
ಬಿಗ್ ಬಾಸ್ ಮನೆಗೆ ಹೋಸ ಸದಪರ್ಧಿಗಳು ವೀಕ್ಷಕರ ಗಮನ ಸೆಳೆಯಲು ಕಸರತ್ತು ಮಾಡುತ್ತಿರುವಾಗ, ಬಿಗ್ ಬಾಸ್ ನೀಡಿದ ಟಾಸ್ಕ್‌ನಂತೆ ನಡೆದುಕೊಳ್ಳಲು ಆಗದೇ ರಾಜಮಾತೆ ಅಶ್ವಿನಿ ಗೌಡ ಪರದಾಡುತ್ತಿದ್ದಾರೆ. ಅಶ್ವಿನಿ ಗೌಡ ಮನೆಯ ಎಲ್ಲ ಸದಸ್ಯರನ್ನು ತನ್ನ ಅಡಿಯಾಳಿನಂತೆ ಕೆಲಸ ಮಾಡಿಸಬೇಕು. ಆದರೆ, ಇಲ್ಲಿ ರಾಜಮಾತೆಯ ಮಾತನ್ನು ಯಾರೂ ಕೇಳದೆ ಉಡಾಫೆ ಮಾಡುತ್ತಿದ್ದಾರೆ. ಇದೇ ರೀತಿ ರಾಜಮಾತೆಯ ಮಾತಿಗೆ ಕಿಮ್ಮತ್ತು ನೀಡದೇ ಉಲ್ಲಂಘನೆ ಮಾಡಿದ್ದ ಮಂಜು ಭಾಷಿಣಿ ಹಾಗೂ ರಾಶಿಕಾ ಜೋಡಿಗೆ ಇದೀಗ ತಕ್ಕ ಶಿಕ್ಷೆಯನ್ನೇ ನೀಡಿದ್ದಾರೆ.
ಬಿಗ್ ಬಾಸ್ ನೀಡಿದ ರಾಜಮಾತೆ ಅಧಿಕಾರ ಈವರೆಗೆ ಮನೆಯವರಿಂದ ಕೆಲಸ ಮಾಡಿಸುವುದಕ್ಕೆ ಅಷ್ಟೇ ಸೀಮಿತವಾಗಿತ್ತು. ಒಂದು ವೇಳೆ ಸಹ ಸ್ಪರ್ಧಿಗಳು ಅದರದಲ್ಲಿಯೂ ಜಂಟಿಯಾಗಿರುವ ಅಸುರರಿಂದ ಕೆಲಸ ಮಾಡಿಸಲು ಸಾಧ್ಯವಾಗದ ಕಾರಣ ಅರಸರಾದ ಒಂಟಿಗಳಿಗೆ ಆಗಿಂದಾಗ್ಗೆ ಶಿಕ್ಷೆ ಆಗುತ್ತಲೇ ಇತ್ತು. ಬಿಗ್ ಬಾಸ್ ಮನೆಯಲ್ಲಿ ಇದೀಗ ಜೈಲನ್ನು ಸೇರಿಸಲಾಗಿದ್ದು, ಅದರಲ್ಲಿ ಕಳಪೆ ಕಂಟೆಸ್ಟೆಂಟ್‌ಗಳನ್ನು ಆಯ್ಕೆ ಮಾಡಿ ಕಳಿಸಬೇಕಾಗಿದೆ. ಇದರೊಂದಿಗೆ ಬಿಗ್ ಬಾಸ್ ರಾಜಮಾತೆಗೆ ವಿಶೇಷ ಅಧಿಕಾರವೊಂದನ್ನು ನೀಡಿದ್ದಾರೆ. ಅದರ ಪ್ರಕಾರ ರಾಜಮಾತೆ ಅಶ್ವಿನಿ ಗೌಡ ಅವರಿಗೆ ಕಳೆದೊಂದು ವಾರದಲ್ಲಿ ಮಾಡಿದ ಎಲ್ಲ ಟಾಸ್ಕ್ ಮತ್ತು ಮನೆಯಲ್ಲಿ ಸ್ಪರ್ಧಿಗಳು ನಡೆದುಕೊಂಡ ಒಟ್ಟಾರೆ ಚಟುವಟಿಕೆಯನ್ನು ಆಧರಿಸಿ ಕಳಪೆ ಕಂಟೆಸ್ಟೆಂಟ್ ಆಯ್ಕೆ ಮಾಡುವುದಕ್ಕೆ ಪರಮಾಧಿಕಾರ ನೀಡಲಾಗಿದೆ.
