Ramachari: ನಾರಾಯಣ ಶಾಸ್ತ್ರಿಗೆ ಮುಂಜಾವದಲ್ಲೇ ಬಿತ್ತು ರಾಮಾಚಾರಿ ಚಾರು ಮದುವೆ ಸಪ್ನ!

Published : Jul 01, 2022, 04:25 PM IST
Ramachari: ನಾರಾಯಣ ಶಾಸ್ತ್ರಿಗೆ ಮುಂಜಾವದಲ್ಲೇ ಬಿತ್ತು ರಾಮಾಚಾರಿ ಚಾರು ಮದುವೆ ಸಪ್ನ!

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ಹೊಸ ಬಗೆಯ ತಿರುವುಗಳು ಸೀರಿಯಲ್ ಬಗ್ಗೆ ಕುತೂಹಲ ಹೆಚ್ಚಿಸುತ್ತಿವೆ. ಸದ್ಯಕ್ಕೀಗ ರಾಮಾಚಾರಿ ತಂದೆ ನಾರಾಯಣ ಶಾಸ್ತ್ರಿಗಳಿಗೆ ಚಾರು ಜೊತೆಗೆ ರಾಮಾಚಾರಿ ಮದ್ವೆ ಆಗೋ ಕನಸು ಬಿದ್ದಿದೆ, ಅದೂ ಮುಂಜಾವದಲ್ಲಿ. ಬೆಳಗಿಗೂ ಮುಂಚೆ ಬೀಳುವ ಈ ಕನಸು ಸುಳ್ಳಾಗಲ್ಲ ಅಂತಾರೆ.

ರಾಮಾಚಾರಿ ಸೀರಿಯಲ್‌ (Ramachari serial)  ಇಂಟರೆಸ್ಟಿಂಗ್(Interesting) ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕುತೂಹಲ ಹೆಚ್ಚಿಸುತ್ತಾ ಹೋಗುತ್ತಿದೆ. ಸಂಸ್ಕಾರ ಕಲಿಯೋದಕ್ಕೆ ಅಂತ ರಾಮಾಚಾರಿಯ ಮನೆಗೆ ಬಂದು ರಾಮಾಚಾರಿಯ ತಂಗಿಯ ಲೈಫ(Life)ನ್ನೇ ಹಾಳು ಮಾಡಿದ ಚಾರುಲತಾ ಮೇಲೆ ಮನೆಯವರೆಲ್ಲರ ಸಿಟ್ಟಿದೆ. ರಾಮಾಚಾರಿಯೂ ಇಂಥಾ ಹೀನ ಕೆಲಸಕ್ಕೆ ಅವಳ ಜೊತೆಗೆ ಯುದ್ಧವನ್ನೇ ಸಾರಿದ್ದಾನೆ. ಅವಳ ಜೊತೆಗೆ ಕೆಲಸ ಮಾಡೋದಿಲ್ಲ ಅಂತ ಬಾಸ್‌ಗೆ ಹೇಳಿದ್ದಾನೆ. ಅವಳ ಪ್ರತೀ ಮಾತನ್ನೂ ನಿರ್ಲಕ್ಷ್ಯ(Neglect) ಮಾಡುತ್ತಿದ್ದಾನೆ. ಬಾಸ್ ಇವರಿಬ್ಬರನ್ನು ಬೇರೆಡೆಗೆ ಶಿಫ್ಟ್(Shift) ಮಾಡೋದಕ್ಕೆ ಹದಿನೈದು ದಿನಗಳ ಕಾಲಾವಕಾಶ ಕೇಳಿದ್ದಾರೆ.

