ಜಗದೀಶ್ ಸಪೋರ್ಟ್ ಮೆಚ್ಚಿದ ಹಂಸ ಪತಿ....ಯಾವುದೇ ಜಲಸ್ಸಿ ಇಲ್ಲ ಎಂದ ಪ್ರತಾಪ್....
ಬಿಗ್ ಬಾಸ್ ಸೀಸನ್ 11ರಲ್ಲಿ ಹಂಸ ಮತ್ತು ಲಾಯರ್ ಜಗದೀಶ್ ಕಾಂಬಿನೇಷನ್ ವೀಕ್ಷಕರಿಗೆ ಇಷ್ಟವಾಗಿತ್ತು. ನಿಬ್ಬಾ ನಿಬ್ಬಿ ಲವ್ ಸ್ಟೋರಿ ನಡುವೆ ಅಂಕಲ್ ಆಂಟಿ ಲವ್ ಸ್ಟೋರಿ ಹಿಟ್ ಆಗಿತ್ತು. ಕಾರಣಾಂತರಗಳಿಂದ ಜಗದೀಶ್ ಮನೆಯಿಂದ ಹೊರ ನಡೆದಿದ್ದಾರೆ. ಆದರೆ ಜನರಿಗೆ ಈಗಲೂ ಹಂಸ ಮತ್ತು ಜಗದೀಶ್ ಕಾಂಬಿನೇಷನ್ ನೋಡಲು ಇಷ್ಟ ಪಡುತ್ತಾರೆ. ಆದರೆ ಕೆಲವರು ನೆಗೆಟಿವ್ ಆಗಿ ಟ್ರೋಲ್ ಮಾಡುತ್ತಿದ್ದ ಕಾರಣ ಸ್ವತಃ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.
'ಮನೆಯಲ್ಲಿ ಇರುವ ಸ್ಪರ್ಧಿಗಳು ಹಂಸ ಸರಿಯಾಗಿ ಸ್ಪರ್ಧಿಸುತ್ತಿಲ್ಲ ಎಂದು ಕೊಟ್ಟಿದ್ದರು ಆದರೆ ಜಗದೀಶ್ ಮುಂದೆ ಬಂದು ಸರಿಯಾದ ಕಾರಣ ಕೊಟ್ಟು ಹಂಸ ಮುಂದೆ ನಡೆಯಲು ಸಹಾಯ ಮಾಡಿದ್ದಾರು. ಈ ವಿಚಾರದಲ್ಲಿ ಜಗದೀಶ್‌ರನ್ನು ಹೊಗಳುತ್ತೀನಿ ಏಕೆಂದರೆ ಒಂದು ಲೇಡಿ ಮೊದಲ ವಾರ ಕ್ಯಾಪ್ಟನ್ ಆಗಿ ಅಷ್ಟು ಕಷ್ಟ ಪಟ್ಟಿದ್ದಾರೆ ಅಂದ್ರೆ ಅಲ್ಲೊಂದು ಮೋಟಿವೇಷನ್ ಫ್ಯಾಕ್ಟರ್ ಇರಬೇಕು ಅದು ಬಿಟ್ಟು ಪ್ರತಿಯೊಬ್ಬರು ಡೀ ಮೋಟಿವೇಟ್ ಮಾಡಿಬಿಟ್ಟರು. ಸ್ವರ್ಗದಲ್ಲಿ ಇರುವ ಯಾರಿಗೂ ಕಷ್ಟ ಆಗುವುದಿಲ್ಲ, ನರಕದಲ್ಲಿ ಇರುವವರಿಗೆ ಕಷ್ಟ ಆಗುವುದು ಎಂದು ಆ ರೀತಿಯಲ್ಲಿ ಸ್ವಲ್ಪ ಯೋಚನೆ ಮಾಡಿ ಆಟವಾಡಿದ್ದಾರೆ ಹೊರತು ಹಂಸ ಯಾವುದೇ ಮೋಸ ಮಾಡಿಲ್ಲ. ಹಂಸ ಅವರಿಗೆ ಜಗದೀಶ್ ಸಪೋರ್ಟ್ ಆಗಿ ನಿಂತಿದ್ದರು ಏಕೆಂದರೆ ಲೇಡಿಯಾಗಿ ಅಷ್ಟೋ ಜನರನ್ನು ಮ್ಯಾನೇಜ್ ಮಾಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪ್ರತಾಪ್ ಮಾತನಾಡಿದ್ದಾರೆ.
undefined
ದುಬಾರಿ ಬ್ಯಾಗ್, ಡಿಸೈನರ್ ಬಟ್ಟೆಗಳು...; ಮಾಲಾಶ್ರೀ ಪುತ್ರಿ ಐಷಾರಾಮಿ ಜೀವನ ಹೇಗಿದೆ ನೋಡಿ!
