
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಗಂಡ ಚೆನ್ನಾಗಿರಲಿ, ತನ್ನವರಿಗೆ ಏನೂ ಆಗದಿರಲಿ ಎಂದು ಭೂಮಿಕಾ ಸದಾಶಿವ ಎಲ್ಲರಿಂದ ದೂರ ಆಗಿ ಒಂಟಿಯಾಗಿ ಬದುಕುತ್ತಿದ್ದಾಳೆ. ಇತ್ತ ಭೂಮಿಕಾ ಸದಾಶಿವ ಪಾತ್ರಧಾರಿ ಛಾಯಾ ಸಿಂಗ್ ಅವರು ( Chaya Singh ) ರಿಯಲ್ ಪತಿಗೋಸ್ಕರ ಕರ್ವಾ ಚೌತ್ ವ್ರತವನ್ನು ಆಚರಿಸಿದ್ದಾರೆ. ಛಾಯಾ ಸಿಂಗ್ ಅವರು ಬಹುಶಃ ಬೆಂಗಳೂರಿನಲ್ಲಿದ್ದು, ಅವರ ಪತಿ ಕೃಷ್ಣ ಚೆನ್ನೈನಲ್ಲಿದ್ದಿರಬಹುದು. ಹೀಗಾಗಿ ಈ ಜೋಡಿ ವಿಡಿಯೋ ಕಾಲ್ ಮೂಲಕ ಉಪವಾಸವನ್ನು ಮುರಿದಿದೆ.
ಛಾಯಾ ಸಿಂಗ್ ಅವರು ವಿಡಿಯೋ ಕಾಲ್ ಮೂಲಕ ಕರ್ವಾ ಚೌತ್ ವ್ರತ ಮುರಿದಿರುವ ವಿಡಿಯೋವನ್ನು ಕೃಷ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನಗಾಗಿ ತುಂಬ ಹೊತ್ತು ಉಪವಾಸ ಇದ್ದು, ವ್ರತ ಮುರಿದಿದ್ದಾಳೆ ಎಂದು ಕೃಷ್ಣ ಅವರು ಬರೆದುಕೊಂಡಿದ್ದಾರೆ.
ಛಾಯಾ ಸಿಂಗ್ ಅವರು ಕೆಂಪು ಬಣ್ಣದ ಸೀರೆ ಧರಿಸಿದ್ದರು. ವಿಡಿಯೋ ಕಾಲ್ ಮೂಲಕ ಗಂಡನ ಮುಖ ನೋಡಿದರು, ಹಾಗೆಯೇ ಚಂದ್ರನ ದರ್ಶನ ಪಡೆದರು. ಆ ಬಳಿಕ ಉಪವಾಸ ವ್ರತವನ್ನು ಮುರಿದಿದ್ದಾರೆ. ಅಂದಹಾಗೆ ಈ ಜೋಡಿಯದ್ದು ಲವ್ ಮ್ಯಾರೇಜ್. ತಮಿಳು ಸಿನಿಮಾವೊಂದಲ್ಲಿ ನಟಿಸುವಾಗ ಛಾಯಾ ಸಿಂಗ್, ಕೃಷ್ಣ ಅವರ ಭೇಟಿಯಾಗುತ್ತದೆ. ಕೃಷ್ಣ ಅವರು ಆ ತಮಿಳು ಸಿನಿಮಾದಲ್ಲಿ ವಿಲನ್ ಆಗಿದ್ದರೆ, ಛಾಯಾ ಹೀರೋಯಿನ್ ಆಗಿದ್ದರು. 2012ರಲ್ಲಿ ಈ ಮದುವೆ ನಡೆದಿದೆ. ಛಾಯಾ ಸಿಂಗ್ ಅವರು ರಜಪೂತರ ಕುಟುಂಬಸ್ಥರು ಎನ್ನಲಾಗಿದೆ. ಛಾಯಾ ಸಿಂಗ್ ಈಗ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಕೃಷ್ಣ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ತಿಂಗಳಲ್ಲಿ ಈ ಜೋಡಿ ಹತ್ತು ದಿನ ಒಟ್ಟಿಗೆ ಕಳೆಯಬಹುದು ಎನ್ನಲಾಗಿದೆ.