ಇತ್ತ ಈ ಕಂಪನಿಯ ಒಡೆಯ ಜೈ ಶಂಕರ್ ಮಗಳು ಚಾರುಗೆ ಒಂದು ಟಾಸ್ಕ್ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಅವಳು ಮಾಡಿದ ಕೆಲಸ ಹೇಗಿತ್ತು ಅನ್ನೋದರ ಬಗ್ಗೆ ರಾಮಾಚಾರಿಯಿಂದ ರಿಪೋರ್ಟ್(Report) ಪಡೆದುಕೊಂಡು ಬರಲು ಕಳಿಸಿದ್ದಾರೆ. ಅದರಲ್ಲಿ ಅವಳ ಪರ್ಫಾಮೆನ್ಸ್ ಬಗ್ಗೆ ಬೆಸ್ಟ್ ಅನ್ನೋ ಮಾತುಗಳಿದ್ದರೆ ಅವಳು ಈ ಕಂಪನಿಯ ಮುಖ್ಯಸ್ಥೆ ಆಗಬಹುದು. ಇಲ್ಲವಾದರೆ ಅವಳು ಅವಳ ಬಗ್ಗೆ ಬೆಸ್ಟ್ ರಿಪೋರ್ಟ್ ಬರೋವರೆಗೂ ಕಾಯಬೇಕು. ರಾಮಾಚಾರಿ ಬಳಿ ಈ ರಿಪೋರ್ಟ್ ತರೋದು ಅವಳಿಗೆ ದೊಡ್ಡ ತಲೆನೋವಾಗಿದೆ. ಆತನ ತಂಗಿಯ ಮದುವೆ ಕೆಡಿಸಿ ಅವನಿಗೆ ಜೀವನದಲ್ಲಿ ಮರೆಯಲಾಗದ ನೋವು ಕೊಟ್ಟಿದ್ದಾಳೆ ಚಾರು. ಇದೀಗ ಅವನ ಮುಂದೆಯೇ ರಿಪೋರ್ಟ್ ಗೆ ಕೈ ಚಾಚಬೇಕು. ಅವಳಿಗದು ಇಗೋ ಪ್ರಶ್ನೆಯೂ ಹೌದು. ಆದರೆ ಈಗ ಇಗೋ ಬಿಡದಿದ್ದರೆ ಅವಳಿಗೆ ಕಂಪನಿ ಎಂಡಿ (MD) ಆಗೋ ಯೋಗ ಬರಲ್ಲ. ಮನಸ್ಸಿಲ್ಲದ ಮನಸ್ಸಿಂದ ರಾಮಾಚಾರಿಗೆ ಕಾಲ್ (Call) ಮಾಡಿದ್ದಾಳೆ.

ಇದನ್ನೂ ಓದಿ: Kannadathi serial: ಹವಿ ಮದುವೆಯಲ್ಲಿ ರಾಮಾಚಾರಿಯ ಪೌರೋಹಿತ್ಯಕ್ಕೆ ಫುಲ್ ಮಾರ್ಕ್ಸ್ ನೀಡಿದ ಫ್ಯಾನ್ಸ್

ಅತ್ತ ರಾಮಾಚಾರಿ ಮನೆಯವರಿಗೆ ಚಾರುಗೂ ರಾಮಾಚಾರಿಗೂ ಪ್ರೀತಿ ಇರೋ ಬಗ್ಗೆ ಅನುಮಾನ. ಇದೀಗ ಅವರೆಲ್ಲ ಇರುವಾಗಲೇ ಚಾರು ಫೋನ್ ಬಂದಿದೆ. ಮತ್ತೆ ಮನೆಯವರ ಕಣ್ಣು ಕೆಂಪಾಗಿದೆ. ಆದರೆ ರಾಮಾಚಾರಿ ತಾನು ಅವಳ ಬಳಿ ಮಾತು ಬಿಟ್ಟಿರೋ ವಿಚಾರ ಹೇಳ್ತಾನೆ. ಫೋನ್ ಸ್ವಿಚಾಫ್ (Switch off) ಮಾಡಲು ಅತ್ತಿಗೆಗೆ ತಿಳಿಸುತ್ತಾನೆ. ಆದರೂ ಮನೆಯವರ ಅನುಮಾನ ಪೂರ್ತಿ ಬಗೆಹರಿದಿಲ್ಲ.

ಇಂಥಾ ಸಮಯದಲ್ಲೇ ಮುಂಜಾವದಲ್ಲಿ ರಾಮಾಚಾರಿ ತಂದೆ ನಾರಾಯಣ ಶಾಸ್ತ್ರಿಗಳಿಗೆ ಒಂದು ಕನಸು ಬಿದ್ದಿದೆ. ಮುಂಜಾವದಲ್ಲಿ ಬಿದ್ದ ಆ ಕನಸಿಗೆ ಶಾಸ್ತ್ರಿಗಳು ಬೆಚ್ಚಿ ಬಿದ್ದಿದ್ದಾರೆ. ಶಾಸ್ತ್ರಗಳನ್ನು, ನಿಮಿತ್ತಗಳನ್ನು ಬಲವಾಗಿ ನಂಬುವ ಅವರಿಗೆ ತನ್ನ ಮುಂಜಾವಿನ ಕನಸು ಚಿಂತನೆಗೆ ಹಚ್ಚಿದೆ. ಚಾರು ಮತ್ತು ರಾಮಾಚಾರಿ ಮದುವೆ ಆಗುತ್ತಿರುವ ಕನಸಿದು.

