
‘ಅಮೃತಧಾರೆʼ ಧಾರಾವಾಹಿಯಲ್ಲಿ ಹೆತ್ತ ಅಪ್ಪ-ಅಮ್ಮನನ್ನೇ ಜೀವನ್ ಮನೆಯಿಂದ ಹೊರಗಡೆ ಹಾಕಿದ್ದಾನೆ. ನೈತಿಕತೆ, ಮೌಲ್ಯಗಳನ್ನು ಇಟ್ಟುಕೊಂಡು ಬದುಕಿದ್ದ ಮೇಷ್ಟ್ರ ಮಗ ಇಂದು ಅಸಹ್ಯವಾದ ಕೆಲಸ ಮಾಡಿದ್ದಾನೆ. ಕೊನೆಗೂ ಈ ವಿಷಯ ಗೌತಮ್‌ಗೆ ಗೊತ್ತಾಗಿದೆ. ಇದನ್ನು ಅವನು ಸರಿ ಮಾಡೋಕೆ ರೆಡಿ ಆಗಿದ್ದಾನೆ.
ರಾಜೇಂದ್ರ ಭೂಪತಿಯಿಂದಲೇ ಇದೆಲ್ಲ ಆಗಿದ್ದು..!
ಸದಾಶಿವ-ಮಂದಾಕಿನಿ ಮಧ್ಯಮ ವರ್ಗದವರು. ತಮ್ಮ ಮಕ್ಕಳನ್ನು ಅವರು ಕಷ್ಟಪಟ್ಟು ಬೆಳೆಸಿದ್ದಾರೆ. ಮೂವರ ಮಕ್ಕಳ ಮದುವೆ ಆಗಿದೆ. ಇದ್ದ ಒಬ್ಬ ಮಗ ಜೀವನ್ ಹಣದ ಆಸೆಗೆ ಬಿದ್ದು, ಉದ್ಯಮ ಮಾಡಿದ್ದೀನಿ, ಸಾಧನೆ ಮಾಡಿದ್ದೀನಿ ಅಂತ ಮೆರೆಯುತ್ತಿದ್ದಾನೆ. ರಾಜೇಂದ್ರ ಭೂಪತಿ ಎನ್ನುವ ಗೌತಮ್ ದಿವಾನ್ ಶತ್ರು ಇದರ ಹಿಂದಿನ ಸೂತ್ರಧಾರ. ಜೀವನ್‌ಗೆ ಅವನು ಹಣದ ಆಮಿಷ ಒಡ್ಡಿ ತಲೆಗೆ ಮಂಕು ಕವಿಯುವ ಹಾಗೆ ಮಾಡಿದ್ದಾನೆ.
Amruthadhaare Serial: ಮದುವೆಯಾಗಿರೋ ಹೆಂಗಸಿಗೆ ಮತ್ತೆ ಮದುವೆ! ಏನಪ್ಪಾ ಇದು; ಮಹಾ ಟ್ವಿಸ್ಟ್!
ಜಗಳ ಆಗ್ತಿರೋದು ಯಾಕೆ?
ಜೀವನ್ ಈಗ ಹೊಸ ಮನೆಗೆ ಕಾಲಿಟ್ಟಿದ್ದಾನೆ. ರಾಜೇಂದ್ರ ಭೂಪತಿ ಸಹವಾಸ ಮಾಡಿದಾಗಿನಿಂದ ಅವನು ಮನೆಗೆ ಕುಡಿದುಕೊಂಡು ಬರೋದು, ತಂದೆ-ತಾಯಿಗೆ ಬಾಯಿಗೆ ಬಂದಹಾಗೆ ಬೈಯ್ಯೋದು ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಎಲ್ಲರೂ ನನ್ನನ್ನೇ ಹೊಗಳಬೇಕು, ಏನೂ ಇಲ್ಲದ ನಾನು ಇಂದು ಇಷ್ಟೊಂದು ಸಾಧನೆ ಮಾಡಿದ್ದೀನಿ ಎನ್ನುವ ಭ್ರಮೆಯಲ್ಲಿದ್ದಾನೆ. ಇದರಿಂದಲೇ ಸದಾಶಿವ ಮನೆಯಲ್ಲಿ ಜಗಳ ಆಗ್ತಿದೆ.
ಎಚ್ಚರಿಕೆ ಕೊಟ್ಟ ಗೌತಮ್!
