ಕುಂಕುಮ, ಅರಿಶಿಣ, ಮೆಹಂದಿ, ಶಾದಿ... ಎಂದು ರೀಲ್ಸ್​ ಮಾಡಿ ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಸೀತಾರಾಮ ಅಶೋಕ!

Published : Jul 24, 2024, 03:36 PM IST
ಕುಂಕುಮ, ಅರಿಶಿಣ, ಮೆಹಂದಿ, ಶಾದಿ... ಎಂದು ರೀಲ್ಸ್​ ಮಾಡಿ ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಸೀತಾರಾಮ ಅಶೋಕ!

ಸಾರಾಂಶ

ಸೀತಾರಾಮ ಸೀರಿಯಲ್​ನಲ್ಲಿ ಅಶೋಕ್​ ಪಾತ್ರಧಾರಿಯಾಗಿರುವ ಅಶೋಕ ಶರ್ಮಾ  ಅವರು ದಿಯಾ ಎನ್ನುವವರ ಜೊತೆ ರೀಲ್ಸ್​ ಮಾಡಿ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.  

ಸೀತಾರಾಮ ಸೀರಿಯಲ್​ನಲ್ಲಿ ಪ್ರಿಯಾ ಪತಿ ಅಶೋಕ್​ ಮಲೇಷಿಯಾ ಟೂರ್​ನಲ್ಲಿದ್ದಾನೆ. ಅತ್ತ ಪ್ರಿಯಾ ತಾನು ಗರ್ಭಿಣಿ ಎಂದು ತಿಳಿದು ಸಂತೋಷದಲ್ಲಿ ತೇಲಾಡುತ್ತಿದ್ದಳು. ಪತಿ ಅಶೋಕ್​ಗೆ ವಿಷಯ ಹೇಳುವುದು ಒಂದು ಬಾಕಿ ಇತ್ತಷ್ಟೇ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಿಯಾ ಗರ್ಭಿಣಿ ಅಲ್ಲ ಎನ್ನುವ ಸತ್ಯ ಗೊತ್ತಾಗಿದೆ. ಇದು ಪ್ರಿಯಾಳ ಕಥೆಯಾದರೆ ಇತ್ತ ಅಶೋಕ್​ ಮಲೇಷಿರ್ಯ ಟೂರ್​ ನೆಪದಲ್ಲಿ ಇದೇನು ಮಾಡ್ತಿದ್ದಾನೆ? ಸೀತಾರಾಮ ಅಶೋಕನನ್ನು  ಪ್ರೀತಿಯಿಂದಲೇ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ದಿಯಾ ಎನ್ನುವವರ ಜೊತೆ ಅಶೋಕ್​ ಪಾತ್ರಧಾರಿಯಾಗಿರುವ, ನಿಜ ಜೀವನದಲ್ಲಿಯೂ ಅಶೋಕ್​ ಹೆಸರೇ ಇರುವ ಅಶೋಕ್​ ಅವರು ರೀಲ್ಸ್​ ಮಾಡಿದ್ದಾರೆ. ಮದುವೆಯ ಶಾಸ್ತ್ರಗಳ ಬಗ್ಗೆ ಅದರಲ್ಲಿ ತಿಳಿಸಲಾಗಿದ್ದು, ಮದುವೆಯ ಸಂಪ್ರದಾಯದ ಒಂದೊಂದು ದಿನ ಒಂದೊಂದು ಬಟ್ಟೆ ತೊಟ್ಟು ರೀಲ್ಸ್​ ಮಾಡಿದ್ದು ಅದರ ವಿಡಿಯೋ ವೈರಲ್​ ಆಗಿದೆ.

ಅಷ್ಟಕ್ಕೂ ಈ ರೀಲ್ಸ್​ನ ವಿಶೇಷತೆ ಏನು ಎನ್ನುವುದು ತಿಳಿಯಲಿಲ್ಲ. ಅಶೋಕ್​ ಅವರ ಮದುವೆ ನಡೆಯುತ್ತಿದೆಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಅತ್ತ ಪ್ರಿಯಾಳನ್ನು ಬಿಟ್ಟು ಬಂದು ಇಲ್ಲಿ ಬೇರೊಬ್ಬರ ಜೊತೆ ಇದ್ದೀರಾ ಎಂದು ನಟನ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಈ ರೀಲ್ಸ್​ನಲ್ಲಿ  ಅಶೋಕ್​ ಅವರು, ಮದುವೆ ಶಾಸ್ತ್ರಗಳಾದ ಕುಂಕುಮ, ಅರಿಶಿಣ,  ಮೆಹಂದಿ, ಸಂಗೀತ, ಶಾದಿ ಎನ್ನುವ ಟ್ಯಾಗ್​ಲೈನ್​  ಕೊಟ್ಟು ಈ ವಿಡಿಯೋ ಶೇರ್​ ಮಾಡಿದ್ದಾರೆ. ಇದರ ಬಗ್ಗೆ ಅಭಿಮಾನಿಗಳಿಗೆ ಗೊಂದಲ ಉಂಟಾಗಿದ್ದು, ಅಶೋಕ್​ ಅವರು ಮದ್ವೆಯಾಗ್ತಿದ್ದಾರಾ? ಏಕಾಏಕಿ ಸೀರಿಯಲ್​ನಿಂದ ಕಣ್ಮರೆಯಾಗಲು ಕಾರಣವೇನು ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.

