
ಬಿಗ್ ಬಾಸ್ (Bigg Boss) ಈಸ್ ಬ್ಯಾಕ್. ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ಶೋ ಬಂದ್ ಆಗುತ್ತೆ ಎನ್ನುವ ಆತಂಕದಲ್ಲಿದ್ದ ಫ್ಯಾನ್ಸ್ ಗೆ ಖುಷಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್ ಶೋ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9.30 ಕ್ಕೆ ನಿಮ್ಮ ಮನೆ ಟಿವಿಯಲ್ಲಿ ಬರಲಿದೆ. ಮೂರು ತಿಂಗಳು ಬರಪೂರ್ ಮನರಂಜನೆ ಪಡೆಯಬಹುದು ಅಂದ್ಕೊಂಡಿದ್ದ ಬಿಗ್ ಬಾಸ್ ಫ್ಯಾನ್ಸ್ ಗೆ ಬಿಗ್ ಶಾಕ್ ಕಾದಿತ್ತು. ಏಕಾಏಕಿ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಏನಾಗ್ತಿದೆ ಅನ್ನೋದು ಗೊತ್ತಾಗುವ ಮುನ್ನವೇ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರ ಬಿದ್ದಿದ್ದರು. ರೆಸಾರ್ಟ್ ನಲ್ಲಿದ್ದ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಮನೆಗೆ ವಾಪಸ್ ಆಗಿದ್ದಾರೆ. ಶೋ ಎಂದಿನಂತೆ ಮುಂದುವರೆಯಲಿದೆ.
ಕಲರ್ಸ್ ಕನ್ನಡ, ಬೆಳ್ಳಂಬೆಳಿಗ್ಗೆ ಬಿಗ್ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಹೊಸ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಬಿಗ್ ಬಾಸ್ ಮನೆಯನ್ನು ನೀವು ನೋಡ್ಬಹುದು. ಬಿಗ್ ಬಾಸ್ ಮೇನ್ ಗೇಟ್, ಹಾಲ್, ಕಿಚನ್, ಬೆಡ್ ರೂಮ್ ಗಳನ್ನು ತೋರಿಸಿ, ಬಿಗ್ ಬಾಸ್ ಮತ್ತೆ ಬರ್ತಿದೆ. ಎಂದಿನಂತೆ ಅದೇ ಸಮಯದಲ್ಲಿ ಅಂತ ಪ್ರೋಮೋ ಪೋಸ್ಟ್ ಮಾಡಲಾಗಿದೆ.
2 ವರ್ಷ ಹಳೆ ನೋಟಿಸ್‌ಗೂ ಪ್ರತಿಕ್ರಿಯೆ ಇಲ್ಲ, ನಿಯಮ ಪಾಲಿಸದ್ದಕ್ಕೆ ಜಾಲಿವುಡ್‌ಗೆ ಬೀಗ!
ಬಿಗ್ ಬಾಸ್ 12ರ ಶೋ ಏನಾಗುತ್ತೋ ಎನ್ನುವ ಆತಂಕದಲ್ಲಿದ್ದ ಎಲ್ಲರಿಗೂ ಈಗ ನೆಮ್ಮದಿ ಸಿಕ್ಕಿದೆ. ಕೆಲ್ಸ ಬಿಟ್ಟು ಶೋಗೆ ಹೋಗಿದ್ದ ಸ್ಪರ್ಧಿಗಳಿಂದ ಹಿಡಿದು, ಕೆಲ್ಸ ಮಾಡ್ದೆ ಶೋ ಎಂಜಾಯ್ ಮಾಡ್ತಿದ್ದ ವೀಕ್ಷಕರವರೆಗೆ ಎಲ್ಲರೂ ಮುಂದೇನು ಎನ್ನುವ ಆತಂಕದಲ್ಲಿದ್ರು. ಆದ್ರೀಗ ಬಿಗ್ ಬಾಸ್ ಖುಷಿ ಸುದ್ದಿ ನೀಡಿದ್ದಾರೆ. ಇದು ಚೆನ್ನಾಗಿದೆ, ಈಗ ಖುಷಿಯಾಯ್ತು ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗಿಂತ ಕಿಚ್ಚ ಸುದೀಪ್ ಅವರನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡ್ತಾರೆ. ಬಿಗ್ ಬಾಸ್ ಶೋ ನಿಂತ್ರೆ ವೇದಿಕೆ ಮೇಲೆ ಸುದೀಪ್ ನೋಡೋಕಾಗಲ್ಲ ಎನ್ನುವ ನೋವೇ ಬಹುತೇಕರಿಗಿತ್ತು. ಈಗ ಬಿಗ್ ಬಾಸ್ ಮತ್ತೆ ಬರ್ತಿರೋದ್ರಿಂದ ಎಲ್ಲರೂ ಖುಷಿಯಾಗಿದ್ದಾರೆ.
ಶೋ ನಿಂತಿರಲಿಲ್ಲ :
ಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಹಿನ್ನೆಲೆಯಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಹಾಕಿತ್ತು. ಎಲ್ಲ ಸ್ಪರ್ಧಿಗಳನ್ನು ಹತ್ತಿರದಲ್ಲಿರುವ ಈಗಲ್ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಅಲ್ಲಿ ಕೂಡ ಕಾರ್ಯಕ್ರಮಗಳು ಫಿಕ್ಸ್ ಆಗಿದ್ದ ಕಾರಣ, ಸ್ಪರ್ಧಿಗಳನ್ನು ಬೇರೆ ರೆಸಾರ್ಟ್ ಗೆ ಶಿಫ್ಟ್ ಮಾಡುವಂತೆ ಹೇಳಲಾಗಿತ್ತು. ಎಲ್ಲ ಆತಂಕದ ಮಧ್ಯೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆಮ್ಮದಿ ಸುದ್ದಿ ನೀಡಿದ್ದರು.
ಬಿಗ್ ಬಾಸ್ ಮನೆ ಮತ್ತೆ ಓಪನ್? ಡಿಕೆ ಶಿವಕುಮಾರ್ ಟ್ವೀಟ್, ಮೋಡ ಕವಿದ ವಾತಾವರಣಕ್ಕೆ ತೆರೆ ಬಿತ್ತಾ?
ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಗೆ ಅವಕಾಶ ನೀಡಲು ಸೂಚನೆ ನೀಡಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿತ್ತು ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಾದ್ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಬಾಗಿಲು ತೆರೆದಿದೆ. ನಿನ್ನೆ ರಾತ್ರಿಯೇ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಅದ್ರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂದಿನಿಂದ ಎಲ್ರೂ ಆರಾಮವಾಗಿ ಬಿಗ್ ಬಾಸ್ ಶೋ ನೋಡ್ಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.