Latest Videos

ಕಂಠೀರವ ಸ್ಟುಡಿಯೋದಲ್ಲಿ ಮುದ್ದಾಡುವಾಗಲೇ ಮತ್ತೆ ಸಿಕ್ಕಿಬಿದ್ದ ಆಂಕರ್ ಅನುಶ್ರೀ..!

By Sathish Kumar KHFirst Published May 26, 2024, 3:28 PM IST
Highlights

ಆ್ಯಂಕರ್ ಅನುಶ್ರೀ ಮದುವೆಯಾಗಲು ಸಿದ್ಧಳಾಗಿದ್ದೇನೆ ಎಂದು ಹೇಳಿದ ಬೆನ್ನಲ್ಲಿಯೇ ಕಂಠೀರವ ಸ್ಟೂಡಿಯೋದಲ್ಲಿ ಮುದ್ದಾಡುವಾಗ ಕ್ಯಾಮರಾ ಮುಂದೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು (ಮೇ 26): ಕನ್ನಡ ಕಿರುತೆರೆಯಲ್ಲಿ ಪಟ ಪಟನೇ ಮಾತನಾಡುವ ಬೊಂಬೆಯಂಥಾ ಸುಂದರಿ ಎಂದರೆ ಎಲ್ಲರಿಗೂ ಥಟ್ಟನೇ ನೆನಪಾಗುವುದು ಆ್ಯಂಕರ್ ಅನುಶ್ರೀ ಎಂದರೆ ತಪ್ಪಾಗಲಾರದು. ಹೌದು, ಸ್ಟಿಲ್ ಬ್ಯಾಚುಲರ್ ಆಗಿರುವ ಅನುಶ್ರೀ ಇತ್ತೀಚೆಗೆ ಮದುವೆಯಾಗಲು ಸಿದ್ಧಳಾಗಿದ್ದೇನೆ ಎಂದು ಹೇಳಿದ್ದರು. ಇದೆಲ್ಲದರ ನಡುವೆ ಶೂಟಿಂಗ್‌ಗೆಂದು ಕಂಠೀರವ ಸ್ಟೂಡಿಯೋಗೆ ಬಂದಾಗ ಟೇಬಲ್ ಮೇಲೆ ಕುಳಿತು ಮುದ್ದಾಡುವಾಗ ಸಿಕ್ಕಿಬಿದ್ದಿದ್ದಾರೆ.

ಹೌದು, ಆ್ಯಂಕರ್ ಅನುಶ್ರೀ ಅವರದ್ದು ಅರುಳು ಹುರಿದಂಥಾ ಸೊಗಸಾದ ಮಾತು, ಮುಖದಿಂದ ಎಂದೂ ಮಾಯವಾಗದ ಚೆಂದದ ನಗುವೇ ಇದ್ದೇ ಇರುತ್ತದೆ. ಫ್ಯಾಶನೇಬಲ್ ಉಡುಗೆಗಳು, ಮಸ್ತ್ ಅನ್ನಬಹುದಾದ ಡ್ಯಾನ್ಸ್ ಅನ್ನು ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳಿಂದ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಅನುಶ್ರೀ ಹಳ್ಳಿಯಿಂದ ಬಂದವನ್ನು ಅದರಲ್ಲಿಯೂ ಮುಗ್ಧ ವ್ಯಕ್ತಿತ್ವದವರನ್ನು ಹೆಚ್ಚಾಗಿ ಆತ್ಮೀಯತೆ ಬೆಳೆಸಿಕೊಂಡು ಬೆಳಸುತ್ತಾರೆ. ಸರಿಗಮಪ ಶೋ ನಲ್ಲಿ ಹಾವೇರಿಯ ಗಾಯಕ ಹನುಮಂತ ಸೇರಿ ಹಲವರು ಇದಕ್ಕೆ ಉದಾಹರಣೆ ಎಂದೇ ಹೇಳಬಹುದು. ಕೆಲವೊಮ್ಮೆ ಅನುಶ್ರೀ ಮಾತನಾಡುತ್ತಲೇ ವೇದಿಕೆಯ ಬಳಿ ಕುಳಿತು ಮಗುವಾಗುತ್ತಾಳೆ. ಹೀಗಾಗಿ, ಅನುಶ್ರೀಯನ್ನು ಕೋಟ್ಯಂತರ ಕುಟುಂಬಗಳು ತಮ್ಮ ಮನೆ ಮಗಳೇ ಎಂದು ಭಾವಿಸಿದ್ದಾರೆ.

