ಧಾರಾವಾಹಿಗಳು ಒಳ್ಳೆಯ ಮೆಸೇಜ್ ಕೊಟ್ಟರೆ, ಪ್ರೇಕ್ಷಕರು ಅದಕ್ಕೆ ಎಷ್ಟು ಉತ್ತಮ ಪ್ರತಿಕ್ರಿಯೆ ತೋರುತ್ತಾರೆ ಎನ್ನುವುದಕ್ಕೆ ಅಂತರಪಟ ಧಾರಾವಾಹಿಯೇ ಸಾಕ್ಷಿಯಾಗಿದೆ.
ಧಾರಾವಾಹಿಗಳೆಂದರೆ, ಅಲ್ಲೊಂದು ಅಕ್ರಮ ಸಂಬಂಧ, ಎರಡೆರಡು ಮದುವೆ, ಮದುವೆಯಾದರೂ ಗಂಡನ ಜೊತೆ ಸಂಬಂಧವಿಲ್ಲ. ಅತ್ತೆ-ಸೊಸೆ ಇಲ್ಲವೇ ಮನೆಯಲ್ಲಿ ಒಬ್ಬಳು ವಿಲನ್, ತೀರಾ ಒಳ್ಳೆಯವಳು ಎನ್ನುವ ನಾಯಕಿ, ಅಗತ್ಯಕ್ಕಿಂತ ಹೆಚ್ಚಾಗಿ ಕೆಟ್ಟವಳಾಗಿರುವ ಅತ್ತೆನೋ, ನಾದಿನಿಯೋ, ಅತ್ತಿಗೆಯೋ... ಇವೆಲ್ಲವುಗಳ ನಡುವೆ ಆಗಾಗ್ಗೆ ಕೆಲವು ಧಾರಾವಾಹಿಗಳ ಕೆಲವೊಂದು ಕಂತುಗಳು ಜನರಿಗೆ ಬಹಳ ಇಷ್ಟವಾಗುವುದು ಉಂಟು. ಅಂಥದ್ದರಲ್ಲಿ ಒಂದು ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗ್ತಿರೋ ಅಂತರಪಟ ಸೀರಿಯಲ್ನ ಈ ಕಂತು. ಅಪ್ಪ ಕನಸು ನನಸು ಮಾಡಲು ಹೊರಟ ಆರಾಧನಾಳ ಕತೆಯಿರುವ ಈ ಸೀರಿಯಲ್ನಲ್ಲಿ ಒಂದೊಳ್ಳೆ ಮೆಸೇಜ್ ತೋರಿಸಿದ್ದು ಇದಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಇದರಲ್ಲಿ ಆರಾಧನಾಳ ಸಹಾಯಕ್ಕೊದಗಿ ಗೆಳೆತನ ನಿಭಾಯಿಸಿದ್ದಾನೆ ಗೆಳೆಯ ಸುಶಾಂತ್. ಆರಾಧನಾ ಮದುವೆಯ ಈವೆಂಟ್ ಒಂದನ್ನು ಪ್ರದರ್ಶಿಸಲು ಹೋದ ಸಮಯದಲ್ಲಿ ಅವಳಿಗೆ ಪೀರಿಯಡ್ಸ್ ಆಗಿ ಬಟ್ಟೆಗೆ ರಕ್ತ ಅಂಟಿದೆ. ಅದನ್ನು ನೋಡಿದ ಸುಶಾಂತ್, ಆಕೆಗೆ ನ್ಯಾಪ್ಕಿನ್ ತಂದುಕೊಟ್ಟಿದ್ದಾನೆ. ಆಕೆಯ ಮಾನ ಕಾಪಾಡಲು ತನ್ನ ಕೋಟನ್ನು ತೆಗೆದು ಕೊಟ್ಟಿದ್ದಾನೆ. ಅದರಿಂದ ಅವಳು ತನ್ನ ಹಿಂಭಾಗವನ್ನು ಮುಚ್ಚಿಕೊಂಡಿದ್ದಾಳೆ. ಅತ್ತ ಈವೆಂಟ್ ಬಗ್ಗೆ ಪ್ರಸೆಂಟೇಷನ್ ಮಾಡಲು ಇನ್ನೂ ಆರಾಧನ ಬಾರದ ಕಾರಣ, ಅಲ್ಲಿದ್ದವರು ಅದನ್ನು ಬೇರೆಯವರಿಗೆ ಕೊಡಲು ಯೋಚನೆ ಮಾಡುತ್ತಿರುವಾಗಲೇ ಆರಾಧನಾ ಇತ್ತ ತನ್ನ ಸ್ನೇಹಿತನಿಗೆ ಥ್ಯಾಂಕ್ಸ್ ಹೇಳುತ್ತಿರುವ ಪ್ರೊಮೋ ರಿಲೀಸ್ ಆಗಿದೆ.
ಸಿಂಪಲ್ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!
