ನನ್ನನ್ನು ನಗಿಸಿ ನೋಡೋಣ! ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ನಿರೂಪಕಿ ರಾಧಾ ಹಿರೇಗೌಡರ್​ ಸ್ಪರ್ಧಿಗಳಿಗೆ ಚಾಲೆಂಜ್​...

By Suchethana D  |  First Published Oct 24, 2024, 12:47 PM IST

ಬಿಗ್​ಬಾಸ್​ ಸೀಸನ್​ 11ಕ್ಕೆ ಆ್ಯಂಕರ್​ ರಾಧಾ ಹಿರೇಗೌಡರ್​ ಎಂಟ್ರಿಯಾಗಿದ್ದು, ಸ್ಪರ್ಧಿಗಳಿಗೆ ಚಾಲೆಂಜ್​ ಹಾಕಿದ್ದಾರೆ. ಏನಿದು ವಿಷಯ?
 


ಲಾಯರ್ ಜಗದೀಶ್, ರಂಜಿತ್ ಮತ್ತು ಯಮುನಾ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದು, ಸದ್ಯ ದೊಡ್ಮನೆಯಲ್ಲಿ 14 ಸದಸ್ಯರು ಇದ್ದಾರೆ. ಇವರನ್ನು  ಎರಡು ಭಾಗ ಮಾಡಲಾಗಿದ್ದು,  ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನಾಗಿ ವಿಂಗಡಿಸಲಾಗಿದೆ.  ಒಂದು ಪಕ್ಷಕ್ಕೆ ‘ಧರ್ಮಪರ ಸೇನಾ ಪಕ್ಷ’, ಇನ್ನೊಂದಕ್ಕೆ ‘ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ’ ಎಂದು ಹೆಸರು ಇಡಲಾಗಿದೆ. ಸ್ವರ್ಗ ಮತ್ತು ನರಕದ ಕಾನ್​ಸೆಪ್ಟ್​ಗೆ ದೂರುಗಳು ಬಂದು ಮಹಿಳಾ ಆಯೋಗ ಎಂಟ್ರಿ ಕೊಟ್ಟ ಬಳಿಕ, ಅದನ್ನು ರದ್ದು ಮಾಡಿರುವ ಬಿಗ್​ಬಾಸ್​​ ಈಗ ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಲಾಗಿದೆ. ಈ ಎರಡು ತಂಡಕ್ಕೆ ಬೇರೆ ಬೇರೆ ವೇಷಭೂಷಣ ನೀಡಲಾಗಿದೆ.  ಐಶ್ವರ್ಯಾ ಮತ್ತು ತ್ರಿವಿಕ್ರಮ್  ಕ್ಯಾಪ್ಟನ್‌ ಆಗಿದ್ದು, ಅವರನ್ನು ಈ ಪಕ್ಷಗಳ ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ. ಸದ್ಯ ಎರಡೂ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ.

ಈ ನಡುವೆಯೇ ನಿರೂಪಕಿ ರಾಧಾ ಹಿರೇಗೌಡರ್​ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ.  ರಾಜಕೀಯ ವಿಶ್ಲೇಷಣೆ ಮಾಡುವಲ್ಲಿ ಫೇಮಸ್​ ಆಗಿರೋ ರಾಧಾ ಅವರು ಈಗ ಬಿಗ್​ಬಾಸ್​  ಮಂದಿಗೆ ರಾಜಕೀಯದ ಪಾಠ ಮಾಡುತ್ತಿದ್ದಾರೆ, ಜೊತೆಗೆ ಒಂದಿಷ್ಟು ಕಿವಿಮಾತು ಹೇಳುತ್ತಿದ್ದಾರೆ.  ಮನೆಯಲ್ಲಿರುವ ಎರಡು ರಾಜಕೀಯ ಪಂಗಡಗಳ ಮತ್ತು  ರಾಜಕಾರಣಿಗಳ ನೇರಾ-ನೇರ ವಿಶ್ಲೇಷಣೆ ಮಾಡಿರೋ ರಾಧಾ ಅವರು, ಮನೆಯಲ್ಲಿರುವ ಸ್ಪರ್ಧಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳ ಲಿಸ್ಟ್​ನಲ್ಲಿ ರಾಧಾ ಹಿರೇಗೌಡರ್​ ಹೆಸರು ಈ ಮುಂಚೆಯೂ ಕೇಳಿ ಬಂದಿತ್ತು. ಅದರೆ ಇದೀಗ ಅವರು ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೋ ಅಥ್ವಾ ಅತಿಥಿಯಾಗಿಯೋ ಎನ್ನುವ ಕನ್​ಫ್ಯೂಷನ್​ ಸ್ಪರ್ಧಿಗಳಲ್ಲಿ ಉಂಟಾಗಿದೆ. 

