
ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸೋಕೆ ಶಕುಂತಲಾ ರೆಡಿಯಾಗಿದ್ದಾಳೆ. ಇದಕ್ಕೆ ಅವಳು ಭೂಮಿಯನ್ನು ದಾಳವಾಗಿಟ್ಟುಕೊಂಡಿದ್ದಾಳೆ. ಮಧುರಾ ಜೊತೆ ನನ್ನ ಮದುವೆ ಆಗೋಕೆ ಭೂಮಿಯೇ ರೆಡಿ ಆಗಿದ್ದಾಳೆ ಎನ್ನುವ ವಿಚಾರ ಗೌತಮ್‌ಗೆ ಗೊತ್ತಾಗಿದೆ.
ಗೌತಮ್-ಮಧುರಾ ಮದುವೆಗೆ ಸಂಚು!
ನನ್ನ ಫ್ರೆಂಡ್ ಮಧುರಾ ಎಂದು ಭೂಮಿಯೇ ಗೌತಮ್‌ಗೆ ಹೇಳಿದ್ದಳು. ಕೆಫೆಯೊಂದರಲ್ಲಿ ಮಧುರಾ ಹಾಗೂ ಗೌತಮ್ ಭೇಟಿ ಆಗುವ ಹಾಗೆ ಭೂಮಿ ಮಾಡಿದ್ದಳು. ಹೆಂಡ್ತಿಯ ಸಂಚು ಅರಿಯದ ಗೌತಮ್ ಕೆಫೆಗೆ ಹೋದ. ಅಲ್ಲಿ ಮಧುರಾ ಮಾತು ಗೌತಮ್‌ಗೆ ಅನುಮಾನ ತಂದಿತು. ಕೊನೆಗೂ ಮಧುರಾ, ನನ್ನ ಮದುವೆಗೆ ಎಲ್ಲ ಸಂಚು ನಡೆಯುತ್ತಿದೆ ಎನ್ನೋದು ಅವನಿಗೆ ಗೊತ್ತಾಯ್ತು.
'ನಂಗೆ ಬ್ರೇಕಪ್ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್ ಉತ್ತಯ್ಯ
ತಲೆ ಕೆಡಿಸಿಕೊಂಡಿರೋ ಶಕುಂತಲಾ!
ಮನೆಗೆ ಬಂದಾಗ ಅವನಿಗೆ ಮಗುವಿನ ವಿಚಾರಕ್ಕೆ ಎರಡನೇ ಮದುವೆ ತಯಾರಿ ನಡೆಯುತ್ತಿರೋದು ಅರ್ಥ ಆಗಿದೆ. ಹೀಗಾಗಿ ಅವನು ಮಲತಾಯಿ ಶಕುಂತಲಾಗೆ, “ನಾನು ಭೂಮಿ ಬಿಟ್ಟು ಬೇರೆ ಯಾರನ್ನೂ ಪತ್ನಿಯಾಗಿ ಸ್ವೀಕಾರ ಮಾಡೋದಿಲ್ಲ. ನನಗೆ ಭೂಮಿಯೇ ಪತ್ನಿ, ಭೂಮಿಯೇ ಉಸಿರು” ಎಂದು ಹೇಳಿದ್ದಾನೆ. ಗೌತಮ್ ಮಾತು ಕೇಳಿ ಶಕುಂತಲಾಗೆ ಭಯ ಆಗಿದೆ. ಹೇಗೆ ಈ ಮದುವೆಗೆ ಗೌತಮ್‌ನನ್ನು ಒಪ್ಪಿಸೋದು ಅಂತ ಶಕುಂತಲಾ ತಲೆ ಕೆಡಿಸಿಕೊಂಡಿದ್ದಾಳೆ.
ಶಕುಂತಲಾ ಹೇಳಿದ್ದೇನು?
“ಎಲ್ಲವೂ ಚೆನ್ನಾಗಿರಬೇಕು. ನಿನ್ನ ಭಾವನೆಗಿಂತ ಮನೆಯವರ ಭಾವನೆ ಮುಖ್ಯ ಆಗತ್ತೆ. ಭೂಮಿಕಾ ಕೂಡ ಈ ವಂಶ ಬೆಳೆಯಬೇಕು ಎಂದು ಬಯಸುತ್ತಿದ್ದಾಳೆ, ಅವಳಿಗಿರೋ ಕಾಳಜಿ ನಿನಗೆ ಯಾಕೆ ಇಲ್ಲ? ಈ ನಿರ್ಧಾರ ಕಷ್ಟ ಆದರೂ ಕೂಡ ನೀನು ಒಪ್ಪಿಕೊಳ್ಳಬೇಕು. ಇಲ್ಲಿ ಬೇರೆ ಆಯ್ಕೆ ಇಲ್ಲ” ಎಂದು ಶಕುಂತಲಾ ಗೌತಮ್‌ನನ್ನು ಒಪ್ಪಿಸುವ ಮಾತುಗಳನ್ನಾಡಿದ್ದಾಳೆ.
