ಒತ್ತು ಶ್ಯಾವಿಗೆ ವೀಡಿಯೋ ಪೋಸ್ಟ್ ಮಾಡಿದ ಸುಧಾರಾಣಿ, ಭಾಗ್ಯಲಕ್ಷ್ಮಿ ಸೀರಿಯಲ್ ಪ್ರಭಾವನಾ ಕೇಳಿದ ಫ್ಯಾನ್ಸ್!

Published : Jul 24, 2024, 02:16 PM IST
ಒತ್ತು ಶ್ಯಾವಿಗೆ ವೀಡಿಯೋ ಪೋಸ್ಟ್ ಮಾಡಿದ ಸುಧಾರಾಣಿ, ಭಾಗ್ಯಲಕ್ಷ್ಮಿ ಸೀರಿಯಲ್ ಪ್ರಭಾವನಾ ಕೇಳಿದ ಫ್ಯಾನ್ಸ್!

ಸಾರಾಂಶ

ಸ್ಯಾಂಡಲ್ವುಡ್ ನಟಿ ಸುಧಾರಾಣಿ ನಟನೆಯಲ್ಲಿ ಮಾತ್ರವಲ್ಲ ಅಡುಗೆಯಲ್ಲೂ ಎತ್ತಿದ ಕೈ. ಬಿಡುವು ಸಿಕ್ಕಾಗ ಅಡುಗೆ ಮಾಡುವ ಸುಧಾರಾಣಿ ಈ ಬಾರಿ ಒತ್ತು ಶಾವಿಗೆ ಮಾಡಿದ್ದಾರೆ. ಅವರ ವಿಡಿಯೋ ನೋಡಿದ ವೀಕ್ಷಕರು ಭಾಗ್ಯಲಕ್ಷ್ಮಿ ಧಾರಾವಾಹಿ ನೆನಪಿಸಿಕೊಂಡಿದ್ದಾರೆ.   

ಚಂದನವನದ ಸುಂದರಿ ಸುಧಾರಾಣಿ, ಭಾಗ್ಯಲಕ್ಷ್ಮಿ ಧಾರಾವಾಹಿ ಒತ್ತು ಶಾವಿಗೆಗೆ ಪ್ರಭಾವಿತರಾದಂತಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಧಾರಾಣಿ ಆಗಾಗ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಈಗ ಒತ್ತು ಶಾವಿಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು, ಏನ್ ಮೇಡಂ, ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರಭಾವನಾ ಅಂತ ಕೇಳಿದ್ದಾರೆ. 

ಅಭಿಮಾನಿ (Fan)ಗಳು ಸುಧಾರಾಣಿ (Sudharani) ಗೆ ಈ ಪ್ರಶ್ನೆ ಕೇಳಲು ಕಾರಣವಿದೆ. ಭಾಗ್ಯಲಕ್ಷ್ಮಿ (Bhagyalakshmi) ಗೂ, ಸುಧಾರಾಣಿ ಒತ್ತು ಶಾವಿಗೆಗೂ ಏನು ಸಂಬಂಧ ಅನ್ನೋದು, ಧಾರಾವಾಹಿ ನೋಡ್ತಿರುವ ವೀಕ್ಷಕರಿಗೆ ಗೊತ್ತು. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಒತ್ತು ಶಾವಿಗೆ ಹಾಗೂ ಮಾವಿನ ಹಣ್ಣಿನ ರಸಾಯನದ್ದೇ ಎಪಿಸೋಡ್ ನಡೆದಿದೆ. 

ಸುಂದರ ಕಾಲಿದ್ದರೆ ನಟ ಸಾಕಿಬ್​ ಸಲೀಂನನ್ನು ಇಂಪ್ರೆಸ್​ ಮಾಡ್ಬೋದು! ಸೋನಾಕ್ಷಿ ಮಾತು ಸಕತ್​ ಟ್ರೋಲ್​

ಆ ಧಾರಾವಾಹಿಯಲ್ಲಿ ಅದಕ್ಕೆ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್ ಅಂತ ಹೆಸರಿಡಲಾಗಿದೆ. ಫೈವ್ ಸ್ಟಾರ್ ಹೊಟೇಲ್ ನಲ್ಲಿ ಒತ್ತು ಶಾವಿಗೆ ಮಾಡಿ ಭಾಗ್ಯ ಕೆಲಸ ಗಿಟ್ಟಿಸಿಕೊಂಡ್ರೆ ಅವರ ಅತ್ತೆ ಕುಸುಮಾ ಕೆಲಸ ಕಳೆದುಕೊಂಡಿದ್ದಾಳೆ. ಇದನ್ನು ನೋಡ್ತಿರೋ ವೀಕ್ಷಕರು, ಸುಧಾರಾಣಿ ವಿಡಿಯೋ ನೋಡಿ ಅದಕ್ಕೆ ಇದನ್ನು ಲಿಂಕ್ ಮಾಡಿದ್ದಾರೆ. 

ನಟಿ ಸುಧಾರಾಣಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒತ್ತು ಶಾವಿಗೆ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಕ್ಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳುವ ಸುಧಾರಾಣಿ ನಂತ್ರ ಅದನ್ನು ಶಾವಿಗೆ ಮಟ್ಟಿನಲ್ಲಿ ಹಾಕಿ, ಶಾವಿಗೆ ಒತ್ತುತ್ತಾರೆ. ಇನ್ನೊಂದು ಕಡೆ ತರಕಾರಿ ಬೇಯುತ್ತಿರೋದನ್ನು ನೀವು ನೋಡ್ಬಹುದು. ಈ ವಿಡಿಯೋ ಹಾಕಿರುವ ಸುಧಾರಾಣಿ, ಎಷ್ಟೇ ಯಶಸ್ವಿಯಾಗಿದ್ದರೂ, ಮನೆಯಲ್ಲಿ ಹೆಂಗಸರೇ ಏಕೆ ಅಡುಗೆ ಮಾಡಬೇಕೆಂದು ಅಮ್ಮನ ಬಳಿ ನಾನು ಯಾವಾಗಲೂ ಜಗಳವಾಡುತ್ತಿದ್ದೆ !!  ಇದು ವಯಸ್ಸು, ಲಿಂಗ ಮತ್ತು ವೃತ್ತಿಯನ್ನು ಲೆಕ್ಕಿಸದೆ ಜೀವನದಲ್ಲಿ ಕಲಿಯಬೇಕಾದ ಕೌಶಲ್ಯ ಎಂದು ಅವರು ಹೇಳುತ್ತಿದ್ದರು ಎಂದು ಸುಧಾರಾಣಿ ಶೀರ್ಷಿಕೆ ಹಾಕಿದ್ದಾರೆ.

ಒತ್ತು ಶಾವಿಗೆ ನೋಡಿದ ಅಭಿಮಾನಿಗಳ ಬಾಯಲ್ಲಿ ನೀರು ಬಂದಿದೆ. ವಾವ್, ಸೂಪರ್, ನಮಗೂ ಕಳಿಸಿ ಅಂತ ಅನೇಕರು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರಿಗೆ ಸುಧಾರಾಣಿ ಶೀರ್ಷಿಕೆ ಇಷ್ಟವಾಗಿದೆ. ನಿಮ್ಮ ಅಮ್ಮನಂತೆ ನಮ್ಮ ಅಜ್ಜಿ ನಮಗೆ ಈ ಸಲಹೆ ನೀಡಿದ್ರೂ ಅಂತ ಅಭಿಮಾನಿಯೊಬ್ಬರು ಹೇಳಿದ್ದಾರೆ. ಕೆಲ ಅಪ್ಪಂದಿರು ಅಡುಗೆ ಮಾಡೋದ್ರಲ್ಲಿ ಆಸಕ್ತಿ ಹೊಂದಿರುತ್ತಾರೆ ಅಂತ ಇನ್ನೊಬ್ಬರು ಬರೆದಿದ್ದಾರೆ. ಸುಧಮ್ಮ ನಿಮ್ಮ ಅಡುಗೆ ನಮಗೆ ತುಂಬಾ ಇಷ್ಟ ಅಂತ ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ನಮಗೂ ಕಳುಹಿಸಿ ಅಂತ ಹೇಳಿದವರು ಸಾಕಷ್ಟು ಮಂದಿ.

ಸುಧಾರಾಣಿ ತಮ್ಮ ಅಡುಗೆ ವಿಡಿಯೋವನ್ನು ಆಗಾಗ ಹಂಚಿಕೊಳ್ತಿರುತ್ತಾರೆ. ಈ ಹಿಂದೆ ಕೂಡ ತೆಂಗಿನಕಾಯಿ ತುರಿಯುವ ವಿಡಿಯೋ ಹಂಚಿಕೊಂಡಿದ್ದರು. ಡಾನ್ಸ್ ವಿಡಿಯೋ ಜೊತೆ ಮನೆ, ಮಕ್ಕಳು, ಸ್ನೇಹಿತರ ವಿಡಿಯೋಗಳನ್ನು ಸುಧಾರಾಣಿ ಹಂಚಿಕೊಳ್ತಿರುತ್ತಾರೆ. ಸೋಮವಾರ ಎರಡು ತರಹದ ವ್ಯಕ್ತಿಗಳಿರ್ತಾರೆ, ಒಬ್ಬರು ಕೆಲಸದ ಮೂಡ್ ನಲ್ಲಿದ್ರೆ ಮತ್ತೊಬ್ಬರು ಸಂಡೇ ಮೂಡ್ ನಲ್ಲಿಯೇ ಇರ್ತಾರೆ ಅಂತ ಒಂದು ಫೋಟೋವನ್ನು ಇತ್ತೀಚಿಗೆ ಸುಧಾರಾಣಿ ಹಂಚಿಕೊಂಡಿದ್ದರು. 

ತಾಂಡವ್​ಗೆ ಶ್ರೇಷ್ಠಾ ಮಾಡಿದ ಫೋನ್​ ರಿಸೀವ್​ ಮಾಡಿದ ಭಾಗ್ಯ! ಆಗೋಯ್ತು ಬಾಂಬ್​ ಬ್ಲಾಸ್ಟ್​...

ಸದ್ಯ ಸುಧಾರಾಣಿ ಶ್ರಿರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದ್ರ ಜೊತೆ ಕೆಲ ಸಿನಿಮಾಗಳಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸುಧಾರಾಣಿ, ಶಿವರಾಜ್ ಕುಮಾರ್ ಮಗಳು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಫೈರ್ ಪ್ಲೈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ನಟನ ತಾಯಿ ಪಾತ್ರದಲ್ಲಿ ಅವರು ಮಿಂಚಲಿದ್ದಾರೆ. ವೃತ್ತಿ ಜೊತೆ ವೈಯಕ್ತಿಕ ಜೀವನವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅವರು ಎಲ್ಲರಿಗೆ ಸ್ಫೂರ್ತಿ ನೀಡುವ ನಟಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