ಇದನ್ನೂ ಓದಿ: Kannadathi : ರಾಮಾಚಾರಿ ಪೌರೋಹಿತ್ಯ, ಆಸ್ಪತ್ರೆಯಲ್ಲೇ ಹವಿ ಮದ್ವೆ!

ಈ ಕನಸಿನ ಬಗ್ಗೆ ಕೇಳಬೇಕು ಅಂತ ರಾಮಾಚಾರಿ ಆಫೀಸಿಂದ ಬರುವ ಸಮಯವನ್ನೇ ಕಾಯುತ್ತಿದ್ದ ಮನೆಯವರಿಗೆ ಮತ್ತೊಂದು ಶಾಕ್(Shock) ರಾಮಾಚಾರಿ ನೀಡಿದ್ದಾನೆ. ಆಫೀಸಿಂದ ಬಂದವನೇ. 'ಚಾರು ಒಂದು ಲೋಟ ನೀರು ಕೊಡು' ಅಂತ ಕೇಳಿದ್ದಾನೆ. ಇದು ಮನೆಯವರ ಆತಂಕ ಹೆಚ್ಚಿಸಿದೆ. ಆದರೆ ರಾಮಾಚಾರಿ ಇದಕ್ಕೆ ಸಾಬೂಬು ಕೊಟ್ಟಿದ್ದಾನೆ. ಮತ್ತೊಂದೆಡೆ ಆತನನ್ನೇ ಮದುವೆ ಆಗಲು ಕಾಯುತ್ತಿದ್ದ ಅತ್ತೆ ಮಗಳಿಗೆ ತಾನು ಅವಳನ್ನು ಮದುವೆ ಆಗಲ್ಲ ಅಂತ ಸ್ಪಷ್ಟವಾಗಿ ತಿಳಿಸಿದ್ದಾನೆ. ಅವಳು ಹೃದಯ ಒಡೆದು ಹೋದಂತೆ ಅಳುತ್ತಿದ್ದಾಳೆ.

ಇದನ್ನೂ ಓದಿ: Hitler Kalyana: ಮನೆಬಿಟ್ಟು ಟೆಂಟ್ ಸೇರಿದ ಅಜ್ಜಿ, ಈಗಲಾದ್ರೂ ಎಜೆ ಲೀಲಾ ಒಂದಾಗದೇ ವಿಧಿಯಿಲ್ಲ

ಇನ್ನೊಂದೆಡೆ ಚಾರು ತನ್ನ ಕೆಲಸದ ಬಗ್ಗೆ ರಿಪೋರ್ಟ್ ನೀಡುವಂತೆ ರಾಮಾಚಾರಿಯನ್ನು ಕೇಳಿದ್ದಾಳೆ, ಆದರೆ ರಾಮಾಚಾರಿ ಒಪ್ಪಿಲ್ಲ. ಈವರೆಗೆ ಅವಳು ಮಾಡಿರುವ ಕೆಲಸದ ಬಗ್ಗೆ ರಾಮಾಚಾರಿಗೆ ತೃಪ್ತಿ ಇಲ್ಲ. ಅವಳಿಗೆ ಆತ ಹದಿನೈದು ದಿನಗಳ ಕಾಲಾವಕಾಶ ನೀಡಿದ್ದಾನೆ. ಅಷ್ಟರೊಳಗೆ ಅವಳು ತನ್ನ ಕೆಲಸದ ಸಾಮರ್ಥ್ಯ ತೋರಿಸಬೇಕಿದೆ.

 

ಸದ್ಯಕ್ಕೀಗ ಇವರ ನಡುವೆ ರೊಮ್ಯಾಂಟಿಕ್ ಸೀನ್‌(Romantic scene) ಗಳು ಯಾವಾಗ ಶುರುವಾಗುತ್ತೆ ಅಂತ ಜನ ಕಾಯ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?