Amruthadhaare Serial: ಅಯ್ಯಯ್ಯೋ...! ಗೌತಮ್ ಮದುವೆ ಆಗೋಯ್ತು! ಭೂಮಿಕಾ ಕಥೆ ಏನು?
ಗೌತಮ್-ಭೂಮಿ ನಡುವೆ ವಾಗ್ವಾದ
ಗೌತಮ್: ಭೂಮಿಕಾ ಏನ್ರೀ ಇದೆಲ್ಲ? ನೀವು ಟೀಚರ್ ಅಲ್ಲ, ಚೀಟರ್. ನಿಮಗ್ಯಾರ್ರೀ ಈ ರೀತಿ ನಿರ್ಧಾರ ಮಾಡೋಕೆ ಹೇಳಿದ್ದು?
ಭೂಮಿಕಾ: ನನ್ನ ಆತ್ಮಸಾಕ್ಷಿ ಹೇಳಿತು
ಗೌತಮ್: ಅದು ಇದ್ದಿದ್ರೆ ಈ ರೀತಿ ಮಾಡ್ತಿದ್ರಾ?
ಭೂಮಿಕಾ: ನಾವು ಮನೆಯವರಿಗೋಸ್ಕರ ಈ ಮದುವೆ ಆಗಿದ್ದು ಅಲ್ವಾ? ಈಗಲೂ ಕೂಡ ಮನೆಯವರಿಗೋಸ್ಕರ ಈ ಮದುವೆಗೆ ಒಪ್ಪಿಕೊಳ್ಳಿ
ಗೌತಮ್: ನಾನು ಸತ್ತರೂ ಈ ಮದುವೆಗೆ ಒಪ್ಪಲ್ಲ.
Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?
ಬೇಸರದಲ್ಲಿರೋ ಭೂಮಿ-ಗೌತಮ್!
ಭೂಮಿಕಾ ಮಾತುಗಳನ್ನು ಕೇಳಿ ಗೌತಮ್ ಬೇಸರ ಮಾಡಿಕೊಂಡಿದ್ದಾನೆ. ಅವನಿಗೆ ಮುಂದೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಒಂದು ಕಡೆ ಗಂಡನಿಂದ ದೂರ ಆಗಬೇಕು, ಗಂಡನನ್ನು ಬಿಟ್ಟು ಇರಬೇಕು ಅಂತ ಭೂಮಿ ದುಃಖಪಡುತ್ತಿದ್ದಾಳೆ. ಇನ್ನೊಂದು ಕಡೆ ಮನೆಗೆ ಮಗುವನ್ನು ನನ್ನ ಕಡೆಯಿಂದ ಕೊಡೋಕೆ ಆಗೋದಿಲ್ಲ ಅಂತ ಅವಳು ಬೇಸರದಲ್ಲಿದ್ದಾಳೆ. ಒಟ್ಟಿನಲ್ಲಿ ಭೂಮಿ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಹಾಗೆ ಆಗಿದೆ.
ಮುಂದೆ ಏನಾಗುವುದು?
ಈಗಾಗಲೇ ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿ ಮುಂದೆ ಏನಾಗುವುದು ಎಂದು ತಿಳಿಸಿದೆ. ಗೌತಮ್-ಮಧುರಾಗೆ ಎಲ್ಲ ತಯಾರಿಯೂ ಆಗಿರುತ್ತದೆ. ಗೌತಮ್ ಮನೆಯಲ್ಲಿ ಮದುವೆ ಮಂಟಪ ರೆಡಿ ಆಗುವುದು. ಗೌತಮ್-ಮಧುರಾ ಹಾರ ಬದಲಾಯಿಸಿಕೊಳ್ತಾರೆ. ಆದರೆ ಗೌತಮ್ ಮಾತ್ರ ಹಸೆಮಣೆಯಿಂದ ಎದ್ದು ಹೋಗಿ ಭೂಮಿಕಾಗೆ ತಾಳಿ ಕಟ್ತಾನೆ. “ನನ್ನ ಬದುಕು ಭೂಮಿಕಾ ಜೊತೆಗೆ. ನಾನು ಭೂಮಿಕಾ ಸ್ಥಾನಕ್ಕೆ ಇನ್ಯಾರನ್ನು ತರೋದಿಲ್ಲ” ಎಂದು ಹೇಳುತ್ತಾನೆ. ಭೂಮಿಕಾ ಮಾತು ಕೇಳಿ ಎಲ್ಲರಿಗೂ ಶಾಕ್ ಆದರೆ, ಆನಂದ್ - ಅಪರ್ಣಾ ಫುಲ್ ಖುಷಿಪಡುತ್ತಾರೆ. ಒಟ್ಟಿನಲ್ಲಿ ಗೌತಮ್-ಭೂಮಿಕಾ ಬೇರೆ ಆಗುವ ಮಾತೇ ಇಲ್ಲ ಬಿಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.