Latest Videos

ಚಿನ್ನು ನನ್ನ ಮಗ, ಆತನನ್ನ ಇದೇ ಕೈಯಲ್ಲಿ ಕಳ್ಕೊಂಡೆ ಎಂದ ಆಂಕರ್‌ ಅನುಶ್ರೀ!

By Govindaraj SFirst Published May 26, 2024, 11:23 PM IST
Highlights

ಕರ್ನಾಟಕವನ್ನ ಸತತವಾಗಿ ನಗಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌' ಹೆಸರಿನಲ್ಲಿ ವೀಕೆಂಡ್‌ನಲ್ಲಿ ನಗುವಿನ ಟಾನಿಕ್‌ ನೀಡುತ್ತಿದೆ.

ಕರ್ನಾಟಕವನ್ನ ಸತತವಾಗಿ ನಗಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌' ಹೆಸರಿನಲ್ಲಿ ವೀಕೆಂಡ್‌ನಲ್ಲಿ ನಗುವಿನ ಟಾನಿಕ್‌ ನೀಡುತ್ತಿದೆ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ತೀರ್ಪುಗಾರರು. ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ತೆರೆ ಮೇಲೆ ಎಲ್ಲರನ್ನು ನಗಿಸುವ ಜಗ್ಗೇಶ್ ಮತ್ತು ಅನುಶ್ರೀ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಈ ಸುದ್ದಿಯಲ್ಲಿ ವಿವರಿಸಲಾಗಿದೆ.

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ ಅವರಿಗೆ ಒಬ್ಬ ಮೊಮ್ಮಗ ಇದ್ದಾನೆ. ಈತನ ಹೆಸರು ಅರ್ಜುನ್ ಅಂತಲೇ ಇದೆ. ಈತನೊಂದಿಗೆ ಜಗ್ಗೇಶ್ ಅವರು ತುಂಬಾನೆ ಅಟ್ಯಾಚ್ ಆಗಿದ್ದಾರೆ. ಇವರ ಈ ಒಂದು ಅಟ್ಯಾಚ್‌ಮೆಂಟ್‌ಗೆ ಕಾರಣವೂ ಇದೆ. ಇದರೊಟ್ಟಿಗೆ ಜಗ್ಗೇಶ್ ಅವರ ಈ ಮೊಮ್ಮಗನ ಹೆಸರು ಅರ್ಜುನ್ ಅಂತ ಇಡಲು ಒಂದು ಎಮೋಷನಲ್ ಕಾರಣವೂ ಇದೆ. ಆ ಕಾರಣ ಮತ್ತು ಜಗ್ಗೇಶ್ ಅವರ ಮೊಮ್ಮಗ ಎರಡೂ ತುಂಬಾನೆ ಕನೆಕ್ಟ್ ಆಗಿಯೇ ಇದೆ. ಇದರ ಬಗ್ಗೆ ಹೇಳ್ತಾ ಹೋದ್ರೆ, ಅಲ್ಲಿ ಪ್ರಾಣಿ ಪ್ರೀತಿಯ ಅಗಾಧ ಸತ್ಯ ತೆರೆದಕೊಳ್ಳುತ್ತದೆ. ಜಗ್ಗೇಶ್ ಅವರ ಹಿರಿಯ ಮಗ ಗುರುರಾಜ್ ಪುತ್ರ ಈ ಅರ್ಜುನ್. ಈತನ ಮೇಲೆ ಜಗ್ಗೇಶ್ ಅವರಿಗೆ ತುಂಬಾನೆ ಪ್ರೀತಿ ಇದೆ. 
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)


ಜೊತೆಗೆ ಮನೆಯ ಸ್ಪೆಷಲ್ ಸದಸ್ಯನೂ ಆಗಿದ್ದಾನೆ. ತಮ್ಮ ತಾತನ ಜೊತೆಗೆ ಜಗ್ಗೇಶ್ ಹೇಗೆ ಕನೆಕ್ಟ್ ಆಗಿ ಇರ್ತಿದ್ರೋ, ಅದೇ ರೀತಿನೇ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್ ಜೊತೆಗೆ ಅಟ್ಯಾಚ್ ಆಗಿದ್ದಾರೆ. ಆ ಒಂದು ಪ್ರೀತಿ ಆ ಒಂದು ಅಟ್ಯಾಚ್‌ಮೆಂಟ್‌ ಕುರಿತು ಜಗ್ಗೇಶ್ ಆಗಾಗ ಹೇಳ್ತಾನೇ ಇರ್ತಾರೆ. 'ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ಅರ್ಜುನ ಎಂಬ ಹೆಸರಿನ ಸಾಕು ನಾಯಿಯ ಜೊತೆ ಇರುವ ಫೋಟೊವನ್ನು ತೋರಿಸಿದಾಗ, ಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೆನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜೊತೆ ಬದುಕಿದ್ದ. 

ಮೇಕಪ್ ಇಲ್ಲದ ಈ ಆ್ಯಂಕರ್ ಯಾರೆಂದು ಗೆಸ್ ಮಾಡುತ್ತೀರಾ?

