ಅಮೃತಧಾರೆ ಮೆಚ್ಚಿದವರಿಗೆ ಹಾಡುಗಳ ಗುಚ್ಚ ಬಿಡುಗಡೆ, ಕಿರುತೆರೆ ಇತಿಹಾಸದಲ್ಲೇ ಮೊದಲ ಪ್ರಯೋಗ

Published : Jul 31, 2023, 12:50 PM ISTUpdated : Jul 31, 2023, 12:54 PM IST
ಅಮೃತಧಾರೆ ಮೆಚ್ಚಿದವರಿಗೆ ಹಾಡುಗಳ ಗುಚ್ಚ ಬಿಡುಗಡೆ, ಕಿರುತೆರೆ ಇತಿಹಾಸದಲ್ಲೇ ಮೊದಲ ಪ್ರಯೋಗ

ಸಾರಾಂಶ

ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ  ಪಾಪ್ಯುಲರ್ ಸೀರಿಯಲ್. ಕಳೆದ ಮೇ.29ರಿಂದ ಆರಂಭವಾದ ಧಾರವಾಹಿ ತಂಡ ಈಗ ತನ್ನ ಧಾರವಾಹಿಯ ಜನಪ್ರೀಯ ಹಾಡುಗಳ ಗುಚ್ಚವನ್ನು ಬಿಡುಗಡೆ ಮಾಡಿದೆ. 

ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ! ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ! ಬರ್ತಿದೆ ಒಂದು ಬೊಂಬಾಟ್ ಕಥೆ! ಅಂತ ಪ್ರೋಮೋನಲ್ಲೇ ಜನರ ಮನಸ್ಸು ಗೆದ್ದಿದ್ದ ಅಮೃತಧಾರೆ ಈಗ ತನ್ನ ಹಾಡಿನ ಮೂಲಕವೂ ಪ್ರೇಕ್ಷಕರ ಮನಸ್ಸು ಕದ್ದಿದೆ. ಕಳೆದ ಮೇ.29ರಿಂದ ಆರಂಭವಾದ ಧಾರವಾಹಿ ತಂಡ ಈಗ ತನ್ನ ಧಾರವಾಹಿಯ ಜನಪ್ರೀಯ ಹಾಡುಗಳ ಗುಚ್ಚವನ್ನು (JUKEBOX) ಬಿಡುಗಡೆ ಮಾಡಿದೆ. 

ಸಾಮಾನ್ಯವಾಗಿ ಸೀರಿಯಲ್ ಗೆ ಒಂದೇ ಟೈಟಲ್ ಟ್ರ್ಯಾಕ್ ಕೇಳಿದ್ದೇವೆ ಆದರೆ ಜೂಕ್‌ಬಾಕ್ಸ್ ಮೂಲಕ ಕನ್ನಡ ಟೆಲಿವಿಜನ್ ಇತಿಹಾಸದಲ್ಲಿ ಹೊಸ  ಭಾಷ್ಯ ಬರೆಯುತ್ತಿದೆ ಅಮೃತಧಾರೆ ಧಾರವಾಹಿ. ಸಿನೆಮಾಗಳ ಹಾಡನ್ನು ಸೇರಿಸಿ ಜೂಕ್‌ಬಾಕ್ಸ್ ಮಾಡುವುದು ಸಾಮಾನ್ಯ ಆದರೆ ಒಂದು ಸೀರಿಯಲ್‌ಗೆ ಜೂಕ್‌ಬಾಕ್ಸ್ ಹಾಡುಗಳು ಇದೇ ಮೊದಲು. ಅಮೃತಧಾರೆ ಧಾರವಾಹಿ ತಂಡ ಈ ಹೊಸ ಪ್ರಯೋಗ ಮಾಡಿದೆ. ಈ ಜೂಕ್‌ಬಾಕ್ಸ್  ನಲ್ಲಿ ಒಂಬತ್ತು ಪ್ರಮುಖ ಹಾಡುಗಳು ಸೇರಿ ಒಟ್ಟು 18 ಹಾಡುಗಳಿವೆ.

