ಸಂಧ್ಯಾ ಕ್ಯಾರೆಕ್ಟರ್​ ಬೇಗ ಮುಗಿಸಿಲ್ಲ ಅಂದ್ರೆ ಸ್ಟ್ರೈಕ್​ ಮಾಡ್ತೀವಿ ಎಂದ ಶ್ರೀರಸ್ತು ಶುಭಮಸ್ತು ಫ್ಯಾನ್ಸ್​!

Published : Feb 29, 2024, 05:35 PM IST
ಸಂಧ್ಯಾ ಕ್ಯಾರೆಕ್ಟರ್​ ಬೇಗ ಮುಗಿಸಿಲ್ಲ ಅಂದ್ರೆ ಸ್ಟ್ರೈಕ್​ ಮಾಡ್ತೀವಿ ಎಂದ ಶ್ರೀರಸ್ತು ಶುಭಮಸ್ತು ಫ್ಯಾನ್ಸ್​!

ಸಾರಾಂಶ

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸಂಧ್ಯಾ ಪಾತ್ರವನ್ನು ಬೇಗ ಮುಗಿಸಲಿಲ್ಲ ಎಂದ್ರೆ ಧಾರಾವಾಹಿನೇ ನೋಡಲ್ಲ, ಸ್ಟ್ರೈಕ್​ ಮಾಡ್ತೀವಿ ಅಂತಿದ್ದಾರೆ ಫ್ಯಾನ್ಸ್​. ಯಾಕೆ ಇದು?  

ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿಯಾಗಿರುವ ಶ್ರೀರಸ್ತು ಶುಭಮಸ್ತು ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಇನ್ನೋರ್ವ ವಿಲನ್​ ಎಂಟ್ರಿಯಾಗಿ ವೀಕ್ಷಕರು ಬೇಸರಪಟ್ಟುಕೊಂಡಿದ್ದರು. ಶಾರ್ವರಿಯೊಬ್ಬಳು ಸಾಲದು ಎಂದು ದೀಪಿಕಾ ಎನ್ನುವ ಇನ್ನೋರ್ವ  ವಿಲನ್​ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಒಬ್ಬಳು ಸಾಲುವುದಿಲ್ಲ ಎಂದು ಹಲವು ಮಹಿಳೆಯರನ್ನು ವಿಲನ್​ ಮಾಡುವ ಎಲ್ಲಾ ಸೀರಿಯಲ್​ಗಳಂತೆಯೇ ಇದು ಕೂಡ ದಾರಿ ತಪ್ಪುತ್ತಿದೆಯೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಮಹಿಳೆಯರು ತುಂಬಾ ಒಳ್ಳೆಯವರಾಗಿದ್ದರೆ ಕಷ್ಟ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ತೋರಿಸುವ ಹೊತ್ತಿನಲ್ಲಿ, ಈ ಸೀರಿಯಲ್​ ಕೂಡ ತುಳಸಿ ಎನ್ನುವ ಒಳ್ಳೆಯ ಹೆಣ್ಣನ್ನು ಟಾರ್ಗೆಟ್​ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.  

ತುಳಸಿಯೆಂಬ ಒಳ್ಳೆಯ ಹೆಣ್ಣುಮಗಳು ಇಷ್ಟೆಲ್ಲಾ ತೊಂದರೆ ಅನುಭವಿಸುವುದು ನೋಡಲು ಸಾಧ್ಯವಿಲ್ಲ. ಆಕೆ ಎಷ್ಟೇ ಒಳ್ಳೆಯದ್ದನ್ನೇ ಮಾಡಿದರೂ ಆಕೆಗೆ ತೊಂದರೆಯೇ ಸಿಗುವುದು ಸರಿಯಲ್ಲ ಎನ್ನುವ ಮಧ್ಯೆಯೇ ತುಸು ಸಮಾಧಾನ ತಂದಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ ಒಂದು ಹಂತಕ್ಕೆ ಬಂದು ನಿಂತಿದೆ. ಅದೇನೆಂದರೆ ತುಳಸಿ ಎಂದರೆ ಇಲ್ಲಿಯವರೆಗೆ ಉರಿದು ಬೀಳುತ್ತಿದ್ದ ಅಭಿಗೆ ಅದೇನೋ ತುಳಸಿ ಮೇಲೆ ಸಾಫ್ಟ್​ ಕಾರ್ನರ್​ ಬಂದಿದೆ. ಮನೆಯ ವಂಶವೃಕ್ಷ ಮಾಡುವ ಸಮಯದಲ್ಲಿ ತುಳಸಿಯ ಹೆಸರನ್ನೂ ಆ ಮನೆಯವಳೇ ಎಂದು ತೋರಿಸಲು ಮಾಧವ್​ ಇಚ್ಛೆ ಪಟ್ಟಿದ್ದರೆ, ಆ ಪ್ರಯತ್ನವನ್ನು ತಪ್ಪಿಸಲು ದೀಪಿಕಾ ಮತ್ತು ಶಾರ್ವರಿ ಹೊಂಚು ಹಾಕಿದ್ದೂ ವಿಫಲವಾಗಿದೆ.   

