
ಬೆಂಗಳೂರು (ಫೆ.29): ಇದ್ದಕ್ಕಿದ್ದಂತೆ ದಿಢೀರನೇ ಪಕ್ಕದಲ್ಲಿ ಒಬ್ಬ ಹುಡುಗನನ್ನು ಕೂರಿಸಿಕೊಂಡು ಲೈವ್‌ಗೆ ಬಂದ ಆ್ಯಂಕರ್ ಅನುಶ್ರೀ ನನ್ನ ಮದುವೆ ಬಗ್ಗೆ ಯಾರೂ ಕೇಳಬೇಡಿ. ನಾನು ಮದುವೆ ಬಗ್ಗೆ ಮಾತನಾಡಲು ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನಗೆ ಮಂಗಳೂರಿನಲ್ಲಿ ತುಳು ಸ್ನೇಹಿತರೇ ಹೆಚ್ಚಾಗಿದ್ದರಿಂದ ಎಲ್ಲರೂ ತುಳುವಿನಲ್ಲೇ ಮಾತನಾಡುತ್ತಿದ್ದಾರೆ. ಎಲ್ಲ ನನ್ನ ಸ್ನೇಹಿತರು ಮದುವೆ ಯಾವಾಗ ಎಂದು ಕೇಳುವವರೇ ಇದ್ದಾರೆ. ಹೀಗಾಗಿ, ಯಾರೂ ನನಗೆ ಲೈವ್‌ನಲ್ಲಿ ಇರುವಾಗ ಮದುವೆ ವಿಚಾರವನ್ನು ಮಾತನಾಡಬೇಡಿ. ನಾನು ಮದುವೆ ವಿಚಾರ ಮಾತನಾಡುವುದಕ್ಕೆ ಬಂದಿಲ್ಲ. ನಾನು ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ನಂತರ ಲೈವ್‌ಗೆ ಬಂದ ಉದ್ದೇಶದ ಬಗ್ಗೆ ಮಾತನಾಡಿದ ಅವರು, ನಾನು ಸಣ್ಣ ವಯಸ್ಸಿನಿಂದ ಮಂಗಳೂರಿನಲ್ಲಿ ನಾಟಕಗಳನ್ನು ನೋಡಿ ಖುಷಿ ಪಟ್ಟಿದ್ದೇನೆ. ಅಂಥದ್ದೇ ಒಂದು ಚಿತ್ರ ದೇವದಾಸ್ ಕಾಪಿಕಾಡ್ ಅವರ ಪುರುಷೋತ್ತಮನ ಪ್ರಸಂಗ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಪುರುಷೋತ್ತಮ ಪ್ರಸಂಗ ಚಿತ್ರದ ಬಗ್ಗೆ ಟ್ರೈಲರ್ ನೋಡಿ ಭಾರಿ ಸಂತಸವಾಗಿದೆ. ಟ್ರೇಲರ್ ತುಂಬಾ ಇಷ್ಟವಾಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇವೆ. ಈಗ ಸಿನಿಮಾದ ಪ್ರಮುಖರೊಂದಿಗೆ ಚರ್ಚೆ ಮಾಡೋಣ ಎಂದು ಚಿತ್ರದ ನಾಯಕ ಪೃಧ್ವಿ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಲೈವ್‌ಗೆ ಕರೆದುಕೊಂಡು ಮಾತನಾಡಿಸಿದ್ದಾರೆ.
Anushree Birthday: ಆ್ಯಂಕರ್ ಅನುಶ್ರೀಗೆ ವಯಸ್ಸೇ ಆಗಲ್ವಾ? ಮದ್ವೆ ಕತೆ ಏನು ಅಂದರೆ ಏನಂತಾರೆ?
ಚಿತ್ರದ ನಾಯಕ ಅಜಯ್ ಪೃಥ್ವಿ ಅವರು ಅವರನ್ನು ಲೈವ್‌ಗೆ ಕರೆದುಕೊಂಡು ಮಾತನಾಡಿದ್ದಾರೆ. ಮಂಗಳೂರು ಮತ್ತು ಕೇರಳ ಕಡೆ ಜನರು ದುಡ್ಡು ಮಾಡಬೇಕು ಎಂದರೆ ದುಬೈಗೆ ಹೋಗಬೇಕು ಎಂದು ಹೇಳುತ್ತಾರೆ. ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಮಂಗಳೂರಿನವರು ಇದ್ದಾರೆ. ಇನ್ನು ನಮ್ಮ ಸಿನಿಮಾದಲ್ಲಿ ಪುರುಷೋತ್ತಮನದ್ದೂ ಕೂಡ ದುಬೈಗೆ ಹೋಗಬೇಕು ಎಂಬ ದೊಡ್ಡ ಮಹದಾಸೆ ಇರುತ್ತದೆ. ಪ್ರತಿದಿನ ಬೆಳಗ್ಗೆ ದೇವರ ಫೋಟೋ ನೋಡುವ ಬದಲು ದುಬೈನ ಬುರ್ಜ್ ಖಲೀಫ ನೋಡುತ್ತಿದ್ದನು. ಎಲ್ಲ ಶೂಟಿಂಗ್ ಮಂಗಳೂರಿನಲ್ಲೇ ಮಾಡಲಾಗಿದೆ. ತುಳು ನಾಡಿನ ದೈತ್ಯತ ಕಲಾವಿದರೆಲ್ಲರೂ ಈ ಸಿನಿಮಾದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಪುರುಷೋತ್ತಮ ಪ್ರಸಂಗ ಯಾಕೆ ನೋಡಬೇಕು?