Anchor Anushree ಉತ್ತರ ಕರ್ನಾಟಕ ಜನರ ನಿಷ್ಕಲ್ಮಶ ಪ್ರೀತಿಗೆ ಆ್ಯಂಕರ್ ಅನುಶ್ರೀ ಫಿದಾ

ಇನ್ನು ಆ್ಯಂಕರ್ ಅನುಶ್ರೀ ವೇದಿಕೆಯಲ್ಲಿ ಎಷ್ಟೇ ಸೊಗಸಾಗಿ ಮಾತನಾಡಿ ಹೆಸರು ಮತ್ತು ಪ್ರಸಿದ್ಧಿಯನ್ನು ಗಳಿಸಿದರೂ ಬಹುತೇಕ ರಿಯಾಲಿಟಿ ಶೋಗಳಲ್ಲಿ ಯಾರಾದರೂ ನೋವನ್ನು ವ್ಯಕ್ತಪಡಿಸಿದರೆ ತಾವೂ ಕೂಡ ಕಣ್ತುಂಬಿಕೊಂಡು ಅವರ ಕಷ್ಟದಲ್ಲಿಯೇ ತಾವೂ ಪಾಲುದಾರಳು ಎಂಬಂತೆ ಭಾಗಿಯಾಗುತ್ತಿದ್ದರು. ಜೊತೆಗೆ, ಅಂತಹ ಸನ್ನಿವೇಶದಿಂದ ಕ್ಷಣಾರ್ಧದಲ್ಲಿ ಹೊರಬಂದು ಪುನಃ ಕಷ್ಟದಲ್ಲಿದ್ದವರಿಗೆ ತಾನೇ ಧೈರ್ಯ ಹೇಳಿ ವೇದಿಕೆ ಬಳಿಯಿರುವ ಜಡ್ಜಸ್‌ಗಳಿಂದಲೂ ಸಾಂತ್ವನ ಮತ್ತು ಧೈರ್ಯದ ಮಾತುಗಳನ್ನು ಹೇಳಿಸಿ ಅಚ್ಚಿಮೆಚ್ಚಿನ ನಿಜ ಜೀವನದ ನಾಯಕಿ ಎನಿಸಿಕೊಂಡಿದ್ದಾರೆ. ವೇದಿಕೆ ಮೇಲೆ ನಡೆಯುವ ಬಹುತೇಕ ಇಂತಹ ಕ್ಷಣಗಳಲ್ಲಿ ಕೆಲವು ಸ್ಕ್ರಿಪ್ಟೆಡ್‌ ಆಗಿರಬಹುದು. ಆದರೆ, ಅನುಶ್ರೀಯನ್ನು ನೋಡಿದರೆ ಯಾವುದೂ ಕೂಡ ಸ್ಕ್ರಿಪ್ಟೆಡ್ ಎಂದು ಕಂಡುಬರದೇ ಟಿವಿ ಪರದೆಯನ್ನು ನೋಡುತ್ತಾ ಕುಳಿತವರೇ ತಮ್ಮ ಕಣ್ಣಾಲಿಗಳನ್ನು ತುಂಬಿಕೊಂಡು ಒರೆಸಿಕೊಂಡಿರುತ್ತಾರೆ.

ಗಂಭೀರ ಆರೋಪ ಎದುರಿಸಿದ್ದ ಅನುಶ್ರೀ: 
ಕೆಲವು ವರ್ಷಗಳ ಹಿಂದೆ ಆ್ಯಂಕರ್ ವರ್ಷಗಳ ಹಿಂದೆ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಒಳಗಾಗಿದ್ದರು. ಇನ್ನೇನು ಪೊಲೀಸರು ಬಂದು ಅನುಶ್ರೀಯನ್ನು ಅರೆಸ್ಟ್ ಮಾಡಿಯೇ ಬಿಟ್ಟರು ಎನ್ನುವಷ್ಟರಲ್ಲಿ ವಿಚಾರಣೆಯೇ ನಿಂತುಹೋಯಿತು. ಜೊತೆಗೆ, ಡ್ರಗ್ಸ್ ಕೇಸ್‌ನಲ್ಲಿ ಅನುಶ್ರೀ ವಿಚಾರಣೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೂ ವರ್ಗಾವಣೆಯಾದರು. ಬರಬರುತ್ತಾ ಅನುಶ್ರೀ ಮೇಲಿದ್ದ ಆರೋಪ ಸತ್ಯವೋ ಸುಳ್ಳೋ ಎಂಬುದೇ ಮರೆತುಹೋಯಿತು. ಆದರೆ, ಇದೆಲ್ಲ ನೋವಿನಿಂದ ಮತ್ತೆ ಸಿಡಿದು ಬಂದ ಅನುಶ್ರೀ ಮತ್ತದೇ ಸುಂದರ ನಗು, ಚಟಪಟ ಮಾತು ಮುಗ್ದ ಮತ್ತು ದುಃಖಿತರ ನೋವು ಆಲಿಯುವ ಹೆಗಲಾಗಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಅನುಶ್ರೀಗೆ ಎಲ್ಲರೂ ಕೇಳೋದೊಂದೇ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂದು.? ಇತ್ತೀಚೆಗೆ ಮದುವೆಯ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದ ಅನುಶ್ರೀ ತಾವು ಮದುವೆಯಾಗಲು ನಿರ್ಧರಿಸಿದ್ದು, ಶೀಘ್ರವೇ ಎಲ್ಲವೂ ನಡೆಯಲಿದೆ ಎಂದು ಹೇಳಿದ್ದರು. ಆದರೆ, ಎಷ್ಟರಮಟ್ಟಿಗೆ ಅವರು ಹೇಳಿದಂತೆ ನಡೆದುಕೊಳ್ಳುವರೋ ಅದಕ್ಕೆ ಸಮಯವೇ ಇತ್ತರ ಕೊಡಲಿದೆ.

