ಜನರು ಅನು ಸಿರಿಮನೆಯನ್ನು ಸಂಪೂರ್ಣವಾಗಿ ಮರೆಯುವಂತೆ ಮಾಡಬೇಕು: ಮೇಘಾ ಶೆಟ್ಟಿ

By Vaishnavi ChandrashekarFirst Published May 23, 2023, 4:38 PM IST
Highlights

ಚಿತ್ರೀಕರಣ ಮುಗಿದ ದಿನ ಭಾವುಕರಾದ ಅನು ಸಿರಿಮನೆ. ಕೊನೆ ದಿನ ಅನಿರುದ್ಧ್ ಮಿಸ್ ಮಾಡಿಕೊಳ್ಳುತ್ತಿದ್ದೀವಿ ಎಂದ ತಂಡ... 

ನಾಲ್ಕು ವರ್ಷಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ ಅನು ಸಿರಿಮನೆ ಚಿತ್ರೀಕರಣದ ಕೊನೆ ದಿನ ನೆನದು ಭಾವುಕರಾಗಿದ್ದಾರೆ. 'ಧಾರಾವಾಹಿಯ ಕೊನೆ ದಿನ ಚಿತ್ರೀಕರಣ ಮಾಡುವಾಗ ಭಾವುಕಳಾದೆ. ನನ್ನಿಂದ ಚಿತ್ರೀಕರಣ ಆರಂಭವಾಗಿ ನನ್ನಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಫಸ್ಟ್‌ ಶೂಟ್‌ ದಿನ ನಾನು ಇದ್ದೆ ಕೊನೆ ಶೂಟ್‌ ದಿನನೂ ನಾನು ಇದ್ದೆ. ನಾಲ್ಕು ವರ್ಷಗಳಿಂದ ಧಾರಾವಾಹಿ ಸೆಟ್‌ ನನ್ನ ಎರಡನೇ ಮನೆ ಆಗಿಬಿಟ್ಟಿತ್ತು. ಈಗ ನನ್ನ ಕುಟುಂಬ ಬಿಟ್ಟು ದೂರ ಹೋಗುತ್ತಿರುವೆ ಅನಿಸುತ್ತದೆ. ನಾವು ಒಟ್ಟು ಸಾವಿರ ಎಪಿಸೋಡ್ ಶೂಟ್ ಮಾಡಿದ್ದೀವಿ..ಸಾವಿರ ಎಪಿಸೋಡ್‌ನಲ್ಲೂ ಎಲ್ಲರು ಒಟ್ಟಿಗೆ ಇದ್ದೀವಿ' ಎಂದು ಅನು ಸಿರಿಮನೆ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

20 ವರ್ಷ ಹುಡುಗಿ ಅನು ಸಿರಿಮನೆ 45 ವರ್ಷದ ಫುಲ್ ಸೆಟಲ್‌ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. 'ಅನೇಕರಿಗೆ ನನ್ನ ನಿಜವಾದ ಹೆಸರು ಏನೆಂದು ಗೊತ್ತಿಲ್ಲ ಹೀಗಾಗಿ ಯಾರೇ ನೋಡಿದರೂ ಅನು ಅನು ಎಂದು ಮಾತನಾಡಿಸುತ್ತಾರೆ. ರಾಜ್ಯದ ಪ್ರಮುಖ ಜಾಗಗಳಲ್ಲಿ ನಾವು ಧಾರಾವಾಹಿ ಚಿತ್ರೀಕರಣ ಮಾಡಿದ್ದೀವಿ ಪ್ರತಿ ಜಾಗದಲ್ಲೂ ಜನರು ನನಗೆ ಹೆಚ್ಚಿಗೆ ಪ್ರೀತಿ ಕೊಟ್ಟಿದ್ದಾರೆ. ಕೆಲವೊಮ್ಮೆ ಚಿತ್ರೀಕರಣ ಮಾಡುವ ಜಾಗಕ್ಕೆ ಅಭಿಮಾನಿಗಳು ಊಟ ತೆಗೆದುಕೊಂಡು ಬರುತ್ತಾರೆ. ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಜೀವನದಲ್ಲಿ ಖುಷಿಯಾಗಿರುವೆ' ಎಂದು ಅನು ಹೇಳಿದ್ದಾರೆ. 

