ಮದುವೆ ಎಂದರೇನು ಎಂಬ ಬಗ್ಗೆ ಅಮೃತಧಾರೆಯ ಅಪೇಕ್ಷಾ ಮತ್ತು ಅಪರ್ಣಾ ರೀಲ್ಸ್ ಮಾಡಿದ್ದು, ಇದಕ್ಕೆ ಥರಹೇವಾರಿ ಕಮೆಂಟ್ಸ್ ಬಂದಿವೆ.
ಮದುವೆ ಎಂಬ ಪದವನ್ನೇ ಇಟ್ಟುಕೊಂಡು ಬರುತ್ತಿರುವ ಮೀಮ್ಸ್ಗಳು, ಜೋಕ್ಸ್, ಟ್ರೋಲ್ಸ್ ಲೆಕ್ಕವೇ ಇಲ್ಲ. ಈ ಹಿಂದಿನಿಂದಲೂ ಇದೊಂದು ಹಾಸ್ಯದ ರೂಪದ ವಿಷಯವೇ ಆಗಿದೆ. ಇದೀಗ ಸೋಷಿಯಲ್ ಮೀಡಿಯಾದ ದಿನಗಳಲ್ಲಂತೂ ಮದುವೆ ಜೋಕಿನ ವಿಷಯವಾಗಿದೆ. ಅಸಲಿ ಜೀವನದಲ್ಲಿ ನಡೆಯುತ್ತಿರುವ ಡಿವೋರ್ಸ್ ಪ್ರಕರಣಗಳನ್ನು ನೋಡಿದರೆ, ಮದುವೆ ಎನ್ನುವುದು ರಿಯಲ್ ಬದುಕಿನಲ್ಲಿಯೂ ಜೋಕ್ ವಸ್ತುವಾಗಿದೆಯೇ ಎಂದು ಎನ್ನಿಸುವುದು ಉಂಟು. ಹಿಂದೂಗಳಲ್ಲಿ ಪವಿತ್ರ ಭಾವದಂತೆ ನೋಡುತ್ತಿರುವ ಮದುವೆಗೆ ಇಂದಿನ ದಿನಗಳಲ್ಲಿ ಬೆಲೆಯೇ ಇಲ್ಲವೇನೋ ಎಂದೂ ಅನ್ನಿಸುವುದು ಇದೆ. ಅದೇನೇ ಇದ್ದರೂ ಹಾಸ್ಯ ಮಾಡುವವರಿಗೆ ಮದುವೆಯೇ ಬಹುದೊಡ್ಡ ವಿಷಯವಾಗುತ್ತದೆ.
ಇದೀಗ ಅಮೃತಧಾರೆಯ ನಟಿಯರಾದ ಅಪೇಕ್ಷಾ ಮತ್ತು ಅಪರ್ಣಾ ಮತ್ತು ಇದರ ರೀಲ್ಸ್ ಮಾಡಿದ್ದು, ಇದನ್ನು ನೋಡಿ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗ್ತಿದೆ. ಅಷ್ಟಕ್ಕೂ ಇದರಲ್ಲಿ ಅಪರ್ಣಾ ಮದುವೆ ಎಂದರೆ ವರ್ಕ್ಷಾಪ್ ಎನ್ನುತ್ತಾಳೆ, ಅದಕ್ಕೆ ಅಪೇಕ್ಷಾ ನಿಜ. ಗಂಡ ವರ್ಕ್ ಮಾಡೋದು, ಹೆಂಡತಿ ಷಾಪ್ ಮಾಡೋದು ಎನ್ನುತ್ತಾಳೆ. ಇದನ್ನು ಕೇಳಿ ಪುರುಷರು ಸ್ವಲ್ಪ ಗರಂ ಆಗಿದ್ದಾರೆ. ಹೆಂಡತಿಗೆ ಷಾಪ್ ಮಾಡುವುದಕ್ಕಾಗಿಯೇ ಗಂಡಸರು ವರ್ಕ್ ಮಾಡಬೇಕಾ ಎಂದು ಪ್ರಶ್ನಿಸಿದರೆ, ಮಹಿಳೆಯರು ಇಂಥ ಅದೃಷ್ಟವಂತರು ಎಲ್ಲರೂ ಇರಲ್ಲಮ್ಮಾ... ಎಷ್ಟೋ ಮನೆಯಲ್ಲಿ ಹೆಂಡತಿನೇ ವರ್ಕ್ ಮಾಡಿದ್ರೆನೇ ಸಂಸಾರ ಹೋಗೋದು ಎಂದಿದ್ದಾರೆ. ಒಟ್ಟಿನಲ್ಲಿ ಈ ಚಿಕ್ಕ ರೀಲ್ಸ್ನಿಂದ ಹಲವಾರು ಮಂದಿ ಚರ್ಚೆ ಶುರು ಮಾಡಿದ್ದಾರೆ.