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪರಮ ವಿರೋಧಿಗಳು ಎಂದು ಭಾವಿಸಿರುವ ಮಂಜು ಭಾಷಿಣಿ ಹಾಗೂ ನಟಿ ರಾಶಿಕಾ ಅವರನ್ನು ಕಳಪೆ ಎಂದು ಘೋಷಣೆ ಮಾಡಿ ಜೈಲಿಗೆ ಕಳಿಸಿದ್ದಾರೆ. ಬಿಗ್ ಬಾಸ್ ನೀಡಿರುವ ಅಧಿಕಾರವನ್ನು ಬಳಸಿ ಅವರಿಗೆ ಯಾವುದೇ ಕೆಲಸ ಹೇಳಿದರೂ ಮಾಡುವುದಿಲ್ಲ. ನಿಯಮ ಉಲ್ಲಂಘನೆಗಳ ಮೂಲಕ
ಒಬ್ಬ ಒಂಟಿ ಅಥವಾ ಜಂಟಿಯನ್ನು ಕಳಪೆ ಪ್ರದರ್ಶನ ನೀಡಿದವರು ಎಂದು ಘೋಷಣೆ ಮಾಡಿ ಜೈಲಿಗೆ ಕಳಿಸುವಂತೆ ಬಿಗ್ ಬಾಸ್ ಹೇಳುತ್ತಾರೆ. ಆಗ ರಾಜಮಾತೆ ಆಶ್ವಿನಿ ಗೌಡೆ ಅವರು ರಾಶಿ ಮತ್ತು ಮಂಜು ಭಾಷಿಣಿ ಅವರನ್ನು ಕಳಪೆ ಎಂದು ಘೋಷಣೆ ಮಾಡುತ್ತೇನೆ. ಎಲ್ಲಿಯೂ ಕೂಡ ಅವರು ಎಂಟರ್‌ಟೇನಿಂಗ್ ಅನ್ನಿಸಲಿಲ್ಲ. ಅವರು ಇಬ್ಬರೇ ಮಾತಿನಲ್ಲಿ ಕಳೆದು ಹೋಗಿದ್ದರು. ಕಳಪೆ ಎಂದು ಜೈಲಿಗೆ ಕಳಿಸಿದ ನಂತರ ತನ್ನ ಸಂಗಡಿಗರೊಂದಿಗೆ ಅಶ್ವಿನಿ ಗೌಡ ಅವರು, ರಾಶಿ ಮತ್ತು ಮಂಜು ಭಾಷಿಣಿ ಹೇಳಿದ್ದನ್ನು ಕೇಳುತ್ತಲೇ ಇರಲಿಲ್ಲ. ಅವರು ಕಿಚನ್‌ಗೆ ಬರಲಿಲ್ಲ ಎಂದು ಕಾರಣವನ್ನು ಹೇಳಿದ್ದರು.
