Bigg Boss Kannada 11 ಮತ್ತೆ ಬಂದ ಗೋಲ್ಡ್ ಸುರೇಶ್, ತ್ರಿವಿಕ್ರಮ್‌ ಎಲಿಮಿನೇಟ್‌!

By Gowthami K  |  First Published Dec 22, 2024, 1:02 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ವೈಯಕ್ತಿಕ ಕಾರಣಗಳಿಂದ ಹೊರಹೋಗಿದ್ದ ಗೋಲ್ಡ್ ಸುರೇಶ್ 'ಸೂಪರ್ ಸಂಡೇ ವಿಥ್ ಬಾದ್‌ಶಾ ಸುದೀಪ್' ಕಾರ್ಯಕ್ರಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಈ ವಾರ ಮನೆಯಿಂದ ಹೊರ ಹೋಗಿದ್ದಾರೆ ಎಂದು ಘೋಷಿಸಲಾಗಿದ್ದರೂ, ಕೊನೆಗೆ ಕಿಚ್ಚ  ಅವರನ್ನು ಉಳಿಸಿಕೊಂಡಿದ್ದಾರೆ.


ಬಿಗ್ ಬಾಸ್ ಕನ್ನಡ 11ರಲ್ಲಿ ವೈಯಕ್ತಿಕ ಕಾರಣಗಳಿಂದ ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕರೆದರೆ ನಾನು ಮನೆಯೊಳಗೆ ಹೋಗುತ್ತೇನೆ ಎಂದು ಅನೇಕ ಸಂದರ್ಶನಗಳಲ್ಲಿ ಗೋಲ್ಡ್ ಸುರೇಶ್ ಹೇಳಿದ್ದರು. ಅದರಂತೆ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ  ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವಾರ ಅವರು ವೈಯಕ್ತಿಕ ಸಮಸ್ಯೆಗಳ ಕಾರಣ, ಬಿಸಿನೆಸ್‌ ನಲ್ಲಿ ಸಮಸ್ಯೆ ಆಗಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಕಿಚ್ಚನ ಬಳಿ ಮಾತನಾಡಲು ಆಗಿರಲಿಲ್ಲ. ಈ ಕಾರಣಕ್ಕೆ ಇಂದಿನ ಎಪಿಸೋಡ್‌ ನಲ್ಲಿ ಅವರು ಬಿಗ್‌ಬಾಸ್‌ ಮನೆಯೊಳಗಿದ್ದ ಅನುಭವ ಮತ್ತು ವೇದಿಕೆಯಿಂದ ಗೌರವದಿಂದ ಬೀಳ್ಕೊಡಲು ಕರೆಯಲಾಗಿದೆ.

Tap to resize

Latest Videos

undefined

bigg boss kannada 11 ಐ ಸೀರಿಯಸ್ಲಿ ಲವ್‌ ಯೂ ಭವ್ಯಾ ಎಂದ ತ್ರಿವಿಕ್ರಮ್‌, ಪ್ರೀತಿ ಹೇಳಿಕೊಂಡೇ ಬಿಟ್ಟ ಹೈದ!

ಈ ಸಂಬಂಧ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ್ದು, ಮನೆಯೊಳಗಡೆ ನೀವಿಲ್ಲದೆ ಒಂದು ಜಾಗ ಫುಲ್‌ ಖಾಲಿ ಹೊಡೆಯುತ್ತದೆ ಎಂದು ಕಿಚ್ಚ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಒಳಗಡೆ ಹೋಗು ಅಂದ್ರೆ ಖುಷಿಯಾಗಿ ಹೋಗ್ತಿನಿ ಸರ್‌ ಎಂದಿದ್ದಾರೆ.

