ನಿಮ್ಗೆ ಹೆಣ್ಮಗುನೇ ಆಗೋದು.. ಕವಿತಾ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್‌ ನೋಡಿ ಭವಿಷ್ಯ ನುಡಿದ ಫ್ಯಾನ್ಸ್‌!

By Santosh Naik  |  First Published Aug 17, 2024, 3:48 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಅವರು ಪ್ರಗ್ನೆನ್ಸಿ ಫೋಟೋಶೂಟ್‌ ಕೂಡ ಮಾಡಿಸಿದ್ದಾರೆ.
 


ಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಕಿರುತರೆ ಪ್ರೇಕ್ಷಕರ ಮನ ಗೆದ್ದಿದ್ದ ಚಿನ್ನು ಖ್ಯಾತಿಯ  ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿಯ ಚಿತ್ರಗಳನ್ನು ಹಂಚಿಕೊಳ್ಳುವುದರಲ್ಲಿ ಖುಷಿ ಕಾಣುವ ಕವಿತಾ ಗೌಡ ಅವರ ಬೇಬಿ ಬಂಪ್‌ ಈ ವೇಳೆ ಗಮನ ಸೆಳೆದಿದೆ. ಶೀಘ್ರವೇ ಮೊದಲ ಮಗುವಿಗೆ ಜನನ ನೀಡಲಿರುವ ಈಕೆಗೆ ಹೆಚ್ಚಿನವರು ಮೇಡಮ್‌ ನಿಮಗೆ ಹೆಣ್ಣು ಮಗುವೇ ಆಗೋದು ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಕವಿತಾ ಗೌಡ ಅವರ ಬೇಬಿ ಬಂಪ್‌. ಫ್ಯಾನ್ಸ್‌ಗಳ ಹೇಳಿಕೆ ಪ್ರಕಾರ, ನೇಹಾ ಗೌಡ ಹಾಗೂ ಡಾರ್ಲಿಂಗ್‌ ಕೃಷ್ಣ ಪತ್ನಿ ಮಿಲನಾ ನಾಗರಾಜ್‌ ಹಾಗೂ ಹರ್ಷಿಕಾ ಪೂಣಚ್ಚಗೆ ಗಂಡು ಮಗು ಆಗಬಹುದು ಎನ್ನುತ್ತಿದ್ದರೆ, ಕವಿತಾ ಗೌಡಗೆ ಮಾತ್ರ ಹೆಣ್ಣು ಮಗು ಆಗೋದು ಎನ್ನುತ್ತಿದ್ದಾರೆ. ಕವಿತಾ ಗೌಡ ಅವರ ಬೇಬಿ ಬಂಪ್‌ ನೋಡಿ ಈ ಅಂದಾಜು ಮಾಡುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯ, ಸುಳ್ಳು ಅನ್ನೋದು ಇನ್ನೇನು ಕೆಲವೇ ತಿಂಗಳಲ್ಲಿ ಗೊತ್ತಾಗಲಿದೆ. ಕವಿತಾ ಗೌಡ ಅವರು ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ.

ಕವಿತಾ ಗೌಡ ಅವರ ಪತಿ ಚಂದನ್‌ ಸೋಶಿಯಲ್‌ ಮೀಡಿಯಾದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್‌ಗಳನ್ನು ಹಂಚಿಕೊಂಡಿದ್ದು, ಇದು ವೈರಲ್‌ ಆಗಿದೆ. ತಾವು ಗರ್ಭಿಣಿಯಾಗಿರುವ ಬಗ್ಗೆಯೂ ಜೋಡಿ ಡಿಫರೆಂಟ್‌ ಆಗಿ ತಿಳಿಸಿತ್ತು. ಲಕ್ಷ್ಮೀ ಬಾರಮ್ಮ ಸೀರಿಯಲ್‌ ಅಲ್ಲದೆ, ಕೆಲವು ಸಿನಿಮಾಗಳಲ್ಲೂ ನಟಿಸಿದ್ದ ಅವರು ಬಳಿಕ ಬಿಗ್‌ಬಾಸ್‌ಗೆ ಕಾಲಿಟ್ಟಿದ್ದರು. ಅದಕ್ಕೂ ಮುನ್ನವೇ ಚಂದನ್‌ರನ್ನು ಪ್ರೀತಿ ಮಾಡುತ್ತಿದ್ದ ಕವಿತಾ ಗೌಡ, ಕೋವಿಡ್‌ ಸಮಯದಲ್ಲಿ ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಹೋಟೆಲ್‌ ಉದ್ಯಮವನ್ನು ಇವರು ನಡೆಸುತ್ತಿದ್ದು, ಅದರಿಂದಲೂ ಆದಾಯ ಪಡೆಯುತ್ತಿದ್ದಾರೆ.