ಇದಕ್ಕೆ ಕೋಪಗೊಂಡಿದ್ದ ರಾಶಿಕಾ ಮತ್ತು ಮಂಜು ಭಾಷಿಣಿ ಜೈಲಿನಲ್ಲಿ ಸಮಯ ಕಳೆಯುತ್ತಿದ್ದರು. ಅವರ ಬಳಿಗೆ ಹೋಗಿದ್ದ ಮಾಳು ಮತ್ತು ಸ್ಪಂದನಾ ಎದುರಿಗೆ ಇವಾಗ ಶುರುವಾಗುತ್ತೆ ನೋಡು ಆಟ. ನಾನಂತೂ ಅವರು ಹೇಳಿದ್ದನ್ನು ಏನೂ ಕೇಳುವುದಿಲ್ಲ ಎಂದು ಕುಳಿತುಕೊಳ್ತೇನೆ ಎಂದು ರಾಶಿಕಾ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಅಶ್ವಿನಿ ಗೌಡ ಜೊತೆಗೆ ಮಾತನಾಡಿದ ಜಾನ್ವಿ ನೀವು ಶಿಕ್ಷೆ ಕೊಟ್ಟಿದ್ದರಲ್ಲಿ ಯಾವುದೇ ತಪ್ಪು ಕಾಣಿಸಲಿಲ್ಲ, ಸರಿಯಾದ ತೀರ್ಮಾನ ಎಂದು ಹೇಳಿದರು.
ಬಿಗ್‌ಬಾಸ್ ಸೀಸನ್ 12 ಆರಂಭವಾದ ಮೊದಲ ದಿನದಂದು ಮನೆಯಲ್ಲಿ ಒಂಟಿ ಮತ್ತು ಜಂಟಿ ಎಂಬ ಎರಡು ಬಣಗಳಿವೆ. ಎರಡನೇ ವಾರದ ಮೊದಲ ದಿನದಿಂದಲೇ ಎರಡೂ ಬಣಗಳ ನಡುವೆ ಬೆಂಕಿ ಹತ್ತಿಕೊಂಡಿದ್ದು, ಗಾಂಚಾಲಿ ಎಂಬಿತ್ಯಾದಿ ಪದಗಳಿಂದ ಮನೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಜಂಟಿಗಳು ಏನೇ ತಪ್ಪು ಮಾಡಿದರೂ ಒಂಟಿಗಳು ಶಿಕ್ಷೆ ಅನುಭವಿಸುತ್ತಾರೆ. ಜಂಟಿಗಳು ನಿಯಮ ಪಾಲಿಸುವಂತೆ ನೋಡಿಕೊಳ್ಳುವುದು ಒಂಟಿಗಳ ಜವಾಬ್ದಾರಿಯಾಗಿತ್ತು. ಮೊದಲ ವಾರದಲ್ಲಿ ಈ ರೂಲ್ಸ್ ಬ್ರೇಕ್ ಆಗಿದ್ದರಿಂದ ಒಂಟಿಗಳು ಲಕ್ಷುರಿ ಆಹಾರ ಸಾಮಾಗ್ರಿಗಳನ್ನು ಕಳೆದುಕೊಂಡಿದ್ದರು.
ಇದಾದ ನಂತರ ಪುನಃ ಅಡುಗೆ ಮಾಡುವ ವಿಚಾರದಲ್ಲಿ ಜಂಟಿಗಳು ತಪ್ಪಿನಿಂದ ಒಂಟಿಗಳಿಗೆ ಬೆಡ್ ರೂಮ್ ಏರಿಯಾ ಬಿಟ್ಟು ಹೊರಗಡೆ ಮಲಗುವ ಶಿಕ್ಷೆ ನೀಡಲಾಗಿದೆ. ಇದಕ್ಕೆ ಜಾನ್ವಿ ಮತ್ತು ಅಶ್ವಿನಿ ಗೌಡ ಕೋಪಗೊಂಡಾಗ, ಮಂಜು ಭಾಷಿಣಿ ಮತ್ತು ರಾಶಿಕಾ ದೊಡ್ಡ ಸೀನ್ ಕ್ರಿಯೇಟ್ ಮಾಡಿದ್ದರು. ಅವರಾಡಿದ ಮಾತುಗಳಿಂದ ಅಶ್ವಿನಿ ಗೌಡ ಊಟ ಬಿಟ್ಟು, ಕಣ್ಣೀರು ಹಾಕಿದ್ದರು. ಇದೀಗ ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರದಿಂದ ಕಳಪೆ ನೀಡಿ ಜೈಲಿಗಟ್ಟುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂದೇ ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.