ಶತಕ ಬಾರಿಸ್ತೀನಿ ಎನ್ನುತ್ತಿದ್ದ ಅಪ್ಪ ಈಗ ಕಣ್ಣೀರಿಡುತ್ತಿದ್ದಾರೆ; ʼಅಮೃತಧಾರೆʼ ನಟಿ ಚಿತ್ಕಳಾ ಬಿರಾದಾರ್‌ ಭಾವುಕ!

Published : Mar 15, 2025, 03:16 PM ISTUpdated : Mar 16, 2025, 12:57 PM IST
ಶತಕ ಬಾರಿಸ್ತೀನಿ ಎನ್ನುತ್ತಿದ್ದ ಅಪ್ಪ ಈಗ ಕಣ್ಣೀರಿಡುತ್ತಿದ್ದಾರೆ; ʼಅಮೃತಧಾರೆʼ ನಟಿ ಚಿತ್ಕಳಾ ಬಿರಾದಾರ್‌ ಭಾವುಕ!

ಸಾರಾಂಶ

ಅಮೃತಧಾರೆ ಧಾರಾವಾಹಿ ಖ್ಯಾತಿಯ ನಟಿ ಚಿತ್ಕಳಾ ಬಿರಾದಾರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಂದೆ ಬಗ್ಗೆ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ʼಕನ್ನಡತಿʼ, ʼಅಗ್ನಿಸಾಕ್ಷಿʼ, ʼಅವನು ಮತ್ತೆ ಶ್ರಾವಣಿʼ ಧಾರಾವಾಹಿ ಸೇರಿದಂತೆ ಸದ್ಯ ʼಅಮೃತವರ್ಷಿಣಿʼ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಚಿತ್ಕಳಾ ಬಿರಾದಾರ್‌ ಇಂದು ತಂದೆಯ ಜನ್ಮದಿನ ಎಂದು ಖುಷಿಪಡಬೇಕೋ ಅಥವಾ ತಂದೆಗೆ ಅನಾರೋಗ್ಯ ಎಂದು ದುಃಖಪಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಚಿತ್ಕಳಾ ಬಿರಾದಾರ್‌ ಅವರ ತಂದೆಗೆ ಈಗ 94 ವರ್ಷ. ಈಗ ಅವರಿಗೆ ಅನಾರೋಗ್ಯ ಉಂಟಾಗಿದೆ. ಈ ಬಗ್ಗೆ ಚಿತ್ಕಳಾ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚಿತ್ಕಳಾ ಬಿರಾದಾರ್‌ ಹೇಳಿದ್ದೇನು? 
ನನ್ನಪ್ಪ ನನ್ನ ಜೀವನದ ಅತಿ ದೊಡ್ಡ ಹೀರೊ ! ಇಂದಿಗೆ 94 ವರ್ಷ ಪೂರೈಸಿದ ಕನ್ನಡ ಭಾಷಾ ಮತ್ತು ಜನಪದ ಪಂಡಿತ . ಮ ಗು ಬಿರಾದಾರ ಎಂದು ಹೆಸರಿದ್ದರೂ ' ಮಗು' ಎಂದೇ ಕಾವ್ಯನಾಮದಡಿ ಸಾಹಿತ್ಯ ಸೇವೆಗೈದವರು. ನನ್ನೊಳಗಿನ ಎಲ್ಲ ಒಳ್ಳೆ ಗುಣಗಳು ನನ್ನ‌ ಅಪ್ಪನಿಂದ ಪಡೆದದ್ದು. ನನ್ನಲ್ಲಿಯ ಎಲ್ಲ ಅವಗುಣಗಳು ಮಾತ್ರ ನನ್ನವು,ನಾನು ಬೆಳೆಸಿಕೊಂಡದ್ದು. ಅಪ್ಪಾಜಿದು ಎಷ್ಟು ಪ್ರಬಲವಾದ ವ್ಯಕ್ತಿತ್ವವೊ ಅಷ್ಟೇ ಹೆಂಗರಳಿನವರು ಕೂಡ . 

Kannadathi Breaking News: ಅಮ್ಮಮ್ಮಂಗೆ ಡಿಸ್‌ಚಾರ್ಜ್, ಮತ್ತೆ ರತ್ನಮಾಲಾ ದರ್ಶನ!

