
ಬಿಗ್ ಬಜೆಟ್ ಚಿತ್ರ ರಾಮಾಯಣ ಪ್ರಚಾರದ ಸಂದರ್ಭದಲ್ಲಿ ಜುಜು ಗ್ರೀನ್ ಅವರೊಂದಿಗಿನ ಅಂತರರಾಷ್ಟ್ರೀಯ ಮಟ್ಟದ ಸಂದರ್ಶನದಲ್ಲಿ ನಟ ಯಶ್ ಅವರು ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಡಾ.ರಾಜ್ಕುಮಾರ್ ಅವರ ಸಿನಿಮಾಗಳನ್ನು ಹೆಮ್ಮೆಯಿಂದ ಪ್ರಸ್ತಾಪಿಸಿದ್ದಾರೆ. ತಮ್ಮ ಆಲೋಚನೆಯ ದಿಕ್ಕನ್ನೇ ಬದಲಾಯಿಸಿದ ಆ ಎರಡು ಚಿತ್ರಗಳನ್ನು ಇಲ್ಲಿ ಹೆಸರಿಸಿದ್ದಾರೆ. ಅಷ್ಟೇ ಅಲ್ಲ ನನ್ನ ಜೀವನದ ಗತಿ ಬದಲಾಯಿಸಿದ ಅಣ್ಣಾವ್ರ ಎರಡು ಚಿತ್ರಗಳು ಎಂದು ಡಾ.ರಾಜ್ಕುಮಾರ್ ಅವರ ಎರಡು ಕ್ಲಾಸಿಕ್ ಚಿತ್ರವನ್ನು ಹೆಸರಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಜುಜು ಗ್ರೀನ್ ನಡೆಸಿದ ಅಂತರಾಷ್ಟ್ರೀಯ ಸಂದರ್ಶನದಲ್ಲಿ ನಿಮ್ಮ ಯೋಚನಾ ಲಹರಿ ಬದಲಾಯಿಸಿದ, ನಿಮಗೆ ಪಾಠ ಕಲಿಸಿದ ಸಿನಿಮಾಗಳು ಯಾವುವು ಎಂಬ ಪ್ರಶ್ನೆಗೆ ಯಶ್ ಅವರು ತಕ್ಷಣವೇ ಹೆಸರಿಸಿದ್ದು ಅಣ್ಣಾವ್ರ ಎರಡು ಕ್ಲಾಸಿಕ್ ಚಿತ್ರಗಳನ್ನು. ಒಂದು ಡಾ. ರಾಜ್ಕುಮಾರ್ ಅವರ 150ನೇ ಚಿತ್ರವಾದ 'ಗಂಧದ ಗುಡಿ'ಯನ್ನು ನೆನೆದ ಯಶ್, ಅದರಲ್ಲಿ ಅಣ್ಣಾವ್ರು ಫಾರೆಸ್ಟ್ ಆಫೀಸರ್ ಪಾತ್ರದ ಮೂಲಕ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶ ನೀಡಿದ್ದನ್ನು ಗೌರವದಿಂದ ಸ್ಮರಿಸಿದ್ದಾರೆ. ಮತ್ತೊಂದು ಶಂಕರ್ ನಾಗ್ ನಿರ್ದೇಶನದ ಕೊನೆಯ ಚಿತ್ರವಾದ 'ಒಂದು ಮುತ್ತಿನ ಕಥೆ' ಚಿತ್ರವನ್ನು ಯಶ್ ಉಲ್ಲೇಖಿಸಿದ್ದಾರೆ. 58ನೇ ವಯಸ್ಸಿನಲ್ಲಿ ಡಾ.ರಾಜ್ಕುಮಾರ್ ಅವರು ಸಾಗರದಾಳದಲ್ಲಿ ಮಾಡಿದ ಅಂಡರ್ವಾಟರ್ ಫೈಟ್ ಸೀಕ್ವೆನ್ಸ್ ಇಂದಿಗೂ ತಮಗೆ ಸ್ಪೂರ್ತಿ ಎಂಬುದನ್ನು ಹಂಚಿಕೊಂಡಿದ್ದಾರೆ.
ಅಣ್ಣಾವ್ರ ಈ ಸಿನಿಮಾಗಳು ಕೇವಲ ಮನರಂಜನೆಯಷ್ಟೇ ಅಲ್ಲದೆ, ಪ್ರೇಕ್ಷಕರಲ್ಲಿ ಮತ್ತು ವೈಯಕ್ತಿಕವಾಗಿ ತಮ್ಮಲ್ಲಿ ಸಿನಿಮಾ ಮೇಕಿಂಗ್ ಹಾಗೂ ಕಥೆಗಳ ಬಗ್ಗೆ ಹೊಸ ದೃಷ್ಟಿಕೋನ ಹುಟ್ಟುಹಾಕಿದವು ಎಂದು ಯಶ್ ಮನದಾಳದ ಮಾತುಗಳನ್ನು ಆಡಿದ್ದಾರೆ. 80ರ ದಶಕದಲ್ಲೇ ತಾಂತ್ರಿಕವಾಗಿ ಅತ್ಯಂತ ಮುನ್ನಡೆದಿದ್ದ ಒಂದು ಮುತ್ತಿನ ಕಥೆ ಚಿತ್ರದ ಮೇಕಿಂಗ್, ಯಶ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನು ಯೋಚಿಸಲು ಮತ್ತು ದೊಡ್ಡ ಮಟ್ಟದ ಸಾಹಸ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂಬುದನ್ನು ಈ ಸಂದರ್ಶನ ಹೈಲೈಟ್ ಮಾಡುತ್ತದೆ.