ಮಧ್ಯಮ ವರ್ಗದ ಜನರಿಗೆ ಕುರಿತ ಸಿನಿಮಾವಾಗಿದೆ. ಸಿನಿಮಾ ಎಲ್ಲೂ ಬೇಜಾರಾಗಲ್ಲ, ಮತ್ತು ಎಮೋಷನ್ ಕೂಡ ಆಗುತ್ತದೆ. ನಿಮ್ಮ ಮನೆ ಹಾಗೂ ನಿಮ್ಮ ಸುತ್ತಲಿನ ನಡೆದ ಸನ್ನಿವೇಶಗಳನ್ನು ನೋಡಿದ ಕಥೆಯಾಗಿದೆ. ಹೀಗಾಗಿ, ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ನೋಡಿ.
- ಅಜಯ್ ಪೃಥ್ವಿ, ಸಿನಿಮಾ ನಾಯಕ
ಅನುಶ್ರೀ- ದೇವದಾಸ್ ಕಾಪಿಕಾಡ್ ಅವರು ಎಷ್ಟೋ ಅನರ್ಘ್ಯ ಕಲಾವಿದರನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯ ಮಾಡಿದ್ದಾರೆ. ಸ್ಟೋರಿ, ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ಎಲ್ಲವನ್ನೂ ದೇವದಾಸ್ ಕಾಪಿಕಾಡ್ ಅವರೇ ಬರೆದಿದ್ದಾರೆ. ಜೊತೆಗೆ, ಒಂದು ಹಾಡನ್ನೂ ಬರೆದಿದ್ದಾರೆ. ಇನ್ನು ತುಳು ಸಿನಿಮಾದಲ್ಲಿ ಹಾಡನ್ನು ಹಾಡಿದ್ದೇನೆ. ಆದರೆ, ಪುರುಷೋತ್ತಮನ ಪ್ರಸಂಗದಲ್ಲಿ ಯಾವ ಹಾಡನ್ನೂ ಹಾಡಿಲ್ಲ.
ಚಿತ್ರವನ್ನು ಯಾಕೆ ನೋಡಬೇಕು:
ನನಗೆ ದೇವದಾಸ್ ಕಾಪಿಕಾಡ್ ಅವರು ಕೊಟ್ಟಿರುವ ಅವಕಾಶ ಸಿನಿಮಾ ಕ್ಷೇತ್ರದಲ್ಲಿ ಚಿನ್ನದ ಮೆಟ್ಟಿಲು ಎಂದೇ ಹೇಳಬಹುದು. ಇಲ್ಲಿ ಒಂದು ಕುಟುಂಬದ ಎಲ್ಲ ಪಾತ್ರಗಳು ಹಾಗೂ ಸನ್ನಿವೇಶಗಳು ಕೂಡ ಇದರಲ್ಲಿವೆ.
- ದೇವದಾಸ್ ಕಾಪಿಕಾಡ್, ನಿರ್ದೇಶಕ
ನಟಿ ತನಿಷಾ ಬಳಿ ಅದೆಷ್ಟು ಆಸ್ತಿಯಿದೆ. ಏನೇನೆಲ್ಲಾ ಮಾಡ್ಕೊಂಡಿದಾರೆ; ಬಾಯ್ಬಿಟ್ಟು ಹೇಳ್ಕೊಂಡಿದಾರೆ ನೋಡ್ರೀ!
ಇನ್ನು ಅನುಶ್ರೀ ಪಕ್ಕದಲ್ಲಿ ಕುಳಿತುಕೊಂಡಿರುವ ವ್ಯಕ್ತಿ ಬೇರಾರೂ ಅಲ್ಲ, ರಾಷ್ಟ್ರ ಪ್ರಶಸ್ತಿ ಗೆದ್ದ ಕನ್ನಡದ ಸಿನಿಮಾ ಚಾರ್ಲಿ-777 ಚಿತ್ರದ ನಿರ್ದೇಶಕ ಕಿರಣ್ ಅವರು. ಇನ್ನು ಕಿರಣ್ ಅವರ ಮಮನೆಗೆ ಹೋದಾಗ ಪುರುಷೋತ್ತಮನ ಪ್ರಸಂಗ ಚಿತ್ರತಂಡದೊಂದಿಗೆ ಲೈವ್ ಮಾಡಿದ್ದಾರೆ. ಇನ್ನು ಕಿರಣ್ ಮನೆಯಲ್ಲಿ ಅನುಶ್ರೀ ಸೇರಿದಂತೆ ಹಲವು ಸ್ನೇಹಿತರು ಇಲ್ಲಿ ಸೇರಿದ್ದರು. ಇನ್ನು ಕೆಲವು ಸ್ನೇಹಿತರನ್ನು ಇನ್ಸ್ಟಾಗ್ರಾಂ ಲೈವ್‌ಗೆ ಬರಲು ಹೇಳಿದರೂ ಅವರು ಬರುವುದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.