Tap to resize

Latest Videos

undefined

ಕುಡಿಯೋದರಿಂದ ಹಿಡಿದು ಕ್ಲೀನ್ ಮಾಡುವವರೆಗೆ... ಎಲ್ಲವೂ ನಕಲಿ? ಬಿಗ್​ಬಾಸ್​ ಮನೆಯ ಅಸಲಿಯತ್ತಿನ ವಿಡಿಯೋ ವೈರಲ್​

ಇದೇ ಕಾರಣಕ್ಕೆ,  ಚೈತ್ರಾ ಕುಂದಾಪುರ ಅವರು ನೀವು ಸ್ಪರ್ಧಿಯಾ? ಏನ್ ಕಥೆ. ನೀವು ಬಂದಿದ್ದೀರಾ ಅಂದ್ರೆ ನಮಗೆಲ್ಲಾ ನೀರು ಕುಡಿಸ್ತೀರಾ ಎಂದು ನೇರವಾಗಿ ಹೇಳಿದ್ದಾರೆ.  ರಾಧಾ ಅವರು, ಭಾಷಣ, ಜಯಕಾರ ಹೊಸತಲ್ಲ, ಐಶ್ವರ್ಯಾ ಅವರೇ ನಿಮ್ಮ ಪಕ್ಷದಲ್ಲಿ ಇರೋರೆಲ್ಲ ಪ್ರಾಮಾಣಿಕರು ಅಂತ ಎದೆ ಮುಟ್ಕೊಂಡು ಹೇಳಿ ಎಂದು ನುಡಿದಿದ್ದಾರೆ.   ತ್ರಿವಿಕ್ರಮ್‌ ಅವರಿಗೆ  “ಏನ್ ಕೊಡ್ತೀರಿ ಕನ್ನಡ ಜನತೆಗೆ?” ಅಂತ ಪ್ರಶ್ನೆ ಮಾಡಿದ್ದಾರೆ. ಆಗ ತ್ರಿವಿಕ್ರಮ್ ಅವರು ‘ಮನರಂಜನೆ ಕೊಡ್ತೀವಿ’ ಎಂದು ಹೇಳಿದಾಗ ಹೌದಾ, ಹಾಗಿದ್ದರೆ  ‘ನನ್ನನ್ನು ನಗಿಸಿ ನೋಡೋಣ’  ಎಂದಿದ್ದಾರೆ. ಆ ಮಾತಿಗೆ ಐಶ್ವರ್ಯಾ ಕಣ್ಣೀರು ಹಾಕಿದ್ದು, ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಇದನ್ನು ನೋಡಬಹುದಾಗಿದೆ.

ರಾಧಾ ಹಿರೇಗೌಡರ್​ ಅವರನ್ನು ನಗಿಸಲು ಸ್ಪರ್ಧಿಗಳು ಸಕ್ಸಸ್​ ಆಗ್ತಾರಾ? ರಾಧಾ ಅವರು ಬಂದಿರೋ ಉದ್ದೇಶ ಏನು? ಅವರು ಎಷ್ಟು ವಾರ ಇರುತ್ತಾರೆ? ಚೈತ್ರಾ ಹೇಳಿದಂತೆ ಉಳಿದ ಸ್ಪರ್ಧಿಗಳಿಗೆ ರಾಧಾ ನೀರು ಕುಡಿಸ್ತಾರಾ? ಅವರನ್ನು ನಗಿಸಲು ಸ್ಪರ್ಧಿಗಳು ಏನೆಲ್ಲಾ ಪ್ರಯತ್ನ ಮಾಡುತ್ತಾರೆ ಇತ್ಯಾದಿಗಳ ಪ್ರಶ್ನೆಗೆ ಬಿಗ್​ಬಾಸ್​ನ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.  

ಬಿಗ್​ಬಾಸ್​ ಮನೆಯೊಳಕ್ಕೆ ಗೌತಮಿ ಎಂಟ್ರಿಗೆ ಸತ್ಯ ಸೀರಿಯಲ್​ ತಾರೆಯರು ಏನೆಂದ್ರು? ಖುದ್ದು ನಟಿಯೇ ಹೇಳಿದ್ರು ಕೇಳಿ...

click me!