ನಗುವ... ನಯನ... ಎಂದ ಪ್ರಿಯಾ-ಅಶೋಕ್​: ರಸಕಾವ್ಯ ತೋರಿಸಿ ಮತ್ತೆ ಎಂದ ನೆಟ್ಟಿಗರು

ಹಲವರು, ನೀವು ಇಲ್ಲದೇ ಸೀರಿಯಲ್​  ನೋಡಲು ಬೋರ್​, ಬೇಗ ವಾಪಸ್​ ಬನ್ನಿ ಎನ್ನುತ್ತಿದ್ದಾರೆ. ಅಂದಹಾಗೆ, ಸೀತಾರಾಮ ಸೀರಿಯಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು  ಅಶೋಕ್​ ಮತ್ತು ಪ್ರಿಯಾ ಪಾತ್ರ. ಸ್ನೇಹಿತ ರಾಮ್​ಗಾಗಿ ಪ್ರಾಣವನ್ನೂ ಕೊಡಲು ಸಿದ್ಧನಿರೋ ಗೆಳೆಯ ಅಶೋಕ್​ ಪಾತ್ರ ಮತ್ತು ಅವನ ಪತ್ನಿಯಾದ ಪ್ರಿಯಾ ಪಾತ್ರ ಬಹಳ ಮೆಚ್ಚುಗೆ ಗಳಿಸಿದೆ. ಸೀತಾರಾಮ ಸೀರಿಯಲ್​ನಲ್ಲಿ ರಾಮ್​ ಮತ್ತು ಸೀತಾಳ ಮದುವೆಗೆ ನೂರೆಂಟು ವಿಘ್ನಗಳು ಬಂದರೂ ಅಶೋಕ್​  ಮತ್ತು ಪ್ರಿಯಾ ಮದುವೆಯಾಗಿ ಎಷ್ಟೋ ದಿನಗಳಾಗಿ ಹೋಗಿವೆ. ಈಗ ಅವರ ಸಹಾಯದಿಂದ ರಾಮ್​ ಮತ್ತು ಸೀತಾ  ಮದುವೆಯೂ ನಿರ್ವಿಘ್ನವಾಗಿ ನಡೆದಿದೆ. ಅಶೋಕ್ ಮತ್ತು ಪ್ರಿಯಾ ಇಬ್ಬರೂ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗಾಗ್ಗೆ ರೀಲ್ಸ್​ ಮಾಡುತ್ತಿರುತ್ತಾರೆ. 

ಅಂದಹಾಗೆ ಅಶೋಕ್​ ಅವರ ನಿಜವಾದ ಹೆಸರು ಕೂಡ ಅಶೋಕ್​ ಶರ್ಮಾ ಆಗಿದೆ. ಅಶೋಕ್ ಅವರ ನಿಜವಾದ ಹೆಸರು ಅಶೋಕ್​ ಶರ್ಮಾ. ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ. ಇವರಿಗೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದ್ದರಿಂದ ಈಗ ಈ ರೀತಿ ಮದುವೆಯ ಶಾಸ್ತ್ರಗಳ ಬಗ್ಗೆ ರೀಲ್ಸ್​ ಮಾಡಿ ಒಂದು ಮದುವೆಗೆ ಹೋಗಿದ್ದೆ ಎಂದಷ್ಟೇ ಕ್ಯಾಪ್ಷನ್​ ಕೊಡುವ ಮೂಲಕ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. 

ಚಂದನ್​ ಶೆಟ್ಟಿ ವಿರುದ್ಧ ಅಂದು ಹಾಗೆ ಮಾತಾಡಿದ್ದೇ ನನಗೆ ದೊಡ್ಡ ಬ್ರೇಕ್​ ಕೊಟ್ಟಿತು! Rapper ರಾಹುಲ್​ ಓಪನ್​ ಮಾತು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!