ಗುಪ್ಪೆಡಂಥ ಮನಸು ಧಾರಾವಾಹಿಯ ಖ್ಯಾತಿಯ ನಟ ಮುಖೇಶ್ ಗೌಡ, 'ತೀರ್ಥರೂಪರಾದ ತಂದೆಯವರಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ತಮ್ಮ ಹೆಸರನ್ನು ನಿಹಾರ್ ಮುಖೇಶ್ ಎಂದು ಬದಲಾಯಿಸಿಕೊಂಡಿದ್ದಾರೆ.
ತೆಲುಗಿನಲ್ಲಿ ಸ್ಟಾರ್ ಮಾ ಚಾನೆಲ್‌ನಲ್ಲಿ ಗುಪ್ಪೆಡಂಥಾ ಮನಸು ಅನ್ನೋ ಸೀರಿಯಲ್ ಇನ್ನೇನು ಮುಗಿಯೋ ಹಂತಕ್ಕೆ ಬಂದಿದೆ. ಹಾಟ್ ಸ್ಟಾರ್ ನಲ್ಲೂ ಇದನ್ನು ನೋಡಬಹುದು. ಇದು ಕನ್ನಡಕ್ಕೂ ಡಬ್ ಆಗಿ 'ಹೊಂಗನಸು' ಅನ್ನೋ ಹೆಸರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದೆ. ಈ ಸೀರಿಯಲ್ ಹೀರೋ ರಿಷಿ ಅದೆಷ್ಟೋ ಹೆಣ್ಮಕ್ಕಳ ಎದೆ ಬಡಿತ ಹೆಚ್ಚಿಸಿದಾತ. ಈ ನಟನಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಈತನ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ಳಬೇಕು ಅಂತ ಅನೇಕ ಹುಡುಗೀರು ಚಡಪಡಿಸ್ತಾರೆ. ಸೀರಿಯಲ್‌ನಲ್ಲಿ ಈತ ಪ್ರತಿಷ್ಠಿತ ಕಾಲೇಜೊಂದರ ಎಂಡಿ, ಶಾರ್ಟ್ ಟೆಂಪರ್ಡ್, ಆದರೆ ಸ್ವೀಟ್ ಹಾರ್ಟ್, ಇಗೋ ಇದ್ದರೂ ಒಳಗೆ ಬೆಣ್ಣೆಯಂಥಾ ಮನಸು. ಈತನ ಜೊತೆಗೆ ಈತನ ಸ್ಟೂಡೆಂಟ್ ವಸುಧಾರಾಗೆ ಪ್ರೀತಿ, ಸಿಟ್ಟು ಎಲ್ಲ ಇದೆ. ಹುಡುಗಾಟಿಕೆಯ ಆದರೆ ಕಷ್ಟದಲ್ಲಿ ಮೇಲೆಬಂದ ಪ್ರತಿಭಾವಂತ ಹುಡುಗಿ ವಸು ಈ ಮೇಷ್ಟ್ರ ಕನಸಲ್ಲಿ ಬರ್ತಾಳೆ. ಇವರಿಬ್ಬರ ಲವ್, ಜಗಳ, ಹುಸಿಮುನಿಸಿದ ಕಥೆಯೇ ಗುಪ್ಪೆಡಂಥಾ ಮನಸು ಸೀರಿಯಲ್. ಈ ಸೀರಿಯಲ್‌ನಲ್ಲಿ ಈಗ ಇವರಿಬ್ಬರಿಗೂ ಮದುವೆ ಎಲ್ಲ ಆಗಿ, ಏನೇನೋ ಟ್ವಿಸ್ಟ್ ಟರ್ನ್ ಆಗಿ ಫೈನಲ್ ಸ್ಟೇಜ್‌ಗೆ ಬಂದಿದೆ. ಕೊನೇ ಎಪಿಸೋಡ್ ಶೂಟ್ ಕೂಡ ಮುಗಿದಿದೆ. ರಿಷಿ ಸರ್ ಪಾತ್ರದ ಮೂಲಕ ಹೆಸರು ಮಾಡಿರೋ ಮುಖೇಶ್ ರಿಯಲ್ ಲೈಫ್ ಕಥೆಯೂ ಬದಲಾಗಿದೆ.