ತ್ರಿವಿಕ್ರಮ್‌ ಔಟ್‌!
ಇನ್ನು ಈ ವಾರ ಮನೆಯಿಂದ ಹೊರಹೋಗಲು ತ್ರಿವಿಕ್ರಮ್ , ರಜತ್, ಹನುಮಂತ, ಐಶ್ವರ್ಯಾ ಮತ್ತು ಮೋಕ್ಷಿತಾ ನಾಮಿನೇಟ್‌ ಆಗಿದ್ದರು. ತ್ರಿವಿಕ್ರಮ್ ತಂಡಕ್ಕಾಗಿ ಔಟ್‌ ಆಗಿದ್ದನ್ನು ಶನಿವಾರದ ಎಪಿಸೋಡ್‌ ನಲ್ಲಿ ಪ್ರಶ್ನಿಸಿದ ಕಿಚ್ಚ, ತ್ರಿವಿಕ್ರಮ್ ಅವರೇ ನಿಮಗೆ ಅಷ್ಟೊಂದು ಕಾನ್ಫಿಡೆನ್ಸ್ ಇದೆಯಾ ಉಳಿದುಕೊಳ್ಳುತ್ತೇನೆಂದು ಎಂದರು.

ಸ್ರ್ಪರ್ಧಿಗಳಲ್ಲಿ ಹಲವರಿಗೆ ತ್ರಿವಿಕ್ರಮ್ ಸ್ವಯಂ ನಾಮಿನೇಟ್‌ ಆಗಿದ್ದು ಇಷ್ಟವಿರಲಿಲ್ಲ. ರಜತ್‌ ತ್ಯಾಗರಾಜ ಆಗಬೇಡ ಎಂದು ನೇರವಾಗಿಯೇ ವಿಕ್ರಂಗೆ ಹೇಳಿದ್ದರು. ಕಿಚ್ಚ ಕೂಡ ನಿನ್ನೆಯ ಎಪಿಸೋಡ್‌ ನಲ್ಲಿ ಈ ಸಂಬಂಧ ಕ್ಲಾಸ್‌ ತೆಗೆದುಕೊಂಡಿದ್ದರು.

bigg boss kannada 11 ಹನುಮಂತು ಉತ್ತರಕ್ಕೆ ಸೈಲೆಂಟ್‌ ಆದ ಸುದೀಪ್‌! ಎಂಡ್‌ನಲ್ಲಿ ಕಿಚ್ಚನ ಕ್ಲಾಸ್‌

ಇಂದಿನ ಎಪಿಸೋಡ್‌ನಲ್ಲಿ ಎಲ್ಲರನ್ನೂ ಸೇವ್‌ ಮಾಡಿದ ಕಿಚ್ಚ, ಕೊನೆಗೆ ತ್ರಿವಿಕ್ರಮ್ ಅವರನ್ನು ಎಲಿಮಿನೇಟ್ ಆಗಿದ್ದೀರಿ ಎಂದಿದ್ದಾರೆ. ಮನೆಮಂದಿ ಎಲ್ಲಾ ಶಾಕ್ ಆಗಿರುವುದಂತೂ ಸತ್ಯ. ಮನೆಯ ಮುಖ್ಯದ್ವಾರದವರೆಗೆ ತ್ರಿವಿಕ್ರಮ್‌ ಅವರನ್ನು ಕರೆದು ಫ್ರಾಂಕ್‌ ಮಾಡಿ ಈ ವಾರ ನೋ ಎಲಿಮಿನೇಶನ್‌ ವೀಕ್‌ ಎಂದು ಕಿಚ್ಚ ಬುದ್ಧಿ ಹೇಳಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿರುವ ವಿಚಾರ.

ಇನ್ನು ನಾಲ್ಕು ವಾರದಲ್ಲಿ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಯಾರು ಎಲಿಮಿನೇಟ್‌ ಆಗ್ತಾರೆ. ಯಾರು ಟಾಪ್‌ 5 ನಲ್ಲಿ ಇರುತ್ತಾರೆ. ಯಾರು 50 ಲಕ್ಷ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

click me!