ಕನ್ನಡದ ಕಂಪು ಉಣಬಡಿಸಿದ ವ್ಯಕ್ತಿತ್ವ! 
ಬಳಗದ ಅದೆಷ್ಟೊ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರ ಜೀವನ‌ಕಟ್ಟಿ ಕೊಟ್ಟಿದ್ದಾರೆ. 36 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಕಲಬುರ್ಗಿಯ ಕಾಲೇಜು ಹಾಗು ವಿಶ್ವ ವಿದ್ಯಾಲಯದಲ್ಲಿ ಮುಖ್ಯಸ್ಥರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕನ್ನಡದ ಕಂಪು ಉಣಬಡಿಸಿದವರು. ಈಗ ಬಿದ್ದು ಕಾಲು ಮುರಿದು ಹಾಸಿಗೆ ಹಿಡಿದಿದ್ದಾರೆ. ಮೆತ್ತಗಾಗಿದ್ದಾರೆ . ಶತಕ ಬಾರಿಸಿಯೇ ತೀರುತ್ತೇನೆ ಅನ್ನುತ್ತಿದ್ದ ಅಪ್ಪಾಜಿ ಈಗ ನಮ್ಮನ್ನು‌ ನೋಡಿ ಬರೀ ಕಣ್ಣೀರಿಡುತ್ತಿದ್ದಾರೆ. 

ನಾನು ‌ನನ್ನ‌ ಅಪ್ಪನ ಮುದ್ದಿನ ಮಗಳು. ನನ್ನ ಬಗ್ಗೆ ಅಪ್ಪಾಜಿಗೆ ಎಲ್ಲಿಲ್ಲದ ಹೆಮ್ಮೆ. ಈ ರೀತಿ ನಮ್ಮ ಹೆತ್ತವರನ್ನು ನೋಡೊದು ಹೇಳತಿರದ ಸಂಕಟ, ಯಾತನೆ, ವೇದನೆ....
ಸದ್ಯ ಎಲ್ಲ ಪಕ್ಕಕ್ಕಿಟ್ಟು ಅಪ್ಪನ ಹುಟ್ಟಿದ ಹಬ್ಬದ ದಿನ ಮಕ್ಕಳೆಲ್ಲ ಸೇರಿ ಯಾವ ಆಡಂಬರವಿಲ್ಲದೆ ಅವರ ಜೊತೆ ಇದ್ದೆವೆ. ಅದೇ ಆಚರಣೆ . ನೀವು ಇಲ್ಲಿಯವರೆಗೆ ಎಲ್ಲ ಓದಿದ್ದರೆ , ನಿಮ್ಮ‌ ಮನಸಾ ನೀವು ಅಪ್ಪಾಜಿಯ ಜನ್ಮದಿನಕ್ಕೆ ಹರಸಿ ಹಾರೈಸಿ . ಧನ್ಯವಾದಗಳು. 

Amruthadhaare Serial: ರಾಜ್ಯವೇ ಖುಷಿಪಡುವ ಸುದ್ದಿ ಕೊಟ್ಟಳಾ ಭೂಮಿಕಾ? ಶಾಕುಂತಲಾಗೆ ಹೊಸ ತಲೆನೋವು!

ಅಂದಹಾಗೆ ಚಿತ್ಕಳಾ ಬಿರಾದಾರ್‌ ಅವರು ಪ್ರಾಧ್ಯಾಪಕಿಯಾಗಿದ್ದವರು, ಈಗ ಚಿತ್ರರಂಗದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸದ್ಯ ʼಅಮೃತಧಾರೆʼ  ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸಿನಿಮಾ, ಸೀರಿಯಲ್‌, ಫ್ಯಾಮಿಲಿ ಎಂದು ಅವರು ಫುಲ್ ಬ್ಯುಸಿಯಿದ್ದಾರೆ. ಚಿತ್ಕಳಾ ಬಿರಾದಾರ್‌ ಅವರು ಕಳೆದ ವರ್ಷ ಹಿರಿಯ ಮಗನ ಮದುವೆ ಮಾಡಿದ್ದರು. ಇವರ ಹಿರಿ ಮಗ-ಸೊಸೆ ಅಮೆರಿಕದಲ್ಲಿ ಉನ್ನತ ಕೆಲಸದಲ್ಲಿದ್ದಾರೆ. ಚಿತ್ಕಳಾಗೆ ಇನ್ನೋರ್ವ ಮಗ ಕೂಡ ಇದ್ದಾನೆ. ಚಿತ್ಕಳಾ ಬಿರಾದಾರ್‌ ಅವರ ಸೊಸೆ ಪರರಾಜ್ಯದವಳು. ಮಗ ಪ್ರೀತಿ ಮಾಡ್ತಿದ್ದೀನಿ ಎಂದಾಗ ಚಿತ್ಕಳಾ ಅವರು ಆರಂಭದಲ್ಲಿ ಸ್ವಲ್ಪ ಚಿಂತೆ ಮಾಡಿದ್ದರು. ಸೊಸೆ ಭೇಟಿಯಾದ್ಮೇಲೆ ನಾನು ಪುಣ್ಯವಂತೆ ಎಂದು ಅವರು ಹೇಳಿಕೊಂಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