾಳೆ ತಟ್ಟಿದರು. ಸುದೀಪ್ ಅವರು  ಒಂದು ನಿಮಿಷ ಸೈಲೆಂಟ್‌ ಆಗಿ ಸ್ಮೈಲ್‌ ಮಾಡಿ ಬಳಿಕ ಬೇರೆ ಟಾಪಿಕ್​ಗೆ ಹೋದರು.

BBK11 ದೊಡ್ಮನೆಯಲ್ಲಿ ಟ್ವಿಸ್ಟ್, ಮನೆಯ ನೂತನ ಕ್ಯಾಪ್ಟನ್‌ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾದ ಭವ್ಯಾ ಗೌಡ

ಹನಮಂತ ಬಿಗ್‌ಬಾಸ್‌ ಮನೆಗೆ ಬಂದಾಗಿನಿಂದ  ಕಿಚ್ಚ ಹೊಗಳುತ್ತಲೇ ಬಂದಿದ್ದಾರೆ. ಹನುಮಂತ  ಮಾತ್ರ ಬುದ್ದಿವಂತ, ಇಡೀ ಆಟವನ್ನು ಅರ್ಥ ಮಾಡಿಕೊಂಡಿರುವವರು ಎಂದು ಹಲವು ಬಾರಿ ಹೇಳಿದ್ದಾರೆ.

ಎಪಿಸೋಡ್‌ ಕೊನೆಗೆ ಹನುಮಂತಗೆ ವಾರ್ನ್ ಮಾಡಿದ ಕಿಚ್ಚ:
ಇನ್ನು ಈ ವಾರದ ದಿಂಬು ಟಾಸ್ಕ್‌ ರದ್ದಾದ ವಿಷ್ಯದಲ್ಲಿ ಕಿಚ್ಚ ಆ ಟಾಸ್ಕ್ ಉಸ್ತುವಾರಿಯಾಗಿದ್ದ ಹನುಮಂತಗೆ ವಾರ್ನ್ ಮಾಡಿದರು. ಹನುಮಂತು ಇನ್ನು ಒಂದು ಸಲ ಟಾಸ್ಕ್‌ ರದ್ದಾದ್ರೂ ಪರ್ವಾಗಿಲ್ಲ ಅಂತ ಬಂದ್ರೆ  ನಿಮಗೆ ಏಷ್ಟಾದ್ರೂ ಓಟು ಬೀಳ್ತಾ ಇರ್ಲಿ. ಹೊರಗಡೆ ಕಳಿಸೋ ಜವಾಬ್ದಾರಿ ನಂದು. ರದ್ದಾದ್ರೂ ಪರ್ವಾಗಿಲ್ಲ. ಈ ಗಾಂಚಾಲಿ ಮಾತುಗಳು ಯಾರ ಬಾಯಲ್ಲೂ ಬೇಡ. ಇದು ಯಾರ ಅಪ್ಪನ ಮನೆನ ಅಲ್ಲ. ಬೇಡ, ಬಿಗ್‌ಬಾಸ್ ಡಿಸೈಡ್‌ ಮಾಡ್ತಾರೆ ರದ್ದು ಮಾಡಬೇಕಾ ಬೇಡ್ವಾ ಅಂತ ಎಂದರು. 

ದಿಂಬು ಟಾಸ್ಕ್‌ ನಲ್ಲಿ ಇಬ್ಬರು ಉಸ್ತುವಾರಿಗಳಾದ ಹನುಮಂತ ಮತ್ತು ಚೈತ್ರಾ ಅವರು ಒಮ್ಮತದ ನಿರ್ಧಾರಕ್ಕೆ ಬರದೇ ಟಾಸ್ಕ್‌ ರದ್ದಾಗಿತ್ತು. ತಮ್ಮ ಟೀಂ ಗೆರೆ ದಾಟಿದ ಬಳಿಕವೇ ದಿಂಬು ಕೊಟ್ಟಿದೆ ಎಂಬುದು ಉಸ್ತುವಾರಿ ಹನುಮಂತು ವಾದವಾಗಿತ್ತು. ಚೈತ್ರಾ ಮಾತ್ರ ಇದನ್ನು ಒಪ್ಪಿರಲಿಲ್ಲ. ಅದರ ಹಿಂದಿನ ಟಾಸ್ಕ್‌ ನಲ್ಲಿ ಚೈತ್ರಾ ಉಸ್ತುವಾಗಿ ಕೆಟ್ಟದಾಗಿತ್ತು. ಇದೆಲ್ಲವೂ ಎದುರಾಳಿ ತಂಡವನ್ನು ಕೆರಳಿಸಿದ್ದು ಸುಳ್ಳಲ್ಲ. ಎಂದೂ ಏರುದನಿಯಲ್ಲಿ ಮಾತನಾಡದ ಹನುಮಂತು ಅಂದು ಏರುದನಿಯಲ್ಲಿ ಮಾತನಾಡಿದ್ದು ಕೂಡ ವಿಶೇಷವಾಗಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್