ಅಮೃತಧಾರೆ: ಛಾಯಾ ಸಿಂಗ್ ರಾಜೇಶ್ ನಟರಂಗಗೆ ಅಣ್ಣಾ ಅಂತಿದ್ರಂತೆ! ಕಾರಣವಿಲ್ಲಿದೆ

ದಾವಣಗೆರೆಯಲ್ಲಿ ನಡೆದ ಜಿ ಕನ್ನಡ ಕಲ್ಯಾಣೋತ್ಸವ ಜಾತ್ರೆ ಕಾರ್ಯಕ್ರಮದಲ್ಲಿ ಈ ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾಗಿದೆ. ಇಷ್ಟು ದಿನ ಸೀರಿಯಲ್‌ ಎಪಿಸೋಡ್‌ಗಳಲ್ಲಿ ಹಾಡನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಇನ್ನು ಮುಂದೆ ಪೂರ್ತಿ ಹಾಡನ್ನು ಯೂಟ್ಯೂಬ್‌ನಲ್ಲಿ ನೋಡಿ ಖುಷಿ ಪಡಬಹುದು. ಈ ಹಾಡುಗಳ  ಬಗೆಗಿನ ರೀಲ್ಸ್ ಕೂಡ ಫೇಮಸ್ ಆಗಿತ್ತು. ಮಾತ್ರವಲ್ಲ ಪ್ರತೀದಿನ ಸೀರಿಯಲ್ ಪ್ರೋಮೋ ಹಾಕಿದಾಗ ಪ್ರೇಕ್ಷಕರು ಹಾಡಿನ ಸಾಲನ್ನು ಕಮೆಂಟ್ ಮಾಡಿ ಖುಷಿ ಪಡುತ್ತಿದ್ದರು. ಹೀಗಾಗಿ ಜೀ ಕನ್ನಡ ವಾಹಿನಿ ಮತ್ತು ಧಾರವಾಹಿ ತಂಡ ಪ್ರೇಕ್ಷಕರಿಗಾಗಿಯೇ ಈ ಹಾಡುಗಳ ಗುಚ್ಚ ಮಾಡಿ ರಿಲೀಸ್ ಮಾಡಿದೆ. ಗಾಯಕರಾದ ನಿಹಾಲ್ ತಾವ್ರೋ, ಐಶ್ವರ್ಯ ರಂಗರಾಜನ್ , ರಜತ್ ಹೆಗಡೆ ಹಾಡು ಹಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದು, ಚೇತನ್ ಸೊಲಗಿ ಮತ್ತು ಸುಧೀಂದ್ರ ಭಾರದ್ವಾಜ್ ಸಾಹಿತ್ಯ ಬರೆದಿದ್ದಾರೆ. ಕೋರಸ್ : ನವೀನ್ ವಿಶರಾಧ್, ಇಂಚರ ಶೆಟ್ಟಿ. ಗ್ರಾಫಿಕ್ಸ್: ಸುಮಂತ್ ಅವರದ್ದಾಗಿದೆ.

'ಅಮೃತಧಾರೆ' JUKEBOX ಹಾಡುಗಳ ಲಿಸ್ಟ್
1. ನಾ ಭುವಿಯಂತೆ ಕಾದೆ  
2. ಏನೋ ನವಿರಾದ ಭಾವ 
3. ನಿನ್ನವರ ನಗುವಲಿ  
4. ಒಡನಾಡಿ ಬೇಕಿದೆ  
5. ಸನಿಹ ಸೆಳೆದಂತೆ 
6. ಬೆಳಗುವ ದೀಪವು  
7. ಜೊತೆ ಸಾಗೋ ಕನಸಿದೆ  
8. ತನ್ನವರ ಬದುಕಲಿ  
9. ಯಾರೊ ಕರೆದಂತೆ ಹೆಸರಾ 

ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್‌ ಕನ್ನಡದವಳಲ್ಲ, ಭಾಷೆ ಕಲಿತಿ

ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸಖತ್ ಪಾಪ್ಯುಲರ್ ಸೀರಿಯಲ್. ಇದರಲ್ಲಿ ಗೌತಮ್ ದಿವಾನ್ ಎಂಬ ಲೀಡ್ ಪಾತ್ರದಲ್ಲಿ 'ಮೊಗ್ಗಿನ ಮನಸು' ಸಿನಿಮಾದ ಸ್ಮಾರ್ಟ್ ಲೆಕ್ಚರರ್‌ ರಾಜೇಶ್‌ ನಟರಂಗ ಕಾಣಿಸಿಕೊಂಡಿದ್ದಾರೆ. ಮಹಾ ಸ್ವಾಭಿಮಾನಿ, ಕೊಂಚ ತರಲೆ, ಪ್ರೀತಿಗಾಗಿ ಒಳಗೊಳಗೇ ಹಂಬಲಿಸುವ ಭೂಮಿಕಾ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ.   ಮಧ್ಯ ವಯಸ್ಸಿನ ಗಂಡು ಹೆಣ್ಣಿನ ನಡುವಿನ ಜಗಳ, ರೊಮ್ಯಾನ್ಸ್, ಹೊಂದಾಣಿಕೆಗಳ ಕಥೆ 'ಅಮೃತಧಾರೆ'.  ಉತ್ತಮ ಮಧು ನಿರ್ದೇಶನದಲ್ಲಿ ಧಾರವಾಹಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?