'ಜಗದೀಶ್ ನನ್ನ ಹೆಂಡತಿಗೆ ಕಾಟ ಕೊಡುತ್ತಾರೆ ಅಂತ ನನಗೆ ಅನಿಸಿಲ್ಲ ನಾನು ಪ್ರತಿಯೊಂದು ಎಪಿಸೋಡ್‌ಗಳನ್ನು ನೋಡುತ್ತೀನಿ. ಇದೆಲ್ಲಾ ಗೇಮ್‌ನ ಒಂದು ಭಾಗವಾಗಿರುತ್ತದೆ. ಅದರಲ್ಲೂ ನಾನು ಕಂಟೆಂಟ್ ಕೊಡುತ್ತೀನಿ ನಾನು ಎಂಟರ್ಟೈನ್ ಮಾಡುತ್ತೀನಿ ಎಂದು ಜಗದೀಶ್ ಅವರೇ ಹೇಳುತ್ತಿರುತ್ತಾರೆ. ಅವರಿಗೆ ಕೊಟ್ಟಿರುವ ಕೆಲಸವನ್ನು ಜಗದೀಶ್ ಸರಿಯಾಗಿ ಮಾಡುತ್ತಿದ್ದರು ಹೀಗಾಗಿ ಯಾವುದೇ ಬೇಸರ ಆಗಿಲ್ಲ. ಇನ್ನು ನನ್ನ ಗಂಡನೇ ಈ ರೀತಿ ನನ್ನನ್ನು ಕರೆದಿಲ್ಲ ಎಂದು ಹೆಂಡತಿಗೆ ಅನಿಸಿರಬಹುದು' ಎಂದು ಪ್ರತಾಪ್ ಹೇಳಿದ್ದಾರೆ.
ರಾಮ್‌ಕುಮಾರ್ ಸರ್ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!
'ಕ್ಯಾಪ್ಟನ್ ಆದ ಮೇಲೆ ಲವ್ ಯು ಹಂಸ ಅಂತ ಹೇಳಿದಾಗ ನನಗೆ ಜಲಸಿ ಫೀಲ್ ಆಗಿಲ್ಲ ಏಕೆಂದರೆ ಆಕೆ ನನ್ನ ಹೆಂಡತಿ ಆಕೆ ಬಗ್ಗೆ ನನಗೆ ಗೊತ್ತಿದೆ.....ಇದು ಒಂದು ಶೋ ಆಗಿದ್ದು ಕೇವಲ 3 ತಿಂಗಳು ನಡೆಯುತ್ತದೆ ಆ ನಂತರ ನಮ್ಮ ಮನೆಗೆ ಬರುವುದು ನಮ್ಮ ಜೊತೆಗೆ ಇರುವುದು. ಇನ್ನು ಮುಂದೆ ಶೋ ನೋಡಿ ಮೇಡಂ ನಿಮ್ಮ ಬಗ್ಗೆ ನನಗೆ ಇಷ್ಟವಾಗುತ್ತದೆ ಚೆನ್ನಾಗಿ ಡ್ರೆಸ್ ಮಾಡುತ್ತೀರಿ ಎಂದು ಯಾರಾದರೂ ಹೇಳಿದಾಗ ನಾನು ಮೆಚ್ಚಬೇಕು. ಜಗದೀಶ್‌ಗೆ ಮಸ್ಕಾ ಹೊಡೆದಷ್ಟು ರಿಯಲ್ ಲೈಫ್‌ನಲ್ಲಿ ನಮ್ಮ ಪತ್ನಿ ನನಗೆ ಮಸ್ಕ ಹೊಡೆದಿಲ್ಲ ಏಕೆಂದರೆ ಮನೆಯಲ್ಲಿ ಜಗದೀಶ್‌ರನ್ನು ಮ್ಯಾನೇಜ್ ಮಾಡುವುದು ದೊಡ್ಡ ಟಾಸ್ಕ್ ಆಗಿತ್ತು' ಎಂದಿದ್ದಾರೆ ಪ್ರತಾಪ್.