Tap to resize

Latest Videos

ಹಳದಿ ಬಣ್ಣದ ಗೌನ್‌ನೊಂದಿಗೆ ಕವಿತಾ ಗೌಡ ಪ್ರಗ್ನೆನ್ಸಿ ಫೋಟೋ ಶೂಟ್‌ ಮಾಡಿಸಿದ್ದರೆ, ಚಂದನ್‌ ಕುಮಾರ್‌ ಕಪ್ಪು ಬಣ್ಣದ ಸ್ವೆಟ್‌ ಟಿ ಶರ್ಟ್‌ ಹಾಗೂ ನೀಲಿ ಬಣ್ಣದ ಜೀನ್ಸ್‌ ಧರಿಸಿಕೊಂಡಿದ್ದಾರೆ. ಫೋಟೋಗಳಲ್ಲಿಯೂ ಕೂಡ ಇವರ ಬಾಂದವ್ಯ ಎದ್ದು ಕಂಡಿದೆ. ಕವಿತಾ ಗೌಡ ಅವರ ಹೊಟ್ಟೆಯ ಬಳಿ ಕುಳಿತುಕೊಂಡಿರುವ ಚಂದನ್‌ ಗೌಡ, ಮಗುವಿನೊಂದಿಗೆ ಮಾತನಾಡುವ ರೀತಿಯಲ್ಲಿ ಎಕ್ಸ್‌ಪ್ರೆಶನ್‌ ನೀಡಿ ಫೋಟೋ ಶೂಟ್‌ ಮಾಡಿಸಿದ್ದಾರೆ.

ಪ್ರತಿ ಫೋಟೋಶೂಟ್‌ಗಳಲ್ಲಿ ಕವಿತಾ ಗೌಡ ಹಾಗೂ ಚಂದನ್‌ ಕುಮಾರ್‌ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಒಂದೊಂದು ಫೋಟೋಗಳು ಕೂಡ ಆಕರ್ಷವಾಗಿದೆ. ಕವಿತಾ ಗೌಡ ಅವರ ಎಕ್ಸ್‌ಪ್ರೆಶನ್‌ಗಳು ಕೂಡ ಈ ಫೋಟೋಗಳಲ್ಲಿ ಅದ್ಭುತವಾಗಿ ಕಂಡಿದೆ.

 

ಏನೇ ಆಗಲಿ ಜೊತೆಯಾಗಿರಿ ಸಾಕು; ಗಂಡನಿಲ್ಲದೆ ನಾನಿಲ್ಲ ಎಂದ ಕವಿತಾ ಗೌಡ ಪೋಸ್ಟ್‌ಗೆ ನೆಟ್ಟಿಗರ ಕಾಮೆಂಟ್! 

ಕವಿತಾ ಗೌಡ ಸೀರಿಯಲ್‌ ಅಲ್ಲದೆ, ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರ್‌ಬಲ್, ಗೋವಿಂದ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದನ್‌ ಕುಮಾರ್‌ಗೆ ಲೈಫು ಇಷ್ಟೇನೆ ಸಿನಿಮಾ ಮೊದಲ ಚಿತ್ರ. ಲಕ್ಷ್ಮೀ ಬಾರಮ್ಮ ಸೀರಿಯಲ್‌ ವೇಳೆ ಅವರಿಗೆ ಕವಿತಾ ಗೌಡ ಪರಿಚಿತರಾಗಿದ್ದರು. ಬೆಳ್ಳಿ ತೆರೆಯಲ್ಲಿ ಲೈಫು ಇಷ್ಟೇನೆ ಸಿನಿಮಾ ಅಲ್ಲದೆ. ಎರಡೊಂದ್ಲಾ ಮೂರು, ಬೆಂಗಳೂರು 560023, ಪ್ರೇಮ ಬರಹ ಸಿನಿಮಾ ಹೀಗೆ ಹಲವಾರು ಸಿನಿಮಾ ಮಾಡಿದ್ದಾರೆ. ಅರ್ಜುನ್‌ ಸರ್ಜಾ ನಿರ್ದೇಶನ ಮಾಡಿರುವ ಪ್ರೇಮಬರಹ ಸಿನಿಮಾದಲ್ಲಿ ಚಂದನ್‌ ಕುಮಾರ್‌ ಜರ್ನಲಿಸ್ಟ್‌ ಪಾತ್ರ ಮಾಡಿದ್ದಾರೆ. ಈಗ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದು ಅದಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಎಂಥಾ ವಿಪರ್ಯಾಸ, ಇಬ್ಬರಿಗೂ ಚಂದುನೇ ಕಾರಣ, ಆದ್ರೆ…? ಚಿನ್ನು ಗಂಡನ ಶಾಕಿಂಗ್ ಕಮೆಂಟ್!

click me!