Latest Videos

ತನಗಿಂತ 6 ವರ್ಷ ಕಿರಿಯ ಹುಡುಗನೊಂದಿಗೆ ಮೂರನೇ ಮದುವೆಯಾದ 42 ವರ್ಷದ ನಟಿ!

By Santosh NaikFirst Published May 26, 2024, 10:11 PM IST
Highlights


ಮಲಯಾಳಂನ ಪ್ರಖ್ಯಾತ ನಟಿ 42 ವರ್ಷದ ಮೀರಾ ವಾಸುದೇವನ್‌ ಮೂರನೇ ಮದುವೆಯಾಗಿದ್ದಾರೆ. ತನಗಿಂತ 6 ವರ್ಷ ಕಿರಿಯ ಸಿನಿಮಾಟೋಗ್ರಾಫರ್‌ ವಿಪಿಲ್‌ ಪುಟ್ಟಿಯಂಕಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಯಮತ್ತೂರು (ಮೇ.26): ನಟಿ ಮೀರಾ ವಾಸುದೇವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅವರ ಮೂರನೇ ಮದುವೆಯಾಗಿದೆ. ವರ ಸಿನಿಮಾಟೋಗ್ರಾಫರ್ ವಿಪಿನ್ ಪುಟ್ಟಿಯಂಕಮ್. ಮೀರಾ ವಾಸುದೇವನ್ ಮತ್ತು ವಿಪಿನ್ ಪುಟ್ಟಿಯಂಕಮ್ ಕೊಯಮತ್ತೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ನಟಿ ಮೀರಾ ವಾಸುದೇವನ್ ಅವರು ತಾವು ಮದುವೆಯಾದ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಾಕುವ ಮೂಲಕ ಬಹಿರಂಗೊಡಿಸಿದ್ದಾರೆ. ಮೀರಾ ವಾಸುದೇವನ್‌ ಮಾಲಿವುಡ್‌ನ ಪ್ರಖ್ಯಾತ ನಟಿಯಾಗಿದ್ದು ತಮ್ಮ 42ನೇ ವಯಸ್ಸಿನಲ್ಲಿ ತಮಗಿಂತ ಆರು ವರ್ಷ ಕಿರಿಯ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮಲಯಾಳಂ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ಅವರು ನಟಿಸಿದ್ದಾರೆ. 

ಮೇ 21 ರಂದು ನಾವು ಅಧಿಕೃತವಾಗಿ ಮದುವೆಯನ್ನು ನೋಂದಾಯಿಸಿದ್ದೇವೆ ಎಂದು ಮೀರಾ ವಾಸುದೇವನ್ ತಿಳಿಸಿದ್ದಾರೆ. ವಿಪಿನ್ ಪಾಲಕ್ಕಾಡ್‌ನ ಅಲತ್ತೂರ್‌ನಿಂದ ಮೂಲದವರು ಎಂದು ಸ್ವತಃ ಮೀರಾ ಪರಿಚಯಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಕ್ಯಾಮೆರಾಮೆನ್‌.  ನಾವು 2019 ರವರೆಗೆ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಇದರಿಂದ ಸ್ನೇಹಿತರೂ ಆಗಿದ್ದೆವು. ನಾವು ಸುಮಾರು ಒಂದು ವರ್ಷದಿಂದ ಸ್ನೇಹಿತರಾಗಿದ್ದೇವೆ. ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ಕಲಾಜೀವನದಲ್ಲಿ ನೀಡಿದ ಪ್ರೀತಿ ತನ್ನ ಪತಿಗೂ ಸಿಗಲಿ ಎಂದು ಹಾರೈಸುತ್ತೇನೆ ಎನ್ನುತ್ತಾರೆ ಕುಟುಂಬವಿಲಕ ನಟಿ ಮೀರಾ ವಾಸುದೇವನ್‌ ಬರೆದುಕೊಂಡಿದ್ದಾರೆ.

ತಮ್ಮ ನಟನೆಗಾಗಿ 2007ರಲ್ಲಿ ಕೇರಳ ರಾಜ್ಯ ಟಿವಿ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗೂ ಮೀರಾ ಭಾಜನರಾಗಿದ್ದಾರೆ. ನಟನೆ ಮಾತ್ರವಲ್ಲದೆ ವೈಯಕ್ತಿಕ ಜೀವನದ ಕಾರಣಕ್ಕೂ ಮೀರಾ ಸಖತ್‌ ಸುದ್ದಿಯಲ್ಲಿದ್ದರು. ಕಾಲಿವುಡ್‌ ನಟ ಜಾನ್‌ ಕೊಕೆನ್‌ರನ್ನು 2012ರಲ್ಲಿ ಮದುವೆಯಾಗಿದ್ದ ಮೀರಾ ವಾಸುದೇವನ್‌ 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್!

ಇದು ಮೀರಾ ಹಾಗೂ ಜಾನ್‌ ಕೊಕೆನ್‌ ಇಬ್ಬರಿಗೂ ಎರಡನೇ ಮದುವೆಯಾಗಿತ್ತು. ಅದಕ್ಕೂ ಮುನ್ನ ಮೀರಾ ವಾಸುದೇವನ್‌ ವಿಶಾಲ್‌ ಅಗರ್ವಾಲ್‌ ಎನ್ನುವವರನ್ನು 2005ರಲ್ಲಿ ಮದುವೆಯಾಗಿದ್ದರು. ಆತನೊಂದಿಗೂ ಮೂರು ವರ್ಷ ಸಂಸಾರ ಮಾಡಿದ್ದ ಮೀರಾ 2008ರಲ್ಲಿ ಬೇರೆಯಾಗಿ, 2010ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಜಾನ್‌ ಕೊಕೆನ್‌ ಅವರೊಂದಿಗಿನ ವಿವಾಹದಿಂದ ಒಂದು ಮಗುವನ್ನೂ ಮೀರಾ ಪಡೆದಿದ್ದಾರೆ.

ಪತ್ನಿ ಹೇಳಿದ ಹಾಗೆ, 30 ಕೋಟಿಯ ಮನೆ ಸೇರಿ 90 ಕೋಟಿ ಆಸ್ತಿ ಹೊಂದಿರುವ ಹಾರ್ದಿಕ್‌ ಪಾಂಡ್ಯ ಬೀದಿಗೆ ಬೀಳ್ತಾರಾ?

 

 

click me!