"ಅವರ ತರಲೆ-ಚೇಷ್ಟೆ ನೋಡೋಕೆ ಖುಷಿಯಾಗುತ್ತೆ": BBK 13ನಲ್ಲಿ ತಮಗಿಷ್ಟವಾದ ಸ್ಪರ್ಧಿ ಯಾರೆಂದು ಹೇಳಿದ ಅಶ್ವಿನಿ ಗೌಡ!

Published : Nov 06, 2026, 06:08 PM IST
Bigg Boss Kannada

ಸಾರಾಂಶ

Ashwini Gowda Bigg Boss: ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಪ್ರಸ್ತುತ ಸೀಸನ್ ಹಾಗೂ ಸ್ಪರ್ಧಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ಸೀಸನ್‌ಗಳಿಗೆ ಹೋಲಿಸಿ ಈ ಬಾರಿಯ ಶೋ ಅಷ್ಟಾಗಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ ನೀಡಿರುವ ಅವರು, ಮತ್ತೆ ಬಿಗ್ ಬಾಸ್ ಮನೆಗೆ ಹೋಗುವ ವಿಚಾರ ಹಾಗೂ ಮನೆಯಲ್ಲಿರುವ ಸ್ಪರ್ಧಿಗಳ ಆಟದ ಶೈಲಿ ಕುರಿತು ಹಂಚಿಕೊಂಡಿರುವ ನೈಜ ಅಭಿಪ್ರಾಯ ಇಲ್ಲಿದೆ ನೋಡಿ.

ಬಿಗ್ ಬಾಸ್ ಮನೆಯ ಇತಿಹಾಸವನ್ನು ಗಮನಿಸಿದರೆ, ಕೆಲವು ಸೀಸನ್‌ಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ಅಂತಹ ಸೀಸನ್‌ಗಳಲ್ಲಿ ಅಶ್ವಿನಿ ಗೌಡ, ಗಿಲ್ಲಿ ಹಾಗೂ ರಕ್ಷಿತಾ ಇದ್ದ ಕಳೆದ ಸೀಸನ್ ಕೂಡ ಪ್ರಮುಖವಾದದ್ದು. ಈ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.

ನೇರವಾಗಿ ಉತ್ತರಿಸಿದ ಅಶ್ವಿನಿ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲೇ ಇರುತ್ತವೆ. "ಹಿಂದಿನ ಸೀಸನ್‌ನಲ್ಲಿ ನೀವು ಹಾವಳಿ ಎಬ್ಬಿಸಿದ್ದಿರಿ, ಆದರೆ ಈ ಬಾರಿಯ ಸೀಸನ್ ಅಷ್ಟು ಚೆನ್ನಾಗಿಲ್ಲ ಎಂದು ಹೊರಗಡೆ ವೈರಲ್ ಆಗುತ್ತಿದೆ. ನೀವು ಶೋ ನೋಡ್ತಾ ಇದ್ದೀರಾ?" ಎಂದು ಸಂದರ್ಶನವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಅತ್ಯಂತ ನೇರವಾಗಿ ಉತ್ತರಿಸಿದ್ದಾರೆ.

"ಬಿಗ್ ಬಾಸ್ ನೋಡುವುದೇ ಇಲ್ಲ, ಮತ್ತೆ ಹೋಗುವುದೂ ಇಲ್ಲ"

ತಮ್ಮ ಶೋ ವೀಕ್ಷಣೆಯ ಅಭ್ಯಾಸದ ಬಗ್ಗೆ ಮಾತನಾಡಿದ ಅಶ್ವಿನಿ ಗೌಡ, "ನಾನು ಈ ಹಿಂದೆಯೂ ಟಿವಿಯಲ್ಲಿ ಬಿಗ್ ಬಾಸ್ ನೋಡಿದವಳಲ್ಲ, ಮೊಬೈಲ್‌ನಲ್ಲಿ ಬರುವ ತುಣುಕುಗಳನ್ನು ಮಾತ್ರ ನೋಡುತ್ತಿದ್ದೆ. ಹಾಗಾಗಿ ಸ್ಪರ್ಧಿಗಳ ಮುಖ ಪರಿಚಯವಿತ್ತೇ ವಿನಃ ಬಿಗ್ ಬಾಸ್ ಮನೆ ಹೇಗಿರುತ್ತದೆ ಎಂಬುದು ನನಗೇ ಗೊತ್ತಿರಲಿಲ್ಲ. ನನ್ನ ಸೀಸನ್ ಮುಗಿದು ಬಂದ ಮೇಲೂ ನಾನು ನನ್ನ ಎಪಿಸೋಡ್‌ಗಳನ್ನು ನೋಡಲಿಲ್ಲ. ಇನ್ನು ಈಗಿನ ಸೀಸನ್ ಅಂತೂ ನೋಡ್ತಾನೇ ಇಲ್ಲ" ಎಂದಿದ್ದಾರೆ. ಮುಂದುವರಿದು, ಜನರು 'ನೀವು ಇದ್ದಾಗ ಸೀಸನ್ ಚೆನ್ನಾಗಿತ್ತು' ಎನ್ನುತ್ತಾರೆ. ಹಾಗಂತ ಮತ್ತೆ ಬಿಗ್ ಬಾಸ್‌ಗೆ ಹೋಗುವ ಆಸೆ ಇದೆಯಾ ಎಂದರೆ, "ಖಂಡಿತ ಇಲ್ಲ (No), ಒಂದು ಸಲ ಹೋಗಿ ಬಂದಿದ್ದು ಸಾಕು" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಹೋಲಿಕೆ ಮಾಡುವುದು ತಪ್ಪು