ಕರ್ವಾ ಚೌತ್ (Karva Chauth) ಅಥವಾ ಕರ್ವಾ ಚೌಥ್ ಒಂದು ಹಿಂದು ಧಾರ್ಮಿಕ ಹಬ್ಬವಾಗಿದೆ. ವಿಶೇಷವಾಗಿ ಉತ್ತರ ಭಾರತದ ಮಹಿಳೆಯರು ಇದನ್ನು ಆಚರಿಸುತ್ತಾರೆ. ತಮ್ಮ ಗಂಡನಿಗೆ ದೀರ್ಘಾಯುಷ್ಯ ಸಿಗಲಿ, ಆರೋಗ್ಯದಿಂದ ಇರಲಿ, ಸುಖದ ಜೀವನ ಸಿಗಲಿ ಎಂದು ಈ ವಿಶೇಷ ದಿನದಂದು ಮದುವೆ ಆದ ಮಹಿಳೆಯರುಕ್ಕಾಗಿ ಉಪವಾಸ ವ್ರತ ಮಾಡುತ್ತಾರೆ.
ಕರ್ವಾ ಚೌತ್ ಹಬ್ಬವು ವೈವಾಹಿಕ ಪ್ರೀತಿಯ ಸಂಕೇತವಾಗಿದೆ. ಪತಿಯ ಜೀವನದಲ್ಲಿ ಯಾವುದೇ ಅಪಾಯಗಳು ಆಗದಿರಲಿ, ಆಯುಷ್ಯ ವೃದ್ಧಿಯಾಗಲಿ ಎಂದು ಪ್ರಾರ್ಥನೆ ಮಾಡಲಾಗುವುದು.
ಆ ದಿನ ಮಹಿಳೆಯರು ವಿಶೇಷವಾಗಿ ಕೆಂಪು ಬಣ್ಣದ ಹೊಸ ವಸ್ತ್ರ ಧರಿಸಿ, ಆಭರಣಗಳನ್ನು ಹಾಕಿಕೊಂಡು ರೆಡಿ ಆಗುತ್ತಾರೆ.
ಮಹಿಳೆಯರು ತಮ್ಮ ಕೈಗೆ ಮೆಹೆಂದಿ (ಹೆನ್ನಾ) ಹಾಕಿಸಿಕೊಳ್ತಾರೆ.
ಬೆಳಗ್ಗೆ ಸೂರ್ಯೋದಯದಿಂದ ರಾತ್ರಿ ಚಂದ್ರೋದಯದವರೆಗೆ ಮಹಿಳೆಯರು, ನೀರು ಕೂಡ ಸೇವಿಸದೆ ಉಪವಾಸವಿರುತ್ತಾರೆ.
ಸಾಯಂಕಾಲ ಮಹಿಳೆಯರು ಗುಂಪಾಗಿ ಕೂತು ಕರ್ವಾ ಚೌತ್ ಕಥೆ ಎನ್ನುವ ಧಾರ್ಮಿಕ ಕಥೆಯನ್ನು ಕೇಳುತ್ತಾರೆ.
ರಾತ್ರಿ ಚಂದ್ರೋದಯವಾದ ನಂತರ, ಮಹಿಳೆಯರು ಚಂದ್ರನಿಗೆ ಚಂದ್ರನ ದರ್ಶನ ಅರ್ಘ್ಯ ಸಲ್ಲಿಸಿ, ಬಳಿಕ ಪತಿಯ ಮುಖವನ್ನು ನೋಡುತ್ತಾರೆ. ನಂತರ ಪತಿಯ ಕೈಯಿಂದ ನೀರು ಕುಡಿದು ಉಪವಾಸವನ್ನು ಮುರಿಯುತ್ತಾರೆ.
ಈ ಹಬ್ಬದ ಹಿಂದೆ ಅನೇಕ ಜನಪದ ಕಥೆಗಳೂ ಇವೆ, ಆದರೆ ಅನ್ಮಿತಾ ಹೆಸರಿನ ಧರ್ಮಪತ್ನಿಯು ನಿಷ್ಠೆ ಮತ್ತು ಪ್ರೀತಿಯ ಶಕ್ತಿಯಿಂದ ಗಂಡನನ್ನು ಉಳಿಸಿಕೊಳ್ಳಲು ಹೋರಾಡಿದ್ದಳು. ಇದನ್ನು ಕರ್ವಾ ಚೌತ್ ಎಂದು ಕರೆಯಲಾಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.