ಈ ಸೀರಿಯಲ್ ನಂತರ ಮುಖೇಶ್ ಗೌಡ ಬಿಗ್‌ಬಾಸ್ ಕಡೆ ಮುಖ ಮಾಡ್ತಾರೇನೋ ಅಂತ ಗುಮಾನಿ ಇತ್ತು. ಯಾಕೆಂದರೆ ಇವರಿಗಿರೋ ಫ್ಯಾನ್ ಪಾಲೋವಿಂಗ್ ನೋಡಿದ್ರೆ ಖಂಡಿತಾ ಬಿಗ್‌ಬಾಸ್ ಟಿಆರ್‌ಪಿ ಏರಿಸ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ ನಿನ್ನೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಆಂಗ್ರಿ ಯಂಗ್ ಮ್ಯಾನ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. 'ಹೊಂದಿಸಿ ಬರೆಯಿರಿ' ಅನ್ನೋ ಸಿನಿಮಾ ಮೂಲಕ ಈಗಾಗಲೇ ಸುದ್ದಿಯಲ್ಲಿರೋ ಪ್ರತಿಭಾವಂತ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ 'ತೀರ್ಥರೂಪರಾದ ತಂದೆಯವರಲ್ಲಿ' ಅನ್ನೋ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಜಗನ್ನಾಥ್ ಅವರ 'ಹೊಂದಿಸಿ ಬರೆಯಿರಿ' ಸಿನಿಮಾ ಕಂಟೆಂಟ್ ದೃಷ್ಟಿಯಿಂದ ಸಾಕಷ್ಟು ಹೆಸರು ಮಾಡಿತ್ತು. ಅವರ ಕ್ರಿಯೇಟಿವಿಯನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದರು. ಇದೀಗ ವಿಶಿಷ್ಟ ಟೈಟಲ್ ಹೊಂದಿರುವ ಅವರ ಸಿನಿಮಾ ಬಗ್ಗೆಯೂ ಸಾಕಷ್ಟು ಭರವಸೆ ವ್ಯಕ್ತವಾಗಿದೆ. ನಿನ್ನೆ ತಾನೇ ಡಾಲಿ ಧನಂಜಯ ಈ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಈ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ಈಗ ವಿಷಯ ಏನಪ್ಪಾ ಅಂದರೆ ಈವರೆಗೆ ರಿಷಿ ಸರ್ ಅಂದ್ರೆ ಮುಖೇಶ್ ಗೌಡ ಅನ್ನೋ ಮಾತಿತ್ತು. ಇದೀಗ ಸಿನಿಮಾಕ್ಕೆ ಹೀರೋ ಆಗಿ ಎಂಟ್ರಿ ಆಗ್ತಿರೋ ಮುಖೇಶ್ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಂಟ್ರಿ ಕೊಡುವಾಗ ಹೆಸರು ಬದಲಿಸಿಕೊಳ್ಳೋದು ಮಾಮೂಲಿ. ಈಗಾಗಲೇ ಸೂಪರ್ ಸಕ್ಸಸ್ ಆಗಿರೋ ಯಶ್, ರಿಷಬ್ ಮೊದಲಾದವರಿಂದ ಹಿಡಿದು ಇತ್ತೀಚಿನವರವರೆಗೆ ಬಹಳ ಮಂದಿ ನಟ, ನಟಿಯರು ಹೆಸರು ಬದಲಿಸಿಕೊಂಡಿದ್ದಾರೆ. ಇದೀಗ ಮುಖೇಶ್ ಸಹ ಈ ಹಾದಿಯಲ್ಲಿದ್ದಾರೆ. ತನ್ನ ಹೆಸರನ್ನು ನಿಹಾರ್ ಮುಖೇಶ್ ಅಂತ ಬದಲಿಸಿಕೊಂಡಿದ್ದಾರೆ.
ನಿನ್ನೆ ತಾನೇ 'ತೀರ್ಥರೂಪ ತಂದೆಯವರಲ್ಲಿ' ಸಿನಿಮಾದ ಮುಹೂರ್ತ ನಡೆದಿದೆ. ಉಳಿದ ಡೀಟೇಲ್ಸ್ ಇನ್ಮೇಲಷ್ಟೇ ಸಿಗಬೇಕಿದೆ. ಸದ್ಯ ಸೀರಿಯಲ್‌ನಲ್ಲಿ ಸಕ್ಸಸ್ ಕಂಡಿರೋ ಈ ಮೈಸೂರಿನ ಹುಡುಗ ಸಿನಿಮಾದಲ್ಲೂ ಸಕ್ಸಸ್ ಕಾಣಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ.
ಶೆಡ್‌ಗೆ ಕರೆಸುವ ಬದಲು, ಕೆಟ್ಟ ಮೆಸೇಜ್ ಮಾಡಿದ 1 ಸಾವಿರ ಅಕೌಂಟ್‌ಅನ್ನು ಬ್ಲಾಕ್ ಮಾಡಿದ ಜ್ಯೋತಿ ರೈ!