ಅವನ ಫೋಟೋವನ್ನು ನಾನು ಮನೆಯಲ್ಲಿ ದೊಡ್ಡದಾಗಿ ಇಟ್ಟಿದ್ದೇನೆ. ನಾನು ಮನೆಯಲ್ಲಿ ಒಬ್ಬನೇ ಕೂತಿದ್ದಾಗ ಅವನ ಫೋಟೋವನ್ನೇ ನೋಡುತ್ತೇನೆ. ಅದರಿಂದ ನನಗೆ ತುಂಬಾ ಖುಷಿಯಾಗುತ್ತದೆ. ನನಗೆ ನಾಯಿಯಲ್ಲಿ ಗುಣ ಇದೆ ಎಂದು ಅರಿತಿದ್ದೆ ಇವನಿಂದ ಗೊತ್ತಾಗಿದ್ದು. ಇವನನ್ನ ನಾನು ಮಿಸ್ ಮಾಡಿಕೊಂಡು ಸುಮಾರು ಒಂದು ವರ್ಷ ಅತಿದ್ದೇನೆ. ತುಂಬಾ ಬ್ಯೂಟಿಫುಲ್ ಪಪ್ಪಿ ಅವನು. ತುಂಬಾ ದೀರ್ಘಾಕಾಲ ಬದುಕಿದ್ದ. ಜೊತೆಗೆ ಅವನಿಗೆ ಕಿಸ್ ಬೇಬಿ ಎಂದಾಗ ಬಂದು ಮುಖವನ್ನೆಲ್ಲಾ ನೆಕ್ಕುತಿದ್ದ. ವಿಶೇಷವಾಗಿ ಅವನು ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಮಗು ತರಹ ಊಟ ಮಾಡುತ್ತಿದ್ದ ಎಂದು ಹೇಳಿ ಧನ್ಯವಾದಗಳನ್ನು ತಿಳಿಸಿದರು ಜಗ್ಗೇಶ್.

ಇನ್ನು ಇದೇ ಶೋನಲ್ಲಿ ಅನುಶ್ರೀ ಅವರಿಗೂ, ತಮ್ಮ ಶ್ವಾನದ ಜೊತೆ ಇರುವ ಫೋಟೋ ತೋರಿಸಿದಾಗ, ನನ್ನ ಚಿನ್ನು ಅದು, ಅವನು ಈಗ ನಮ್ಮ ಜೊತೆ ಇಲ್ಲ. ನಾನು ಅವನನ್ನ ಎರಡು ವರ್ಷದ ಹಿಂದೆ ಇದೇ ಕೈಯಲ್ಲಿ ಕಳ್ಕೊಂಡೆ. ಅವನು ನನ್ನ ಮಗ. ಐ ಆಮ್ ಲಕ್ಕಿ. ಚಿನ್ನು ಮತ್ತೆ ಹುಟ್ಟಿ ನಮ್ ಜೀವನದಲ್ಲಿ ಬಂದಿದ್ದಾನೆ. ಏನು ಎಕ್ಸ್‌ಪೆಕ್ಟ್‌ ಮಾಡದೇ ಫ್ಯೂರ್ ಲವ್ ಕೊಡೋ ಅಂತ ಏಕೈಕ ಜೀವ ದಟ್ ಇಸ್ ಡಾಗ್ಸ್. ಅದು ನಾಯಿಗಳು ಮಾತ್ರ ಎಂದು ಅನುಶ್ರೀ ಹೇಳುತ್ತಾರೆ. ನಂತರ ಮಾತನಾಡಿದ ಜಗ್ಗೇಶ್, ಯಾಕೆಂದರೆ ಈ ಶ್ವಾನಗಳಲ್ಲಿ ಭಗವಂತ ಒಂದು ಶಕ್ತಿಯನ್ನಿಟ್ಟಿದ್ದಾನೆ. 

ರಸ್ತೆಯಲ್ಲಿ ಹೂಬತ್ತಿ ಮಾರುವ ಅಜ್ಜಿಯ ಮನೆ ಬಾಡಿಗೆ ಜವಾಬ್ದಾರಿ ಹೊತ್ತ ಅನುಶ್ರೀ, ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್!

ಅವಕ್ಕೆ ಪ್ರೀತಿ, ಅಕ್ಕರೆಯಿಂದ ಊಟ ಹಾಕಿ ಸಾಕಿ ಸಲುಹಿದಾಗ ಅವಕ್ಕೆ ಇವರು ನನ್ನವರು ಅಂತ ಭಾವ ಬರುತ್ತದೆ. ದೇವರು ಶ್ವಾನವನ್ನು ಯಾಕಿಟ್ಟ ಅಂದ್ರೆ, ಲೋ ನೋಡು ಅದಕ್ಕೆ ನಾಯಿ ಅಂತ ಕರೀತಾರೆ, ಆಕ್ಚುಲಿ ಮನುಷ್ಯ ನಾಯಿ ಎಂದು ಹೇಳುತ್ತಾರೆ. ಮನುಷ್ಯನಿಗೆ ನಾವು ಊಟ ಹಾಕು, ದುಡ್ಡುಕೊಡು, ಮನೆ ಮಾಡಿಕೊಡು, ಆಸ್ತಿ ಮಾಡಿಕೊಡು ಎಲ್ಲ ಕೊಡು ನಿಂಗೆ ಹಿಂದೆ ಇಂದ ಚುಚ್ಚಿ ಹೋಗುತ್ತಾನೆ. ಆದರೆ ನಾಯಿಗಳು ಮಾತ್ರ ಹೋಗಲ್ಲ, ಅವು  ಮನುಷ್ಯ, ಅದು ಪ್ರೀತಿ, ಪ್ರೀತಿಯ ಸಂಕೇತವೇ ನಾಯಿ. ಅದರ ತರಹ ಪ್ರೀತಿಸುವುದಕ್ಕೆ ಪ್ರಪಂಚದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಜಗ್ಗೇಶ್ ಹೇಳಿದಾಗ, ಇದು ಜೀವನದ ಗೋಲ್ಡನ್ ಮಾತು ಎಂದು ಅನುಶ್ರೀ ಹೇಳುತ್ತಾರೆ.

click me!