ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...

By Suvarna News  |  First Published Feb 29, 2024, 3:58 PM IST

ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​: ಪ್ರೇಕ್ಷಕರಿಂದ ಭಾರಿ ವಿರೋಧ! ಪ್ರೊಮೋ ನೋಡಿ ನೆಟ್ಟಿಗರು   ಏನೆಲ್ಲಾ ಹೇಳಿದ್ರು ನೋಡಿ...  
 


  ಇತ್ತೀಚೆಗೆ ಕಾಂಟ್ರವರ್ಸಿ ವಿಷಯಗಳಿಂದಲೇ ಬಹಳ ಚರ್ಚೆಯಲ್ಲಿರುವ ನಟ ಎಂದರೆ  ಪ್ರಕಾಶ್​ ರಾಜ್.​ ಇವರು ಏನೇ  ಮಾತನಾಡಿದರೂ ಅದು ಸುದ್ದಿಯಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಯಾರಾದರೂ ಏನೇ ಮಾತನಾಡಲಿ ಅಥವಾ ಪ್ರಧಾನಿಯವರು ಏನಾದರೂ ಹೇಳಿಕೆ ನೀಡಲಿ, ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಲಿ ಅದಕ್ಕೆ ಏಕಾಏಕಿ ಟೀಕೆ ಮಾಡುವುದು ಎಂದರೆ ಪ್ರಕಾಶ್​ ರಾಜ್​ ಅವರಿಗೆ ಇನ್ನಿಲ್ಲದ ಖುಷಿ. ಅಷ್ಟೇ ಅಲ್ಲದೇ ಬಿಜೆಪಿ ಪರವಾಗಿ ಯಾರಾದರೂ ಏನಾದರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದರೆ ಅವರ ಕಾಲೆಳೆಯುವುದು ಮೊದಲು ಇವರೇ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಪ್ರಧಾನಿ ಬೆಂಬಲಿಗರಿಂದ ಪ್ರಕಾಶ್​ ರಾಜ್​ ಸಕತ್​ ಟ್ರೋಲ್​ಗೆ ಒಳಗಾಗುವುದು ನಡೆದೇ ಇದೆ. ಇವರ ಮಾತನ್ನು ಬಹುತೇಕ ಕಾಂಗ್ರೆಸ್ಸಿಗರು ಒಪ್ಪಿ ಅದಕ್ಕೆ  ಕಮೆಂಟ್​ ಹಾಕಿದರೆ, ಬಿಜೆಪಿ ಬೆಂಬಲಿಗರು ಮಾತ್ರ ಅವರು ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳುವ ಮೂಲಕ ಪದೇ ಪದೇ ಟಾಂಗ್​ ಕೊಡುವುದು ಉಂಟು.

ಇದೀಗ, ಪ್ರಕಾಶ್​ ಅವರನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಡ್ರಾಮಾ ವೇದಿಕೆಗೆ ವಿಶೇಷ ಗೆಸ್ಟ್ ಆಗಿ ಬಂದ ರಾಷ್ಟಪ್ರಶಸ್ತಿ ವಿಜೇತ ಬಹುಭಾಷಾ ನಟ, ಅಪ್ರತಿಮ ಕಲಾವಿದ ಪ್ರಕಾಶ್ ರಾಜ್ ಎನ್ನುವ ಶೀರ್ಷಿಕೆಯಡಿ ಈ ಪ್ರೊಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಪ್ರಕಾಶ್​ ರಾಜ್​ ಅವರು ಶಂಕರ್​ನಾಗ್​ ಅವರನ್ನು ಹೊಗಳಿರುವುದನ್ನು ನೋಡಬಹುದು.

Tap to resize

Latest Videos

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಆದರೆ ಈ ಪ್ರೊಮೋ ನೋಡುತ್ತಿದ್ದಂತೆಯೇ ಇವರನ್ನು ಆಹ್ವಾನಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಟೀಕಾಪ್ರಹಾರವೇ ನಡೆದುಬಿಟ್ಟಿದೆ. ಡ್ರಾಮಾ ಜ್ಯೂನಿಯರ್ಸ್​ ಅಂಥ ವೇದಿಕೆಯಲ್ಲಿ ಇಂಥವರನ್ನು ಕರೆದಿರುವುದು ಸರಿಯಾದುದಲ್ಲ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ತಾವು ಚಾನೆಲ್​ ನೋಡುವುದನ್ನೆ ಬಹಿಷ್ಕಾರ ಮಾಡುತ್ತೇವೆ ಎಂದಿದ್ದಾರೆ! ಕೆಲವರು ಅತ್ಯಂತ ಕೀಳುಮಟ್ಟದ ಪದಪ್ರಯೋಗ ಮಾಡಿ, ಪ್ರಕಾಶ್​ ಅವರನ್ನು ಕರೆಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಕಲಬೆರಕೆ ಹಿಂದೂ ವಿರೋಧಿಗೆ ಇಷ್ಟೊಂದು ಮರ್ಯಾದೆ ಕೊಟ್ಟಿರುವುದು ನಾಚಿಕೆಗೇಡು ಎಂದು ನವೀನ್​ ಎನ್ನುವವರು ಬರೆದಿದ್ದರೆ, ದೇಶ ದ್ರೋಹಿಗೆ ಮಣೆ ಹಾಕುವ ವಾಹಿನಿಗೇ ಧಿಕ್ಕಾರ ಎಂದು ಗಿರೀಶ್​ ಎನ್ನುವವರು ಕಮೆಂಟ್​ ಹಾಕಿದ್ದಾರೆ. 

ಅಂದಹಾಗೆ, ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಇದಾಗಲೇ ಹಲವಾರು ತಾರೆಗಳ ಆಗಮನವಾಗಿದೆ. ಅವರಲ್ಲಿ ಹೆಚ್ಚಾಗಿ ಎಲ್ಲರೂ ಚಿತ್ರರಂಗಕ್ಕೆ ಸೇರಿದವರೇ. ಆದರೆ ಹಿಂದೆ ಎಂದಿಗೂ ಆಗದ ರೀತಿಯಲ್ಲಿ ಈ ಸಲ ಧಿಕ್ಕಾರ ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಿಂದ ಕರೆದಿರುವ ಬಗ್ಗೆ ಹಲವರು ಇದೇ ವೇಳೆ ಟೀಕಿಸಿದ್ದು, ಇಂಥವರನ್ನು ಒಂದು ಅದ್ಭುತ ವೇದಿಕೆಗೆ ಕರೆತಂದಿರುವುದು ಸರಿಯಲ್ಲ ಎಂದಿದ್ದಾರೆ. 

ನಟನಾಗಬೇಕೆಂದ್ರೆ ಸಿನಿಮಾನೇ ಯಾಕೆ ಮಾಡ್ಬೇಕು? ದುಡ್ಡಿಗಾಗಿ ವಿಲನ್ನೂ ಆಗ್ಬಿಟ್ಟೆ: ಪ್ರಕಾಶ್​ ರಾಜ್​

click me!