ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಬ್ರೇಕ್?; ಗೊಂದಲದಲ್ಲಿ ಅಭಿಮಾನಿಗಳು

Published : May 24, 2023, 05:13 PM IST
 ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಬ್ರೇಕ್?; ಗೊಂದಲದಲ್ಲಿ ಅಭಿಮಾನಿಗಳು

ಸಾರಾಂಶ

ಹೆಂಡ್ತಿ ಸಿಕ್ಕಿದಳು ಅಂತ ಖುಷಿ ಪಡುವ ಸಮಯದಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್‌....   

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ್ ಧಾರಾವಾಹಿ ದಿನದಿಂದ ದಿನಕ್ಕೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ಸೊಸೆಯಂದಿರ ಒತ್ತಾಯಕ್ಕೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡ ಎಜಿ ಈಗ ಜೀವನದಲ್ಲಿ ಸಖತ್ ಖುಷಿಯಾಗಿದ್ದಾರೆ. ಲೀಲಾಳ ಮೇಲೆ ಪ್ರೀತಿ ಹುಟ್ಟಿ ಹಸೆ ಮಣೆ ಏರುವ ಕ್ಷಣ ಎದುರಾಯಿತ್ತು ಅಷ್ಟರಲ್ಲಿ ಅಂತರಾ ಎಂಟ್ರಿ ಕೊಟ್ಟು ಇಡೀ ಕಥೆಯನ್ನು ಬದಲಾಯಿಸಿದರು. ಕಥೆಯಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ ಅಂದುಕೊಂಡರೆ ಈಗ ಧಾರಾವಾಹಿ ಟೈಮಿಂಗ್‌ನಲ್ಲೇ ಟ್ವಿಸ್ಟ್‌ ಸಿಕಿದೆ.

ಹೌದು!  ಮೇ 29 ಸೋಮವಾರದಿಂದ ಸಂಜೆ 7 ಗಂಟೆಗೆ ಅಮೃತಧಾರೆ ಎಂಬ ಹೊಸ ಧಾರಾವಾಹಿ ಆರಂಭವಾಗಲಿದೆ. ಪ್ರಮುಖ ಪಾತ್ರದಲ್ಲಿ ನಟಿ ಛಾಯಾ ಸಿಂಗ್  ಮತ್ತು ರಾಜೇಶ್‌ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋಗಳು ಸಖತ್ ವೈರಲ್ ಆಗುತ್ತಿದೆ. ಇಬ್ಬರ ಕಿತ್ತಾಟ ಪ್ರೀತಿ ಮತ್ತು ಕಾಮಿಡಿ ನೋಡಿ ತಪ್ಪದೆ ನೋಡಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ. 

Hitler Kalyana serial : ಮುಗ್ಧ ಲೀಲಾ ಕೊಲೆಯಾಗ್ತಾಳಾ? ಎತ್ತ ಸಾಗುತ್ತೆ ಸೀರಿಯಲ್?

ಈಗಾಗಿರುವ ಗೊಂದಲ ಏನೆಂದರೆ ಹಿಟ್ಲರ್ ಕಲ್ಯಾಣ ಪ್ರಸಾರವಾಗುತ್ತಿದ್ದ ಸಮಯಕ್ಕೆ ಅಮೃತಾಧಾರೆ ಬರುತ್ತಿರುವ ಕಾರಣ ಹಿಟ್ಲರ್ ಕಲ್ಯಾಣ ಯಾವ ಸಮಯಕ್ಕೆ ಪ್ರಸಾರವಾಗಲಿದೆ? ಅಥವಾ ಧಾರಾವಾಹಿ ಕಥೆ ಮುಗಿಯುತ್ತೋ ಏನೋ ಅನ್ನೋ ಗೊಂದಲದಲ್ಲಿ ಇದ್ದಾರೆ. ಒಟ್ಟಿನಲ್ಲಿ ಸಂಜೆ 7 ಗಂಟೆಗೆ ಧಾರಾವಾಹಿ ಪ್ರಸಾರ ಆಗುತ್ತೆ ಅಂದ್ರೆ ಪಕ್ಕಾ ಸೂಪರ್ ಹಿಟ್ ಅನ್ನೋದು ವೀಕ್ಷಕರ ಲೆಕ್ಕಾಚಾರ. 

ಹಿಟ್ಲರ್ ಕಲ್ಯಾಣ ಕಥೆ ಏನು?

ಎಜಿ ಮತ್ತು ಲೀಲಾ ಮದುವೆ ದಿನ ಅಂತರಾ ತಲೆ ಸುತ್ತಿ ಬಿದ್ದ ನಂತರ ತಮ್ಮ ಹಿಂದಿನ ಜೀವನದಲ್ಲಿ ಏನೆಲ್ಲಾ ಆಗಿದೆ ಎಂದು ಮರೆದು ಬಿಟ್ಟಿದ್ದಾರೆ. ಬೇಕೆಂದು ಪ್ಲ್ಯಾನ್ ಮಾಡಿ ನಿಲ್ಲಿಸಲು ಮುಂದೆ ಬಂದ ಅಂತರಾ ಸಮಸ್ಯೆಗೆ ಸಿಲುಕಿಕೊಂಡರು ಕೊನೆಗೂ ಲೀಲಾ ಸಹಾಯ ಪಡೆದುಕೊಂಡು ದೊಡ್ಡ ಮನೆಯಲ್ಲಿ ಬದುಕುತ್ತಿದ್ದಾರೆ. ಎಜಿ ಮನೆಯಲ್ಲಿ ಲೀಲಾ ಮನೆ ಕೆಲಸ ಮಾಡುವವಳು ಎಂದು ಹೇಳಿಕೊಂಡು ಮತ್ತೊಮ್ಮೆ ಎಜಿ ಹಾಗೂ ಅಂತರಾಳನ್ನು ಒಂದು ಮಾಡಲು ಮುಂದಾಗಿದ್ದಾರೆ. 

ಗೋಲ್ಡನ್ ಸೀರೇಲಿ ಚಿನ್ನದ ಗೊಂಬೆಯಂತೆ ಮಿಂಚಿದ ಹಿಟ್ಲರ್ ಕಲ್ಯಾಣದ ಲೀಲಾ ಆಲಿಯಾಸ್ ಮಲೈಕಾ

ಲೀಲಾ ಅಂತರಾ ಕ್ಲೋಸ್ ಆಗಿರುವುದನ್ನು ಕಂಡು ಇಬ್ಬರು ಸೊಸೆಯಂದಿರು ಸಂಬಂಧ ಕಿತ್ತು ಹಾಕಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಏಜಿಗೆ ಲೀಲಾ ಪ್ರೀತಿ ಕಾಣಿಸುತ್ತಲೇ ಇಲ್ವಾ? ಲೀಲಾಳನ್ನು ಪ್ರೀತಿ ಮಾಡಿದ್ದು ಸುಳ್ಳಾ? ಮದುವೆ ತನಕ ಸಂಬಂಧ ತಂದು ಯಾಕೆ ಮುರಿದಿದ್ದು ಎಂದು ಕಿರುತೆರೆ ವೀಕ್ಷಕರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?