ಡಾ. ರಾಜ್ಕುಮಾರ್ ಅವರು ತಮ್ಮ 58ನೇ ವಯಸ್ಸಿನಲ್ಲೂ ರಿಸ್ಕ್ ತೆಗೆದುಕೊಂಡು ಅಂಡರ್ವಾಟರ್ ಫೈಟ್ ಮಾಡಿದ್ದನ್ನು ಯಶ್ ನೆನಪಿಸಿಕೊಂಡಿರುವುದು, ಒಬ್ಬ ನಟನಿಗೆ ವಯಸ್ಸು ಕೇವಲ ಸಂಖ್ಯೆ ಮತ್ತು ಸಿನಿಮಾ ಮೇಲಿರುವ ಬದ್ಧತೆಯೇ ಮುಖ್ಯ ಎಂಬುದನ್ನು ಇಂದಿನ ಪೀಳಿಗೆಗೆ ಸಾರುವಂತಿದೆ. ಜಾಗತಿಕ ವೇದಿಕೆಯಲ್ಲಿ ಕನ್ನಡದ ಲೆಜೆಂಡ್ಗಳ ಅನಾವರಣ: ಯಶ್ ಅವರು ಕೇವಲ ತಮ್ಮ ಹೊಸ ಚಿತ್ರದ ಬಗ್ಗೆ ಮಾತ್ರ ಮಾತನಾಡದೆ, ಜಾಗತಿಕ ಮಟ್ಟದ ಸಂದರ್ಶನದಲ್ಲಿ ಡಾ. ರಾಜ್ಕುಮಾರ್ ಮತ್ತು ಶಂಕರ್ ನಾಗ್ ಅವರಂತಹ ಕನ್ನಡದ ದಿಗ್ಗಜರನ್ನು ಜಗತ್ತಿಗೆ ಪರಿಚಯಿಸಿರುವುದು ಅವರ ಸಿನಿಮಾ ಪ್ರೀತಿ ಮತ್ತು ಭಾಷಾಭಿಮಾನಕ್ಕೆ ಸಾಕ್ಷಿಯಾಗಿದೆ.
80ರ ದಶಕದಲ್ಲೇ ತಾಂತ್ರಿಕವಾಗಿ ಅತ್ಯಂತ ಮುನ್ನಡೆದಿದ್ದ ಒಂದು ಮುತ್ತಿನ ಕಥೆ ಚಿತ್ರದ ಮೇಕಿಂಗ್, ಯಶ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನು ಯೋಚಿಸಲು ಮತ್ತು ದೊಡ್ಡ ಮಟ್ಟದ ಸಾಹಸ ದೃಶ್ಯ ಕಲ್ಪಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂಬುದನ್ನು ಈ ಸಂದರ್ಶನ ಹೈಲೈಟ್ ಮಾಡುತ್ತದೆ. ಡಾ. ರಾಜ್ಕುಮಾರ್ ಅವರು ತಮ್ಮ 58ನೇ ವಯಸ್ಸಿನಲ್ಲೂ ರಿಸ್ಕ್ ತೆಗೆದುಕೊಂಡು ಅಂಡರ್ವಾಟರ್ ಫೈಟ್ ಮಾಡಿದ್ದನ್ನು ಯಶ್ ನೆನಪಿಸಿಕೊಂಡಿರುವುದು, ಒಬ್ಬ ನಟನಿಗೆ ವಯಸ್ಸು ಕೇವಲ ಸಂಖ್ಯೆ ಮತ್ತು ಸಿನಿಮಾ ಮೇಲಿರುವ ಬದ್ಧತೆಯೇ ಮುಖ್ಯ ಎಂಬುದನ್ನು ಇಂದಿನ ಪೀಳಿಗೆಗೆ ಸಾರುವಂತಿದೆ.
ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ಕ್ಲಾಸಿಕ ಚಿತ್ರ ಹೆಸರಿಸಲು ಪ್ರಾರಂಭಿಸಿದಂತೆ ಜುಜು ಗ್ರೀನ್ ನೀವು ಈಗ ಹೆಸರಿಸಿದ ಮತ್ತು ನೀವು ಇಷ್ಟ ಪಡುವ ಎಲ್ಲ ಚಿತ್ರಗಳ ಲಿಸ್ಟ್ ನನಗೂ ನೀಡಿ, ನಾನು ಆ ಚಿತ್ರಗಳನ್ನು ನೋಡುತ್ತೇನೆ, ಹಾಗೂ ಅವುಗಳ ಕುರಿತು ಟಿಕ್ ಟಾಕ್ ಅಲ್ಲಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಯಶ್ ಅವರು ಕೇವಲ ತಮ್ಮ ಹೊಸ ಚಿತ್ರದ ಬಗ್ಗೆ ಮಾತ್ರ ಮಾತನಾಡದೆ, ಜಾಗತಿಕ ಮಟ್ಟದ ಸಂದರ್ಶನದಲ್ಲಿ ಡಾ. ರಾಜ್ಕುಮಾರ್ ಮತ್ತು ಶಂಕರ್ ನಾಗ್ ಅವರಂತಹ ಕನ್ನಡದ ದಿಗ್ಗಜರನ್ನು ಜಗತ್ತಿಗೆ ಪರಿಚಯಿಸಿರುವುದು ಅವರ ಸಿನಿಮಾ ಪ್ರೀತಿ ಮತ್ತು ಭಾಷಾಭಿಮಾನಕ್ಕೆ ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.