ವಿನಯ್ ಗೌಡ ಬಾಲ ಕಟ್‌; ತಕ್ಕ ಶಾಸ್ತಿ ಆಯ್ತು, ವಿನಯ್ ಕಥೆ ಮುಗಿತು ಅಂತಿದಾರಲ್ಲ ನೆಟ್ಟಿಗರು!

Published : Dec 24, 2023, 12:31 PM ISTUpdated : Dec 24, 2023, 03:51 PM IST
ವಿನಯ್ ಗೌಡ ಬಾಲ ಕಟ್‌; ತಕ್ಕ ಶಾಸ್ತಿ ಆಯ್ತು, ವಿನಯ್ ಕಥೆ ಮುಗಿತು ಅಂತಿದಾರಲ್ಲ ನೆಟ್ಟಿಗರು!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಸಡನ್ ಚೇಂಜ್ ಮನೆ ಮಾಡಿದೆ ಎನ್ನಬಹುದು. ನಟಿ ಶ್ರುತಿ ಆಗಮನ ಒಂದು ಕಾರಣವಾದರೆ, ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗು ಶುಭಾ ಪೂಂಜಾ ಇಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಭಾರೀ ವ್ಯತ್ಯಾಸ ಗೋಚರಿಸತೊಡಗಿದೆ. ಕಿಚ್ಚ ಸುದೀಪ್ ಬದಲು ಈ ವಾರದ ವೀಕೆಂಡ್ ಸಂಚಿಕೆಗೆ ನಟಿ, ಮಾಜಿ ಬಿಗ್ ಬಾಸ್ ವಿನ್ನರ್ ಶ್ರುತಿ ಆಗಮಿಸಿ ವೀಕೆಂಟ್ ಪಂಚಾಯಿತಿ (ಕಿಚ್ಚನ ಪಂಚಾಯಿತಿ) ನಡೆಸಿಕೊಟ್ಟರು. ಬಿಗ್ ಬಾಸ್ ಪ್ರಿಯರು ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಗೆಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು Kichcha Sudeep ಇನ್ಮುಂದೆ Bigg Boss Kannada ಹೋಸ್ಟ್‌ ಆಗಿ ಬರುವುದಿಲ್ಲ ಎಂಬಲ್ಲಿಗೂ ಹೋಗಿ ಬಿಟ್ಟಿದ್ದಾರೆ. ಕೆಲವರಂತೂ ಕಿಚ್ಚ ಸುದೀಪ್ ಬರದಿದ್ದರೇ ಒಳ್ಳೆಯದು ಎನ್ನುತ್ತಿದ್ದಾರೆ. 

ಕಿಚ್ಚ ಸುದೀಪ್ ಬರದೇ ನಡೆದ ಈ ಬಿಗ್ ಬಾಸ್ 10 ನೇ ಸೀಜನ್‌ನ ಮೊದಲ ವೀಕೆಂಟ್ ಇದು. Actress Shruti ನಡೆಸಿಕೊಟ್ಟ ಈ ವೀಕೆಂಡ್ ಪಂಚಾಯಿತಿಯಲ್ಲಿ Vinay Gowda ವಿರೋಧಿಗಳಿಗೆ ಹಬ್ಬದೂಟ ಸಿಕ್ಕಿದೆ. ಕಾರಣ, ವಾರಾಂತ್ಯದ ಕಿಚ್ಚ ಸುದೀಪ್ ಸಂಚಿಕೆಗಳಲ್ಲಿ ವಿನಯ್‌ ಸಾಫ್ಟ್‌ ಆಗಿ ನಡೆದುಕೊಂಡು ಶಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಮನೆಯ ಸದಸ್ಯರು ಈಗಾಗಲೇ ವಿನಯ್ ಇಬ್ಬಗೆಯ ನೀತಿಯ ಬಗ್ಗೆ ಟೀಕೆ ಕೂಡ ಮಾಡಿದ್ದರು. 'ಕಿಚ್ಚ ಬರುವ ವೀಕೆಂಡ್‌ ಸಂಚಿಕೆಗಳಲ್ಲಿ ಸಾಫ್ಟ್‌ ಆಗಿ ನಡೆದುಕೊಳ್ಳುತ್ತಾರೆ, ಆದರೆ ವಾರ ಪೂರ್ತಿ ಬೇರೆ ದಿನಗಳಲ್ಲಿ ಉಳಿದ ಸ್ಪರ್ಧಿಗಳಿಗೆ ಟಾರ್ಚರ್‌ ಕೊಡುತ್ತಾರೆ' ಎಂದು ಈಗಾಗಲೇ ಹೇಳಿದ್ದರು.

ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು! 

ನಿನ್ನೆಯ ಪಂಚಾಯಿತಿಯಲ್ಲಿ ನಟಿ ಶ್ರುತಿ ಎದುರು ವಿನಯ್ ಗೌಡ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ತಕ್ಷಣವೇ ನ್ಯಾಯಾಧೀಶರ ಚೇರ್‌ನಲ್ಲಿ ಕುಳಿತಿದ್ದ ಶ್ರುತಿ 'ವಿನಯ್, ನೀವು ನ್ಯಾಯಾಧೀಶರಿಗೇ ಜೋರು ಧ್ವನಿಯಲ್ಲಿ ಮಾತನಾಡುತ್ತೀರಾ? ' ಎಂದು ಕೇಳುವ ಮೂಲಕ ವಿನಯ್ ನಡವಳಿಕೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಅದು ಉಳಿದ ಸ್ಪರ್ಧಿಗಳ ಸಂತೋಷಕ್ಕೆ ಸಹಜವಾಗಿ ಕಾರಣವಾಗಿದೆ ಎನ್ನಬಹುದು. ವಿನಯ್ ಸುದೀಪ್ ಇಲ್ಲದಿದ್ದರೆ ಹೇಗೆ ವರ್ತಿಸುತ್ತಾರೆ ಎಂಬುದು ನಿನ್ನೆಯ ಸಂಚಿಕೆಯಲ್ಲಿ ಸಾಕ್ಷಿ ಸಮೇತ ಪ್ರೂವ್ ಆಗಿದೆ ಎಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ವಿನಯ್ ಗೌಡ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ. 

ಮನೆಯಿಂದ ಇಬ್ಬರನ್ನು ಹೊರಹಾಕಲು ಬಂದ್ರು ಮಾಜಿ ಸ್ಪರ್ಧಿಗಳು; ಕಿಚ್ಚನಿಲ್ಲದ ಮನೆಯಲ್ಲಿ ಏನಾಗ್ತಿದೆ ನೋಡಿ!

ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಸಡನ್ ಚೇಂಜ್ ಮನೆ ಮಾಡಿದೆ ಎನ್ನಬಹುದು. ನಟಿ ಶ್ರುತಿ ಆಗಮನ ಒಂದು ಕಾರಣವಾದರೆ, ಮಾಜಿ ಸ್ಪರ್ಧಿಗಳಾದ Shine Shetty ಹಾಗು Shubha Pooja ಇಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು ಇನ್ನೊಂದು ಕಾರಣ. ಒಟ್ಟಿನಲ್ಲಿ, ಇಂದಿನ ಸಂಚಿಕೆ ಬಿಗ್ ಬಾಸ್ ಪ್ರಿಯರನ್ನು ತೀವ್ರ ಕುತೂಹಲದ ಹಂತಕ್ಕೆ ತಂದು ನಿಲ್ಲಿಸಿದೆ. ಇಂದು ಮನೆಯಲ್ಲಿ ಡಬಲ್ ಎಲಿಮಿನೇಶನ್ ಇದ್ದು, ಯಾವ ಎರಡು ಸ್ಪರ್ಧಿಗಳು ಮನೆಯಿಂದ ಔಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಸಲಾರ್ ಮುಂದೆ ಮಂಡಿಯೂರಿದ ಶಾರುಖ್ ಖಾನ್ ಡಂಕಿ; ಸೌತ್ ಸಿನಿಮಾ ಹವಾ ನೋಡಿ ಕಂಗೆಟ್ಟ ಬಾಲಿವುಡ್!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

ಕಾರ್ಪೆಂಟರ್ ಆಗಿದ್ದವ ಗ್ಯಾಂಗ್‌ಸ್ಟರ್‌, ಬಳಿಕ ಬಾಲಿವುಡ್ ಫೈಟರ್; ಮಗ ಬಾಲಿವುಡ್ ಸೂಪರ್ ಸ್ಟಾರ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?