ಗೌತಮ್ ಮನೆಗೆ ಬಂದ ಸದಾಶಿವ-ಮಂದಾಕಿನಿ ಸಾಯುವ ಯತ್ನ ಮಾಡಿದ್ದರು. ಅದು ಗೌತಮ್ ಗಮನಕ್ಕೆ ಬಂದಿತ್ತು. ಎಲ್ಲ ವಿಷಯ ತಿಳಿದುಕೊಂಡ ಅವನು ಜೀವನ್ ಮನೆಗೆ ಬಂದು, “ನಿನ್ನ ತಪ್ಪು ಒಪ್ಪಿಕೋ, ಅಪ್ಪ-ಅಮ್ಮನಿಗೆ ಕ್ಷಮೆ ಕೇಳು, ಮನೆಗೆ ಅವರನ್ನು ಕರೆದುಕೊಂಡು ಬಾ” ಅಂತ ಎಚ್ಚರಿಕೆ ನೀಡಿದ್ದಾನೆ. ಗೌತಮ್ ಮಾತು ಕೇಳಿ ಜೀವನ್ ಏನ್ ಮಾಡ್ತಾನೋ ಏನೋ! ದುಷ್ಟ ರಾಜೇಂದ್ರ ಭೂಪತಿ ಮನೆಗೆ ಹೋಗಿರೋ ಗೌತಮ್, “ನಿಮ್ಮಿಂದಲೇ ಜೀವನ್ ಹಾಳಾಗಿರೋದು, ಅವನಿಂದ ನೀವು ದೂರ ಇದ್ದರೆ ಸರಿ, ಇಲ್ಲ ಅಂದರೆ ಸರಿ ಇರೋದಿಲ್ಲ” ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಗೌತಮ್ ಎಲ್ಲವನ್ನು ಸರಿ ಮಾಡ್ತಾನಾ ಅಂತ ಕಾದು ನೋಡಬೇಕಾಗಿದೆ.
Amrutadhare Serial: ಮಗಳ ಕಿಡ್ನ್ಯಾಪ್ ಮಾಡಿದ ಜೈಗೆ ಗೌತಮ್ನಿಂದ ಪ್ರಮೋಷನ್! ಮಲ್ಲಿ ಹೇಳ್ತಾಳಾ ಸತ್ಯ?
ಈ ಧಾರಾವಾಹಿ ಕಥೆ ಏನು?
ಗೌತಮ್ ದಿವಾನ್ ಆಗರ್ಭ ಶ್ರೀಮಂರ. ಗೌತಮ್ ತಂದೆ ಇಲ್ಲ, ಇಬ್ಬರು ತಾಯಂದಿರು ಇದ್ದಾರೆ. ಗೌತಮ್ ಆಸ್ತಿ ಕಬಳಿಸಬೇಕು ಅಂತ ಶಕುಂತಲಾ ನಿತ್ಯವೂ ಏನಾದರೊಂದು ಪ್ಲ್ಯಾನ್ ಮಾಡುತ್ತಿದ್ದಾಳೆ. ಗೌತಮ್ ಮದುವೆ ಆಗಬಾರದು ಅಂತ ಅವಳು ಅಂದುಕೊಂಡರೂ ಕೂಡ ವಿಧಿ ಬೇರೆ ಪ್ಲ್ಯಾನ್ ಹೆಣೆದಿತ್ತು. ಗೌತಮ್ ತಂಗಿ ಮಹಿಮಾ, ಭೂಮಿ ತಮ್ಮ ಜೀವನ್ ಪ್ರೀತಿಸಿದ್ದರು. ನನ್ನ ಅಕ್ಕನ ಮದುವೆ ಆಗದೆ ನಾನು ಮದುವೆ ಆಗಲ್ಲ ಅಂತ ಜೀವನ್ ಹಠ ಹಿಡಿದಿದ್ದನು. ಹೀಗಾಗಿ ಗೌತಮ್-ಭೂಮಿಕಾ ಮದುವೆ ಆಯ್ತು. ಈಗ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗೌತಮ್‌ಗೆ ಮಲತಾಯಿ ಹೇಗೆ ಅಂತ ಗೊತ್ತಿಲ್ಲ. ಇಡೀ ಕುಟುಂಬದ ಒಳಿತನ್ನೇ ಬಯಸುವ ಗೌತಮ್ ಹೇಗೆ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್ ಪಾತ್ರಕ್ಕೆ ರಾಜೇಶ್ ನಟರಂಗ, ಭೂಮಿಕಾ ಪಾತ್ರಕ್ಕೆ ಛಾಯಾ ಸಿಂಗ್, ಶಕುಂತಲಾ ಪಾತ್ರಕ್ಕೆ ವನಿತಾ ವಾಸು, ಭಾಗ್ಯ ಪಾತ್ರಕ್ಕೆ ಚಿತ್ಕಳಾ ಬಿರಾದಾರ್ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನಟ ಕೃಷ್ಣಮೂರ್ತಿ ಕವತ್ತಾರ್, ನಟಿ ಸ್ವಾತಿ ರಾಯಲ್, ಸಿಲ್ಲಿ ಲಲ್ಲಿ ಆನಂದ್, ನಟಿ ಇಷಿತಾ ವರ್ಷ ಕೂಡ ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.