ಅಂತೂ ಇಂತೂ ಮದುವೆಯಾವುದಾಗಿ ಘೋಷಿಸಿದ ನಿರೂಪಕಿ ಅನುಶ್ರೀ, ಹುಡುಗ ಯಾರು?

ಮದುವೆಗೂ ಮೊದಲೇ ಮುದ್ದಾಡಿ ಸಿಕ್ಕಿಬಿದ್ದ ನಟಿ: ಅನುಶ್ರೀ ಎಂದಾಕ್ಷಣ ಆ್ಯಂಕರ್ ಎಂದು ಎಷ್ಟು ಖಚಿತವಾಗಿ ಹೇಳುತ್ತೇವೆಯೋ ಅಷ್ಟೇ ಸತ್ಯವಾಗಿಯೂ ಅವರು ಪ್ರಾಣಿಪ್ರಿಯರೂ ಹೌದು. ಅದರಲ್ಲಿಯೂ ನಾಯಿಮರಿಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾಕಾಲ ನಾಯಿಮರಿಗಳನ್ನು ತಮ್ಮೊಂದಿಗೆ ಕರೆದುಕೊಂಡೇ ಓಡಾಡುತ್ತಾರೆ. ಹೀಗೆ, ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಶೂಟಿಂಗ್‌ ಬಂದಿದ್ದ ವೇಳೆ ಕೋಕೋ ಎಂಬ ಮುದ್ದಾದ ನಾಯಿಮರಿ ನೋಡಿ ತಮ್ಮ ಮನಸ್ಸು ಹಿಡಿದಿಡಲಾಗದೇ ಮುದ್ದಾಡಿದ್ದಾರೆ. ಅಂದರೆ, ಅವರು ಮದುವೆಗೂ ಮೊದಲು ಮುದ್ದಾಡಿದ್ದು ಬೇರಾರನ್ನೂ ಅಲ್ಲ ಒಂದು ಪುಟಾಣಿ ನಾಯಿಮರಿಯನ್ನು. ಅದರಲ್ಲಿಯೂ ನಾಯಿಮರಿಗೆ ಲಿಪ್‌ ಟು ಲಿಪ್ ಕಿಸ್ ಮಾಡಿರುವುದನ್ನು ನೋಡಿದ ಅಭಿಮಾನಿಗಳಂತೂ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಅನುಶ್ರೀ ನಾಯಿ ಮುದ್ದಾಡುವುದು ಹೊಸತೇನಲ್ಲ: ಈ ಹಿಂದೆಯೂ ಅನುಶ್ರೀ ಡ್ರಗ್ಸ್‌ ಕೇಸ್‌ನೊಳಗೆ ಸಿಕ್ಕಿಕೊಂಡು ತನ್ನೊಂದಿಗೆ ಯಾರೋ ನೆರವಿಗೆ ಬರುವುದಿಲ್ಲ ಎಂದು ಕುಪಿತಳಾಗಿದ್ದಾಗ ನಾಯಿಯೇ ತುಂಬಾ ಆತ್ಮೀಯತೆ ತೋರಿಸಿತ್ತು. ಆಗಲೂ ತಮ್ಮ ನೆಚ್ಚಿನ ನಾಯಿಯನ್ನು ಮುದ್ದಾಡಿದ್ದರು. ಆಗಲೂ (2020ರ ನವೆಂಬರ್) ನಾಯಿಯೊಂದಿಗೆ ಲಿಪ್ ಟು ಲಿಪ್ ಕಿಸ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗಲೂ ಅಂತಹದ್ದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

click me!