ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಕಾಣಿಸಿಕೊಂಡಿರೋ ಆರ್ಯವರ್ಧನ್ ಗುರೂಜಿ ಉಪೇಂದ್ರರ ಗೆಟಪ್ನಲ್ಲಿ ಕಾಣಿಸಿಕೊಂಡು ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡಿಗೆ ಡಾನ್ಸ್ ಮಾಡಿದ್ದಾರೆ.
ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಫೇಮಸ್ ಆದವರು ಆರ್ಯವರ್ಧನ್ ಗುರೂಜಿ. ಗುರೂಜಿ ಎನಿಸಿಕೊಂಡವರು ವೇದಿಕೆಯ ಮೇಲೆ ಡಿಸ್ಕೊ ಡಾನ್ಸ್ ಮಾಡಿದ್ರೆ ಹೇಗಿರುತ್ತೆ ಎನ್ನುವ ಕುತೂಹಲ ಇರೋರಿಗೆ ಇದಾಗಲೇ ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ಇವರು ಉತ್ತರ ಕೊಟ್ಟಿದ್ದಾರೆ. ಸಂಖ್ಯಾಶಾಸ್ತ್ರದ ಮೂಲಕ ನಂಬರ್‌ನಿಂದಲೇ ಭವಿಷ್ಯ ನುಡಿಯುವ ಗುರೂಜಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿಯೂ ‘ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ, ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ.
ಇದೀಗ ಉಪೇಂದ್ರ ಅವರ ಗೆಟಪ್ನಲ್ಲಿ ಗುರೂಜಿ ಕಾಣಿಸಿಕೊಂಡಿದ್ದಾರೆ. ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಉಪ್ಪಿ ಸ್ಟೈಲ್ನಲ್ಲಿಯೇ ವೇಷ ತೊಟ್ಟಿರೋ ಗುರೂಜಿಯನ್ನು ನೋಡಿ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಇದೇ ವೇಳೆ, ಆರ್ಯವರ್ಧನ್ ಅವರು, 'ಜಗವೇ ನೀನು ಗೆಳತಿಯೆ' ಹಾಡಿಗೆ ಜಗಮೆಚ್ಚುವ Performance ಕೊಟ್ಟಿದ್ದಾರೆ. ಕಳೆದ ವಾರದ ಷೋನಲ್ಲಿ ಪ್ರೀತಿಯಲ್ಲಿ ಮೈಮರೆತಿದ್ದ ಆರ್ಯವರ್ಧನ್ ಗುರೂಜಿ, ಪ್ರೀತಿಯೇ ನನ್ನುಸಿರು ಹಾಡಿಗೆ ಸಹ ಸ್ಪರ್ಧಿ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದರು. ಈ ಮೂಲಕ ಭೇಷ್ ಎನಿಸಿಕೊಂಡವರು ಆರ್ಯವರ್ಧನ್ ಅವರು. ಕೊನೆಗೆ ತಾಲೀಬಾನ್ ಹಾಡಿಗೆ ಆರ್ಯವರ್ಧನ್ ಗುರೂಜಿ ಸಕತ್ ಸ್ಟೆಪ್ ಹಾಕುವ ಮೂಲಕ ತೀರ್ಪುಗಾರರ ಶ್ಲಾಘನೆಯನ್ನು ಗಳಿಸಿಕೊಂಡಿದ್ದರು. ಹಲವಾರು ರೀತಿಯಲ್ಲಿ ಕ್ಲಿಷ್ಟಕರ ಎನ್ನುವ ಸ್ಟೆಪ್ ಕೂಡ ಹಾಕಿದ್ದಾರೆ. ಅಷ್ಟಕ್ಕೂ ಈಗ ಡಾನ್ಸ್ ರಿಯಾಲಿಟಿ ಷೋಗಳಲ್ಲಿ ಸರ್ಕಸ್ಗಳೇ ಹೆಚ್ಚಾಗಿರು ಕಾರಣ, ಅವುಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಈ ಗುರೂಜಿ. ಫ್ಲಿಪ್ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೇ ವೇಳೆ ಆರ್ಯವರ್ಧನ್ ಅವರ ಪತ್ನಿ ಕಣ್ಣೀರು ಹಾಕಿದ್ದು, 15 ದಿನಗಳಿಂದ ನನ್ನನ್ನು ಮಾತನಾಡಿಸಲಿಲ್ಲ, ಮಕ್ಕಳನ್ನೂ ಮಾತನಾಡಿಸಲಿಲ್ಲ, ಇಲ್ಲಿಯೇ ಇದ್ದಾರೆ ಎಂದರು. ಅದಕ್ಕೆ ಆರ್ಯವರ್ಧನ್ ಅವರು, ನನಗೆ ಡಾನ್ಸ್ ಎಂದರೆ ತುಂಬಾ ಇಷ್ಟ. ಇದಕ್ಕಾಗಿ ಏನು ಬೇಕಾದರೂ ಮಾಡಲು ಸಾಧ್ಯ ಎಂದಿದ್ದರು.
ಪ್ರೀತಿಸುವಾಗ ರನ್ನಾ... ಚಿನ್ನಾ... ಮದ್ವೆಯಾದ್ಮೇಲೆ? ಅಮೃತಧಾರೆ ನಟಿಯರು ಏನಂದ್ರು ನೋಡಿ...
ಅಂದಹಾಗೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಇದಾಗಲೇ ಏಳು ಸೀಸನ್ಗಳನ್ನು ಮುಗಿಸಿದೆ. ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಸೌಂಡ್ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ.
ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ. ಹೆಚ್ಚಾಗಿ ಕಿರುತೆರೆ ಕಲಾವಿದರನ್ನು ಈ ಬಾರಿ ಡಾನ್ಸ್ ಲೋಕಕ್ಕೆ ಆಹ್ವಾನಿಸಲಾಗಿದೆ. ಆದರೆ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ ಅಷ್ಟು ಎಕ್ಸ್ಪರ್ಟ್ ಇಲ್ಲದವರು. ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್, ಇದೇ ಸೀರಿಯಲ್ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್ ಶಶಿ ಹೆಗ್ಡೆ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.
ಗಣೇಶ್ ಚಿತ್ರಕ್ಕೆ ನಮ್ದೂ ಒಂದಿರ್ಲಿ... ಮಗಳು ಹಿತಾ ಜೊತೆ 'ಮೀನ ಕಣ್ಣೋಳೆ...' ಎಂದ ಸಿಹಿಕಹಿ ಚಂದ್ರು