ದೇವಸ್ಥಾನದಲ್ಲಿ ಮಹಿಳೆಯರು ನನ್​ ನೋಡಿ ಥೂ ಅವ್ಳೇ.. ಇವ್ಳಿಗೇನ್​ ಮಾತಾಡ್ಸೋದು ಅಂದ್ರು: ದೀಪಾ ಕಟ್ಟೆ

 ಇದೀಗ ತುಳಸಿಯನ್ನು ವಂಶವೃಕ್ಷದಲ್ಲಿ ಸೇರಿಸಲು ಎಲ್ಲರ ಒಪ್ಪಿಗೆ ಸಿಕ್ಕಿದೆ. ಆದರೆ ಈಗ ಇರುವುದು ತುಳಸಿಯ ಇಬ್ಬರು ಮಕ್ಕಳು. ಅದರಲ್ಲಿ ಮಗ ಸಮರ್ಥ್​ ತಾನು ಈ ವಂಶವೃಕ್ಷಕ್ಕೆ ಸೇರಲು ಒಪ್ಪುವುದಿಲ್ಲ ಎಂದು ಪಟ್ಟುಹಿಡಿದಿದ್ದರೆ, ಆಸೆಬುರುಕಿ ಸಂಧ್ಯಾ ಮಾತ್ರ ನನಗೆ ವಂಶವೃಕ್ಷದಲ್ಲಿ ಹೆಸರು ಬೇಕು ಎಂದು ಪಟ್ಟುಹಿಡಿದು ಕುಳಿತಿದ್ದಾಳೆ. ತಾನು ಗರ್ಭಿಣಿ ಎಂದು ಸುಳ್ಳು ಹೇಳಿಕೊಂಡಿರುವ ಸಂಧ್ಯಾ ಅಣ್ಣನಿಗೂ ಮಗುವಿನ ಆಣೆ ಹಾಕಿ ವಂಶವೃಕ್ಷದಲ್ಲಿ ಹೆಸರು ಸೇರಿಸಿದ್ದಾರೆ. ಒಟ್ಟಿನಲ್ಲಿ ಇನ್ನುಮುಂದೆ ಸಂಧ್ಯಾಳಿಂದ ತುಳಸಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವುದು ಸಾಬೀತಾಗಿದೆ.

ಒಂದೆಡೆ  ದೀಪಿಕಾ, ಶಾರ್ವರಿಯಾದರೆ ಇನ್ನೊಂದೆಡೆ ಖುದ್ದು ಮಗಳು ಸಂಧ್ಯಾಳೇ ತುಳಸಿಗೆ ವಿಲನ್​ ಆಗಿದ್ದಾಳೆ. ಇದೊಂದು ಕ್ಯಾರೆಕ್ಟರ್​ ಆಗಿದ್ದರೂ ಸಂಧ್ಯಾ ವಿರುದ್ಧ ಶ್ರೀರಸ್ತು ಶುಭಮಸ್ತು ಸೀರಿಯಲ್​ ಪ್ರೇಮಿಗಳು ಕಿಡಿ ಕಾರುತ್ತಿದ್ದಾರೆ. ಇಂಥ ಒಬ್ಬಳು ಮಗಳು ಮನೆಯಲ್ಲಿ ಇದ್ದರೆ ಸರ್ವನಾಶ ಎನ್ನುತ್ತಿದ್ದಾರೆ. ಇನ್ನು ಹಲವರು ನಿರ್ದೇಶಕರೇ ದಯವಿಟ್ಟು ಈ ಸಂಧ್ಯಾ ಕ್ಯಾರೆಕ್ಟರ್​ ಅನ್ನು ತೆಗೆದುಹಾಕಿ, ಇಲ್ಲದಿದ್ದರೆ ಸ್ಟೈಕ್​ ಮಾಡುತ್ತೇವೆ, ಸೀರಿಯಲ್​ ನೋಡುವುದನ್ನು ಬ್ಯಾನ್​ ಮಾಡುತ್ತೇವೆ ಎಂದೆಲ್ಲಾ ಹೇಳುತ್ತಿದ್ದಾರೆ. ಒಂದು ಪಾತ್ರ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ಕಿರಿಕ್​ ಹುಟ್ಟಿಸುತ್ತದೆ ಎನ್ನುವುದಕ್ಕೆ ನೆಟ್ಟಿಗರ ಈ ಮಾತೇ ಸಾಕ್ಷಿಯಾಗಿದೆ. ಅಷ್ಟಕ್ಕೂ ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ ಕೂಡ ಇದನ್ನೇ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಜನರು ಹೊರಗಡೆ ಹೋದಾಗ ಜನ ತಮ್ಮನ್ನು ಹೇಗೆ ಕೆಟ್ಟ ರೀತಿಯಲ್ಲಿ ನೋಡುತ್ತಾರೆ ಎನ್ನುವುದನ್ನು ಹೇಳಿದ್ದರು. ಆ ಮಟ್ಟಿಗೆ ಪಾತ್ರ ಜೀವಂತಿಕೆ ತುಂಬಿದೆ. 

ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