ಹಳೆಯ ಸೀಸನ್‌ಗೆ ಪ್ರಸ್ತುತ ಸೀಸನ್ ಅನ್ನು ಹೋಲಿಸುವುದರ ಬಗ್ಗೆ ಮಾತನಾಡಿದ ಅವರು, "ಎಲ್ಲವೂ ಒಂದೇ ರೀತಿ ಇರಲು ಸಾಧ್ಯವಿಲ್ಲ, ಕಾಲಘಟ್ಟಕ್ಕೆ ತಕ್ಕಂತೆ ಶೋ ಬದಲಾಗುತ್ತಾ ಹೋಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಅಶ್ವಿನಿ ಗೌಡನೇ ಬೇರೆ, ಗಿಲ್ಲಿನೇ ಬೇರೆ, ರಕ್ಷಿತಾನೇ ಬೇರೆ. ಹಾಗಾಗಿ ನಮ್ಮ ತರಹದ ಸೀಸನ್ ಅನ್ನೇ ಎಲ್ಲ ಕಾಲಕ್ಕೂ ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲರಲ್ಲೂ ಟ್ಯಾಲೆಂಟ್ ಇದೆ, ಆದರೆ ಸ್ಪರ್ಧಿಗಳು ಸಂಪೂರ್ಣವಾಗಿ ಓಪನ್ ಅಪ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದಿದ್ದಾರೆ.

ಇವರ ಚೇಷ್ಟೆಗೆ ಮೆಚ್ಚುಗೆ

ಪ್ರಸ್ತುತ ಮನೆಯಲ್ಲಿರುವವರಲ್ಲಿ ಯಾರಾದರೂ ಇಷ್ಟವಾದರಾ ಎಂಬ ಪ್ರಶ್ನೆಗೆ, "ಇರುವವರಲ್ಲಿ 'ಶೆಟ್ಟಿ ಡಾನ್' ಅವರ ತರಲೆಗಳು ಮತ್ತು ಚೇಷ್ಟೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತದೆ. ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ ಅನ್ಸುತ್ತೆ" ಎಂದು ಅವರ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಅಂತಿಮವಾಗಿ, "ಈ ಬಾರಿಯ ಸೀಸನ್ ಕೂಡ ಮುಂಬರುವ ದಿನಗಳಲ್ಲಿ ಪ್ರೇಕ್ಷಕರನ್ನು ರಂಜಿಸಿ, ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ" ಎಂದು ಅಶ್ವಿನಿ ಗೌಡ ಶುಭ ಹಾರೈಸಿದ್ದಾರೆ.

ಒಟ್ಟಾರೆ ಹಳೆಯ ಸೀಸನ್‌ಗಳನ್ನು ನೆನೆದು ಇಂದಿನ ಶೋವನ್ನು ಅಲ್ಲಗಳೆಯುವ ಬದಲು, ಹೊಸಬರಿಗೆ ಸಮಯ ನೀಡಿ ಅವರ ಪ್ರತಿಭೆಯನ್ನು ಗುರುತಿಸಬೇಕು. ಜಗಳಗಳಷ್ಟೇ ಅಲ್ಲದೆ, ‘ಶೆಟ್ಟಿ ಡಾನ್’ ಅವರಂತಹ ಸ್ಪರ್ಧಿಗಳು ನೀಡುವ ಆರೋಗ್ಯಕರ ನಗುವೂ ಶೋ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದನ್ನು ಅಶ್ವಿನಿ ಗೌಡ ಅವರು ಅತ್ಯಂತ ಅರ್ಥಪೂರ್ಣವಾಗಿ ಬಿಡಿಸಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾಮಾಯಣ'ದಲ್ಲಿ ಅವಕಾಶ ಸಿಕ್ಕರೆ ಭವ್ಯ ಗೌಡ ಆಯ್ಕೆ ಮಾಡಿಕೊಳ್ಳುವ ಪಾತ್ರ ಯಾವುದು ಗೊತ್ತಾ? ನಟಿಯ ಉತ್ತರ ವೈರಲ್
ಗೌತಮ್‌ ಮಾಸ್ಟರ್ ಪ್ಲಾನ್‌ಗೆ ಮಕ್ಕರ್ ಆದ್ರು ಜೈದೇವ್-ಶಕುಂತಲಾ; ಇದಪ್ಪಾ ಕ್ಲೈಮ್ಯಾಕ್ಸ್