
ಬೆಚ್ಚನೆ ಮನೆ ಇರಲು, ವೆಚ್ಚಕೆ ಹೊನ್ನಿರಲು ಇಚ್ಚೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈಗಿನ ಕಾಲದಲ್ಲಿ ಇಚ್ಛೆಯನರಿವ ಸತಿ ಮಾತ್ರ ಅಲ್ಲ ಅಡುಗೆ ಬಲ್ಲ ಪತಿ ಸಿಕ್ಕಿದ್ರೂ ಸ್ವರ್ಗ ಸಿಕ್ಕಂತೆ. ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ (Anushree) ಈಗ ರುಚಿಯಾದ ಅಡುಗೆ ಮಾಡಬಲ್ಲ ಪತಿಯನ್ನು ಪಡೆದು ಖುಷಿಯಾಗಿದ್ದಾರೆ. ರೋಷನ್, ತಮ್ಮ ಪತ್ನಿ ಅನುಶ್ರೀಗೆ ನುಗ್ಗೆ ಸೊಪ್ಪಿನ ಪಲ್ಯ ಮಾಡಿ, ತುತ್ತು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಇದ್ರ ವಿಡಿಯೋವನ್ನು ಹಂಚಿಕೊಂಡಿದ್ದು, ಫ್ಯಾನ್ಸ್ ಕಾಯಿ ಕಾಯಿ ನುಗ್ಗೆಕಾಯಿ ಹಾಡು ಹೇಳ್ತಿದ್ದಾರೆ.
ರೋಷನ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿರುವ ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಅನುಶ್ರೀ, ಪತಿ ರೋಷನ್ ಜೊತೆಗಿರುವ ಅನೇಕ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಈಗ ರೋಷನ್ ಅಡುಗೆ ಮಾಡ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. coo”KING” with love for love by LOVE ಅಂತ ಅನುಶ್ರೀ ಶೀರ್ಷಿಕೆ ಹಾಕಿದ್ದಾರೆ.
ಆಂಕರ್ ಅನುಶ್ರೀಗೆ ಮಳೆಯಲ್ಲಿ ಕಾರಿನೊಳಗೆ ಗಂಡ ರೋಷನ್ ಪ್ರೀತಿಯಿಂದ ಕೊಟ್ಟಿದ್ದು
ವಿಡಿಯೋದಲ್ಲಿ ರೋಷನ್ ಅಡುಗೆ ಮಾಡ್ತಿದ್ದಾರೆ. ಬಾಣಲೆಯಲ್ಲಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಪ್ರೈ ಮಾಡೋದನ್ನು ನೀವು ಕಾಣ್ಬಹುದು. ನಂತ್ರ ನುಗ್ಗೆ ಸೊಪ್ಪು, ಉಪ್ಪು ಹಾಕಿರುವ ರೋಷನ್, ಆಮೇಲೆ ಮೊಟ್ಟೆಯನ್ನು ಹಾಕಿ ರುಚಿಯಾದ ಪಲ್ಯ ರೆಡಿ ಮಾಡ್ತಾರೆ. ತಾವು ರುಚಿ ನೋಡಿ, ಅನುಶ್ರೀಗೆ ಮುತ್ತಿಟ್ಟು ಪಲ್ಯ ತಿನ್ನಿಸುತ್ತಾರೆ. ಪಲ್ಯ ತಿಂದು ಸೂಪರ್ ಎನ್ನುವ ಅನುಶ್ರೀ, ಪರೋಟಾ ಬೇಯಿಸಿ, ಪಲ್ಯದ ಜೊತೆ ಇದನ್ನು ತಿನ್ನುತ್ತಿರುವ ರೋಷನ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ನುಗ್ಗೆ ಕಾಯಿ ಹಾಡು ಹೇಳಿದ ಫ್ಯಾನ್ಸ್ :
ಅನುಶ್ರೀ ವಿಡಿಯೋ ಪೋಸ್ಟ್ ಮಾಡಿ ಅರ್ಧ ಗಂಟೆಯಾಗಿಲ್ಲ, ಆಗ್ಲೇ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಇಬ್ಬರು ಹೀಗೆ ಪ್ರೀತಿ, ವಿಶ್ವಾಸದಿಂದ ಖುಷಿಯಾಗಿರಿ ಅಂತ ಕಮೆಂಟ್ ಮಾಡಿದ್ದಾರೆ. ರೋಷನ್ ನುಗ್ಗೆ ಸೊಪ್ಪಿನ ಪಲ್ಯ ಮಾಡಿರೋದ್ರಿಂದ ಫ್ಯಾನ್ಸ್, ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ ಅಂತ ಹಾಡು ಹೇಳಿದ್ದಾರೆ. ಅನುಶ್ರೀ ಅಗ್ಲೇ ಹವಾ ಶುರು ಮಾಡಿದ್ದಾರೆ, ಗಂಡನ ಕೈಗೆ ಸೌಟು ನೀಡಿದ್ದಾರೆ, ಕುಕ್ಕಿಂಗ್ ವ್ಲಾಗ್ ಬೇಗ ಶುರು ಮಾಡಿ ಅಂತೆಲ್ಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅನುಶ್ರೀ ಮದುವೆ ಯಾವಾಗ ಅಂತ ಕೇಳ್ತಿದ್ದವರು ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೇಗ ಮಗು ಬರ್ಲಿ ಎನ್ನಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ರೋಷನ್ ಅವ್ರ ಕುಕ್ಕಿಂಗ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಈ ಹಿಂದೆ ಚೈತ್ರಾ ಕುಂದಾಪುರ, ಮದುವೆಯಾದ ಎರಡನೇ ದಿನವೇ ಪತಿ ಅಡುಗೆ ಮಾಡುವ ವಿಡಿಯೋ ಪೋಸ್ಟ್ ಮಾಡಿದ್ರು. ಈಗ ಅನುಶ್ರೀ ಮಾಡಿದ್ದಾರೆ. ಎಲ್ಲ ಸೆಲೆಬ್ರಿಟಿಗಳ ಗಂಡಂದಿರು ಬೆಸ್ಟ್ ಕುಕ್ ಅನ್ನಿಸುತ್ತೆ ಅಂತ ಜನರು ಕಮೆಂಟ್ ಮಾಡಿದ್ದಾರೆ.
ಗಂಡನ ಜೊತೆ ಹುಟ್ಟೂರಲ್ಲಿ ದಸರಾ ಸಂಭ್ರಮಿಸಿ, ರಾಜ್ ಬಿ ಶೆಟ್ಟಿ ಗ್ಯಾಂಗ್ ಜೊತೆ ಮೀನೂಟ ಸವಿದ ಅನುಶ್ರೀ
ಮಂಗಳೂರಿನಲ್ಲಿ ಅನುಶ್ರೀ ದಸರಾ :
ಮದುವೆಯಾದ ಮೇಲೆ ಬ್ರೇಕ್ ಇಲ್ದೆ ನಿರೂಪಣೆ ಮಾಡಿದ್ದ ಅನುಶ್ರೀ, ದಸರಾ ಟೈಂನಲ್ಲಿ ಮಂಗಳೂರು ಸುತ್ತಿ ಬಂದಿದ್ದಾರೆ. ದಸರಾ ಇನ್ ಮಂಗಳೂರು ಹೆಸರಿನಲ್ಲಿ ಒಂದಿಷ್ಟು ಫೋಟೋಗಳನ್ನು ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅನುಶ್ರೀ ಜೊತೆ ರೋಷನ್ ಕೂಡ ಮಂಗಳೂರು ದಸರಾ ಎಂಜಾಯ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.