ಇವ್ರೇನು ಮನುಷ್ಯರಾ ಅಂತೆಲ್ಲಾ ಅನ್ನಿಸ್ತಿತ್ತು, ಆದ್ರೆ ಈಗ... ಸಿಂಗಲ್ ಪೇರೆಂಟ್ ಆ್ಯಂಕರ್ ಜಾಹ್ನವಿ ಓಪನ್ ಮಾತು..
ಅಂದಹಾಗೆ, ಅಪರ್ಣಾ ಪಾತ್ರಧಾರಿಯ ನಿಜವಾದ ಹೆಸರು ಸ್ವಾತಿ. ಇವರ ರಿಯಲ್ ಪತಿಯ ಹೆಸರು ಅನಿಲ್. ಇವರದ್ದು ಲವ್ ಮ್ಯಾರೇಜ್. ತಮ್ಮ ಪಕ್ಕದ ಮನೆಯಲ್ಲಿದ್ದ ಹುಡುಗ ಅನಿಲ್ ಅವರನ್ನೇ ಲವ್ ಮಾಡಿ ಮದುವೆಯಾಗಿದ್ದಾರೆ ಸ್ವಾತಿ. ಇವರಿಬ್ಬರ ಪ್ರೀತಿಗೆ ಸುಮಾರು 24-25 ವರ್ಷಗಳೇ ತುಂಬಿದೆಯಂತೆ. . ಸ್ವಾತಿಯವರನ್ನೇ ಮದುವೆಯಾಗಲು ಅನಿಲ್ ಒದೆ ಕೂಡ ತಿಂದಿದ್ದಾರಂತೆ, ಅಷ್ಟೇ ಅಲ್ಲ ಸ್ವಾತಿ ಮನೆಯಲ್ಲಿ ಫೈಟ್ ಕೂಡ ಮಾಡಿದ್ದಾರಂತೆ. ಈವಾಗಲೂ ಕಾಲೆಳೆಯುವ, ಕೀಟಲೆ ಮಾಡುವ ಕೆಲಸ ಮಾಡೋದು ಬಲು ಪ್ರೀತಿ ತಮಗೆ ಎಂದು ಸ್ವಾತಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅನಿಲ್ ಸಹ ನಟರಾಗಿದ್ದು, ಮೊದಲೇ ನಟನೆಯತ್ತ ಒಲವಿದ್ದ ಅನಿಲ್ ಅವರಿಗೆ ಈ ಕ್ಷೇತ್ರದಲ್ಲಿ ಕಾಲಿಡುವಂತೆ ಮಾಡಿದ್ದೆ ಪತ್ನಿ ಸ್ವಾತಿ. ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ವಿನ್ನರ್ ಆಗಿದ್ದರು. ಇದಾದ ನಂತರ ಅನಿಲ್ ಕೂಡ ನಟನೆಯಲ್ಲಿ ಬಿಜಿಯಾಗಿದ್ದಾರೆ.
ಇನ್ನು ಅಪೇಕ್ಷಾ ಪಾತ್ರಧಾರಿಯ ನಿಜವಾದ ಹೆಸರು ಅಮೃತಾ ನಾಯ್ಕ. ಸಣ್ಣ ವಯಸ್ಸಿನಿಂದಲೂ ಅಭಿನಯದತ್ತ ಆಸಕ್ತಿ ಹೊಂದಿದ್ದ ಅಮೃತಾ ನಾಯಕ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಲೋಕದ ನಂಟು ಬೆಳೆಸಿಕೊಂಡರು. ಆದರೆ, ಕಿರುತೆರೆಗಿಂತಲೂ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅಮೃತಾ ಅವರ ಆಸೆಯಾಗಿತ್ತು. ರಾಜ್ ಬಿ ಶೆಟ್ಟಿ ಅಭಿನಯದ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅಮೃತಾ ನಾಯಕ್ ಅದರಲ್ಲಿ ಎಕಾನಾಮಿಕ್ಸ್ ಲೆಕ್ಚರರ್ ಆಗಿ ಕಾಣಿಸಿಕೊಂಡಿದ್ದರು.
ಇನ್ನೂ ಕೈ-ಕೈ ಟಚ್ ಮಾಡೋದ್ರಲ್ಲೇ ಇದ್ದಾರೆ, ನೀವು ನೋಡಿದ್ರೆ... ಕಿಲಾಡಿ ಅಜ್ಜಿಗೆ ಗುಟ್ಟು ಹೇಳ್ತಿರೋ ಫ್ಯಾನ್ಸ್!