ಇದು ನೋಡಲು ಸಣ್ಣ ವಿಷಯ ಎನ್ನಬಹುದು. ಆದರೆ ಇಲ್ಲಿ ಇರುವುದು ನಿಜವಾದ ಸ್ನೇಹ. ಸ್ನೇಹಿತ ಮಾತ್ರವಲ್ಲದೇ ಪ್ರತಿಯೊಬ್ಬ ಪುರುಷನೂ ಹೆಣ್ಣುಮಕ್ಕಳಿಗೆ ಇಂಥ ಸಂದರ್ಭದಲ್ಲಿ ಯಾವುದೇ ಮುಜುಗರ ಪಡದೇ ಆಕೆಯ ಬೆನ್ನಿಗೆ ನಿಲ್ಲಬೇಕು. ಮುಟ್ಟು ಎನ್ನುವುದು ಹೆಣ್ಣಿಗೆ ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ಅಸಹ್ಯ ಪಡುವಂಥದ್ದೂ ಏನೂ ಇಲ್ಲ. ತಾಯಿಯಾಗಲು ಹೆಣ್ಣು ಒಂದು ಹಂತ ತಲುಪಿದ್ದಾಳೆ ಎಂದು ಬಂದಿರುವ ದೈವದತ್ತ ಕೊಡುಗೆ ಅದು. ಕೆಲವು ಸಂದರ್ಭದಲ್ಲಿ ಮಾಸಿಕ ಋತುಸ್ರಾವದಲ್ಲಿ ವ್ಯತ್ಯಾಸ ಆಗುವುದು ಉಂಟು. ಅಚಾನಕ್ ಆಗಿ ಗೊತ್ತಿಲ್ಲದೇ ನಿಗದಿತ ಅವಧಿಗಿಂತಲೂ ಮುಂಚೆಯೇ ಋತುಸ್ರಾವ ಆಗುವ ಸಂದರ್ಭಗಳು ಎಷ್ಟೋ ಬಾರಿ ಆಗುವುದು ಉಂಟು. ಅಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಹೆಣ್ಣಿಗೆ ಇದರ ಅರಿವು ಬರುವುದೇ ಇಲ್ಲ. ಅಷ್ಟರಲ್ಲಿಯೇ ರಕ್ತ ಸೋರಿ ಬಟ್ಟೆಯ ಮೇಲೆ ಕಾಣಿಸಿಕೊಳ್ಳುವುದು ಉಂಟು. ಇನ್ನು ಕೆಲವೊಮ್ಮೆ ಅರಿವಿಗೆ ಬಂದರೂ ನ್ಯಾಪಕೀನ್ ಅಥವಾ ಬಟ್ಟೆ ಯಾವುದೂ ಬಳಿಯಲ್ಲಿ ಇಲ್ಲದ ಸಮಯದಲ್ಲಿ ಮುಜುಗರ ಅನುಭವಿಸುವುದು ಉಂಟು.
ಇಂಥ ಸಂದರ್ಭಗಳಲ್ಲಿ ಹೆಣ್ಣಿಗೆ ಹೆಣ್ಣೇ ನೆರವಾಗಬೇಕೆಂದೇನೂ ಇಲ್ಲ. ಆಕೆಯನ್ನು ಅರ್ಥ ಮಾಡಿಕೊಂಡು ಯಾವ ಪುರುಷನಾದರೂ ಸಹಾಯ ಮಾಡಬಹುದು. ಇಲ್ಲಿ ಆಗಿರುವುದೂ ಅಷ್ಟೇ. ಆರಾಧನಾ ಸುಶಾಂತ್ಗೆ ಥ್ಯಾಂಕ್ಸ್ ಹೇಳಿದಾಗ, ಆತ ಹೇಳುವ ಒಂದು ಮಾತು ಬಹುಶಃ ಎಲ್ಲ ಪುರುಷರಿಗೂ ಅನ್ವಯ. ಅದರಲ್ಲೇನು ಥ್ಯಾಂಕ್ಸ್. ನನಗೂ ಅಮ್ಮ, ಅಕ್ಕ-ತಂಗಿ, ಅತ್ತಿಗೆ, ಚಿಕ್ಕಮ್ಮ ಎಲ್ಲರೂ ಇದ್ದಾರೆ ಎನ್ನುವ ಅರ್ಥಗರ್ಭಿತ ಮಾತಿಗೆ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಪ್ರತಿಯೊಬ್ಬ ಪುರುಷನೂ ಇದನ್ನು ಅರಿತುಕೊಳ್ಳಬೇಕಿದೆ ಎನ್ನುತ್ತಿದ್ದಾರೆ.
ಬಾಲನ ಹೊಸ ಅಂಗಡಿಯಲ್ಲಿ ಕದ್ದುಮುಚ್ಚಿ ಬಜ್ಜಿ-ಬೋಂಡಾ ತಿಂದು ಸಿಕ್ಕಿಬಿದ್ದ ಸತ್ಯ!