ಜೊತೆ ಜೊತೆಯಲಿ ಧಾರಾವಾಹಿ ಇಂದು ಮುಕ್ತಾಯ; ಅನು ಸಿರಿಮನೆ ಭಾವುಕ

'ಅನು ಸಿರಿಮನೆ ಪಾತ್ರದ ಟ್ರಾನ್ಸ್‌ಫಾರ್ಮೆಷನ್ ನಲ್ಲಿ ಬ್ಯುಸಿಯಾಗಿರುವೆ. ನನ್ನ ಎರಡು ಪ್ರಾಜೆಕ್ಟ್‌ ಕೈವಾ ಮತ್ತು ಆಪರೇಷನ್‌ ಲಂಡನ್‌ ಕೆಫೆ ಪೋಸ್ಟ್‌ ಪ್ರೋಡಕ್ಷನ್‌ ನಡೆಯುತ್ತಿದೆ. ಕೆಲವೊಂದು ಕಥೆಗಳನ್ನು ಕೇಳುತ್ತಿರುವೆ ಅರ್ಥ ಇರುವ ಸಿನಿಮಾ ಹುಡುಕುತ್ತಿರುವೆ. ಜನರಲ್ಲಿ ಇರುವ ಅನು ಸಿರಿಮನೆ ಇಮೇಜ್‌ನ ಬದಲಾಯಿಸಬೇಕು' ಎಂದಿದ್ದಾರೆ ಅನು. 

ಎಲ್ಲರನ್ನು ಒಂದು ಮಾಡಿದ ಶಾರದಮ್ಮ; ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯಕ್ಕೆ ನಿಮ್ಮ ಅಭಿಪ್ರಾಯವೇನು?

ಅನು ಸಿರಿಮನೆ ಮತ್ತು ಅರ್ಯವರ್ಧನ್ ಜೋಡಿ ಸೂಪರ್ ಹಿಟ್ ಆಗಿತ್ತು. ಕೆಲವೊಂದು ವೈಯಕ್ತಿಕ ಕಾರಣಗಳಿಂದ ಅನಿರುದ್ಧ್ ಹೊರ ನಡೆದಿದ್ದಾರೆ. 'ಕಲಾವಿದರಾಗಿ ನಾವು ಮುಂದೆ ನಡೆಯಬೇಕು, ಕೆಲವೊಂದು ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು ಇರುವುದಲ್ಲಿ ನೆಮ್ಮದಿಯಾಗಿ ಜೀವನ ಮತ್ತು ಕೆಲಸ ನಡೆಸಬೇಕು. ನಾನು ಅದನೇ ಮಾಡುತ್ತಿರುವುದು. ಚಿತ್ರೀಕರಣ ಮಾಡುವ ದಿನ ಅನಿರುದ್ಧ್ ಅವರನ್ನು ಮಿಸ್ ಮಾಡಿಕೊಂಡೆವು . ಈ ಟ್ಯಾಲೆಂಟ್ ಇರುವ ಟೀಮ್‌ ಜೊತೆ ಕೆಲಸ ಮಾಡುವುದು ಖುಷಿ ಕೊಟ್ಟಿದೆ. ಅದೆಷ್ಟೋ ಒಳ್ಳೆಯ ನೆನಪುಗಳನ್ನು ತೆಗೆದುಕೊಂಡು ಹೋಗುತ್ತಿದ್ದೀನಿ' ಎಂದು ಅನು ಹೇಳಿದ್ದಾರೆ.  
 

click me!